Chicken 555 Recipe: ಇವತ್ತು ಏನು ವೆರೈಟಿ ಮಾಡೋದು ಅಂದುಕೊಂಡಿದ್ದೀರಾ?ಈ ರುಚಿಯಾದ 'ಚಿಕನ್‌ 555' ಟ್ರೈ ಮಾಡಬಹುದಾ ನೋಡಿ?
ಕನ್ನಡ ಸುದ್ದಿ  /  ಜೀವನಶೈಲಿ  /   Chicken 555 Recipe: ಇವತ್ತು ಏನು ವೆರೈಟಿ ಮಾಡೋದು ಅಂದುಕೊಂಡಿದ್ದೀರಾ?ಈ ರುಚಿಯಾದ 'ಚಿಕನ್‌ 555' ಟ್ರೈ ಮಾಡಬಹುದಾ ನೋಡಿ?

Chicken 555 Recipe: ಇವತ್ತು ಏನು ವೆರೈಟಿ ಮಾಡೋದು ಅಂದುಕೊಂಡಿದ್ದೀರಾ?ಈ ರುಚಿಯಾದ 'ಚಿಕನ್‌ 555' ಟ್ರೈ ಮಾಡಬಹುದಾ ನೋಡಿ?

ಎಲ್ಲಾ ಸಾಮಗ್ರಿಗಳಿದ್ದರೆ, ರೆಸ್ಟೋರೆಂಟ್‌ನಲ್ಲಿ ಮಾತ್ರವಲ್ಲ, ಮನೆಯಲ್ಲಿ ಕೂಡಾ ಇಂತಹ ಟೇಸ್ಟಿ ರೆಸಿಪಿಗಳನ್ನು ಮಾಡಬಹುದು. ನೀವು ಊಟಕ್ಕೆ ಯಾರನ್ನಾದರೂ ಇನ್ವೈಟ್‌ ಮಾಡಿದ್ದರೆ, ಹೊಸ ರುಚಿ ಟ್ರೈ ಮಾಡಿ ಮನೆಯವನ್ನು ಇಂಪ್ರೆಸ್‌ ಮಾಡಬೇಕು ಎಂದುಕೊಂಡಿದ್ದರೆ ಚಿಕನ್‌ 555 ಕೂಡಾ ಬೆಸ್ಟ್‌ ಆಕ್ಷನ್‌, ಮಕ್ಕಳಿಗೆ ಕೂಡಾ ಇದು ಇಷ್ಟವಾಗುತ್ತದೆ.

ಚಿಕನ್‌ 555 ರೆಸಿಪಿ
ಚಿಕನ್‌ 555 ರೆಸಿಪಿ

ಮನೆಗೆ ಚಿಕನ್‌ ತಂದಾಗಲೆಲ್ಲಾ ಇವತ್ತು ಏನು ರೆಸಿಪಿ ಮಾಡೋದು ಅನ್ನೋದೆ ಕನ್ಫ್ಯೂಸ್‌. ರೆಸ್ಟೊರೆಂಟ್‌ಗಳಲ್ಲಿ ವೆರೈಟಿ ವೆರೈಟಿ ಚಿಕನ್‌ ದೊರೆಯುತ್ತದೆ. ಒಮ್ಮೆ ಆ ರುಚಿ ಮಾಡಿದಾಗ, ಮನೆಯಲ್ಲಿ ಕೂಡಾ ಈ ರೀತಿ ಮಾಡಬೇಕೆಂದು ಅನ್ನಿಸದೆ ಇರದು.

ನೀವು ಹೊರಗೆ ಎಂದಾದರೂ ಚಿಕನ್‌ 555 ಟೇಸ್ಟ್‌ ಮಾಡಿದ್ದೀರಾ? ಎಲ್ಲಾ ಸಾಮಗ್ರಿಗಳಿದ್ದರೆ, ರೆಸ್ಟೋರೆಂಟ್‌ನಲ್ಲಿ ಮಾತ್ರವಲ್ಲ, ಮನೆಯಲ್ಲಿ ಕೂಡಾ ಇಂತಹ ಟೇಸ್ಟಿ ರೆಸಿಪಿಗಳನ್ನು ಮಾಡಬಹುದು. ನೀವು ಊಟಕ್ಕೆ ಯಾರನ್ನಾದರೂ ಇನ್ವೈಟ್‌ ಮಾಡಿದ್ದರೆ, ಹೊಸ ರುಚಿ ಟ್ರೈ ಮಾಡಿ ಮನೆಯವನ್ನು ಇಂಪ್ರೆಸ್‌ ಮಾಡಬೇಕು ಎಂದುಕೊಂಡಿದ್ದರೆ ಚಿಕನ್‌ 555 ಕೂಡಾ ಬೆಸ್ಟ್‌ ಆಕ್ಷನ್‌, ಮಕ್ಕಳಿಗೆ ಕೂಡಾ ಇದು ಇಷ್ಟವಾಗುತ್ತದೆ. ಒಮ್ಮೆ ತಪ್ಪದೆ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು

