Christmas 2024: ಕ್ರಿಸ್‌ಮಸ್‌ ದಿನದಂದು ಸ್ನೇಹಿತರು, ಕುಟುಂಬದವರ ಜತೆ ಮಸ್ತ್‌ ಮಜಾ ಮಾಡಿ, ಈ ಹ್ಯಾಂಗ್‌ಔಟ್ ಐಡಿಯಾಗಳನ್ನು ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Christmas 2024: ಕ್ರಿಸ್‌ಮಸ್‌ ದಿನದಂದು ಸ್ನೇಹಿತರು, ಕುಟುಂಬದವರ ಜತೆ ಮಸ್ತ್‌ ಮಜಾ ಮಾಡಿ, ಈ ಹ್ಯಾಂಗ್‌ಔಟ್ ಐಡಿಯಾಗಳನ್ನು ಗಮನಿಸಿ

Christmas 2024: ಕ್ರಿಸ್‌ಮಸ್‌ ದಿನದಂದು ಸ್ನೇಹಿತರು, ಕುಟುಂಬದವರ ಜತೆ ಮಸ್ತ್‌ ಮಜಾ ಮಾಡಿ, ಈ ಹ್ಯಾಂಗ್‌ಔಟ್ ಐಡಿಯಾಗಳನ್ನು ಗಮನಿಸಿ

Christmas 2024 hangout ideas: ಕ್ರಿಸ್‌ಮಸ್‌ ಎಂದರೆ ಎಲ್ಲೆಡೆ ಸಂಭ್ರಮ, ಸಡಗರ. ಕ್ರಿಸ್‌ಮಸ್‌ ಹಬ್ಬವನ್ನು ಕ್ರಿಶ್ಚಿಯನ್ನರು ಮಾತ್ರವಲ್ಲದೇ ಬಹುತೇಕ ಎಲ್ಲರೂ ಸಂಭ್ರಮಿಸುತ್ತಾರೆ. ಈ ಬಾರಿ ಕ್ರಿಸ್‌ಮಸ್‌ ದಿನವನ್ನು ನೀವು ಇನ್ನಷ್ಟು ವಿಶೇಷವಾಗಿ ಆಚರಿಸಬೇಕು ಅಂತಿದ್ದರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಹ್ಯಾಂಗ್‌ಔಟ್‌ ಐಡಿಯಾಗಳು.

ಕ್ರಿಸ್‌ಮಸ್ ದಿನವನ್ನು ವಿಶೇಷವಾಗಿ ಕಳೆಯಲು ಐಡಿಯಾಗಳು
ಕ್ರಿಸ್‌ಮಸ್ ದಿನವನ್ನು ವಿಶೇಷವಾಗಿ ಕಳೆಯಲು ಐಡಿಯಾಗಳು (PC: Canva)

ಏಸುಕ್ರಿಸ್ತನ ಜನ್ಮದಿನವನ್ನು ಕ್ರಿಸ್‌ಮಸ್ ಎಂದು ಜಗತ್ತಿನೆಲ್ಲೆಡೆ ಸಂಭ್ರಮಿಸಲಾಗುತ್ತದೆ. ಕ್ರಿಸ್‌ಮಸ್ ಎಂದರೆ ಸಂಭ್ರಮ, ಎಲ್ಲರೂ ಒಂದುಗೂಡುವ ಗಳಿಗೆ. ಸಂತೋಷವನ್ನು ಹಂಚುವ ಸಮಯವೂ ಹೌದು. ಜಗತ್ತಿನಾದ್ಯಂತ ಆಚರಿಸುವ ಬಹುದೊಡ್ಡ ಹಬ್ಬಗಳಲ್ಲಿ ಕ್ರಿಸ್‌ಮಸ್‌ ಪ್ರಮುಖವಾದದ್ದು. ಕ್ರಿಸ್‌ಮಸ್‌ಗೆ ಇದೀಗ ಕ್ಷಣಗಣನೆ ಆರಂಭವಾಗಿದೆ.

ಕ್ರಿಸ್‌ಮಸ್ ಎಂದರೆ ನಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯಲು ಒಂದು ಅವಕಾಶವೂ ಹೌದು. ಈ ಸಮಯದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಎಂಜಾಯ್ ಮಾಡುತ್ತಾ ಹೊಸ ನೆನಪುಗಳನ್ನು ಹುಟ್ಟುಹಾಕಿಕೊಳ್ಳಬಹುದು. ಈ ಕ್ರಿಸ್‌ಮಸ್‌ ಹಬ್ಬವನ್ನು ವಿಶೇಷವಾಗಿಸಿಕೊಳ್ಳಬೇಕು ಎಂದರೆ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಈ ಕೆಲವು ಕೆಲಸಗಳನ್ನು ಮಾಡಬಹುದು. ಈ ಕ್ರಿಸ್‌ಮಸ್ ಹ್ಯಾಂಗ್‌ಔಟ್ ಐಡಿಯಾಗಳು ಖಂಡಿತ ನಿಮಗೆ ಇಷ್ಟವಾಗುತ್ತದೆ. ಈ ವರ್ಷದ ಕ್ರಿಸ್‌ಮಸ್ ಹಬ್ಬ ವಿಶೇಷವಾಗಬೇಕು ಎಂದರೆ ಈಗಲೇ ಪ್ಲಾನ್ ಮಾಡಿ.

