Choco bar ice-cream Recipe: ಹಾಲಿನ ಪುಡಿ ಇದ್ರೆ, ಮನೆಯಲ್ಲೇ ಸುಲಭವಾಗಿ ಚಾಕೋಬಾರ್ ಐಸ್‌ಕ್ರೀಮ್ ತಯಾರಿಸಬಹುದು..ರೆಸಿಪಿ ನೋಡಿ
ಐಸ್‌ಕ್ರೀಮ್‌ನಲ್ಲಿ ಒಂದಲ್ಲಾ ಎರಡಲ್ಲ ಬಹಳ ವೆರೈಟಿಗಳು ಇದೆ. ಎಲ್ಲರೂ ಇಷ್ಟಪಡುವ ವೆರೈಟಿಗಳಲ್ಲಿ ಚಾಕೋಬಾರ್ ಕೂಡಾ ಒಂದು. ಮೇಲ್ಭಾಗ ಚಾಕೋಲೇಟ್ ಕೋಟ್, ಒಳಭಾಗ ವೆನಿಲಾ ಫ್ಲೇವರ್ ಬಹಳ ರುಚಿಯಾಗಿರುತ್ತದೆ. ಇನ್ನು ನೀವು ಚಾಕೋಬಾರ್ ತಿನ್ನಬೇಕು ಎನಿಸಿದಾಗ ಹೊರಗೆ ಹೋಗಬೇಕು ಎಂದೇನಿಲ್ಲ. ಮನೆಯಲ್ಲೇ ಬಹಳ ಸುಲಭವಾಗಿ ಚಾಕೋಬಾರ್ ಐಸ್‌ಕ್ರೀಮ್ ತಯಾರಿಸಬಹುದು.
ನನಗೆ ಇಷ್ಟವಿಲ್ಲ ಎಂದು ಯಾರೂ ಹೇಳದ ತಿಂಡಿ ಎಂದರೆ ಅದು ಐಸ್ ಕ್ರೀಮ್. ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚು ಐಸ್ ಕ್ರೀಮ್ ತಿನ್ನುತ್ತೇವೆ. ಹಾಗಂತ ಇದನ್ನು ತಿನ್ನಲು ಇಂತದ್ದೇ ಕಾಲ, ಸಮಯವನ್ನು ಯಾರೂ ಕಾಯುವುದಿಲ್ಲ. ತಿನ್ನಬೇಕು ಎನಿಸಿದಾಗ ಅದು ಮಳೆ ಆಗರಲಿ, ಚಳಿ ಆಗಿರಲಿ ಐಸ್ ಕ್ರೀಮ್ ಪಾರ್ಲರ್ ಹುಡುಕಿ ಹೋಗಿ ತಿಂದು ಬರುತ್ತೇವೆ.
ಇನ್ನು ಐಸ್‌ಕ್ರೀಮ್‌ನಲ್ಲಿ ಒಂದಲ್ಲಾ ಎರಡಲ್ಲ ಬಹಳ ವೆರೈಟಿಗಳು ಇದೆ. ಎಲ್ಲರೂ ಇಷ್ಟಪಡುವ ವೆರೈಟಿಗಳಲ್ಲಿ ಚಾಕೋಬಾರ್ ಕೂಡಾ ಒಂದು. ಮೇಲ್ಭಾಗ ಚಾಕೋಲೇಟ್ ಕೋಟ್, ಒಳಭಾಗ ವೆನಿಲಾ ಫ್ಲೇವರ್ ಬಹಳ ರುಚಿಯಾಗಿರುತ್ತದೆ. ಇನ್ನು ನೀವು ಚಾಕೋಬಾರ್ ತಿನ್ನಬೇಕು ಎನಿಸಿದಾಗ ಹೊರಗೆ ಹೋಗಬೇಕು ಎಂದೇನಿಲ್ಲ. ಮನೆಯಲ್ಲೇ ಬಹಳ ಸುಲಭವಾಗಿ ಚಾಕೋಬಾರ್ ಐಸ್‌ಕ್ರೀಮ್ ತಯಾರಿಸಬಹುದು.
