Chanakya Niti: ಚಾಣಕ್ಯರ ಪ್ರಕಾರ, ಸಂಗಾತಿಯ ಬಗ್ಗೆ ಅವಶ್ಯಕತವಾಗಿ ತಿಳಿಯಬೇಕಾದ 5 ವಿಚಾರಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಚಾಣಕ್ಯರ ಪ್ರಕಾರ, ಸಂಗಾತಿಯ ಬಗ್ಗೆ ಅವಶ್ಯಕತವಾಗಿ ತಿಳಿಯಬೇಕಾದ 5 ವಿಚಾರಗಳಿವು

Chanakya Niti: ಚಾಣಕ್ಯರ ಪ್ರಕಾರ, ಸಂಗಾತಿಯ ಬಗ್ಗೆ ಅವಶ್ಯಕತವಾಗಿ ತಿಳಿಯಬೇಕಾದ 5 ವಿಚಾರಗಳಿವು

Chanakya Niti: ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಸಮಾಜದ ಕಲ್ಯಾಣಕ್ಕೆ ಸಂಬಂಧಿಸಿದಂತೆ ಹಲವಾರು ನೀತಿಗಳನ್ನು ಹೇಳಿದ್ದಾರೆ. ಅವುಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಪಾಲಿಸುವ ಜನರು ಅನೇಕ ಕಷ್ಟಗಳಿಂದ ಮುಕ್ತರಾಗುತ್ತಾರೆ ಎಂದು ಹೇಳಲಾಗುತ್ತದೆ. ಇಂದಿಗೂ ಚಾಣಕ್ಯರ ನೀತಿಗಳು ಬಹಳ ಜನಪ್ರಿಯವಾಗಿವೆ.

Chanakya Niti: ಮದುವೆಗೆ ಮೊದಲು ನೀವು ಮಾಡಬೇಕಾದ ಕೆಲಸ ಇದು: ಸಂಗಾತಿಯನ್ನು ಈ 5 ಗುಣಗಳಿಂದ ಪರೀಕ್ಷಿಸಿ, ಜೀವನ ಸುಂದರವಾಗಿರುತ್ತದೆ
Chanakya Niti: ಮದುವೆಗೆ ಮೊದಲು ನೀವು ಮಾಡಬೇಕಾದ ಕೆಲಸ ಇದು: ಸಂಗಾತಿಯನ್ನು ಈ 5 ಗುಣಗಳಿಂದ ಪರೀಕ್ಷಿಸಿ, ಜೀವನ ಸುಂದರವಾಗಿರುತ್ತದೆ (PC: HT File Photo)

ಆಚಾರ್ಯ ಚಾಣಕ್ಯರು ಹಲವು ಕ್ಷೇತ್ರಗಳಲ್ಲಿ ಪರಿಣಿತರಾಗಿದ್ದರು. ಅವರು ತಮ್ಮ ನೀತಿಶಾಸ್ತ್ರದಲ್ಲಿ ಅನೇಕ ವಿಷಯಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸಲಹೆಗಳನ್ನು ನೀಡಿದ್ದಾರೆ. ಹಣ, ಸಂಬಂಧ, ವ್ಯವಹಾರ, ಶಿಕ್ಷಣ ಮತ್ತು ಯಶಸ್ಸಿನ ಬಗ್ಗೆ ಆಳವಾದ ಜ್ಞಾನವನ್ನು ವಿವರಿಸಿದ್ದಾರೆ. ಈ ತತ್ವಗಳ ಆಧಾರದ ಮೇಲೆ ಅನೇಕ ಜನರು ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಆದ್ದರಿಂದ ಇಂದಿಗೂ ಆಚಾರ್ಯ ಚಾಣಕ್ಯರ ತತ್ವಗಳನ್ನು ಪಾಲಿಸುವುದನ್ನು ಕಾಣಬಹುದು. ಚಾಣಕ್ಯರ ತತ್ವಗಳನ್ನು ಅನುಸರಿಸುವ ಮೂಲಕ, ವ್ಯಕ್ತಿಯು ತನ್ನ ಜೀವನವನ್ನು ಯಶಸ್ವಿಗೊಳಿಸಿಕೊಳ್ಳಬಹುದು. ಮದುವೆಯಾಗುವ ಮೊದಲು ಒಬ್ಬ ವ್ಯಕ್ತಿ ತನ್ನ ಸಂಗಾತಿಯ ಬಗ್ಗೆ ಅವಶ್ಯಕವಾಗಿ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳನ್ನು ಚಾಣಕ್ಯರು ಉಲ್ಲೇಖಿಸಿದ್ದಾರೆ. ಆ ವಿಷಯಗಳನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳಿ. ಆಗ ಮಾತ್ರ ಜೀವನ ಸುಂದರವಾಗುತ್ತದೆ. ಇಲ್ಲವಾದರೆ ನಿಮ್ಮ ಜೀವನ ನರಕವಾಗುತ್ತದೆ.

