Double Chin: ಡಬಲ್ ಚಿನ್ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು, ದಿನಕ್ಕೆರಡು ಬಾರಿ ಹೀಗೆ ಮಾಡಿ ಪರಿಹಾರ ಕಂಡುಕೊಳ್ಳಿ
Double Chin: ನಿಮಗೂ ಡಬಲ್ ಚಿನ್ ಪ್ರಾಬ್ಲಂ ಇದೆಯಾ? ಹಾಗಾದ್ರೆ ಒಂದಿಷ್ಟು ವ್ಯಾಯಾಮ ಮಾಡಿ. ತನ್ನಿಂದ ತಾನೇ ಕಡಿಮೆ ಆಗುತ್ತದೆ. ಬೊಜ್ಜು ಅಥವಾ ಇತರ ಯಾವುದೇ ದೈಹಿಕ ಬದಲಾವಣೆಗಳಿಂದ ಡಬಲ್ ಚಿನ್ ಸಮಸ್ಯೆ ಉಂಟಾಗುತ್ತದೆ. ಗಲ್ಲದ ಕೆಳಗಿನ ಭಾಗದಲ್ಲಿ ಹೆಚ್ಚುವರಿ ಕೊಬ್ಬಿನ ಶೇಖರಣೆ ಆಗುತ್ತದೆ.
ಡಬಲ್ ಚಿನ್ ಸಮಸ್ಯೆ ಇದ್ದವರಿಗೆ ತಮ್ಮ ಅಂದ ಹಾಳಾಗುತ್ತಿದೆ ಎಂದು ಆಗಾಗ ಅನಿಸುತ್ತಾ ಇರುತ್ತದೆ. ತಮ್ಮಷ್ಟಕ್ಕೆ ತಾವೇ ಅದನ್ನು ನಿರ್ಧಾರ ಮಾಡಿಕೊಂಡು ಬೇಸರ ಮಾಡಿಕೊಳ್ಳುತ್ತಾರೆ. ಆದರೆ ಅದನ್ನು ನಿವಾರಣೆ ಮಾಡಿಕೊಳ್ಳಲು ಸುಲಭದ ಉಪಾಯಗಳಿದೆ. ಅವುಗಳನ್ನು ಮಾಡಿದರೆ ಸಾಕು ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನೀವು ಮುಖ್ಯವಾಗಿ ಮಾಡಬೇಕಾಗಿರುವುದು ವ್ಯಾಯಾಮ. ನಾವಿಲ್ಲಿ 5 ವ್ಯಾಯಾಮದ ವಿವರ ನೀಡಿದ್ದೇವೆ ಗಮನಿಸಿ. ಡಬಲ್ ಚಿನ್ ಸಮಸ್ಯೆಯಿಂದ ಬಳಲುತ್ತಿರುವವರು ಸಣ್ಣಪುಟ್ಟ ವ್ಯಾಯಾಮಗಳಿಂದ ಮುಕ್ತಿ ಪಡೆಯಬಹುದು. ದೇಹಾರೋಗ್ಯಕ್ಕೆ ವ್ಯಾಯಾಮ ಮಾಡುವಂತೆಯೇ ಡಬಲ್ ಚಿನ್‌ಗೈ ಮುಖದ ವ್ಯಾಯಾಮ ಅತ್ಯಗತ್ಯ. ನೀವು ಇದನ್ನು ನಿಯಮಿತವಾಗಿ ಮಾಡಿದರೆ, ನೀವು ಒಂದು ತಿಂಗಳೊಳಗೆ ಫಲಿತಾಂಶವನ್ನು ನೋಡುತ್ತೀರಿ.
ಟೆನ್ನಿಸ್ ಬಾಲ್ ಗಲ್ಲದ ಕೆಳಗಡೆ ಇಟ್ಟ ವ್ಯಾಯಾಮ
ಟೆನ್ನಿಸ್ ಚೆಂಡನ್ನು ತೆಗೆದುಕೊಂಡು ಅದನ್ನು ಗಲ್ಲದ ಕೆಳಗೆ ಇರಿಸಿ. ಚೆಂಡನ್ನು ಟೇಬಲ್‌ಗೆ ಯಾವುದಾದರೂ ಬೆಂಬಲ ಇರುವಂತೆ ನೋಡಿಕೊಳ್ಳಿ. ಈಗ ಗಲ್ಲವನ್ನು ತೆಗೆದುಕೊಂಡು ಚೆಂಡಿನ ಮೇಲೆ ಒತ್ತಡ ಹಾಕಿ. ಬಲವಾಗಿ ಒತ್ತಿ ಮತ್ತು ಬಿಡಿ. ಇದನ್ನು ದಿನಕ್ಕೆ ಕನಿಷ್ಠ 30 ಬಾರಿ ಮಾಡಿ. ಇದು ಗಲ್ಲದ ಕೆಳಗಿರುವ ಸ್ನಾಯುಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಸಂಗ್ರಹವಾದ ಕೊಬ್ಬು ಕರಗಲು ಪ್ರಾರಂಭಿಸುತ್ತದೆ.
