Chanakya Niti: ಚಾಣಕ್ಯರ ಪ್ರಕಾರ ಈ ಅಭ್ಯಾಸಗಳನ್ನು ಹೊಂದಿರುವವರ ಮನೆಯಲ್ಲಿ ಎಂದಿಗೂ ಹಣ ಕೂಡುವುದಿಲ್ಲ, ಲಕ್ಷ್ಮೀದೇವಿ ನೆಲೆಸಲು ಸಾಧ್ಯವಿಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಚಾಣಕ್ಯರ ಪ್ರಕಾರ ಈ ಅಭ್ಯಾಸಗಳನ್ನು ಹೊಂದಿರುವವರ ಮನೆಯಲ್ಲಿ ಎಂದಿಗೂ ಹಣ ಕೂಡುವುದಿಲ್ಲ, ಲಕ್ಷ್ಮೀದೇವಿ ನೆಲೆಸಲು ಸಾಧ್ಯವಿಲ್ಲ

Chanakya Niti: ಚಾಣಕ್ಯರ ಪ್ರಕಾರ ಈ ಅಭ್ಯಾಸಗಳನ್ನು ಹೊಂದಿರುವವರ ಮನೆಯಲ್ಲಿ ಎಂದಿಗೂ ಹಣ ಕೂಡುವುದಿಲ್ಲ, ಲಕ್ಷ್ಮೀದೇವಿ ನೆಲೆಸಲು ಸಾಧ್ಯವಿಲ್ಲ

ಆಚಾರ್ಯ ಚಾಣಕ್ಯರು ಮಹಾನ್ ವಿದ್ವಾಂಸ, ಇವರು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಹಣದ ಅವಶ್ಯಕತೆ ಎಷ್ಟಿದೆ ಎಂಬುದನ್ನು ಆ ಕಾಲದಲ್ಲಿಯೇ ಅರಿತು ವಿವರಿಸಿದ್ದರು. ಅವರ ಪ್ರಕಾರ ಮನೆಯಲ್ಲಿ ಈ 5 ಕೆಲಸ ಮಾಡಿದರೆ ನಿಮ್ಮ ಬಳಿ ಹಣ ಎಂದಿಗೂ ನಿಲ್ಲುವುದಿಲ್ಲ. ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ನೆಲೆಸಲು ಸಾಧ್ಯವೇ ಇಲ್ಲ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಹಿಂದೂ ಧರ್ಮದಲ್ಲಿ ಲಕ್ಷ್ಮೀದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮೀದೇವಿಯ ಅನುಗ್ರಹವಿದ್ದರೆ ಬದುಕಿನಲ್ಲಿ ನಾವು ಎಂದಿಗೂ ಸೋಲು ಕಾಣಲು ಸಾಧ್ಯವಿಲ್ಲ. ಮನುಷ್ಯ ಬದುಕಿಗೆ ಅತಿ ಮುಖ್ಯವಾದುದು ಎಂದರೆ ಹಣ. ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಹಣ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಲಕ್ಷ್ಮೀದೇವಿಯನ್ನ ಒಲಿಸಿಕೊಳ್ಳುವುದು ಖಂಡಿತ ಸುಲಭದ ಮಾತ್ರಲ್ಲ ಎಂದು ಚಾಣಕ್ಯ ಹೇಳುತ್ತಾರೆ.

ಅರ್ಥಶಾಸ್ತ್ರಜ್ಞರೂ ಆಗಿದ್ದ ಚಾಣಕ್ಯರಿಗೆ ಹಣದ ಮಹತ್ವ ಬಹಳ ಚೆನ್ನಾಗಿ ತಿಳಿದಿತ್ತು. ಚಾಣಕ್ಯರ ಪ್ರಕಾರ ಲಕ್ಷ್ಮೀದೇವಿಯ ಅನುಗ್ರಹ ಪಡೆಯುವುದು ಖಂಡಿತ ಸುಲಭವಲ್ಲ. ಈ ಕೆಲವು ವರ್ತನೆಗಳಿರುವ ಜನರ ಮನೆಯಲ್ಲಿ ಲಕ್ಷ್ಮೀದೇವಿ ಎಂದಿಗೂ ನೆಲೆಸಲು ಇಷ್ಟಪಡುವುದಿಲ್ಲ. ಅಂತಹ ಮನೆಯಲ್ಲಿ ಜನರು ಎಷ್ಟೇ ದುಡಿದರೂ, ಎಷ್ಟೇ ಶ್ರಮಪಟ್ಟರೂ ಹಣ ನಿಲ್ಲುವುದಿಲ್ಲ. ಅವರ ಬದುಕು ದುಸ್ತರವಾಗುತ್ತದೆ. ಅಂತಹವರು ಸಾಕಷ್ಟು ಹಣಕಾಸಿನ ಸಮಸ್ಯೆಗಳನ್ನ ಎದುರಿಸುತ್ತಾರೆ. ಹಾಗಾದರೆ ಯಾವ ಅಭ್ಯಾಸಗಳಿರುವ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುವುದಿಲ್ಲ ನೋಡಿ. 

