ಮಕ್ಕಳಿಗೆ ಇಷ್ಟವಾಗುತ್ತೆ ಈ ಹಸಿರು ಬಣ್ಣದ ರೈಸ್‌, ಮನೆಯಲ್ಲೇ ಟ್ರೈ ಮಾಡಿ ನೋಡಿ ಹೊಸ ರೆಸಿಪಿ; ಕೊತ್ತಂಬರಿ ರೈಸ್ ಮಾಡುವ ವಿಧಾನ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳಿಗೆ ಇಷ್ಟವಾಗುತ್ತೆ ಈ ಹಸಿರು ಬಣ್ಣದ ರೈಸ್‌, ಮನೆಯಲ್ಲೇ ಟ್ರೈ ಮಾಡಿ ನೋಡಿ ಹೊಸ ರೆಸಿಪಿ; ಕೊತ್ತಂಬರಿ ರೈಸ್ ಮಾಡುವ ವಿಧಾನ ಇಲ್ಲಿದೆ

ಮಕ್ಕಳಿಗೆ ಇಷ್ಟವಾಗುತ್ತೆ ಈ ಹಸಿರು ಬಣ್ಣದ ರೈಸ್‌, ಮನೆಯಲ್ಲೇ ಟ್ರೈ ಮಾಡಿ ನೋಡಿ ಹೊಸ ರೆಸಿಪಿ; ಕೊತ್ತಂಬರಿ ರೈಸ್ ಮಾಡುವ ವಿಧಾನ ಇಲ್ಲಿದೆ

ಕೊತ್ತಂಬರಿ ರೈಸ್‌: ನೀವು ದಿನಾ ಒಂದೇ ರೀತಿಯ ತಿಂಡು ಬೋರಾಗಿದ್ದರೆ ಸ್ವಲ್ಪ ಡಿಫರೆಂಟಾಗಿ ಮಾಡಬಹುದಾದ ಒಂದು ರೆಸಿಪಿ ಇಲ್ಲಿದೆ ಗಮನಿಸಿ. ಕೊತ್ತಂಬರಿ ಸೊಪ್ಪನ್ನು ಬಳಸಿ ಮಾಡಬಹುದಾದ ಒಂದು ಗ್ರೀನ್‌ ರೈಸ್‌ ರೆಸಿಪಿಯನ್ನು ನಾವಿಲ್ಲಿ ನೀಡಿದ್ದೇವೆ. ಇದನ್ನು ಮಾಡಲು ಬೇಕಾಗುವ ಪದಾರ್ಥ ಹಾಗೂ ರೆಸಿಪಿ ಇಲ್ಲಿದೆ.

ಕೊತ್ತಂಬರಿ ರೈಸ್‌
ಕೊತ್ತಂಬರಿ ರೈಸ್‌

ಕೊತ್ತಂಬರಿ ಸೊಪ್ಪನ್ನು ಆಹಾರದಲ್ಲಿ ಸೇವಿಸುವುದು ತುಂಬಾ ಆರೋಗ್ಯಕರ. ಇಲ್ಲಿ ನಾವು ಕೊತ್ತಂಬರಿ ರೈಸ್ ರೆಸಿಪಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಬ್ರೌನ್‌ ರೈಸ್‌ ಬಳಸಿ ಇದನ್ನು ಮಾಡಿದರೆ ಆರೋಗ್ಯಕ್ಕೆ ಇನ್ನಷ್ಟು ಉಪಯುಕ್ತ ಇದು. ಇದು ಫೈಬರ್, ಖನಿಜಗಳು, ವಿಟಮಿನ್ ಬಿ 6 ಮತ್ತು ನಿಯಾಸಿನ್ ಅಂಶಗಳನ್ನು ಹೊಂದಿರುತ್ತದೆ. ಹೆಚ್ಚುವರಿಯಾಗಿ ಕೊತ್ತಂಬರಿಯಲ್ಲಿರುವ ಪೋಷಕಾಂಶಗಳನ್ನು ಪಡೆಯಬಹುದು.