ಮದುವೆಗೆ ಮೊದಲು ನಿಮ್ಮ ಸಂಗಾತಿಯ ಬಗ್ಗೆ 5 ವಿಚಾರಗಳನ್ನು ತಿಳಿದುಕೊಳ್ಳಬೇಕು

  • ಚಾಣಕ್ಯರ ಪ್ರಕಾರ, ಮಧುರವಾದ ಮಾತಿನ ಮೂಲಕ ನೀವು ಯಾರನ್ನಾದರೂ ನಿಮ್ಮವರನ್ನಾಗಿಸಿಕೊಳ್ಳಬಹುದು. ಇದರಿಂದ ಮನೆ-ಮನ ಎರಡೂ ಸಂತೋಷದಿಂದ ಕೂಡಿರುತ್ತದೆ. ಸಿಹಿ ಮಾತುಗಳು ಯಾವುದೇ ಸಂಬಂಧವನ್ನು ಭದ್ರಪಡಿಸಬಲ್ಲದು. ಆದರೆ ಯಾವಾಗಲೂ ಕಹಿ ಮಾತುಗಳನ್ನಾಡುವ ವ್ಯಕ್ತಿ ನಿಮ್ಮ ಜೀವನವನ್ನು ಹಾಳುಮಾಡುತ್ತಾನೆ. ಯಾವಾಗಲೂ ತಪ್ಪಾಗಿ ಯೋಚಿಸುವ ಹಾಗೂ ತಪ್ಪಾಗಿ ಮಾತನಾಡುವ ಜನರೊಂದಿಗೆ ಸಂತೋಷವಾಗಿರಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಸಂಗಾತಿಯಾಗುವ ವ್ಯಕ್ತಿ ಹೇಗೆ ಮಾತನಾಡುತ್ತಾರೆ ಎಂಬುದನ್ನು ಮದುವೆಗೂ ಮುಂಚಿತವಾಗಿ ಗಮನಿಸಿ.

ಇದನ್ನೂ ಓದಿ: Chanakya Niti: ಚಾಣಕ್ಯರ ಪ್ರಕಾರ ಈ 5 ಅಭ್ಯಾಸಗಳಿಂದ ದೂರ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತೆ

