Chanakya Niti: ಚಾಣಕ್ಯರ ಪ್ರಕಾರ ಮನೆಯ ಯಜಮಾನನಾದವನು ಎಂದಿಗೂ ಈ 3 ತಪ್ಪುಗಳನ್ನು ಮಾಡಬಾರದು, ಇದರಿಂದ ಯಾರಿಗೂ ಒಳಿತಾಗುವುದಿಲ್ಲ
ಆಚಾರ್ಯ ಚಾಣಕ್ಯರನ್ನು ಮಹಾನ್ ವಿದ್ವಾಂಸ ಎನ್ನಲಾಗುತ್ತದೆ. ಯಾಕೆಂದರೆ ಅವರು ಬದುಕನ್ನ ಆಳವಾಗಿ ಅರಿತವರು. ಬದುಕಿನಲ್ಲಿ ಸೋಲು–ಗೆಲುವು ಹೇಗಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಚಾಣಕ್ಯರ ಪ್ರಕಾರ ಮನೆಯಲ್ಲಿ ಗಂಡಸರು ಮಾಡುವ ಈ ತಪ್ಪುಗಳು ಮನೆಯ ನಾಶಕ್ಕೆ ಕಾರಣವಾಗುತ್ತದೆ. ಬಡತನ ಬರಲು ಕಾರಣವಾಗುತ್ತದೆ.
ಆಚಾರ್ಯ ಚಾಣಕ್ಯರು ಬದುಕಿನ ವಿವಿಧ ವಿಚಾರಗಳ ಬಗ್ಗೆ ಆಳವಾಗಿ ತಿಳಿದವರಾಗಿದ್ದರು. ತಮ್ಮ ಜ್ಞಾನ, ಅನುಭವದ ಆಧಾರ ಮೇಲೆ ಇವರು ಮನುಷ್ಯರ ಬದುಕಿಗೆ ಅಗತ್ಯವಾಗಿರುವ ನೀತಿಗಳನ್ನು ರೂಪಿಸಿದ್ದಾರೆ. ಅದನ್ನು ಅವರು ನೀತಿಶಾಸ್ತ್ರ ಎನ್ನುವ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಆ ಪುಸ್ತಕ ಚಾಣಕ್ಯನೀತಿ ಎಂದೇ ಖ್ಯಾತಿ ಪಡೆದಿದೆ. ಚಾಣಕ್ಯರ ನೀತಿಗಳನ್ನು ಅನುಸರಿಸುವ ಮೂಲಕ ನಾವು ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. ಚಾಣಕ್ಯರ ಮಾತುಗಳನ್ನು ನಿರ್ಲಕ್ಷ್ಯ ಮಾಡಿದರೆ ಖಂಡಿತ ಸೋಲಾಗುತ್ತದೆ ಎಂಬ ಹೇಳಲಾಗುತ್ತದೆ.
ಚಾಣಕ್ಯರು ತಮ್ಮ ನೀತಿಶಾಸ್ತ್ರ ಪುಸ್ತಕದಲ್ಲಿ ಒಂದು ಮನೆ ಎಂದರೆ ಹೇಗಿರಬೇಕು, ಮನೆಯಲ್ಲಿರುವ ಜನರು ಹೇಗಿರಬೇಕು ಎಂಬುದನ್ನು ವಿವರಿಸಿದ್ದಾರೆ. ಅವರ ಪ್ರಕಾರ ಮನೆಯ ಯಜಮಾನ ಈ 3 ಕೆಲಸಗಳನ್ನು ಮಾಡಲೇಬಾರದು. ಇದರಿಂದ ಮನೆ ಸರ್ವನಾಶವಾಗುತ್ತದೆ, ಮಾತ್ರವಲ್ಲ ಬಡತನ ಆವರಿಸುತ್ತದೆ. ಹಾಗಾದರೆ ಮನೆಯ ಯಜಮಾನ ಮನೆಯಲ್ಲಿ ಮಾಡಲೇಬಾರದಂತಹ ತಪ್ಪುಗಳು ಯಾವುವು ನೋಡಿ.
