Girl Baby Names: ಪ್ರೀತಿ ಅರ್ಥವನ್ನು ಸೂಚಿಸುವ, ಹೆಣ್ಣುಮಕ್ಕಳಿಗೆ ಇಡಬಹುದಾದ ಅತಿ ಸುಂದರ ಹೆಸರುಗಳಿವು
ಪ್ರೇಮಿಗಳ ದಿನಾಚರಣೆ ಸಂದರ್ಭ ಜನಿಸಿದ ಮಕ್ಕಳಿಗೆ ಪ್ರೀತಿ ಎನ್ನುವ ಅರ್ಥ ಬರುವಂತೆ ಹೆಸರಿಡಲು ಬಯಸುತ್ತಾರೆ ಪೋಷಕರು. ಪ್ರೇಮಿಗಳ ವಾರದಲ್ಲಿ ಹೆಣ್ಣುಮಗು ಜನಿಸಿದ್ದರೆ ಈ ಸುಂದರ ಹೆಸರುಗಳನ್ನು ಇಡಬಹುದು ನೋಡಿ.

ಫೆಬ್ರುವರಿ ತಿಂಗಳು ಎಂದರೆ ಎಲ್ಲೆಲ್ಲೂ ಪ್ರೇಮದ ಕಂಪು ಹರಡಿರುತ್ತದೆ. ಯಾಕೆಂದರೆ ಇದು ಪ್ರೇಮದ ತಿಂಗಳು. ಫೆಬ್ರುವರಿ 7 ರಿಂದ 14ರವರೆಗೆ ವ್ಯಾಲೆಂಟೈನ್ಸ್ ವೀಕ್ ಇರುತ್ತದೆ. ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದ್ದು, ಪ್ರೀತಿ ಎನ್ನುವ ಅರ್ಥ ಬರುವಂತಹ ಸುಂದರ ಹೆಸರು ಇಡಬೇಕು ಎಂದು ಅಂದುಕೊಳ್ಳುತ್ತಿದ್ದರೆ ಗಮನಿಸಿ.
ಪ್ರೀತಿ, ವ್ಯಾತ್ಸಲ್ಯ ಎನ್ನುವ ಅರ್ಥ ಬರುವ ಈ ಹೆಸರುಗಳು ಟ್ರೆಂಡಿ ಆಗಿಯೂ ಇವೆ. ನಿಮ್ಮ ಮಗುವಿನ ಜೀವನ ಸಂತೋಷ, ಪ್ರೀತಿ–ಪ್ರೇಮದಿಂದ ತುಂಬಿರಬೇಕು ಎಂದು ನೀವು ಬಯಸಿದರೆ ಈ ಹೆಸರಗಳನ್ನು ಆಯ್ಕೆ ಮಾಡಬಹುದು. ಈ ಹೆಸರುಗಳು ವಿಭಿನ್ನವಾಗಿದ್ದು, ಪ್ರೇಮಿಗಳ ದಿನದ ಸಂದರ್ಭ ಹುಟ್ಟಿದ ಮಕ್ಕಳಿಗೆ ಇರಿಸಲು ಹೇಳಿ ಮಾಡಿಸಿದಂತಿದೆ.
ಪ್ರೀತಿ ಅರ್ಥ ಬರುವ ಹೆಣ್ಣುಮಗುವಿನ ಹೆಸರುಗಳು
- ಆಶ್ನಾ- ಈ ಹೆಸರಿನ ಅರ್ಥ ಪ್ರೀತಿಯ, ಮೆಚ್ಚುಗೆಗೆ ಅರ್ಹ ವ್ಯಕ್ತಿ ಎಂದರ್ಥ.
2. ಅಮೃತ - ಈ ಹೆಸರಿನ ಅರ್ಥ ಪ್ರಿಯ, ಸಿಹಿ, ಅಮರ
3. ಹಿತಾಕ್ಷಿ - ಹಿತಾಕ್ಷಿ ಎಂಬ ಹೆಸರು ತುಂಬಾ ವಿಶಿಷ್ಟ ಮತ್ತು ಮುದ್ದಾಗಿದೆ. ನಿಮ್ಮ ಮಗಳಿಗೆ ನೀವು ಹಿತಾಕ್ಷಿ ಎಂದು ಹೆಸರಿಡಿ. ಇದರರ್ಥ ಪ್ರೀತಿಯ ಉಪಸ್ಥಿತಿ ಎಂಬುದೂ ಆಗಿದೆ.
