Chanakya Niti: ಚಾಣಕ್ಯರ ಪ್ರಕಾರ ಇಂತಹ ಮನೆಗಳಲ್ಲಿ ವಾಸಿಸುವ ಜನರು ಸದಾ ಸಂತೋಷದಿಂದಿರುತ್ತಾರೆ, ದುಃಖ ಎಂದಿಗೂ ಬಾಧಿಸುವುದಿಲ್ಲ
ಆಚಾರ್ಯ ಚಾಣಕ್ಯರು ಮಹಾನ್ ವಿದ್ವಾಂಸರು. ಆ ಕಾಲದಲ್ಲಿ ಅವರು ಹೇಳಿದ ಮಾತುಗಳು ಎಂದೆಂದಿಗೂ ಪ್ರಸ್ತುತ. ಜೀವನದಲ್ಲಿ ಯಶಸ್ಸು ಬಯಸಿದವರು ಚಾಣಕ್ಯ ನೀತಿಯನ್ನು ಅನುಸರಿಸಬೇಕು. ಚಾಣಕ್ಯರ ಪ್ರಕಾರ ಇಂತಹ ಮನೆಗಳಲ್ಲಿ ವಾಸಿಸುವವರು ಎಂದೆಂದಿಗೂ ನೋವು, ದುಃಖ ಅನುಭವಿಸುವುದಿಲ್ಲ. ಸದಾ ಸಂತೋಷದಿಂದಿರುತ್ತಾರೆ.
ಆಚಾರ್ಯ ಚಾಣಕ್ಯ ತಮ್ಮ ಕಾಲದ ಅತ್ಯಂತ ಮಹಾನ್ ವಿದ್ವಾಂಸರಾಗಿದ್ದರು. ಬದುಕಿನ ಕುರಿತು ಅಪಾರ ಜ್ಞಾನ ಹೊಂದಿದ್ದ ಅವರು ಮನುಕುಲದ ಕಲ್ಯಾಣಕ್ಕಾಗಿ ಹಲವು ನೀತಿಗಳನ್ನು ರೂಪಿಸಿದ್ದರು. ಇದು ಚಾಣಕ್ಯ ನೀತಿ ಎಂದೇ ಖ್ಯಾತಿ ಪಡೆಯಿತು. ಯಶಸ್ವಿ ಹಾಗೂ ಸಂತೋಷದ ಜೀವನ ಬಯಸುವವರು ಚಾಣಕ್ಯರ ಸೂತ್ರಗಳನ್ನು ಅನುಸರಿಸಬೇಕು. ಅವರ ನೀತಿಗಳನ್ನು ಪಾಲಿಸುವುದರಿಂದ ಬದುಕಿನಲ್ಲಿ ಎಂದಿಗೂ ಸೋಲಾಗುವುದಿಲ್ಲ.
ಚಾಣಕ್ಯರ ಪ್ರಕಾರ ಇಂತಹ ಮನೆಗಳಲ್ಲಿ ವಾಸಿಸುವ ಜನರಿಗೆ ಎಂದಿಗೂ ನೋವು, ದುಃಖ ಖಿನ್ನತೆ ಬಾಧಿಸುವುದಿಲ್ಲ. ಈ ಮನೆಗಳಲ್ಲಿರುವ ಜನರು ಸದಾ ಸಂತೋಷದಿಂದಿರುತ್ತಾರೆ. ಹಾಗಾದರೆ ಚಾಣಕ್ಯರ ಪ್ರಕಾರ ಮನೆ ಎಂದರೆ ಹೇಗಿರಬೇಕು ಎಂಬುದನ್ನು ನೋಡೋಣ.
ಪ್ರತಿಭಾನ್ವಿತ ಮಕ್ಕಳಿರುವ ಮನೆ
ಚಾಣಕ್ಯ ನೀತಿಯ ಪ್ರಕಾರ ಮಕ್ಕಳು ಬುದ್ಧಿವಂತರಾಗಿರುವ ಮನೆಗಳಲ್ಲಿ ವಾಸಿಸುವ ಜನರು ಯಾವಾಗಲೂ ಸಂತೋಷದಿಂದ, ನೆಮ್ಮದಿಯಿಂದ ಬದುಕುತ್ತಾರೆ. ನಿಮ್ಮ ಮಕ್ಕಳು ಬುದ್ಧಿವಂತರಾಗಿದ್ದರೆ ನೀವು ಹೆಚ್ಚು ಚಿಂತಿಸಬೇಕಾಗಿಲ್ಲ. ಅಂತಹ ಮಕ್ಕಳು ತಮ್ಮ ಬುದ್ಧಿವಂತಿಕೆಯಿಂದ ಎಲ್ಲವನ್ನೂ ಸಾಧಿಸುತ್ತಾರೆ. ಅಂತಹ ಮನೆಯಲ್ಲಿ ದುಃಖ, ನೋವಿಗೆ ಅವಕಾಶವೇ ಇರುವುದಿಲ್ಲ ಎಂದು ಚಾಣಕ್ಯ ಹೇಳುತ್ತಾರೆ.
