Chanakya Niti: ಈ ಗುಣಗಳಿರುವ ಮಹಿಳೆ ಗಂಡನಿಗೆ ಬಹಳ ಅದೃಷ್ಟವಂತೆ; ಇವರನ್ನು ಮದುವೆಯಾದರೆ ಹಣ, ಯಶಸ್ಸು ತಾನಾಗಿಯೇ ಬರುತ್ತದೆ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಈ ಗುಣಗಳಿರುವ ಮಹಿಳೆ ಗಂಡನಿಗೆ ಬಹಳ ಅದೃಷ್ಟವಂತೆ; ಇವರನ್ನು ಮದುವೆಯಾದರೆ ಹಣ, ಯಶಸ್ಸು ತಾನಾಗಿಯೇ ಬರುತ್ತದೆ

Chanakya Niti: ಈ ಗುಣಗಳಿರುವ ಮಹಿಳೆ ಗಂಡನಿಗೆ ಬಹಳ ಅದೃಷ್ಟವಂತೆ; ಇವರನ್ನು ಮದುವೆಯಾದರೆ ಹಣ, ಯಶಸ್ಸು ತಾನಾಗಿಯೇ ಬರುತ್ತದೆ

ಚಾಣಕ್ಯರು ಬದುಕಿನ ಕುರಿತ ಹಲವು ವಿಚಾರಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ವಿವರಿಸಿದ್ದಾರೆ. ಸಂಬಂಧಗಳ ಬಗ್ಗೆ ಚಾಣಕ್ಯರು ಹೇಳಿರುವ ಮಾತುಗಳನ್ನು ಎಂಥವರೂ ಒಪ್ಪಬೇಕು. ಅವರ ಪ್ರಕಾರ ಈ ಗುಣಗಳನ್ನು ಹೊಂದಿರುವ ಹುಡುಗಿಯನ್ನು ಮದುವೆಯಾಗುವ ಹುಡುಗನ ಬಾಳು ಅದೃಷ್ಟದಿಂದ ಕೂಡಿರುತ್ತೆ. ಅಂಥವರನ್ನು ಮದುವೆಯ ನಂತರ ಯಶಸ್ಸು, ಹಣ ಹುಡುಕಿ ಬರುತ್ತದೆ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರ ಬಗ್ಗೆ ಬಹುಶಃ ತಿಳಿಯದವರು ಕಡಿಮೆ. ಅವರು ಜಗತ್ತು ಕಂಡ ಮಹಾನ್ ಜ್ಞಾನಿ, ವಿದ್ವಾಂಸ. ಬದುಕಿಗೆ ಸಂಬಂಧಿಸಿದ ಯಾವುದೇ ಸಲಹೆಗಾಗಿ ಜನರು ಚಾಣಕ್ಯರನ್ನು ಹುಡುಕಿ ಬರುತ್ತಿದ್ದರು. ರಾಜ–ಮಹಾರಾಜರು ಕೂಡ ಚಾಣಕ್ಯರ ಸಲಹೆಗಾಗಿ ಕಾಯುತ್ತಿದ್ದರು. ತಮ್ಮ ಜೀವಿತಾವಧಿಯಲ್ಲಿ ಅವರು ಹಲವು ನೀತಿಗಳನ್ನು ರೂಪಿಸಿದ್ದರು. ಅವರು ಅದನ್ನು ನೀತಿಶಾಸ್ತ್ರ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಚಾಣಕ್ಯರು ರೂಪಿಸಿದ ನೀತಿಗಳು ‘ಚಾಣಕ್ಯ ನೀತಿ‘ ಎಂದು ಇಂದಿಗೂ ಪ್ರಸ್ತುತವಾಗಿವೆ. ನೀವು ಯಶಸ್ವಿ ಮತ್ತು ಸಮೃದ್ಧ ಜೀವನವನ್ನು ಬಯಸಿದರೆ ಚಾಣಕ್ಯ ನೀತಿಯ ಬೋಧನೆಗಳನ್ನು ಅನುಸರಿಸಬಹುದು.

ಚಾಣಕ್ಯರು ತಮ್ಮ ನೀತಿಗಳಲ್ಲಿ ಮಹಿಳೆಯರು ಹೇಗಿರಬೇಕು ಎಂಬುದನ್ನು ವಿವರಿಸಿದ್ದಾರೆ. ಅವರ ಪ್ರಕಾರ ಯಾವುದೇ ಮಹಿಳೆ ಇಂತಹ ಗುಣಗಳನ್ನು ಹೊಂದಿದ್ದರೆ, ಮದುವೆಯ ನಂತರ ಅವರ ಸಂಗಾತಿಯು ಜೀವನದ ಪ್ರತಿಯೊಂದು ಹಂತದಲ್ಲೂ ಯಶಸ್ಸು ಕಾಣುತ್ತಾರೆ. ಅಂತಹ ಮಹಿಳೆಯರು ಮದುವೆಯ ನಂತರ ತಾವು ಹೋಗುವ ಮನೆಯನ್ನು ಸ್ವರ್ಗದಂತೆ ಸುಂದರವಾಗಿಸುತ್ತಾರೆ ಎನ್ನುತ್ತಾರೆ. ಹಾಗಾದರೆ ಚಾಣಕ್ಯರು ಹೇಳಿದ ಆ ಗುಣಗಳು ಯಾವುವು ನೋಡಿ.

