Chanakya Niti: ಚಾಣಕ್ಯರ ಪ್ರಕಾರ ಈ ಗುಣಗಳನ್ನು ಹೊಂದಿರುವ ಮಹಿಳೆ ಗಂಡನ ಬಾಳನ್ನು ಸ್ವರ್ಗವನ್ನಾಗಿಸುತ್ತಾಳೆ
ಆಚಾರ್ಯ ಚಾಣಕ್ಯರು ಮಹಾನ್ ವಿದ್ವಾಂಸ. ರಾಜತಾಂತ್ರಿಕರೂ ಆಗಿದ್ದ ಅವರು ರಾಜಕೀಯ ಮಾತ್ರವಲ್ಲ, ವೈಯಕ್ತಿಕ ಜೀವನದ ಕುರಿತು ಸಾಕಷ್ಟು ವಿಚಾರಗಳನ್ನು ಚಾಣಕ್ಯ ನೀತಿಯಲ್ಲಿ ಬರೆದಿದ್ದರು. ದಾಂಪತ್ಯ ಜೀವನದಲ್ಲಿ ಯಶಸ್ಸು ಸಿಗಬೇಕು ಅಂದರೆ ಹೆಂಡತಿಯಾದವಳು ಹೇಗಿರಬೇಕು ಎಂಬುದನ್ನು ವಿವರಿಸಿದ್ದಾರೆ. ಅವರ ಪ್ರಕಾರ ಈ ಗುಣಗಳನ್ನು ಹೊಂದಿರುವ ಹೆಂಡತಿ ಸಿಕ್ಕರೆ ಬಾಳು ಸ್ವರ್ಗ.

ಚಾಣಕ್ಯರನ್ನು ಭಾರತ ಕಂಡ ಮಹಾನ್ ಶಿಕ್ಷಕ ಎಂದು ಕರೆಯಬಹುದು. ಅವರ ಮಾತುಗಳು ಜೀವನಕ್ಕೆ ತುಂಬಾ ಉಪಯುಕ್ತವಾಗಿವೆ. ಚಾಣಕ್ಯರು ರಾಜಕೀಯ, ಅರ್ಥಶಾಸ್ತ್ರ ಮತ್ತು ಮನುಷ್ಯ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಪರಿಣತರಾಗಿದ್ದಾರೆ. ಚಾಣಕ್ಯರ ಬುದ್ಧಿವಂತಿಕೆಗೆ ಸಾಟಿಯಿಲ್ಲ. ಅವರ ವಿಚಾರಗಳು ಈ ಕಾಲಕ್ಕೂ ಸೂಕ್ತವಾಗಿವೆ. ಚಾಣಕ್ಯರು ರಾಜಕೀಯ ಜೀವನದಲ್ಲಿ ಮಾತ್ರವಲ್ಲದೇ ವೈಯಕ್ತಿಕ ಜೀವನದಲ್ಲಿಯೂ ಪರಿಣತರಾಗಿದ್ದರು. ಯಶಸ್ವಿ ದಾಂಪತ್ಯ ಜೀವನಕ್ಕೆ ಪತಿ–ಪತ್ನಿಯರು ಕೆಲವು ಅರ್ಹತೆಗಳನ್ನು ಹೊಂದಿರಬೇಕು ಎಂದು ಚಾಣಕ್ಯ ಹೇಳಿದ್ದರು. ಅದರಲ್ಲಿ ಒಳ್ಳೆಯ ಹೆಂಡತಿ ಎನ್ನಿಸಿಕೊಳ್ಳಲು ಏನೆಲ್ಲಾ ಗುಣಗಳು ಇರಬೇಕು ಎಂಬುದನ್ನು ಇಲ್ಲಿ ಹೇಳಿದ್ದಾರೆ ನೋಡಿ.
ಚಾಣಕ್ಯರ ಪ್ರಕಾರ, ಒಳ್ಳೆಯ ಹೆಂಡತಿಯಲ್ಲಿ ಇರಬೇಕಾದ ಪ್ರಮುಖ ಗುಣಗಳೆಂದರೆ, ಹೆಂಡತಿಯಾದವಳು ತನ್ನ ಗಂಡನಿಗೆ ತಾಯಿ, ಸಹೋದರಿ, ಗೆಳತಿ, ಸಂಗಾತಿ ಎಲ್ಲವೂ ಆಗಿರಬೇಕು. ಅಂತಹವಳು ಗಂಡನ ಯಶಸ್ಸಿಗೆ ಕಾರಣವಾಗುತ್ತಾಳೆ. ಹೆಂಡತಿಯೊಂದಿಗೆ ಯಶಸ್ವಿ ದಾಂಪತ್ಯ ಜೀವನವನ್ನು ನಡೆಸುವ ವ್ಯಕ್ತಿಗೆ ಸಮಾಜದಲ್ಲಿ ಬೆಲೆ ಜಾಸ್ತಿ ಎಂಬುದನ್ನು ಮರೆಯುವಂತಿಲ್ಲ.