ಆಹಾರ ವ್ಯರ್ಥ ಮಾಡುವುದು
ಮನೆಯ ಯಜಮಾನನಾದವನು ಆಹಾರವನ್ನು ಗೌರವಿಸಬೇಕು. ದುಡಿದು ತಂದು ಹಾಕುವುದು ಎಷ್ಟು ಕಷ್ಟ ಎಂಬುದು ಅವನಿಗೆ ಅರಿವಿರುವ ಕಾರಣ ಆಹಾರದ ಬೆಲೆ ತಿಳಿದಿರಬೇಕು. ಯಾವುದೇ ಕಾರಣಕ್ಕೂ ಮನೆಯ ಯಜಮಾನ ಆಹಾರವನ್ನು ವ್ಯರ್ಥ ಮಾಡಬಾರದು. ಇದರಿಂದ ಇತರರು ಅವನನ್ನು ಅನುಸರಿಸಬಹುದು. ಇದು ಮನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗೆ ಮಾಡುವುದರಿಂದ ಮನೆ ಮತ್ತು ಕುಟುಂಬದ ಪ್ರಗತಿಯೂ ನಿಲ್ಲುತ್ತದೆ. ಈ ಅಭ್ಯಾಸವು ಬಡತನಕ್ಕೆ ಕಾರಣವಾಗಬಹುದು.
ವಿನಾಕಾರಣ ಹಣ ಪೋಲು ಮಾಡುವುದು
ಚಾಣಕ್ಯ ನೀತಿಯ ಪ್ರಕಾರ, ಮನೆಯ ಮುಖ್ಯಸ್ಥ ಯಾವಾಗಲೂ ವಿವೇಚನೆಯಿಂದ ಹಣ ಖರ್ಚು ಮಾಡಬೇಕು. ಅವನು ಕುಟುಂಬದ ಅಗತ್ಯಗಳನ್ನು ಪರಿಗಣಿಸಬೇಕು. ಮನೆಯ ಮುಖ್ಯಸ್ಥರು ಆಲೋಚನೆಯಿಲ್ಲದೆ ಹಣವನ್ನು ಖರ್ಚು ಮಾಡಿದರೆ, ಇಡೀ ಕುಟುಂಬವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮನೆಯ ಮುಖ್ಯಸ್ಥನು ಕುಟುಂಬದ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಹಣ ಖರ್ಚು ಮಾಡಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಮನೆ ಮಂದಿಯೆಲ್ಲಾ ಬಡತನವನ್ನು ಎದುರಿಸಬೇಕಾಗುತ್ತದೆ ನೆನಪಿರಲಿ.
ನಿಯಮಗಳನ್ನು ಮುರಿಯುವುದು
ಹಲವು ಬಾರಿ ಕುಟುಂಬಸ್ಥರಿಗಾಗಿ ಮನೆಯ ಯಜಮಾನ ಕೆಲವು ನೀತಿಗಳನ್ನು ರೂಪಿಸುತ್ತಾನೆ. ಆದರೆ ಎಷ್ಟೋ ಬಾರಿ ಹಾಗೂ ಹಲವು ಮನೆಗಳಲ್ಲಿ ಯಜಮಾನನೇ ಈ ನೀತಿಗಳನ್ನು ನಿಯಮವನ್ನು ಉಲ್ಲಂಘಿಸುತ್ತಾನೆ. ಕುಟುಂಬ ಮುಖ್ಯಸ್ಥರು ಅಂತಹ ತಪ್ಪನ್ನು ಪುನರಾವರ್ತಿಸಿದರೆ, ಅದು ನೇರವಾಗಿ ಮತ್ತು ಋಣಾತ್ಮಕವಾಗಿ ಕುಟುಂಬ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ. ಕುಟುಂಬ ಸದಸ್ಯರು ಮನೆಯ ಯಜಮಾನನ ಮೇಲೆ ಗೌರವ ಕಳೆದುಕೊಳ್ಳುತ್ತಾರೆ. ಅವರು ಕೂಡ ತಪ್ಪುಗಳನ್ನು ಮಾಡಲು ಆರಂಭಿಸುತ್ತಾರೆ. ಆ ಕಾರಣದಿಂದಾಗಿ ಮನೆಯಲ್ಲಿ ವಾದ–ವಿವಾದಗಳು ನಡೆಯಬಹುದು. ಇದರಿಂದ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ. ಇದರಿಂದ ಮನೆಯಲ್ಲಿ ಬಡತನ ತಾಂಡವಾಡಬಹುದು ಎಂದು ಚಾಣಕ್ಯ ಹೇಳುತ್ತಾರೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