ಗುಣವನ್ನು ಗೌರವಿಸುವ ಹುಡುಗಿ

ಚಾಣಕ್ಯ ನೀತಿಯ ಪ್ರಕಾರ, ನೋಟ ಅಥವಾ ಸೌಂದರ್ಯಕ್ಕೆ ಪ್ರಾಮುಖ್ಯ ನೀಡದೆ ಗುಣಗಳನ್ನು ಗೌರವಿಸುವ ಯಾವುದೇ ಮಹಿಳೆ ತನ್ನ ಗಂಡ ಹಾಗೂ ಮನೆಯನ್ನು ಸಂತೋಷದಿಂದ ಇಟ್ಟುಕೊಳ್ಳುತ್ತಾಳೆ. ಇಂತಹ ಗುಣಗಳಿರುವ ಹುಡುಗಿಯನ್ನು ಮದುವೆಯಾದರೆ ಗಂಡನಾದವನು ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಕಾಣಲು ಸಾಧ್ಯ. ಗುಣ ನೋಡಿ ಜೀವನ ಸಾಗಿಸುವ ಮಹಿಳೆಯರು ಜೀವನದ ಎಲ್ಲಾ ಹಂತದಲ್ಲೂ ಗಂಡನಾದವನು ಖುಷಿಯಾಗಿರುವಂತೆ ನೋಡಿಕೊಳ್ಳುತ್ತಾರೆ.

ಜೀವನದಲ್ಲಿ ಗುರಿ ಹೊಂದಿರುವ ಮಹಿಳೆಯರು

ಪುರುಷರಿಗೆ ಮಾತ್ರವಲ್ಲ ಮಹಿಳೆಯರಿಗೂ ಬದುಕಿನಲ್ಲಿ ಕೆಲವು ಗುರಿಗಳಿರಬೇಕು. ನಿರ್ದಿಷ್ಟ ಗುರಿಗಳನ್ನು ಹೊಂದಿರುವ ಮಹಿಳೆಯರು ತಾವು ಆ ಗುರಿ ಸಾಧಿಸುವುದು ಮಾತ್ರವಲ್ಲ, ತನ್ನ ಗಂಡ ಕೂಡ ಗುರಿ ಇಟ್ಟುಕೊಂಡು ಅದರಲ್ಲಿ ಯಶಸ್ಸು ಕಾಣಲು ಸಹಕರಿಸುತ್ತಾರೆ. ಇಂತಹವರು ಜೀವನದ ಬಗ್ಗೆ ಬಹಳ ಸ್ವಷ್ಟವಾದ ವ್ಯಾಖ್ಯಾನ ಹೊಂದಿರುತ್ತಾರೆ. ಅಂಥವರು ಕುಟುಂಬದೊಂದಿಗೆ ವೈಯಕ್ತಿಕ ಜೀವನದಲ್ಲೂ ಯಶಸ್ಸು ಗಳಿಸುತ್ತಾರೆ.

ಸಂಗಾತಿ ಬಗ್ಗೆ ಹೆಮ್ಮೆ ಇರುವವರು

ಆಚಾರ್ಯ ಚಾಣಕ್ಯರ ಪ್ರಕಾರ, ಯಾವ ಮಹಿಳೆ ತನ್ನ ಸಂಗಾತಿಯ ಸಣ್ಣ ಸಾಧನೆಗಳ ಬಗ್ಗೆಯೂ ಹೆಮ್ಮೆಪಡುತ್ತಾಳೋ ಮತ್ತು ಪತಿಯ ತಪ್ಪುಗಳನ್ನು ಆತನಿಗೆ ಅರ್ಥ ಮಾಡಿಸಿ, ತಿದ್ದಿಕೊಳ್ಳುವ ಅವಕಾಶವನ್ನು ಕಲ್ಪಿಸುತ್ತಾಳೋ ಅಂತಹ ಮಹಿಳೆ ತನ್ನ ಸಂಗಾತಿಯ ಯಶಸ್ಸಿಗಾಗಿ ಶ್ರಮಿಸುತ್ತಾಳೆ. ಅವಳು ಜೀವನದ ಪ್ರತಿ ಹಂತದಲ್ಲೂ ಏಳಿಗೆ ಕಾಣುವಂತೆ ಮಾಡಿ ಗಂಡನನ್ನು ಪ್ರೋತ್ಸಾಹಿಸುತ್ತಾಳೆ. ಇದರಿಂದ ಗಂಡನಾದವನಿಗೆ ಯಶಸ್ಸು ಗಳಿಸುವುದು ಕಷ್ಟ ಎನ್ನಿಸುವುದಿಲ್ಲ.

ಈ 3 ಗುಣಗಳಿರುವ ಹುಡುಗಿಯನ್ನು ಮದುವೆಯಾದರೆ ನೀವು ಬದುಕಿನಲ್ಲಿ ಸದಾ ಸಂತೋಷದಿಂದರಬಹುದು. ಯಶಸ್ಸು ಕೂಡ ತಾನಾಗಿಯೇ ನಿಮ್ಮ ಬೆನ್ನ ಹಿಂದೆ ಬರುತ್ತದೆ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

–––

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner