ಕೆಮ್ಮಿನ ಕಾರಣದಿಂದ ಎಳೆ ಮಕ್ಕಳು ರಾತ್ರಿಯಿಡಿ ಅಳುತ್ತಾರಾ, ನವಜಾತ ಶಿಶುಗಳ ಕೆಮ್ಮು ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದು
ಕನ್ನಡ ಸುದ್ದಿ  /  ಜೀವನಶೈಲಿ  /  ಕೆಮ್ಮಿನ ಕಾರಣದಿಂದ ಎಳೆ ಮಕ್ಕಳು ರಾತ್ರಿಯಿಡಿ ಅಳುತ್ತಾರಾ, ನವಜಾತ ಶಿಶುಗಳ ಕೆಮ್ಮು ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದು

ಕೆಮ್ಮಿನ ಕಾರಣದಿಂದ ಎಳೆ ಮಕ್ಕಳು ರಾತ್ರಿಯಿಡಿ ಅಳುತ್ತಾರಾ, ನವಜಾತ ಶಿಶುಗಳ ಕೆಮ್ಮು ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದು

ಚಳಿಗಾಲದಲ್ಲಿ ಶೀತ, ಜ್ವರ, ಕೆಮ್ಮಿನ ಸಮಸ್ಯೆ ಕಾಡುವುದು ಹೆಚ್ಚು, ಇದು ಪುಟ್ಟ ಮಕ್ಕಳಿಗೂ ತಪ್ಪಿದ್ದಲ್ಲ. ಇದರಿಂದ ಅವರು ರಾತ್ರಿಯೆಲ್ಲಾ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ನವಜಾತ ಶಿಶುಗಳಿಗೆ ಕೆಮ್ಮಿನ ಕಾರಣದಿಂದ ಉಸಿರಾಟಕ್ಕೂ ತೊಂದರೆಯಾಗಬಹುದು. ಎಳೆ ಕಂದಮ್ಮಗಳ ಕೆಮ್ಮು ನಿವಾರಣೆಗೆ ಇಲ್ಲಿದೆ ಒಂದಿಷ್ಟು ಸರಳ ಮನೆಮದ್ದಿನ ಪರಿಹಾರ. ಇದನ್ನ ನೀವೂ ಅನುಸರಿಸಿ.

ನವಜಾತ ಶಿಶುಗಳನ್ನು ಕಾಡುವ ಕೆಮ್ಮಿನ ಸಮಸ್ಯೆ ನಿವಾರಣೆ ಹೇಗೆ?
ನವಜಾತ ಶಿಶುಗಳನ್ನು ಕಾಡುವ ಕೆಮ್ಮಿನ ಸಮಸ್ಯೆ ನಿವಾರಣೆ ಹೇಗೆ? (PC: Canva)

ಚಳಿಗಾಲ ಬಂತೆಂದರೆ ಮಕ್ಕಳಿಗೆ ದೊಡ್ಡವರಿಗೆ ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಕಾಡುವುದು ಸಹಜ. ಮಾತು ಬರುವ ದೊಡ್ಡ ಮಕ್ಕಳು ತಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪೋಷಕರ ಬಳಿ ಹೇಳಿಕೊಳ್ಳಬಹುದು, ಆದರೆ ನವಜಾತ ಶಿಶುಗಳು, ಎಳೆ ಕಂದಮ್ಮಗಳು ತಮ್ಮ ಸಮಸ್ಯೆಯ ಬಗ್ಗೆ ಹೇಳಿಕೊಳ್ಳಲು ಸಾಧ್ಯವಿಲ್ಲ. ಅಂತಹ ಮಕ್ಕಳು ದಿನವಿಡೀ ಅಳುತ್ತಲೇ ಇರುತ್ತಾರೆ. ಅದರಲ್ಲೂ ರಾತ್ರಿ ಹೊತ್ತು ಈ ಮಕ್ಕಳು ಕೆಮ್ಮಿನ ಕಾರಣದಿಂದಾಗಿ ಹೆಚ್ಚು ಅಳುತ್ತಾರೆ.

