Chanakya Niti: ಚಾಣಕ್ಯರ ಪ್ರಕಾರ ಈ 5 ಸ್ಥಳಗಳಲ್ಲಿ ಹಣ ಖರ್ಚು ಮಾಡಿದ್ರೆ ಸಂಪತ್ತು ದುಪ್ಪಟ್ಟಾಗುತ್ತೆ, ದೇವರ ಆಶೀರ್ವಾದವೂ ಲಭಿಸುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಚಾಣಕ್ಯರ ಪ್ರಕಾರ ಈ 5 ಸ್ಥಳಗಳಲ್ಲಿ ಹಣ ಖರ್ಚು ಮಾಡಿದ್ರೆ ಸಂಪತ್ತು ದುಪ್ಪಟ್ಟಾಗುತ್ತೆ, ದೇವರ ಆಶೀರ್ವಾದವೂ ಲಭಿಸುತ್ತೆ

Chanakya Niti: ಚಾಣಕ್ಯರ ಪ್ರಕಾರ ಈ 5 ಸ್ಥಳಗಳಲ್ಲಿ ಹಣ ಖರ್ಚು ಮಾಡಿದ್ರೆ ಸಂಪತ್ತು ದುಪ್ಪಟ್ಟಾಗುತ್ತೆ, ದೇವರ ಆಶೀರ್ವಾದವೂ ಲಭಿಸುತ್ತೆ

ಆಚಾರ್ಯ ಚಾಣಕ್ಯರು ಜೀವನದ ಹಲವು ವಿಚಾರಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರವಾಗಿ ಬರೆದಿದ್ದಾರೆ. ಚಾಣಕ್ಯರು ಹಣದ ವಿಚಾರವಾಗಿ ಹಲವು ವಿಚಾರಗಳನ್ನು ಹೇಳಿದ್ದಾರೆ. ಅವರ ಪ್ರಕಾರ ಈ 5 ಸ್ಥಳಗಳಲ್ಲಿ ಹಣ ಖರ್ಚು ಮಾಡುವುದರಿಂದ ನಮ್ಮ ಸಂಪತ್ತು ದುಪ್ಪಟ್ಟಾಗುತ್ತದೆ. ಅಂತಹ 5 ಸ್ಥಳಗಳು ಯಾವುದು ಎಂದು ನೋಡಿ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರ ನೀತಿಗಳು ಜೀವನದಲ್ಲಿ ಎಂದಿಗೂ ನಮಗೆ ಮಾರ್ಗದರ್ಶಿಯಾಗಿವೆ. ಅವರು ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಅವರು ಹೇಳಿದ ಮಾರ್ಗದಲ್ಲಿ ಸಾಗಿದರೆ ಜೀವನದಲ್ಲಿ ಎಂದಿಗೂ ಸೋಲಾಗಲು ಸಾಧ್ಯವಿಲ್ಲ. ಹಣಕಾಸಿನ ವಿಚಾರವಾಗಿಯೂ ಚಾಣಕ್ಯರು ಹಲವು ಸಲಹೆಗಳನ್ನು ನೀಡಿದ್ದಾರೆ.

ಚಾಣಕ್ಯರ ಪ್ರಕಾರ ಈ ಕೆಲವು ಜಾಗಗಳಲ್ಲಿ ಹಣ ಖರ್ಚು ಮಾಡುವುದರಿಂದ ನಮ್ಮ ಸಂಪತ್ತು ಹೆಚ್ಚಾಗುತ್ತದೆ. ಮಾತ್ರವಲ್ಲ ಹಣಕಾಸಿನ ಸಮಸ್ಯೆ ಕಾಡುವುದೂ ಇಲ್ಲ. ಹಾಗಾದರೆ ಚಾಣಕ್ಯರು ಹಣ ಖರ್ಚು ಮಾಡುವಂತೆ ಶಿಫಾರಸು ಮಾಡಿದ ಅಂತಹ ಸ್ಥಳಗಳು ಯಾವುವು ಎಂಬುದನ್ನು ನೋಡಿ.

ಬಡವರು, ಅಶಕ್ತರಿಗೆ ಸಹಾಯ ಮಾಡಿ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಬಡವರು ಹಾಗೂ ಅಶಕ್ತರಿಗೆ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ. ದುರ್ಬಲರು ಮತ್ತು ನಿರ್ಗತಿಕರಿಗೆ ಆರ್ಥಿಕ ನೆರವು ನೀಡುವವರು ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ. ಇಂಹತವರಿಗೆ ಸಹಾಯ ಮಾಡುವವರಿಗೆ ಸದಾ ದೇವರು ಆಶೀರ್ವಾದವಿರುತ್ತದೆ. ಇದರಿಂದ ಅವರ ಸಂಪತ್ತು ವೃದ್ಧಿಯಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.

