Chanakya Niti: ಈ 5 ಸ್ಥಳಗಳಲ್ಲಿ ವಾಸಿಸುವ ಜನರು ಎಂದಿಗೂ ಪ್ರಗತಿ ಕಾಣುವುದಿಲ್ಲ, ಜೀವನದಲ್ಲಿ ಸಂತೋಷ ಇರುವುದಿಲ್ಲ -ಚಾಣಕ್ಯ ನೀತಿ
Chanakya Niti: ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಜೀವನ ನಡೆಸುವ ಕಲೆಯನ್ನು ಹೇಳಿದ್ದಾರೆ. 5 ಸ್ಥಳಗಳಲ್ಲಿ ವಾಸಿಸುವರು ಜೀವನದಲ್ಲಿ ಎಂದಿಗೂ ಜೀವನದಲ್ಲಿ ಪ್ರಗತಿಯನ್ನು ಹೊಂದಲ್ಲ ಎಂದಿದ್ದಾರೆ.

ಆಚಾರ್ಯ ಚಾಣಕ್ಯರು ಕೌಟಿಲ್ಯ ಎಂದು ಪ್ರಸಿದ್ಧಿಯನ್ನು ಪಡೆದವರು. ಚಾಣಕ್ಯರ ಮಾತುಗಳನ್ನು ಅನುಸರಿಸಿ ಮಗಧದ ರಾಜ ಚಂದ್ರುಗುಪ್ತನು ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಚಾಣಕ್ಯರು ಅಸಾಮಾನ್ಯ ಬುದ್ಧಿವಂತರು. ಸಕಲ ಶಾಸ್ತ್ರ ಪಾರಂಗತರಾಗಿದ್ದರು. ಚಾಣಕ್ಯರ ನೀತಿಶಾಸ್ತ್ರವು ಪ್ರಪಂಚದಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಸಮಾಜದಲ್ಲಿ ಬದುಕಲು ಮತ್ತು ಯಶಸ್ಸುಗಳಿಸಲು ಅನೇಕ ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಇಂದಿಗೂ ಪಾಲಿಸಲಾಗುತ್ತಿದೆ. ಚಾಣಕ್ಯರು ಹೇಳಿರುವ ನೀತಿಯನ್ನು ಅನುಸರಿಸಿದರೆ ಯಶಸ್ಸು ಖಂಡಿತ ಸಿಗುತ್ತದೆ ಎನ್ನುವುದು ಬಹಳಷ್ಟು ಜನರ ನಂಬಿಕೆ. ಚಾಣಕ್ಯರ ಪ್ರಕಾರ ಕೆಲವರು ಜೀವನದುದ್ದಕ್ಕೂ ಬಡವರಾಗಿಯೇ ಇರುತ್ತಾರೆ. ಕಾರಣ ಇಷ್ಟೇ, ಯಾವ ವ್ಯಕ್ತಿ ಕೆಲಸಕ್ಕೆ ಮಹತ್ವವನ್ನು ಕೊಡುವುದಿಲ್ಲವೋ ಅವನು ಎಂದಿಗೂ ಪ್ರಗತಿಯನ್ನು ಸಾಧಿಸಲಾರ. ಅದೇ ರೀತಿ ತಪ್ಪು ಸ್ಥಳಗಳಲ್ಲಿ ವಾಸಿಸುವ ವ್ಯಕ್ತಿಯು ಸಹ ಅವನ ಜೀವನದಲ್ಲಿ ಪ್ರಗತಿ ಅಥವಾ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಚಾಣಕ್ಯರು ಹೇಳುತ್ತಾರೆ. ಹಾಗಾದರೆ ಯಾವ ಸ್ಥಳಗಳಲ್ಲಿ ವಾಸಿಸುವವರು ಬಯಸಿದರೂ ಪ್ರಗತಿ ಸಾಧಿಸಲು ಮತ್ತು ಮುನ್ನಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಯೋಣ.
ಧನಿಕಃ ಶ್ರೋತ್ರಿಯೋ ರಾಜ ನದೀ ವೈದ್ಯಸ್ತ ಪಂಚಮಃ |
ಪಂಚ ಯತ್ರ ನ ವಿದ್ಯಂತೇ ನ ತತ್ರ ದಿವಸೇ ವಸೇತ ||
ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದ ಮೊದಲ ಅಧ್ಯಾಯದ ಒಂಬತ್ತನೇ ಶ್ಲೋಕದಲ್ಲಿ ಇದನ್ನು ಹೇಳಿದ್ದಾರೆ. ಅವರು ಹೇಳುವ ಪ್ರಕಾರ ಈ ಐದು ಸ್ಥಳಗಳಲ್ಲಿ ವಾಸಿಸುವ ಜನರು ಯಾವಾಗಲೂ ಬಡವರಾಗಿರುತ್ತಾರೆ. ಅವರಿಗೆ ಜೀವನದಲ್ಲಿ ಸಂತೋಷವಿರುವುದಿಲ್ಲ. ಅಂತಹ ಸ್ಥಳಗಳಲ್ಲಿರುವವರು ಜೀವನದಲ್ಲಿ ಮುನ್ನಡೆಯಲು ಸಾಧ್ಯವಿಲ್ಲ. ಅವರು ತಮ್ಮ ಜೀವನವನ್ನು ಮೂರ್ಖರಂತೆ ನಡೆಸುತ್ತಾರೆ. ಅವರಿಗೆ ಜ್ಞಾನವೂ ಇರುವುದಿಲ್ಲ ಜೊತೆಗೆ ಹಣ ಸಂಪಾದಿಸಲೂ ಸಾಧ್ಯವಿಲ್ಲ.