ಚೂಯಿಂಗ್ ಗಮ್ ಜಗಿಯಿರಿ
ಚೂಯಿಂಗ್ ಗಮ್ ಅನ್ನು ನಿಮ್ಮ ಬಾಯಿಯಲ್ಲಿ ಇರಿಸಿ. ಸಾಧ್ಯವಾದಷ್ಟು ಕಾಲ ಅದನ್ನು ಅಗಿಯಲು ಪ್ರಯತ್ನಿಸಿ. ಇದರಿಂದ ಮುಖದಲ್ಲಿರುವ ಕೊಬ್ಬು ಕರಗುತ್ತದೆ.
ನಾಲಿಗೆ ಸುರುಳಿ ಮಾಡಿ
ಬಾಯಿಯಿಂದ ನಾಲಿಗೆಯನ್ನು ಹೊರತೆಗೆಯಿರಿ. ಅದನ್ನು ಸುರುಳಿ ಮಾಡಿ ಮಡಚಿ. ಹಾಗೆ ನಿಮ್ಮ ನಾಲಿಗೆಯಲ್ಲಿ ಮೂಗು ಮುಟ್ಟಲು ಪ್ರಯತ್ನ ಮಾಡಿ. ನಾಲಿಗೆಯನ್ನು ಹೀಗೆ ಮೂಗಿನ ಕೆಳಭಾಗದಲ್ಲಿ ಇಡಲು ಟ್ರೈ ಮಾಡಿ. ಹೀಗೆ ಮಾಡುವುದರಿಂದ ನಾಲಿಗೆಯ ಕೆಳಗಿರುವ ಸ್ನಾಯುಗಳ ಮೇಲೆ ಒತ್ತಡ ಬೀಳುತ್ತದೆ. ಪರಿಣಾಮವಾಗಿ, ಕೊಬ್ಬು ಅಲ್ಲಿ ಕರಗುತ್ತದೆ.
ತುಟಿಗಳ ವ್ಯಾಯಾಮ ಮಾಡಿ
ನಿಮ್ಮ ತುಳಿಗಳನ್ನು ಮುಂದಕ್ಕೆ ಹಿಂದಕ್ಕೆ ಮಾಡಿ. ತುಟಿಗಳನ್ನು ಒಳಕ್ಕೆ ಹೊರಕ್ಕೆ ಎಳೆದುಕೊಳ್ಳಿ. ಹೀಗೆ ಮಾಡಿದರೂ ಸಹ ನಿಮಗೆ ಡಬಲ್ ಚಿನ್ ಕರಗುತ್ತದೆ. ಪದೇ ಪದೇ ಇದೇ ರೀತಿ ಮಾಡುತ್ತಾ ಇರಿ ದಿನಕ್ಕೆ ನೀವು ಖಾಲಿ ಕುಳಿತಾಗಲೇ ಈ ರೀತಿ ಮಾಡಿ.
ಕತ್ತನ್ನು ಹಿಂದೆ, ಮುಂದೆ ಮಾಡಿ
ಕುತ್ತಿಗೆಯನ್ನು ಚಾಚಿ ಮುಂದೆ ತನ್ನಿ. ನಂತರ ಯಥಾಸ್ಥಾನಕ್ಕೆ ತನ್ನಿ. ಈಗ ಕುತ್ತಿಗೆಯನ್ನು ಸಾಧ್ಯವಾದಷ್ಟು ಹಿಂದಕ್ಕೆ ಎಳೆಯಿರಿ. ಹತ್ತು ಸೆಕೆಂಡುಗಳ ನಂತರ ಸಾಮಾನ್ಯ ಸ್ಥಿತಿಗೆ ಹಿಂತಿರುಗಿ. ಹತ್ತು ನಿಮಿಷ ಹೀಗೆ ಮಾಡಿ. ಇದರಿಂದ ಗಲ್ಲದ ಮತ್ತು ಕುತ್ತಿಗೆಯ ಅಡಿಯಲ್ಲಿರುವ ಕೊಬ್ಬು ಸ್ವಲ್ಪಮಟ್ಟಿಗೆ ಕರಗಲು ಪ್ರಾರಂಭಿಸುತ್ತದೆ. ನೀವು ಇದನ್ನು ನಿಯಮಿತವಾಗಿ ಒಂದು ತಿಂಗಳು ಮಾಡಿದರೆ ಫಲಿತಾಂಶ ಉತ್ತಮವಾಗಿರುತ್ತದೆ.
ವಿಭಾಗ