ವಿಶೇಷವಾಗಿ ಕೆಮ್ಮು ರಾತ್ರಿ ಹೊತ್ತಿನಲ್ಲೇ ಹೆಚ್ಚಾಗುತ್ತದೆ. ಇದರಿಂದ ಮಕ್ಕಳಿಗೆ ಕಿರಿಕಿರಿಯಾಗಿ ಅಳಲು ಶುರು ಮಾಡುತ್ತಾರೆ. ಕೆಲವೊಮ್ಮೆ ಪೋಷಕರಿಗೆ ಮಕ್ಕಳ ಅಳುವಿಗೆ ಕಾರಣ ಏನು ಎಂಬುದು ಅರ್ಥವಾಗುವುದಿಲ್ಲ. ನಿಮ್ಮ ಮಗು ಕೂಡ ಕೆಮ್ಮಿನ ಕಾರಣದಿಂದ ರಾತ್ರಿಯಿಡಿ ಅಳುತ್ತಿದ್ದರೆ, ತಕ್ಷಣ ಕೆಮ್ಮು ನಿಲ್ಲಲು ಈ ಕೆಲವು ಮನೆಮದ್ದುಗಳನ್ನು ಅನುಸರಿಸಬಹುದು. ನವಜಾತ ಶಿಶುಗಳ ಕೆಮ್ಮು ನಿವಾರಣೆಗೆ ಇನ್‌ಸ್ಟಾಗ್ರಾಂನಲ್ಲಿ ಒಂದಿಷ್ಟು ಸರಳ ಸಲಹೆಗಳನ್ನುನೀಡಿದ್ದಾರೆ ಡಾ. ಮನೋಜ್ ಮಿತ್ತಲ್‌. ಇದನ್ನು ಅನುಸರಿಸಿದ್ರೆ ಕೆಮ್ಮು ನಿವಾರಣೆಯಾಗಿ ಮಕ್ಕಳು ನೆಮ್ಮದಿಯಿಂದ ನಿದ್ದೆ ಮಾಡುತ್ತಾರೆ.

ಎಳೆ ಕಂದಮ್ಮಗಳ ಕೆಮ್ಮು ನಿವಾರಣೆಗೆ ಮನೆಮದ್ದು

  • ಮಕ್ಕಳಿಗೆ ನೆಗಡಿ ಮತ್ತು ಕೆಮ್ಮು ಜಾಸ್ತಿಯಾದರೆ ಅವರಿಗೆ ನಿದ್ದೆ ಮಾಡಲು ಕಷ್ಟವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಸಿಂಥೆಟಿಕ್ ಹೊದಿಕೆಗಳನ್ನು ಬಳಸಬಾರದು. ಈ ಹೊದಿಕೆಗಳು ಮಕ್ಕಳು ಹೆಚ್ಚು ಬೆವರುವಂತೆ ಮಾಡುತ್ತವೆ. ಇದು ದೇಹವನ್ನು ತಂಪಾಗಿಸಬಹುದು. ಇದರಿಂದ ಕೆಮ್ಮಿನ ಸಮಸ್ಯೆ ಉಲ್ಬಣಗೊಳ್ಳಬಹುದು. ಚಳಿಗಾಲದ ಸಮಯದಲ್ಲಿ ಮಗುವನ್ನು ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಿ, ಅವರಿಗೆ ಹತ್ತಿ ಅಥವಾ ಉಣ್ಣೆಯ ಬಟ್ಟೆ ತೊಡಿಸಿ. ಸಿಂಥೆಟಿಕ್ ಸ್ವೆಟರ್‌ಗಳನ್ನು ತೊಡಿಸಬೇಡಿ.
  • ರಾತ್ರಿ ಹೊತ್ತು ಕೆಮ್ಮು ಹೆಚ್ಚಾದರೆ ವೀಳ್ಯದೆಲೆ ಜೊತೆ ಸಾಸಿವೆ ಎಣ್ಣೆ ಹಾಕಿ ಬಿಸಿ ಮಾಡಿ ಅದನ್ನ ಎದೆಯ ಬಳಿ ಸವರಿ. ಇದು ನೈಸರ್ಗಿಕ ವೇಪರೈಸರ್ ರೀತಿ ಕೆಲಸ ಮಾಡುತ್ತದೆ. ಇದರಿಂದ ಕೆಮ್ಮಿನ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ಇದು ಮಕ್ಕಳಿಗೆ ತಕ್ಷಣ ಕೆಮ್ಮಿನ ಸಮಸ್ಯೆ ಪರಿಹಾರ ನೀಡುವ ಮನೆಮದ್ದು.
  • ಹತ್ತಿ ಬಟ್ಟೆಯಲ್ಲಿ ಒಂದು ಚಮಚ ಅರಿಶಿನ, ಒಂದು ಚಮಚ ಸೆಲರಿ, ಎರಡು ಅಥವಾ ಮೂರು ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಬಾಣಲೆಯಲ್ಲಿ ಬಿಸಿ ಮಾಡಿ, ಈ ಎಲ್ಲವನ್ನೂ ಜಜ್ಜಿ ಮಕ್ಕಳ ಎದೆಗೆ ಹಚ್ಚಬೇಕು. ಇದು ಮಕ್ಕಳಲ್ಲಿ ಕೆಮ್ಮನ್ನು ನಿವಾರಿಸುತ್ತದೆ.