  • ಮದುವೆಯಾಗುವ ಮೊದಲು ನಿಮ್ಮ ಸಂಗಾತಿಯಾಗುವವರು ನಂಬಿಕೆ ಮತ್ತು ಕೆಲಸಕ್ಕೆ ಪ್ರಾಮುಖ್ಯ ನೀಡುವುದನ್ನು ಖಚಿತಪಡಿಸಿಕೊಳ್ಳಿ ಎಂದು ಚಾಣಕ್ಯರು ಹೇಳುತ್ತಾರೆ. ಏಕೆಂದರೆ ಅಂತಹ ವ್ಯಕ್ತಿಯು ತನ್ನ ಕುಟುಂಬಕ್ಕೆ ಒಳ್ಳೆಯದನ್ನು ಮಾಡುತ್ತಾನೆ. ಅವರಿಗೆ ಕುಟುಂಬವೇ ಜೀವನ. ಅಷ್ಟೇ ಅಲ್ಲದೇ ಆ ವ್ಯಕ್ತಿ ಸಂಬಂಧಗಳಿಗೆ ಎಷ್ಟು ಬೆಲೆ ಕೊಡುತ್ತಾನೆ? ಸಂಬಂಧದಲ್ಲಿ ಅವನಿಗೆ ಎಷ್ಟು ವಿಶ್ವಾಸವಿದೆ ಎಂಬುದನ್ನೂ ನೀವು ತಿಳಿದುಕೊಳ್ಳಬೇಕು.
  • ಸೌಮ್ಯ, ಸುಸಂಸ್ಕೃತ ವ್ಯಕ್ತಿಯನ್ನು ಮದುವೆಯಾಗುವುದರಿಂದ ನಿಮ್ಮ ಜೀವನ ಸ್ವರ್ಗವಾಗುತ್ತದೆ. ಅಂತಹ ಸಂಗಾತಿ ನಿಮಗೆ ಸಿಕ್ಕರೆ, ಅವರು ನಿಮಗೆ ಯಾವಾಗಲೂ ರಕ್ಷಣೆ ಒದಗಿಸುತ್ತಾರೆ ಹಾಗೂ ನಿಮ್ಮನ್ನು ಗೌರವಿಸುತ್ತಾರೆ.
  • ಕೋಪವು ವ್ಯಕ್ತಿಯ ದೊಡ್ಡ ಶತ್ರು ಎಂದು ಪರಿಗಣಿಸಲಾಗುತ್ತದೆ. ಕೋಪದ ಪರಿಣಾಮವು ಸಂಬಂಧಗಳು ಹದಗೆಡುವಂತೆ ಮಾಡುತ್ತದೆ. ಹಾಗೂ ಸಂಬಂಧವನ್ನು ನಾಶಮಾಡುತ್ತದೆ. ಅತಿಯಾಗಿ ಕೋಪಗೊಳ್ಳುವ ವ್ಯಕ್ತಿಗಳು ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮಾರ್ಥ್ಯವನ್ನು ಕಳೆದುಕೊಂಡಿರುತ್ತಾರೆ. ಆದ್ದರಿಂದ ಮದುವೆಗೆ ಮೊದಲು ನಿಮ್ಮ ಸಂಗಾತಿಯ ಗುಣ ಸ್ವಭಾವಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ: Chanakya Niti: ಚಾಣಕ್ಯನ ಈ 10 ಪ್ರಮುಖ ನಿಯಮಗಳು ತಿಳಿದುಕೊಂಡರೆ ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತೆ

  • ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಗೆ ತಾಳ್ಮೆ ಮತ್ತು ಸಂಯಮ ಬಹಳ ಮುಖ್ಯ. ಮದುವೆಗೂ ಮುನ್ನ ನಿಮ್ಮ ಸಂಗಾತಿಯ ತಾಳ್ಮೆಯನ್ನು ಪರೀಕ್ಷಿಸಬೇಕು. ಇದರಿಂದ ನೀವು ನಿಮ್ಮ ಕುಟುಂಬವನ್ನು ಎಲ್ಲಾ ತೊಂದರೆಗಳಿಂದ ರಕ್ಷಿಸಬಹುದು. ತಾಳ್ಮೆ ಮತ್ತು ಸಂಯಮವಿರುವ ವ್ಯಕ್ತಿಗಳು ಕಷ್ಟದ ಸಮಯದಲ್ಲಿ ಬಹಳ ಬುದ್ಧಿವಂತಿಕೆಯಿಂದ ವರ್ತಿಸುತ್ತಾರೆ. ಆದ್ದರಿಂದ ಆಚಾರ್ಯ ಚಾಣಕ್ಯರು ಹೇಳುವಂತೆ ನಿಮ್ಮ ಸಂಗಾತಿಯನ್ನು ಬಹಳ ಎಚ್ಚರಿಕೆಯಿಂದ ಆರಿಸಿಕೊಳ್ಳಿ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

Whats_app_banner