Chanakya Niti: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಬೇಕು ಅಂದ್ರೆ ಈ ವಿಚಾರಗಳಿಂದ ಸದಾ ದೂರವಿರಬೇಕು; ಚಾಣಕ್ಯರ ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಬೇಕು ಅಂದ್ರೆ ಈ ವಿಚಾರಗಳಿಂದ ಸದಾ ದೂರವಿರಬೇಕು; ಚಾಣಕ್ಯರ ಸಲಹೆ

Chanakya Niti: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಬೇಕು ಅಂದ್ರೆ ಈ ವಿಚಾರಗಳಿಂದ ಸದಾ ದೂರವಿರಬೇಕು; ಚಾಣಕ್ಯರ ಸಲಹೆ

ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ವಿದ್ಯಾರ್ಥಿಗಳ ಕುರಿತಾಗಿಯೂ ಹಲವು ವಿಚಾರಗಳನ್ನು ಹೇಳಿದ್ದಾರೆ. ವಿದ್ಯಾರ್ಥಿ ಜೀವನದ ಯಶಸ್ಸಿಗೆ ಕೆಲವು ಅಭ್ಯಾಸಗಳಿಂದ ದೂರವಿರಬೇಕು ಎಂದು ಅವರು ಹೇಳುತ್ತಾರೆ. ಹಾಗಾದರೆ ಚಾಣಕ್ಯನೀತಿಯಲ್ಲಿ ಉಲ್ಲೇಖಿಸಿರುವ ಆ ಅಭ್ಯಾಸಗಳು ಯಾವುವು, ವಿದ್ಯಾರ್ಥಿಗಳು ಯಾವ ಅಭ್ಯಾಸಗಳಿಂದ ದೂರವಿದ್ದರೆ ಉತ್ತಮ ಎಂಬುದನ್ನು ನೋಡಿ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರು ದೇಶ ಕಂಡ ಮಹಾನ್ ವಿದ್ವಾಂಸ. ಅವರು ಬದುಕಿನ ಕುರಿತು ಹಲವು ವಿಚಾರಗಳ ಬಗ್ಗೆ ತಮ್ಮ ಅನುಭವದ ಆಧಾರದ ಮೇಲೆ ನೀತಿಗಳನ್ನು ರೂಪಿಸಿದ್ದರು. ತಾವು ರೂಪಿಸಿದ್ದ ನೀತಿಗಳನ್ನು ನೀತಿಶಾಸ್ತ್ರ ಎಂಬ ಪುಸ್ತಕದಲ್ಲಿ ಬರೆದಿಟ್ಟಿದ್ದರು, ಮುಂದೆ ಅದುವೇ ಚಾಣಕ್ಯ ನೀತಿ ಎಂದು ಖ್ಯಾತಿ ಪಡೆಯಿತು.

ಚಾಣಕ್ಯ ನೀತಿಯಲ್ಲಿ ಎಲ್ಲಾ ವರ್ಗದವರಿಗೂ ಸಲಹೆಗಳಿವೆ. ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರೆ ಚಾಣಕ್ಯರು ಹೇಳಿದ ಈ ನೀತಿಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ. ಚಾಣಕ್ಯರು ನೀತಿಗಳು ಎಂದಿಗೂ ಪ್ರಸ್ತುತ ಎನ್ನಿಸುವಂತಿದೆ. ಚಾಣಕ್ಯರು ವಿದ್ಯಾರ್ಥಿ ಜೀವನದ ಕುರಿತು ಹಲವು ಅಮೂಲ್ಯವಾದ ವಿಚಾರಗಳನ್ನು ಹೇಳಿದ್ದಾರೆ. ನೀತಿಶಾಸ್ತ್ರದ ಪ್ರಕಾರ ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ವಿದ್ಯಾರ್ಥಿಗಳು ಕಲಿಕೆಯ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ವಿದ್ಯಾರ್ಥಿ ದಿಸೆಯಲ್ಲೇ ಬದುಕಿನಲ್ಲಿ ಯಶಸ್ಸು ಕಾಣುವ ಮಾರ್ಗವನ್ನು ಕಂಡುಕೊಳ್ಳಬೇಕು.

ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು . ಅಜಾಗರೂಕತೆ, ಕೆಟ್ಟ ಸಹವಾಸ ಮತ್ತು ಸೋಮಾರಿತನವು ವಿದ್ಯಾರ್ಥಿ ಜೀವನದಲ್ಲಿನ ಪ್ರಮುಖ ಕೆಟ್ಟ ಅಭ್ಯಾಸಗಳಾಗಿವೆ. ಈ ಹಂತದಲ್ಲಿ ಮಾಡಿದ ತಪ್ಪು ನಿಮ್ಮ ಇಡೀ ಜೀವನದ ಮೇಲೆ ಪರಿಣಾಮ ಬೀರಬಹುದು ಎಂದು ಚಾಣಕ್ಯ ಹೇಳುತ್ತಾರೆ. ಹಾಗಾದರೆ ವಿದ್ಯಾರ್ಥಿ ಜೀವನದಲ್ಲಿ ಯಾವ ತಪ್ಪು ಮಾಡಬಾರದು ನೋಡಿ. 