ಚಾಣಕ್ಯರು ಹೇಳಿದ ಆ 5 ಸ್ಥಳಗಳು
1. ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ, ಯಾವ ಜಾಗದಲ್ಲಿ ವೇದಗಳ ಜ್ಞಾನವನ್ನು ಹೊಂದಿರುವವರು ಇರುವುದಿಲ್ಲವೋ ಅಂತಹ ಸ್ಥಳದಲ್ಲಿ ವಾಸಿಸುವವರು ಬಡವರಾಗಿಯೇ ಇರುತ್ತಾರೆ. ಅಲ್ಲಿ ಜ್ಞಾನ ಸಂಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಅಂತಹ ಸ್ಥಳವನ್ನು ಬಿಡುವುದೇ ಒಳ್ಳೆಯದು.
2. ಯಾವ ಸ್ಥಳದಲ್ಲಿ ವ್ಯಾಪಾರಸ್ಥರು ಇರುವುದಿಲ್ಲವೋ, ಅಂತಹ ಸ್ಥಳದಲ್ಲಿ ಜನರು ಧನಹೀನರಾಗಿರುತ್ತಾರೆ. ಎಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತದೆಯೋ ಅಲ್ಲಿ ಜನರು ಶ್ರೀಮಂತರಾಗುತ್ತಾರೆ. ಆದ್ದರಿಂದ ಅಂತಹ ಸ್ಥಳಗಳು ಕೂಡಾ ವಾಸಕ್ಕೆ ಯೋಗ್ಯವಲ್ಲ.
3. ಯಾವ ಜಾಗದಲ್ಲಿ ಒಳ್ಳೆಯ ಹಾಗೂ ಶೂರ ರಾಜ ಇರುವುದಿಲ್ಲವೋ ಅಂತಹ ಸ್ಥಳವೂ ವಾಸಕ್ಕೆ ಯೋಗ್ಯವಲ್ಲ. ಏಕೆಂದರೆ ಅಲ್ಲಿ ಅರಾಜಕತೆಯಿರುತ್ತದೆ. ಅಲ್ಲಿ ಯಾವುದೇ ವಿಕಾಸವಾಗುವುದಿಲ್ಲ.
4. ಜಲವೇ ಜೀವನ. ಇದರ ಅರ್ಥ ಯಾವ ಪ್ರದೇಶದಲ್ಲಿ ನದಿಗಳು ಇರುವುದಿಲ್ಲವೊ ಅವು ಕೂಡಾ ವಾಸಕ್ಕೆ ಯೋಗ್ಯವಲ್ಲ. ನೀರಿಲ್ಲದಿದ್ದರೆ ಜೀವನ ಕಷ್ಟ. ನೀರು, ಜೀವನ ನಡೆಸಲು ಮತ್ತು ಆಹಾರಗಳನ್ನು ಬೆಳೆಯಲು ಅತಿ ಅವಶ್ಯಕ. ಆದ್ದರಿಂದ ಅಂತಹ ಸ್ಥಳಗಳಲ್ಲಿ ಇರುವುದು ಉತ್ತಮವಲ್ಲ.
5. ಆಚಾರ್ಯ ಚಾಣಕ್ಯರ ಪ್ರಕಾರ, ಯಾವ ಸ್ಥಳದಲ್ಲಿ ವೈದ್ಯರು ಇರುವುದಿಲ್ಲವೋ ಅದು ಕೂಡಾ ವಾಸಕ್ಕೆ ಯೋಗ್ಯವಲ್ಲ. ಏಕೆಂದರೆ ರೋಗಭಾದೆಗಳನ್ನು ಗುಣಪಡಿಸಲು ವೈದ್ಯರು ಅಗತ್ಯವಾಗಿ ಬೇಕು.ಇಲ್ಲದಿದ್ದರೆ ರೋಗಗಳನ್ನು ಗುಣಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಐದು ಸ್ಥಳಗಳು ವಾಸಕ್ಕೆ ಯೋಗ್ಯವಲ್ಲ. ಅಲ್ಲಿ ನೆಲೆಸಿದರೆ ಜೀವನದಲ್ಲಿ ಪ್ರಗತಿ, ಯಶಸ್ಸು ಗಳಿಸಲು ಸಾಧ್ಯವಿಲ್ಲ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