ಹೋಟೆಲ್‌ ಶೈಲಿಯ ಚಿಕನ್‌ ಫ್ರೈಡ್‌ ರೈಸ್‌ ಮನೆಯಲ್ಲೇ ಮಾಡಿ; ಚಳಿಗಾಲಕ್ಕೆ ಇದು ಹೇಳಿ ಮಾಡಿಸಿದಂಥ ತಿಂಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹೋಟೆಲ್‌ ಶೈಲಿಯ ಚಿಕನ್‌ ಫ್ರೈಡ್‌ ರೈಸ್‌ ಮನೆಯಲ್ಲೇ ಮಾಡಿ; ಚಳಿಗಾಲಕ್ಕೆ ಇದು ಹೇಳಿ ಮಾಡಿಸಿದಂಥ ತಿಂಡಿ

ಹೋಟೆಲ್‌ ಶೈಲಿಯ ಚಿಕನ್‌ ಫ್ರೈಡ್‌ ರೈಸ್‌ ಮನೆಯಲ್ಲೇ ಮಾಡಿ; ಚಳಿಗಾಲಕ್ಕೆ ಇದು ಹೇಳಿ ಮಾಡಿಸಿದಂಥ ತಿಂಡಿ

Chicken Fried Rice: ಹೋಟೆಲ್‌ನಲ್ಲಿ ತಯಾರಿಸುವ ತಿಂಡಿಯನ್ನು ಮನೆಯಲ್ಲಿ ತಯಾರಿಸಲು ಅಗುವುದಿಲ್ಲ ಅನ್ನೋದು ಸುಳ್ಳು. ಸೂಕ್ತ ಸಾಮಗ್ರಿಗಳು ಇದ್ದರೆ ಖಂಡಿತ ಅದಕ್ಕಿಂತ ರುಚಿಯಾದ ತಿಂಡಿಯನ್ನು ತಯಾರಿಸಬಹುದು. ಚಳಿಗಾಲಕ್ಕೆ ಹೇಳಿ ಮಾಡಿಸಿದಂಥ ಹೋಟೆಲ್‌ ಸ್ಟೈಲ್‌ ಚಿಕನ್‌ ಫ್ರೈಡ್‌ ರೈಸ್‌ ರೆಸಿಪಿ ಇಲ್ಲಿದೆ.

ಚಿಕನ್‌ ಫ್ಫ್ರೈಡ್‌ ರೈಸ್‌ ರೆಸಿಪಿ
ಚಿಕನ್‌ ಫ್ಫ್ರೈಡ್‌ ರೈಸ್‌ ರೆಸಿಪಿ

ಚಳಿಗಾಲದಲ್ಲಿ ಬಿಸಿ ಬಿಸಿ ಚಿಕನ್‌ ಫ್ರೈಡ್‌ ರೈಸ್‌ ತಿಂದರೆ ಆ ರುಚಿ ಮಾಮೂಲಿಯಾಗಿ ಇರುವುದಿಲ್ಲ. ತಣ್ಣನೆಯ ವಾತಾವಣರಣ, ಸ್ಪೈಸಿ ಹಾಗ ರುಚಿಯಾದ ಆಹಾರ ಸೇವಿಸಿದರೆ ಅದರ ಮಜಾವೇ ಬೇರೆ. ಇಲ್ಲಿ ನಾವು ಬಹಳ ಸರಳವಾಗಿ ಚಿಕನ್‌ ಫ್ರೈಡ್‌ ತಯಾರಿಸುವುದು ಹೇಗೆ ಎಂಬ ವಿಧಾನ ಹೇಳಿಕೊಡುತ್ತಿದ್ದೇವೆ. ಹೊರಗೆ ಎಲ್ಲೋ ನೀವು ಹೋಗಿ ತಿನ್ನುವುದರ ಬದಲಿಗೆ ಮನೆಯಲ್ಲೇ ಸಿಂಪಲ್‌ ಚಿಕನ್‌ ಫ್ರೈಡ್‌ ರೈಸ್‌ ಮಾಡಿ ಸೇವಿಸುವುದು ಬೆಸ್ಟ್‌.