ಬೋನ್‌ಲೆಸ್‌ ಚಿಕನ್‌ - 250 ಗ್ರಾಂ

ಕಾರ್ನ್‌ಫ್ಲೋರ್‌ - 2 ಟೇಬಲ್‌ ಸ್ಪೂನ್

ಮೈದಾಹಿಟ್ಟು - 2 ಟೇಬಲ್‌ ಸ್ಪೂನ್‌

ಕರಿಮೆಣಸಿನ ಪುಡಿ - 1 ಟೀ ಸ್ಪೂನ್

‌ಮೊಟ್ಟೆ - 1

ಶುಂಠಿ ಬೆಳ್ಳುಳ್ಳಿ ಪೇಸ್ಟ್‌ - 2 ಚಮಚ

ಈರುಳ್ಳಿ - 2

ಹಸಿಮೆಣಸಿನಕಾಯಿ ಪೇಸ್ಟ್‌ - 1 ಟೇಬಲ್‌ ಸ್ಪೂನ್‌

ಕರಿಬೇವು - 2 ಎಸಳು

ಕೊತ್ತಂಬರಿ ಸೊಪ್ಪು - 1/2 ಕಟ್ಟು

ಕ್ಯಾಪ್ಸಿಕಮ್‌ - 1

ಮೊಸರು - 1/2 ಕಪ್‌

ಅಚ್ಚ ಖಾರದ ಪುಡಿ - 1 ಟೀ ಸ್ಪೂನ್‌

ಧನಿಯಾ ಪುಡಿ - 1/2 ಟೀ ಸ್ಪೂನ್‌

ಗರಂ ಮಸಾಲೆ - 1/2 ಟೀ ಸ್ಪೂನ್‌

ಗೋಡಂಬಿ ಪುಡಿ - 2 ಟೇಬಲ್‌ ಸ್ಪೂನ್‌

ಎಣ್ಣೆ - ಕರಿಯಲು

ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಚಿಕನ್‌ ತೊಳೆದು ನೀರು ಸೋರಿಸಿ ಸಣ್ಣ-ಉದ್ದದ ಸ್ಟ್ರಿಪ್‌ಗಳನ್ನಾಗಿ ಕತ್ತರಿಸಿಕೊಳ್ಳಿ.

ಚಿಕನ್‌ಗೆ ಕಾರ್ನ್‌ಪ್ಲೋರ್‌, ಮೈದಾ , ಉಪ್ಪು, ಪೆಪ್ಪರ್‌ ಪೌಡರ್‌, ಮೊಟ್ಟೆ ಸೇರಿಸಿ ಮಿಕ್ಸ್‌ ಮಾಡಿ 30 ನಿಮಿಷಗಳ ಕಾಲ ಬಿಡಿ.

ಮ್ಯಾರಿನೇಟ್‌ ಮಾಡಿದ ಚಿಕನ್‌ ಸ್ಟ್ರಿಪ್ಸ್‌ಗಳನ್ನು ಬಿಸಿ ಎಣ್ಣೆಯಲ್ಲಿ ಕಂದು ಬಣ್ಣ ಬರುವರೆಗೂಕರಿದು ತೆಗೆದಿಡಿ.

ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಫ್ರೈ ಮಾಡಿ.

ನಂತರ ಹಸಿಮೆಣಸಿನಕಾಯಿ ಪೇಸ್ಟ್‌, ಕರಿಬೇವು, ಸಣ್ಣಗೆ ಉದ್ದಕ್ಕೆ ಹೆಚ್ಚಿದ ಕ್ಯಾಪ್ಸಿಕಮ್‌ ಸೇರಿಸಿ ಹುರಿಯಿರಿ.

ಮೊಸರು ಸೇರಿಸಿ ತಿರುವಿ, ಈ ಮಿಶ್ರಣಕ್ಕೆ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಚಿಕನ್‌ ಮಸಾಲೆ ಪುಡಿ ಸೇರಿಸಿ ಎಲ್ಲವೂ ಹೊಂದಿಕೊಳ್ಳುವಂತೆ ಮಿಕ್ಸ್‌ ಮಾಡಿ.

ಇದಕ್ಕೆ ಮೊದಲೇ ಕರಿದಿಟ್ಟುಕೊಂಡ ಚಿಕನ್‌ ಸ್ಟ್ರಿಪ್ಸ್‌ಗಳನ್ನು ಸೇರಿಸಿ ಮಿಶ್ರಣ ಗಟ್ಟಿಯಾಗುವರೆಗೂ ಕುಕ್‌ ಮಾಡಿ.

ಕೊನೆಗೆ ಗೋಡಂಬಿ ಪುಡಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ ಚಿಕನ್ 555‌ ತಿನ್ನೋಕೆ ರೆಡಿ.

Whats_app_banner