ಸಮಯ ಪರಿಪಾಲನೆ ಮಾಡದೇ ಇರುವುದು 

ಚಾಣಕ್ಯ ನೀತಿಯ ಪ್ರಕಾರ ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಒಂದು ನಿರ್ದಿಷ್ಟ ಸಮಯವಿದೆ. ವಿದ್ಯಾರ್ಥಿಗಳು ತಮ್ಮ ಎಲ್ಲಾ ಕಾರ್ಯಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಆಗ ಮಾತ್ರ ಸರಿಯಾದ ಸಮಯದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಸೋಮಾರಿತನ ಬಿಟ್ಟು ಅಧ್ಯಯನದತ್ತ ಗಮನ ಹರಿಸಿದರೆ ಯಶಸ್ಸಿನ ಮೆಟ್ಟಿಲು ಏರಬಹುದು. ಚಾಣಕ್ಯ ನೀತಿಯು ಸಮಯವನ್ನು ಮೌಲ್ಯೀಕರಿಸಲು ಹೇಳುತ್ತದೆ.

ಶಿಸ್ತು ಕಾಪಾಡಿಕೊಳ್ಳದೇ ಇರುವುದು

ಜೀವನದಲ್ಲಿ ಶಿಸ್ತು ಬಹಳ ಮುಖ್ಯ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಶಿಸ್ತನ್ನು ಪಾಲಿಸುವ ವಿದ್ಯಾರ್ಥಿಗಳು ಸದಾ ಮುಂದೆ ಇರುತ್ತಾರೆ, ಸುಲಭವಾಗಿ ಯಶಸ್ಸು ಗಳಿಸುತ್ತಾರೆ. ಅಂತಹ ವಿದ್ಯಾರ್ಥಿಗಳು ತಾವು ಅಂದುಕೊಂಡ ಗುರಿ ತಲುಪುವುದು ಕೂಡ ಕಷ್ಟವೇನಲ್ಲ.  

ಕೆಟ್ಟ ಸ್ನೇಹಿತರ ಸಹವಾಸ ಮಾಡುವುದು 

ಚಾಣಕ್ಯ ನೀತಿ ಪ್ರಕಾರ ವಿದ್ಯಾರ್ಥಿಗಳು ಯಾವಾಗಲೂ ಕೆಟ್ಟವರ ಸಹವಾಸದಿಂದ ದೂರವಿರಬೇಕು. ಏಕೆಂದರೆ ಕೆಟ್ಟವರ ಸಹವಾಸವು ನಿಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ನಾಶಪಡಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸ್ನೇಹಿತರು ಹೆಚ್ಚು ಪ್ರಭಾವ ಬೀರುತ್ತಾರೆ. ಇಂತಹ ಸಂದರ್ಭದಲ್ಲಿ ಯಾವಾಗಲೂ ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬೇಕು. ಒಳ್ಳೆಯ ಸ್ನೇಹಿತರು ಯಾವಾಗಲೂ ನಿಮಗೆ ಮಾರ್ಗದರ್ಶನ ನೀಡುತ್ತಾರೆ.

ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು 

ಚಾಣಕ್ಯರ ನೀತಿಶಾಸ್ತ್ರದ ಪ್ರಕಾರ, ವಿದ್ಯಾರ್ಥಿಗಳು ಕೆಟ್ಟ ಅಭ್ಯಾಸಗಳನ್ನು ತ್ಯಜಿಸಬೇಕು. ಕೆಟ್ಟ ಅಭ್ಯಾಸಗಳು ನಿಮ್ಮ ಯಶಸ್ಸಿಗೆ ಅಡ್ಡಿಯಾಗಬಹುದು. ವ್ಯಸನವು ನಿಮ್ಮ ದೇಹ, ಮನಸ್ಸು ಮತ್ತು ಸಂಪತ್ತನ್ನು ನಾಶಪಡಿಸುತ್ತದೆ. ಇದಲ್ಲದೆ ಸಮಾಜ ಮತ್ತು ಕುಟುಂಬದಲ್ಲಿ ನಿಮ್ಮ ಗೌರವ ಕಡಿಮೆಯಾಗುತ್ತದೆ. ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಎಂದಿಗೂ ಕೆಟ್ಟ ಚಟುವಟಿಕೆಗಳಲ್ಲಿ ತೊಡಗಬಾರದು.

ಸೋಮಾರಿತನ

ಸೋಮಾರಿತನವೇ ವಿದ್ಯಾರ್ಥಿಗಳ ಪ್ರಮುಖ ಶತ್ರು ಎನ್ನುತ್ತಾರೆ ಚಾಣಕ್ಯ . ವಿದ್ಯಾರ್ಥಿಗಳು ಎಂದಿಗೂ ಸೋಮಾರಿತ ಮಾಡಬಾರದು. ಗುರಿಯನ್ನು ನಿಗದಿಪಡಿಸಿದ ನಂತರ, ಅದನ್ನು ಸಾಧಿಸಲು ಕೆಲಸ ಮಾಡಿ. ಸೋಮಾರಿತನವು ನಿಮ್ಮನ್ನು ಎಲ್ಲಿಯೂ ತಲುಪಿಸುವುದಿಲ್ಲ. ಯಶಸ್ಸು ನಿಮ್ಮ ಗುರಿಯಾಗಿದ್ದರೆ ಅದಕ್ಕಾಗಿ ಶ್ರಮಿಸಿ. ಆಗ ಮಾತ್ರ ನೀವು ಇತರರಿಗಿಂತ ಮುಂದಿರುತ್ತೀರಿ ಎಂದು ಚಾಣಕ್ಯ ನೀತಿ ವಿವರಿಸುತ್ತದೆ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

Whats_app_banner