ಚಾಕೋಬಾರ್ ಐಸ್‌ಕ್ರೀಮ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಕಾರ್ನ್‌ಫ್ಲೋರ್ - 2 ಟೇಬಲ್ ಸ್ಪೂನ್
ಹಾಲಿನ ಪುಡಿ - 1 ಕಪ್
ಸಕ್ಕರೆ - 1/2 ಕಪ್
ವೆನಿಲಾ ಎಸೆನ್ಸ್ - 1 ಟೀ ಸ್ಪೂನ್
ಡಾರ್ಕ್ ಕಂಪೌಂಡ್ - 1 ಪ್ಯಾಕ್
ಪೇಪರ್ ಕಪ್‌ಗಳು - ಅಗತ್ಯ ಇರುವಷ್ಟು
ಐಸ್‌ಕ್ರೀಮ್ ಕಡ್ಡಿಗಳು - ಅಗತ್ಯ ಇರುವಷ್ಟು
ಚಾಕೋಬಾರ್ ಐಸ್‌ಕ್ರೀಮ್ ತಯಾರಿಸುವ ವಿಧಾನ
ಕಾರ್ನ್‌ಫ್ಲೋರ್‌ಗೆ ಸ್ವಲ್ಪ ನೀರು ಸೇರಿಸಿ ಗಂಟುಗಳ ಇಲ್ಲದಂತೆ ಮಿಕ್ಸ್ ಮಾಡಿ
ಒಂದು ಪಾತ್ರೆಗೆ ಹಾಲಿನ ಪುಡಿಗೆ ಮೂರು ಕಪ್‌ಗಳು ನೀರು ಸೇರಿಸಿ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ
ಪಾತ್ರೆಯನ್ನು ಸ್ಟೋವ್ ಮೇಲಿಟ್ಟು ಕಡಿಮೆ ಉರಿಯಲ್ಲಿ ಕುಕ್ ಮಾಡಿ, ಬಿಡದಂತೆ ತಿರುವುತ್ತಿರಿ
ಇದರ ಜೊತೆಗೆ ಸಕ್ಕರೆ ಸೇರಿಸಿ, ಅದು ಕರಗಿದ ನಂತರ ಮೊದಲೇ ಮಿಕ್ಸ್ ಮಾಡಿಕೊಂಡಿದ್ದ ಕಾರ್ನ್‌ಫ್ಲೋರ್ ಮಿಶ್ರಣ ಸೇರಿಸಿ ತಿರುವಿ (ಗಂಟುಗಳಾಗದಂತೆ ತಿರುವುತ್ತಿರಿ)್
ಮಿಶ್ರಣ ತಣ್ಣಗಾದಾಗ ಸ್ಟೋವ್ ಆಫ್ ಮಾಡಿ ತಣ್ಣಗಾಗಲು ಬಿಡಿ
ಐಸ್‌ಕ್ರೀಮ್ ಮೌಲ್ಡ್ ಇಲ್ಲದಿದ್ದಲ್ಲಿ ಪೇಪರ್ ಕಪ್‌ಗಳಿಗೆ ಮುಕ್ಕಾಲು ಭಾಗ ಮಿಶ್ರಣ ಸೇರಿಸಿ
ಪೇಪರ್ ಕಪ್ ಮೇಲ್ಭಾಗವನ್ನು ಕ್ಲಿಂಗ್ ರಾಪ್ ಅಥವಾ ಪ್ಲಾಸ್ಟಿಕ್ ಕವರ್ ಇಟ್ಟು ರಬ್ಬರ್ ಬ್ಯಾಂಡ್‌ನಿಂದ ಸುತ್ತಿ