    ಇದನ್ನೂ ಓದಿ: ಚಳಿಗಾಲದಲ್ಲಿ ಮೂತ್ರನಾಳದ ಸೋಂಕಿನ ಸಮಸ್ಯೆ ಹೆಚ್ಚಲು ಕಾರಣವೇನು, ನಿವಾರಣೆ ಹೇಗೆ? ಇಲ್ಲಿದೆ ತಜ್ಞರ ಸಲಹೆ
  • ಕೆಮ್ಮಿನಿಂದ ಬಳಲುತ್ತಿರುವ ಮಕ್ಕಳಿಗೆ ಜೀರ್ಣವಾಗುವ ಆಹಾರವನ್ನು ನೀಡಬೇಕು. ಹೆಚ್ಚು ದ್ರವಾಹಾರ ನೀಡುವುದರಿಂದ ಅವರ ಕೆಮ್ಮು ಕಡಿಮೆಯಾಗುತ್ತದೆ. ಘನಾಹಾರ ಹೆಚ್ಚು ತಿನ್ನುವುದು ವಾಂತಿಗೆ ಕಾರಣವಾಗಬಹುದು. ಹಾಗಾಗಿ ಅವರಿಗೆ ಸ್ವಲ್ಪ ಸ್ವಲ್ಪವೇ ಆಹಾರವನ್ನು ನೀಡಬೇಕು.
  • ಮಕ್ಕಳಿಗೆ ಪ್ರತಿ ಅರ್ಧಗಂಟೆಗೊಮ್ಮೆ ಬಿಸಿ ನೀರಿನ ಆವಿ ಕೊಡಬೇಕು. ಇಲ್ಲದಿದ್ದರೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವನ್ನು ಹರಡುವ ಸಾಧ್ಯತೆಯನ್ನು ಹೊಂದಿರುತ್ತವೆ. ಹಬೆಯಾಡುತ್ತಲೇ ಇದ್ದರೆ ಯಾವುದೇ ತೊಂದರೆ ಇರುವುದಿಲ್ಲ. ನಿಯಮಿತವಾಗಿ ಅವರ ಮೂಗು ಸ್ವಚ್ಛಗೊಳಿಸಿ. ಇದಕ್ಕಾಗಿ ಮೃದುವಾದ ಹತ್ತಿಯನ್ನು ಬಳಸಿ. ಇದರಿಂದ ಅವರು ಉತ್ತಮವಾಗಿ ಉಸಿರಾಡುತ್ತಾರೆ. ಇದರಿಂದ ಯಾವುದೇ ಕಿರಿಕಿರಿಯಿಲ್ಲದೇ ನೆಮ್ಮದಿಯಿಂದ ನಿದ್ರಿಸುತ್ತಾರೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

–––

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

Whats_app_banner