Chanakya Niti: ಮಹಿಳೆಯರು ಈ 4 ವಿಶೇಷ ಗುಣಗಳಲ್ಲಿ ಪುರುಷರಿಗಿಂತಲೂ ಹೆಚ್ಚು ಸಮರ್ಥರು –ಚಾಣಕ್ಯ ನೀತಿ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಮಹಿಳೆಯರು ಈ 4 ವಿಶೇಷ ಗುಣಗಳಲ್ಲಿ ಪುರುಷರಿಗಿಂತಲೂ ಹೆಚ್ಚು ಸಮರ್ಥರು –ಚಾಣಕ್ಯ ನೀತಿ

Chanakya Niti: ಮಹಿಳೆಯರು ಈ 4 ವಿಶೇಷ ಗುಣಗಳಲ್ಲಿ ಪುರುಷರಿಗಿಂತಲೂ ಹೆಚ್ಚು ಸಮರ್ಥರು –ಚಾಣಕ್ಯ ನೀತಿ

Chanakya Niti: ಆಚಾರ್ಯ ಚಾಣಕ್ಯರು ಮಹಿಳೆಯರಲ್ಲಿರುವ ನಾಲ್ಕು ಅದ್ಭುತ ಗುಣಗಳ ಬಗ್ಗೆ ಹೇಳಿದ್ದಾರೆ. ಈ ಗುಣಗಳು ಇವರನ್ನು ಪುರುಷರಿಗಿಂತ ಶ್ರೇಷ್ಠರನ್ನಾಗಿ ಮಾಡುತ್ತದೆ. ಹಾಗಿದ್ರೆ ಆ ಗುಣಗಳ ಬಗ್ಗೆ ತಿಳಿಯೋಣ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರು ಹೇಳಿದ ನೀತಿಗಳು ತುಂಬಾ ಪ್ರಸಿದ್ಧಿಯನ್ನು ಪಡೆದಿವೆ. ಜೊತೆಗೆ ಅವರು ಜೀವನದ ವಿಭಿನ್ನ ಸಮಸ್ಯೆಗಳಿಗೆ ಹಲವಾರು ಪರಿಹಾರಗಳನ್ನು ಹೇಳಿದ್ದಾರೆ. ಮನುಷ್ಯನು ಜೀವನದಲ್ಲಿ ಸಂತೋಷದಿಂದರಬೇಕೆಂದರೆ ಯಾವ ರೀತಿಯ ಗುಣಗಳನ್ನು ಹೊಂದಿರಬೇಕು, ಯಾವ ತಪ್ಪುಗಳನ್ನು ಮಾಡಬಾರದು ಎಂದು ವಿವರವಾಗಿ ಹೇಳಿದ್ದಾರೆ. ಕಷ್ಟಗಳನ್ನೆಲ್ಲಾ ದೂರ ಮಾಡಿಕೊಳ್ಳಲು ಏನೆಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದೂ ಸಹ ಹೇಳಿದ್ದಾರೆ. ಆಚಾರ್ಯ ಚಾಣಕ್ಯರು ಮಹಿಳೆ ಮತ್ತು ಪುರುಷರ ವಿಷಯಗಳ ಬಗ್ಗೆ ಅನೇಕ ಮಾಹಿತಿಗಳನ್ನು ತಮ್ಮ ನೀತಿಯ ಮೂಲಕ ನೀಡಿದ್ದಾರೆ. ಅವು ಸಂಬಂಧಗಳಲ್ಲಿ ತಲೆದೂರುವ ಗಂಭೀರ ವಿಷಯಗಳಿಗೆ ಸಮಾಧಾನವನ್ನು ಹೇಳುತ್ತವೆ.

ಆಚಾರ್ಯ ಚಾಣಕ್ಯರು ಮಹಿಳೆಯರ ವಿಶೇಷ ಗುಣಗಳ ಬಗ್ಗೆ ಹೇಳಿದ್ದಾರೆ. ಆ ಗುಣಗಳೇ ಮಹಿಳೆಯರು ಪುರುಷರಗಿಂತಲೂ ಹೆಚ್ಚು ಸಾಧನೆ ಮಾಡುವಂತೆ ಮಾಡುವಂತೆ ಹಾಗೂ ಅವರು ಸಮರ್ಥರು ಎಂಬುದನ್ನು ಸಾಬೀತುಪಡಿಸುತ್ತದೆ ಎಂದೂ ಹೇಳಿದ್ದಾರೆ. ಅದರಲ್ಲೂ ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲ ರಂಗದಲ್ಲೂ ತೊಡಗಿಸಿಕೊಂಡಿದ್ದಾರೆ. ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಸ್ತ್ರೀಯರು ಹೆಚ್ಚು ಸಮರ್ಥರಾಗಿ ಮುನ್ನಡೆಯಲು ಕಾರಣಗಳೇನು? ಇದಕ್ಕೆ ಚಾಣಕ್ಯರು ಹೇಳಿದ ಮಹಿಳೆಯರಲ್ಲಿರುವ 4 ವಿಶೇಷ ಗುಣಗಳು ಯಾವುವು ಎಂದು ತಿಳಿದುಕೊಳ್ಳೋಣ.