ತಡವಾಗಿ ಮಲಗುವುದು

ರಾತ್ರಿ ಒಂದು ನಿರ್ದಿಷ್ಟ ಸಮಯಕ್ಕೆ ಮಲಗಬೇಕು. ತಡವಾಗಿ ಮಲಗುವವರ ಮೇಲೆ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ. ಏಕೆಂದರೆ ತಡವಾಗಿ ಮಲಗುವವರು ತಡವಾಗಿ ಎದ್ದೇಳುತ್ತಾರೆ. ಚಾಣಕ್ಯರ ಪ್ರಕಾರ ಯಾವುದೇ ವ್ಯಕ್ತಿಯು ಸೂರ್ಯೋದಯಕ್ಕೂ ಮುಂಚಿತವಾಗಿ ಎದ್ದೇಳಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ಅಲ್ಲದೇ ಹೆಚ್ಚು ನಿದ್ದೆ ಮಾಡುವುದು ಆಲಸ್ಯ ಹಾಗೂ ಸೋಮಾರಿತನಕ್ಕೆ ಕಾರಣವಾಗುತ್ತದೆ. ಇದು ಆ ವ್ಯಕ್ತಿಯ ಕೆಲಸ ಹಾಗೂ ಒಟ್ಟಾರೆ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಸ್ವಚ್ಛವಾಗಿ ಇಟ್ಟುಕೊಳ್ಳದೇ ಇರುವುದು

ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಇರುವ ಜನರ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುವುದಿಲ್ಲ. ಮನೆ, ಕಚೇರಿ, ವ್ಯಾಪಾರ ಮಾಡುವ ಸ್ಥಳ ಈ ಎಲ್ಲಾ ಪ್ರದೇಶಗಳನ್ನೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸ್ವಚ್ಛತೆ ಇಲ್ಲದ ಜಾಗದಲ್ಲಿ ಹಣ ಎಂದಿಗೂ ಕೂಡುವುದಿಲ್ಲ. ಮನೆಯನ್ನು ಪ್ರತಿದಿನ ಗುಡಿಸಿ ಒರೆಸಿ ಇಟ್ಟುಕೊಳ್ಳಬೇಕು. ಆಗ ಮಾತ್ರ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಲು ಸಾಧ್ಯ. 

ಭಿನ್ನಾಭಿಪ್ರಾಯ, ಜಗಳ

ಯಾರ ಮನೆಯಲ್ಲಿ ಸದಾ ಭಿನ್ನಾಭಿಪ್ರಾಯ, ಜಗಳ, ಮನಸ್ತಾಪಗಳು ಇರುವುದೋ ಅಂತಹವರ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುವುದಿಲ್ಲ. ಹಿರಿಯರಿಗೆ ಗೌರವ ಕೊಡದ, ಸದಾ ಜಗಳ ಮಾಡುವ ವ್ಯಕ್ತಿಗಳ ಇರುವ ಮನೆಯಲ್ಲಿ ನೆಮ್ಮದಿ ನೆಲೆಸಲು ಸಾಧ್ಯವೇ ಇಲ್ಲ. ಇಂತಹವರ ಮನೆಯಲ್ಲಿ ಹಣಕಾಸಿನ ಸಮಸ್ಯೆ ಎಂದಿಗೂ ಪರಿಹಾರವಾಗುವುದಿಲ್ಲ. 

ಕೊಳಕು ಬಟ್ಟೆ ಧರಿಸುವುದು

ಮೊದಲೇ ಹೇಳಿದಂತೆ ಲಕ್ಷ್ಮೀದೇವಿ ಕೊಳಕನ್ನು ಸಹಿಸುವುದಿಲ್ಲ. ಯಾರು ಮನೆಯಲ್ಲಿ ಬಟ್ಟೆ ಒಗೆಯದೇ ಕೊಳಕು ಬಟ್ಟೆಗಳನ್ನೇ ಸಂಗ್ರಹಿಸಿ ಇಡುತ್ತಾರೋ ಅವರ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಲು ಇಷ್ಟಪಡುವುದಿಲ್ಲ. ಆಂತರಿಕ ಶುದ್ಧಿಯೊಂದಿಗೆ ಬಹಿರಂಗ ಶುದ್ಧಿ ಕೂಡ ಬಹಳ ಮುಖ್ಯವಾಗಿದೆ. ಹಾಗಾಗಿ ಕೊಳಕು ಬಟ್ಟೆ ಧರಿಸಬೇಡಿ.

Whats_app_banner