ಒಳ್ಳೆಯ ಮಾತನ್ನಾಡುವ ಮನೆಯೊಡತಿ
ಚಾಣಕ್ಯ ನೀತಿಯ ಪ್ರಕಾರ ಮನೆಯೊಡತಿಯ ಮಾತು ಸಿಹಿಯಾಗಿರಬೇಕು. ಮನೆಯೊಡತಿ ಒಳ್ಳೆಯ ಮಾತುಗಳನ್ನು ಹೇಳಿದ್ರೆ ಎಲ್ಲರೂ ಅದನ್ನು ಪಾಲಿಸುತ್ತಾರೆ. ಮನೆಯೊಡತಿಯ ಮಾತು, ವರ್ತನೆ ಸರಿಯಿಲ್ಲ ಎಂದರೆ ಅಂತಹ ಮನೆಯಲ್ಲಿ ಎಂದಿಗೂ ನೆಮ್ಮದಿ ನೆಲೆಸಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳುತ್ತಾರೆ. ಯಾಕೆಂದರೆ ಆಕೆ ತನ್ನ ವರ್ತನೆಯಿಂದ ಮನೆಯಲ್ಲಿ ಇರುವವರೆಲ್ಲರ ನೆಮ್ಮದಿ ಹಾಳು ಮಾಡುತ್ತಾಳೆ. ಇದರೊಂದಿಗೆ ಆಕೆಯೂ ನೆಮ್ಮದಿಯಿಂದ ಇರುವುದಿಲ್ಲ.
ಕಷ್ಟಪಟ್ಟು ದುಡಿಯುವವರಿರುವ ಮನೆ
ಯಾರ ಮನೆಯಲ್ಲಿ ಜನರು ಕಷ್ಟಪಟ್ಟು ದುಡಿಯುತ್ತಾರೆ, ದುಡಿಯಲು ಹಿಂಜರಿಕೆ ಮಾಡುವುದಿಲ್ಲವೋ ಅಂತಹ ಮನೆಯಲ್ಲಿ ಎಂದಿಗೂ ನೆಮ್ಮದಿ ನೆಲೆಸಿರುತ್ತದೆ. ಅಂತಹ ಮನೆಗಳಲ್ಲಿ ಸಂತೋಷ, ಸಮೃದ್ಧಿ ತುಂಬಿರುತ್ತದೆ. ಕಷ್ಟಪಟ್ಟು, ಪ್ರಾಮಾಣಿಕವಾಗಿ ಹಣ ಸಂಪಾದಿಸಿ ಒಳ್ಳೆಯವರ ಸಹವಾಸದಲ್ಲಿ ಬಾಳಿದಾಗ ಸಂತೋಷ, ಸಮೃದ್ಧಿಗೆ ಕೊರತೆ ಇರುವುದಿಲ್ಲಎಂದು ಚಾಣಕ್ಯ ನೀತಿಯಲ್ಲಿ ತಿಳಿಸಲಾಗಿದೆ.
ಅತಿಥಿಗಳನ್ನು ಗೌರವಿಸುವ ಜನರು
ಅತಿಥಿ ದೇವೋಭವ ಎಂಬ ಮಾತಿದೆ. ಅತಿಥಿಗಳು ದೇವರಿಗೆ ಸಮಾನ ಎಂಬ ಮನೋಭಾವ ಹೊಂದಿದ ನಾಡು ನಮ್ಮದು. ಆಚಾರ್ಯ ಚಾಣಕ್ಯರ ಪ್ರಕಾರ ಅತಿಥಿಗಳನ್ನು ಗೌರವಿಸುವ ಜನರಿರುವ ಮನೆಯಲ್ಲಿ ಎಂದಿಗೂ ಸಂತೋಷಕ್ಕೆ ಕೊರತೆ ಇರುವುದಿಲ್ಲ. ಅಂತಹ ಜನರಿಗೆ ಸದಾ ದೇವರ ಆಶೀರ್ವಾದವಿರುತ್ತದೆ.
ಗಂಡ–ಹೆಂಡತಿ ನಡುವೆ ಪ್ರೀತಿ
ಚಾಣಕ್ಯರ ಪ್ರಕಾರ ಗಂಡ–ಹೆಂಡತಿ ನಡುವೆ ಪ್ರೀತಿಗೆ ಕೊರತೆ ಇಲ್ಲದ ಮನೆಯಲ್ಲಿ ಎಂದೆಂದಿಗೂ ಸಂತೋಷ ನೆಲೆಸಿರುತ್ತದೆ. ಗಂಡ–ಹೆಂಡತಿ ಪರಸ್ಪರ ಗೌರವಿಸುವ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಪ್ರೀತಿ ಮಾತ್ರವಲ್ಲ ಹೆಂಡತಿ ಗಂಡನಿಗೆ, ಗಂಡ ಹೆಂಡತಿಗೆ ಗೌರವ ಕೊಡುವುದು ಕೂಡ ಮುಖ್ಯ ಎಂದು ಚಾಣಕ್ಯ ಹೇಳುತ್ತಾರೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