ಸಾಹಸಂ ಷಡ್ಗುಣಂ: ಆಚಾರ್ಯ ಚಾಣಕ್ಯರ ಪ್ರಕಾರ ಮಹಿಳೆಯರು ಪುರುಷರಿಗಿಂತ ಬಹಳ ಧೈರ್ಯಶಾಲಿಗಳು. ಅಂದರೆ ಅವರಿಗೆ ಪುರುಷರಿಗಿಂತ ಹೆಚ್ಚು ಧೈರ್ಯ ಮತ್ತು ಸವಾಲುಗಳನ್ನು ಎದುರಿಸುವ ಶಕ್ತಿ ಇರುತ್ತದೆ. ಅವರು ತಮ್ಮ ಕುಟುಂಬವನ್ನು ರಕ್ಷಿಸಲು ಹಾಗೂ ಸಮಾಜದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ.

ಬುದ್ಧಿಸ್ತಾಸಾಂ ಚತುರ್ಗುಣಾ: ಮಹಿಳೆಯರು ಪುರುಷರಿಗಿಂತ ನಾಲ್ಕು ಪಟ್ಟು ಹೆಚ್ಚು ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಾರೆ ಎಂದು ಚಾಣಕ್ಯರು ಹೇಳುತ್ತಾರೆ. ಮಹಿಳೆಯರಲ್ಲಿರುವ ತೀಕ್ಷ್ಣ ಬುದ್ಧಿ ಕಠಿಣ ಸವಾಲುಗಳಿಗೂ ಸುಲಭದ ಪರಿಹಾರ ಕಂಡುಹಿಡಿಯುವ ಸಾಮರ್ಥ್ಯವನ್ನು ತಂದುಕೊಡುತ್ತದೆ. ಪುರುಷರಿಗಿಂತ ಉತ್ತಮವಾಗಿ ಅತ್ಯಂತ ಕಠಿಣ ಸಂದರ್ಭಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ತ್ವರಿತವಾಗಿ ಯೋಚಿಸುವ ಬುದ್ಧಿ, ಸಮಸ್ಯೆಗೆ ಸಾಧ್ಯವಾದಷ್ಟು ಬೇಗ ಪರಿಹಾರವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ.

ಕಾಮೋಷ್ಟಗುಣಾ ಉಚ್ಯತೆ: ಆಚಾರ್ಯ ಚಾಣಕ್ಯರ ಪ್ರಕಾರ ಸ್ತ್ರೀಯರು ಪುರುಷರಿಗಿಂತ ಹೆಚ್ಚು ಬಲಶಾಲಿಗಳು ಎಂದು ಹೇಳುತ್ತಾರೆ. ಅವರು ಮಾನಸಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚು ಬಲಿಷ್ಠರು. ಅಷ್ಟೇ ಅಲ್ಲದೇ ಮಹಿಳೆಯರು ಹೆಚ್ಚು ಸೂಕ್ಷ್ಮವಾಗಿ ಆಲೋಚಿಸುತ್ತಾರೆ. ಇದರಿಂದಾಗಿಯೇ ಅವರ ವ್ಯಕ್ತಿತ್ವವು ಪುರುಷರಿಗಿಂತ ಉತ್ತಮವಾಗಿರುತ್ತದೆ.

ಸ್ತ್ರೀಣಾಂ ದ್ವಿಗುಣ ಆಹಾರೋ: ಈ ನೀತಿಯ ಮೂಲಕ ಆಚಾರ್ಯ ಚಾಣಕ್ಯರು ಮಹಿಳೆಯುರಿಗೆ ಪುರುಷರಿಗಿಂತ ಹೆಚ್ಚು ಹಸಿವಾಗುತ್ತದೆ. ಅವರ ದೇಹಕ್ಕೆ ಪುರಷರಿಗಿಂತ ಹೆಚ್ಚು ಶಕ್ತಿ ಮತ್ತು ಪೋಷಣೆಯ ಅಗತ್ಯವಿರುತ್ತದೆ. ಅದರಂತೆ ಅವರ ದೇಹವು ರಚಿಸಲ್ಪಟ್ಟಿದೆ. ದಿನವಿಡೀ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವ ಮಹಿಳೆಯರಿಗೆ ಹೆಚ್ಚು ಹಸಿವಿನ ಅನುಭುವವಾಗುವುದು ಸಹಜವಾಗಿದೆ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

HT Kannada Desk

Whats_app_banner