4. ಅನುರಕ್ತಿ - ಈ ಹೆಸರಿನ ಅರ್ಥ ಪ್ರೀತಿ, ವಾತ್ಸಲ್ಯ, ಭಕ್ತಿ.
5. ಮೌಲಿಕಾ - ಈ ಹೆಸರಿನ ಅರ್ಥ ನಿಜವಾದ ಪ್ರೀತಿ.
6. ಪ್ರನಿಷ - ಈ ಹೆಸರಿನ ಅರ್ಥ ಜೀವನದ ಮೇಲೆ ಪ್ರೀತಿ ಇರುವ ವ್ಯಕ್ತಿ.
7. ಡೇವಿನಾ - ಡೇವಿನಾ ಎಂಬುದು ಹೀಬ್ರೂ ಹೆಸರು, ಇದರ ಅರ್ಥ ಸುಂದರ.
8. ಅಹುವಾ - ಅಹುವಾ ಎಂಬುದು ಯಹೂದಿ ಸಂಸ್ಕೃತಿಯಲ್ಲಿ ಪ್ರೀತಿಯ ಹೆಸರು, ಆಳವಾದ ವಾತ್ಸಲ್ಯ ಮತ್ತು ಪ್ರೀತಿಯ ಸಂಕೇತವಾಗಿದೆ.
9. ವೀಟಾ - ಈ ಹೆಸರು ಹೀಬ್ರೂ ಹೆಸರು, ಇದರರ್ಥ ಪ್ರೀತಿ.
10. ಅಹ್ವಾ - ಈ ಹೆಸರು ಹೀಬ್ರೂ ಪದದಿಂದಲೂ ಬಂದಿದೆ, ಇದರರ್ಥ ಪ್ರೀತಿ.
11. ಅಲಿಜಾ - ಅಲಿಜಾ ಸಂತೋಷ ಮತ್ತು ಉತ್ಸಾಹದ ಸಂಕೇತ.
12. ಎಡ್ನಾ- ಎಡ್ನಾ ಎಂಬುದು ಸಂತೋಷ ಮತ್ತು ತೃಪ್ತಿಯನ್ನು ಸಂಕೇತಿಸುವ ಹೆಸರು.
13. ಗೀಲಾ - ಈ ಹೆಸರಿನ ಅರ್ಥ ಸಂತೋಷ, ಆಚರಣೆ.
14. ಅನನ್ಯಜ - ಈ ಹೆಸರಿನ ಅರ್ಥ ಹೃದಯದಿಂದ ಬರುವ ಪ್ರೀತಿ.
15. ಅನವಿ - ಈ ಹೆಸರಿನ ಅರ್ಥ ದಯಾಳು ಮತ್ತು ಪ್ರೀತಿ ತುಂಬಿದ ವ್ಯಕ್ತಿ ಎಂದರ್ಥ.
16. ಅನುರತಿ - ಈ ಹೆಸರಿನ ಅರ್ಥ ಪ್ರೀತಿ ಮತ್ತು ವಾತ್ಸಲ್ಯ ಎಂದು.
17. ಅರ್ನವಿ - ಸಾಗರದಷ್ಟು ವಿಶಾಲವಾದ ಹೃದಯವನ್ನು ಹೊಂದಿರುವ ವ್ಯಕ್ತಿ ಎಂದರ್ಥ.
18. ಪ್ರಾಣಾಯಿನಿ - ಈ ಹೆಸರಿನ ಅರ್ಥ ಪ್ರೀತಿಪಾತ್ರರು ಮತ್ತು ಪ್ರೀತಿಯಿಂದ ತುಂಬಿರುವವರು.
19. ವಾತ್ಸಲ್ಯ - ಈ ಹೆಸರಿನ ಅರ್ಥ ಪ್ರೀತಿ ಮತ್ತು ವಾತ್ಸಲ್ಯ ಹೊಂದಿರುವ ವ್ಯಕ್ತಿ.
20. ಜೋಯಾ - ಪ್ರೀತಿಯಿಂದ ತುಂಬಿದ ಹೃದಯ ಹೊಂದಿರುವ ಹುಡುಗಿ.

ವಿಭಾಗ