ನಂತರ ಕವರ್ ಮೇಲ್ಭಾಗದಿಂದ ಐಸ್‌ಕ್ರೀಮ್ ಕಡ್ಡಿಗಳನ್ನು ಮಿಶ್ರಣಕ್ಕೆ ಚುಚ್ಚಿ ಸುಮಾರು 8 ಗಂಟೆಗಳ ಕಾಲ ಫ್ರೀಜರ್‌ನಲ್ಲಿಡಿ
8 ಗಂಟೆಗಳ ನಂತರ ಚಾಕೋಲೇಟ್ ಮಿಶ್ರಣವನ್ನು ತಯಾರಿಸಿ
ಒಂದು ಬೌಲ್‌ಗೆ ಚಾಕೊಲೇಟ್ ತುಂಡುಗಳನ್ನು ಸೇರಿಸಿ ಡಬಲ್ ಬಾಯ್ಲ್ (ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ ಅದರ ಮೇಲೆ ಚಾಕೋಲೇಟ್ ಇರುವ ಬೌಲ್ ಇಟ್ಟು ಕರಗಿಸಿಕೊಳ್ಳುವುದು) ವಿಧಾನದಿಂದ ಮೆಲ್ಟ್ ಮಾಡಿಕೊಳ್ಳಿ
ಮೆಲ್ಟ್ ಮಾಡಿಕೊಂಡ ಚಾಕೋಲೇಟನ್ನು ಒಂದು ಗ್ಲಾಸ್‌ಗೆ ಸೇರಿಸಿ
ಫ್ರೀಜರ್‌ನಲ್ಲಿರುವ ಐಸ್‌ಕ್ರೀಮನ್ನು ಪೇಪರ್ ಬೌಲ್‌ನಿಂದ ಹೊರ ತೆಗೆದು ಗ್ಲಾಸ್‌ನಲ್ಲಿರುವ ಚಾಕೋಲೇಟ್ ಮಿಶ್ರಣಕ್ಕೆ ಅದ್ದಿ ಕೋಟ್ ಮಾಡಿ
ಬೇಕಾದರೆ ಎರಡು ಸಲ ಕೋಟ್ ಮಾಡಿ ಮತ್ತೆ 15 ನಿಮಿಷ ಫ್ರೀಜರ್‌ನಲ್ಲಿಟ್ಟರೆ ಚಾಕೋಬಾರ್ ಐಸ್‌ಕ್ರೀಮ್ ತಿನ್ನಲು ರೆಡಿ
ಮಕ್ಕಳ ಬರ್ತ್‌ಡೇ ಪಾರ್ಟಿಗಳಲ್ಲಿ ನೀವೇ ಕೈಯ್ಯಾರೆ ಈ ಐಸ್‌ಕ್ರೀಮ್ ತಯಾರಿಸಬಹುದು
ಗಮನಿಸಿ: ನಿಮಗೆ ಬಾದಾಮ್ ಅಥವಾ ಪೀನಟ್ ಚಾಕೋಬಾರ್ ಬೇಕೆಂದರೆ ಬಾದಾಮಿ ಅಥವಾ ಹುರಿದ ಶೇಂಗಾವನ್ನು ಕ್ರಷ್ ಮಾಡಿ ಚಾಕೋಲೇಟ್ ಮಿಶ್ರಣಕ್ಕೆ ಸೇರಿಸಿ ನಂತರ ಡಿಪ್ ಮಾಡಬಹುದು, ಅಥವಾ ಡಿಪ್ ಮಾಡಿದ ನಂತರ ಚಾಕೋಲೇಟ್ ಮೇಲೆ ಸ್ಪ್ರಿಂಕಲ್ ಮಾಡಬಹುದು.
ಡಾರ್ಕ್ ಕಂಪೌಂಡ್ ಸಿಗದಿದ್ದರೆ ಡೈರಿಮಿಲ್ಕ್ ಚಾಕೋಲೇಟನ್ನು ಕೂಡಾ ಬಳಸಬಹುದು
ವಿಭಾಗ