ರೋಗಿಗಳಿಗೆ ಸಹಾಯ ಮಾಡಲು ಮುಂದೆ ಬನ್ನಿ

ಚಾಣಕ್ಯರು ರೋಗಿಗಳು, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡಬೇಕು ಎಂದು ಸಲಹೆ ನೀಡುತ್ತಾರೆ. ರೋಗಪೀಡಿತ ವ್ಯಕ್ತಿಗೆ ನಿಮ್ಮ ಶಕ್ತಿಗೆ ಅನುಗುಣವಾಗಿ ಸಹಾಯ ಮಾಡಬೇಕು ಎಂದು ಚಾಣಕ್ಯ ಹೇಳುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. ದೇವರ ಆಶೀರ್ವಾದವು ನಿಮ್ಮ ಮೇಲಿರುತ್ತದೆ. ಇದರಿಂದ ಹಣ, ಧಾನ್ಯದ ಕೊರೆತೆಯೂ ಇರುವುದಿಲ್ಲ.

ಮಕ್ಕಳ ಶಿಕ್ಷಣಕ್ಕಾಗಿ ಹಣ ಖರ್ಚು ಮಾಡಿ

ಚಾಣಕ್ಯರ ಪ್ರಕಾರ ಮಕ್ಕಳ ಓದಿಗೆ ಹಣ ಖರ್ಚು ಮಾಡಲು ಹಿಂಜರಿಕೆ ಮಾಡಬಾರದು. ಮಕ್ಕಳ ಶಿಕ್ಷಣದ ವಿಚಾರದಲ್ಲಿ ಜಿಪುಣರಾಗಬಾರದು. ಏಕೆಂದರೆ ಶಿಕ್ಷಣಕ್ಕಾಗಿ ಖರ್ಚು ಮಾಡಿದ ಹಣ ಎಂದಿಗೂ ವ್ಯರ್ಥವಾಗುವುದಿಲ್ಲ, ಇದರಿಂದ ಪ್ರತಿಫಲ ಖಂಡಿತ ದೊರೆಯುತ್ತದೆ.

ಧಾರ್ಮಿಕ ಕಾರ್ಯಗಳಿಗೆ ಖರ್ಚು

ಚಾಣಕ್ಯರ ಪ್ರಕಾರ ಧಾರ್ಮಿಕ ಕಾರ್ಯಗಳಿಗೆ ಖರ್ಚು ಮಾಡುವುದಕ್ಕೆ ಹಿಂದೇಟು ಹಾಕಬಾರದು. ಧಾರ್ಮಿಕ ಕಾರ್ಯಗಳಿಗೆ ನಮ್ಮ ಶಕ್ತಿಗೆ ಅನುಗುಣವಾಗಿ ಖರ್ಚು ಮಾಡಬೇಕು. ಏಕೆಂದರೆ ಧಾರ್ಮಿಕ ಕಾರ್ಯಗಳಿಗೆ ಖರ್ಚು ಮಾಡುವುದರಿಂದ ಜೀವನದಲ್ಲಿ ಸಕಾರಾತ್ಮಕ ಅಂಶ ಹೆಚ್ಚುತ್ತದೆ. ಇದರಿಂದ ನಿರ್ಗತಿಕರಿಗೆ, ನೊಂದವರಿಗೆ ಅನ್ನ ಸಿಗುತ್ತದೆ.

ಸಮಾಜ ಸೇವೆಗೆ ಹಣ ಖರ್ಚು ಮಾಡಿ

ಯಾವುದೇ ವ್ಯಕ್ತಿಯು ತನ್ನ ಖರ್ಚಿನ ಸ್ವಲ್ಪ ಭಾಗವನ್ನು ಸಮಾಜಸೇವೆಗೆಂದು ಮೀಸಲಿಡಬೇಕು. . ಸಮಾಜ ಸೇವೆಯು ಶಾಲೆ, ಆಸ್ಪತ್ರೆ ಅಥವಾ ಸಮಾಜ ಕಲ್ಯಾಣ ಸಂಸ್ಥೆಯ ನಿರ್ಮಾಣದ ವೆಚ್ಚವನ್ನು ಒಳಗೊಂಡಿರುತ್ತದೆ. ಇದು ನಿಮಗೆ ಹಣದ ಕೊರತೆಯನ್ನು ಎಂದಿಗೂ ಉಂಟುಮಾಡುವುದಿಲ್ಲ ಮತ್ತು ನಿಮ್ಮ ಘನತೆಯನ್ನು ಹೆಚ್ಚಿಸುತ್ತದೆ. ಇದರಿಂದ ಕೂಡ ದೇವರು ನಿಮಗೆ ಒಲಿಯುತ್ತಾನೆ ಎಂದು ಚಾಣಕ್ಯ ಹೇಳುತ್ತಾರೆ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

Whats_app_banner