ಕೊತ್ತಂಬರಿ ಸೊಪ್ಪು ವಿಟಮಿನ್ ಎ ಮತ್ತು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ಅಲ್ಲದೆ, ಇದು ಆಹಾರದ ಫೈಬರ್, ಕಬ್ಬಿಣ, ಮ್ಯಾಂಗನೀಸ್, ಕ್ಯಾಲ್ಸಿಯಂ, ವಿಟಮಿನ್ ಕೆ, ರಂಜಕ ಮುಂತಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇವು ನಿಮ್ಮ ದೇಹದ ಚಯಾಪಚಯ ಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳನ್ನು ಹೊಂದಿರುತ್ತವೆ. ಹಸಿ ಕೊತ್ತಂಬರಿ ಸೊಪ್ಪನ್ನು ಆಹಾರದೊಂದಿಗೆ ತಿನ್ನುವುದರಿಂದ ದೃಷ್ಟಿ ಸುಧಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೊತ್ತಂಬರಿಯಲ್ಲಿರುವ ಪೋಷಕಾಂಶಗಳು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಕೊತ್ತಂಬರಿ ಸೊಪ್ಪು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಇನ್ಸುಲಿನ್ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ. ಕೊತ್ತಂಬರಿ ರೈಸ್‌ಅನ್ನು ಹೇಗೆ ಮಾಡುವುದು ಎಂಬುದರ ಕುರಿತು ಕೆಳಗೆ ನೀಡಲಾದ ಸೂಚನೆಗಳನ್ನು ಓದಿ.

ಕೊತ್ತಂಬರಿ ರೈಸ್ ರೆಸಿಪಿಗೆ ಬೇಕಾಗುವ ಪದಾರ್ಥಗಳು

1 ಕಪ್ ಬ್ರೌನ್‌ ರೈಸ್‌

1 ಹಸಿರು ಕ್ಯಾಪ್ಸಿಕಂ

1 ಈರುಳ್ಳಿ

1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್

1/4 ಕಪ್ ಮೊಸರು

2 tbsp ಕೊತ್ತಂಬರಿ-ಪುದೀನ-ಹಸಿರು ಮೆಣಸಿನಕಾಯಿ ಪೇಸ್ಟ್

1 ಟೀಸ್ಪೂನ್ ಗರಂ ಮಸಾಲಾ

1 ಬಿರಿಯಾನಿ ಎಲೆ

1/2 ಟೀಸ್ಪೂನ್ ಕೊತ್ತಂಬರಿ ಪುಡಿ

ಅರಿಶಿನ ಸ್ವಲ್ಪ

1 ಟೀಸ್ಪೂನ್ ಆಲಿವ್ ಎಣ್ಣೆ

ರುಚಿಗೆ ಬೇಕಾದಷ್ಟು ಉಪ್ಪು

ಕೊತ್ತಂಬರಿ ರೈಸ್ ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ ಹುರಿಯಿರಿ. ನಂತರ ಬಿರಿಯಾನಿ ಎಲೆ ಕತ್ತರಿಸಿದ ಈರುಳ್ಳಿ, ಅರಿಶಿನ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಫ್ರೈ ಮಾಡಿ.

ಈಗ ಕೊತ್ತಂಬರಿ ಪುದೀನಾ ಪೇಸ್ಟ್ ಮತ್ತು ಮೊಸರು ಸೇರಿಸಿ ಚೆನ್ನಾಗಿ ಬೇಯಿಸಿ. ಮಸಾಲವನ್ನು ಚೆನ್ನಾಗಿ ಬೇಯಿಸಿದ ನಂತರ, ಸುಂದರವಾದ ಪರಿಮಳವು ಹೊರಹೊಮ್ಮುತ್ತದೆ.

ನಂತರ ಕ್ಯಾಪ್ಸಿಕಂ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ನಿಮಿಷ ಬೇಯಿಸಿ.

ಈಗ ಚೆನ್ನಾಗಿ ತೊಳೆದ ಬ್ರೌನ್‌ ರೈಸ್‌, 2 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಮುಚ್ಚಿ ಮತ್ತು 15 ನಿಮಿಷಗಳ ಕಾಲ ಅಥವಾ ಅನ್ನ ಸಿದ್ಧವಾಗುವವರೆಗೆ ಬೇಯಿಸಿ.

ಕೊನೆಗೆ ಸ್ವಲ್ಪ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಅಷ್ಟೇ, ರುಚಿಯಾದ ಕೊತ್ತಂಬರಿ ಅನ್ನ ರೆಡಿ. ಮೊಸರು ಬಜ್ಜಿ ಜೊತೆ ತಿಂದರೆ ಇದು ಅದ್ಭುತ ರುಚಿ ನೀಡುತ್ತದೆ.

Whats_app_banner