ಚಿಕನ್‌ ಫ್ರೈಡ್‌ ರೈಸ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಅನ್ನ - 2 ಕಪ್‌

ಚಿಕನ್‌ ತುಂಡುಗಳು - 200 ಗ್ರಾಂ

ಅರಿಶಿನ - 1/4 ಸ್ಪೂನ್‌

ಖಾರ - 1/2 ಚಮಚ

ಮೊಟ್ಟೆ - 2

ಕರಿಮೆಣಸಿನ ಪುಡಿ - 1/4 ಸ್ಪೂನ್‌

ಗರಂ ಮಸಾಲೆ - 1/4 ಸ್ಪೂನ್‌

ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ - 1/2 ಸ್ಪೂನ್‌

ಕಾರ್ನ್‌ಫ್ಲೋರ್‌ - 1ಸ್ಪೂನ್‌

ಕತ್ತರಿಸಿದ ಈರುಳ್ಳಿ - ಸ್ಪೂನ್‌

ಬೆಳ್ಳುಳ್ಳಿ ಎಸಳು - 5

ವಿನಿಗರ್‌ - 1 ಸ್ಪೂನ್‌

ಸೋಯಾಸಾಸ್‌ - 1 ಸ್ಪೂನ್‌

ಕೊತ್ತಂಬರಿ ಸೊಪ್ಪು - 2 ಸ್ಪೂನ್‌

ಎಣ್ಣೆ - ಡೀಪ್‌ ಫ್ರೈಗೆ ಬೇಕಾಗುವಷ್ಟು

ಉಪ್ಪು- ರುಚಿಗೆ ತಕ್ಕಷ್ಟು

ಚಿಕನ್‌ ಫ್ರೈಡ್‌ ರೈಸ್‌ ರೆಸಿಪಿ ತಯಾರಿಸುವ ವಿಧಾನ

ಮೊದಲು ಉದುರಾದ ಅನ್ನ ತಯಾರಿಸಿಕೊಳ್ಳಿ, ಫ್ರೈಡ್‌ ರೈಸ್‌ಗೆ ಅನ್ನ ಉದುರಾಗಿರಬೇಕು

ಚಿಕನ್‌ ತೊಳೆದು ನೀರು ಸೋರಿಸಿ ಅದಕ್ಕೆ ಉಪ್ಪು, ಅರಿಶಿನ, ಖಾರ, ಗರಂ ಮಸಾಲ ಪುಡಿ, ಕರಿಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಮೊಟ್ಟೆ, ಕಾರ್ನ್‌ಫ್ಲೋರ್‌ ಸೇರಿಸಿ ಮಿಕ್ಸ್‌ ಮಾಡಿ ಅರ್ಧ ಗಂಟೆ ಬಿಡಿ

ಸ್ಟೌವ್‌ ಮೇಲೆ ಎಣ್ಣೆ ಬಿಸಿ ಮಾಡಿ ಮ್ಯಾರಿನೇಟ್‌ ಮಾಡಿದ ಚಿಕನ್‌ ಸೇರಿಸಿ ಫ್ರೈ ಮಾಡಿ

ಸ್ಟೌವ್‌ ಮೇಲೆ ಮತ್ತೊಂದು ಪಾತ್ರೆ ಇಟ್ಟು ಅದಕ್ಕೆ ಬೆಳ್ಳುಳ್ಳಿ ಎಸಳು, ಈರುಳ್ಳಿ ಸೇರಿಸಿ ಮತ್ತೊಂದು ಮೊಟ್ಟೆಯನ್ನು ಸೇರಿಸಿ ಮಿಕ್ಸ್‌ ಮಾಡಿ

ಇದರೊಂದಿಗೆ ಮೊದಲೇ ಫ್ರೈ ಮಾಡಿಕೊಂಡ ಚಿಕನ್‌ ಚೂರುಗಳನ್ನು ಸೇರಿಸಿ ಮಿಕ್ಸ್‌ ಮಾಡಿ

ಈ ಮಿಶ್ರಣಕ್ಕೆ ಅನ್ನ ಸೇರಿಸಿ ಉಪ್ಪು ಹಾಗೂ ಉಳಿದ ಮಸಾಲೆಗಳನ್ನು ಸೇರಿಸಿ ಎಲ್ಲವೂ ಹೊಂದಿಕೊಳ್ಳುವಂತೆ ಮಿಕ್ಸ್‌ ಮಾಡಿ

ಮತ್ತೆ ವಿನಿಗರ್‌, ಸೋಯಾಸಾಸ್‌ ಸೇರಿಸಿ ಮಿಕ್ಸ್‌ ಮಾಡಿ ಕೊನೆಗೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ

Whats_app_banner