ಚಾಣಕ್ಯರು ತಮ್ಮ ನೀತಿಶಾಸ್ತ್ರದ ಅನೇಕ ಕಡೆಗಳಲ್ಲಿ ಬುದ್ಧಿವಂತ ಹೆಂಡತಿ ಹೇಗಿರಬೇಕು ಎಂಬುದನ್ನು ಉಲ್ಲೇಖಿಸಿದ್ದಾರೆ. ಹುಡುಗಿ ಸುಂದರವಾಗಿದ್ದರೂ ಒಳ್ಳೆಯ ಕುಟುಂಬ ಹಿನ್ನೆಲೆ ಹೊಂದಿಲ್ಲ ಎಂದರೆ ಮದುವೆಯಾಗಬಾರದು ಎಂದು ಹೇಳಿದ್ದಾರೆ ಚಾಣಕ್ಯ. ಒಳ್ಳೆಯ ಮನೆತನದಿಂದ ಚಂದವಿಲ್ಲದ ಹುಡುಗಿ ಬಂದರೂ ಆರಾಮವಾಗಿ ಮದುವೆಯಾಗಬಹುದು ಎಂದು ಸಲಹೆ ನೀಡಿದರು. ಚಾಣಕ್ಯರು ನಿಮ್ಮ ಕುಟುಂಬಕ್ಕೆ ಸರಿ ಹೊಂದುವ ಕುಟುಂಬದೊಂದಿಗೆ ಮಾತ್ರ ಸಂಬಂಧ ಬೆಳೆಸಬೇಕು ಎಂದು ಹೇಳಿದ್ದಾರೆ. ಹಾಗಿದ್ದಾಗ ಮಾತ್ರ ಅಂತಹ ಮಹಿಳೆ ನಿಮ್ಮ ಕಷ್ಟ–ಸುಖ ಎಲ್ಲವನ್ನೂ ಸರಿಯಾಗಿ ಅರ್ಥಮಾಡಿಕೊಳ್ಳುತ್ತಾಳೆ ಎಂದು ಅವರು ಹೇಳುತ್ತಾರೆ.
ಪತಿ-ಪತ್ನಿಯರ ನಡುವಿನ ಪ್ರೀತಿಯೇ ಯಶಸ್ವಿ ದಾಂಪತ್ಯ ಜೀವನಕ್ಕೆ ಆಧಾರ ಎಂದು ಚಾಣಕ್ಯ ಹೇಳಿದ್ದಾರೆ. ಹೆಂಡತಿಯ ನಿಜವಾದ ಸಂತೋಷವು ಪತಿಗೆ ಮಾಡುವ ಸೇವೆಯಲ್ಲಿ ಅಡಗಿದೆ ಮತ್ತು ಹೆಂಡತಿಯನ್ನು ಪ್ರೀತಿಸುವುದು ಗಂಡನ ಕರ್ತವ್ಯ ಎಂದು ಚಾಣಕ್ಯ ಹೇಳಿದರು. ಬುದ್ಧಿವಂತ, ಪ್ರಾಮಾಣಿಕ ಹೆಂಡತಿ ಯಾವಾಗಲೂ ಯಶಸ್ಸಿಗೆ ದಾರಿ ತೋರುತ್ತಾಳೆ.
ಹೆಂಡತಿಯು ತನ್ನ ಗಂಡನನ್ನು ಪ್ರೀತಿಸಬೇಕು ಮತ್ತು ಯಾವಾಗಲೂ ಸತ್ಯವನ್ನು ಮಾತನಾಡಬೇಕು. ಹೆಂಡತಿಯ ಇಂತಹ ನಡವಳಿಕೆಯು ಕುಟುಂಬದಲ್ಲಿ ಸಂತೋಷವನ್ನು ತರುತ್ತದೆ. ಹೆಂಡತಿ ತನ್ನ ಗಂಡನ ಒಪ್ಪಿಗೆಯೊಂದಿಗೆ ಮಾಡುವ ಪ್ರತಿ ಕೆಲಸವೂ ಅವರ ಜೀವನ ಮತ್ತು ಕುಟುಂಬಕ್ಕೆ ಪ್ರಯೋಜನಕಾರಿಯಾಗಬೇಕು.
ಒಳ್ಳೆಯ ಹೆಂಡತಿ ಎಂದಿಗೂ ಜಗಳವಾಡುವುದಿಲ್ಲ. ಹೆಂಡತಿ ತನ್ನ ಪತಿಯೊಂದಿಗೆ ವಿನಾಕಾರಣ ಜಗಳವಾಡಬಾರದು. ನೋಡಲು ಸುಂದರವಾಗಿಲ್ಲ ಎಂದರೂ ಗಂಡನನ್ನು ಅನುಸರಿಸಿಕೊಂಡು ಹೋಗುವ ಪತ್ನಿಯರು ಸಂದರ್ಭಕ್ಕನುಗುಣವಾಗಿ ಗಂಡನ ಪ್ರೀತಿಯನ್ನು ಸಂಪೂರ್ಣವಾಗಿ ಸಂಪಾದಿಸುತ್ತಾರೆ ಎನ್ನುತ್ತಾರೆ ಚಾಣಕ್ಯ.
ಒಳ್ಳೆಯ ಹೆಂಡತಿ ಬುದ್ಧಿವಂತ ಮತ್ತು ಪ್ರಾಮಾಣಿಕವಾಗಿರಬೇಕು. ಪ್ರೀತಿಯ ಮತ್ತು ಪ್ರಾಮಾಣಿಕ ಹೆಂಡತಿಯನ್ನು ಹೊಂದಲು ಪತಿ ಅದೃಷ್ಟಶಾಲಿ. ಸುಂದರವಲ್ಲದ ಒಳ್ಳೆಯ ಕುಟುಂಬದ ಹುಡುಗಿಯನ್ನು ಮದುವೆಯಾಗಬಹುದು. ಕೋಪ ಕಡಿಮೆ ಇದ್ದಷ್ಟೂ ಗಂಡ ಹೆಂಡತಿಯ ಜೊತೆ ಸುಖವಾಗಿರುತ್ತಾನೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