1. ಕ್ರಿಸ್‌ಮಸ್‌ ಲೈಟ್ ಟೂರ್

ಕ್ರಿಸ್‌ಮಸ್ ಬಂತೆಂದರೆ ಪ್ರಮುಖ ನಗರಗಳಲ್ಲಿ ಎಲ್ಲೆಲ್ಲಿಯೂ ಬೆಳಕು ತುಂಬಿರುತ್ತದೆ. ಬಣ್ಣ ಬಣ್ಣ ದೀಪಗಳಿಂದ ಬೀದಿ ಬೀದಿಗಳನ್ನು ಸಿಂಗಾರ ಮಾಡಿರುತ್ತಾರೆ. ಫೇರಿ ಲೈಟ್‌ಗಳ ಜೊತೆಗೆ ಕ್ರಿಸ್‌ಮಸ್‌ ಟ್ರೀಗಳ ಅಲಂಕಾರವು ಕಣ್ಮನ ಸೆಳೆಯುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರ ಜೊತೆ ಸಂಜೆ ಅಥವಾ ರಾತ್ರಿ ವೇಳೆ ವಿಹಾರಕ್ಕೆ ಹೋಗಬಹುದು. ಈ ಅನುಭವ ನಿಮಗೆ ಖಂಡಿತ ಖುಷಿ ಕೊಡುತ್ತದೆ.

2. ಸಂಗಾತಿಯೊಂದಿಗೆ ಹೀಗೆ ಸಮಯ ಕಳೆಯಿರಿ

ನಿಮ್ಮ ದಿನವನ್ನು ಕೇಕ್‌ ಮಾಡುವ ಮೂಲಕ ಆರಂಭಿಸಬಹುದು. ಸಂಗಾತಿಯೊಂದಿಗೆ ಸೇರಿ ಮನೆಯಲ್ಲಿ ಕೇಕ್ ತಯಾರಿಸಿ. ಗ್ಲಾಸ್‌ನಲ್ಲಿ ವೈನ್ ಹಾಕಿಕೊಂಡು ಹೀರುತ್ತಾ ಕ್ರಿಸ್‌ಮಸ್ ಹಬ್ಬದ ಸಂಭ್ರಮವನ್ನು ಆಚರಿಸಿ. ಸಂಜೆ ಹೊತ್ತಿಗೆ ಬೀದಿಗಳಲ್ಲಿ ದೀಪಗಳ ರಂಗಿನಲ್ಲಿ ಕೈ ಕೈ ಹಿಡಿದು ವಾಕಿಂಗ್ ಕೂಡ ಹೋಗಬಹುದು. ಇದು ಕೂಡ ನಿಮ್ಮ ಈ ವರ್ಷದ ಕ್ರಿಸ್‌ಮಸ್‌ ಕ್ಷಣಗಳನ್ನು ಅವಿಸ್ಮರಣೀಯ ಅನ್ನಿಸುವುದು ಸುಳ್ಳಲ್ಲ.

3. ಸ್ನೇಹಿತರನ್ನು ಮನೆಗೆ ಆಹ್ವಾನಿಸಿ

ಸಾಮಾನ್ಯವಾಗಿ ಕ್ರಿಸ್‌ಮಸ್ ಎಂದರೆ ರಜಾದಿನವಿರುತ್ತದೆ. ಈ ಸಮಯದಲ್ಲಿ ಸ್ನೇಹಿತರ ಜೊತೆ ಕಾಲ ಕಳೆಯುವುದಕ್ಕಿಂತ ಬೆಸ್ಟ್ ಹ್ಯಾಂಗ್‌ಔಟ್ ಇನ್ನೊಂದಿಲ್ಲ. ಸ್ನೇಹಿತರ ಜೊತೆ ಸಮಯ ಕಳೆಯಲು ಹಾಗೂ ಎಂಜಾಯ್ ಮಾಡಲು ಕ್ರಿಸ್‌ಮಸ್ ಅತ್ಯುತ್ತಮ ಗಳಿಗೆ ಎನ್ನಬಹುದು. ಈ ಕ್ರಿಸ್‌ಮಸ್‌ಗೆ ಎಲ್ಲರೂ ಸೇರಿ ಅಡುಗೆ ಮಾಡಿ ಊಟ ಮಾಡಿ. ಕಾರ್ಡ್‌, ಅಂತ್ಯಾಕ್ಷರಿ ಆಡಿ ಖುಷಿ ಪಡಿ.

4. ಸಿನಿಮಾ ನೋಡಿ

ಕ್ರಿಸ್‌ಮಸ್ ದಿನವನ್ನು ಎಂಜಾಯ್ ಮಾಡಬೇಕು ಆದ್ರೆ ಜನಗಳ ಮಧ್ಯೆ ಬೆರೆಯೋದು ಆಗೊಲ್ಲ ಅಂದ್ರೆ ಚಿಂತೆ ಮಾಡ್ಬೇಡಿ. ಮನೆಯಲ್ಲಿ ಟಿವಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಸಿನಿಮಾ ನೋಡಿ. ನಿಮ್ಮಿಷ್ಟದ ಕೇಕ್‌, ಪೇಸ್ಟ್ರಿ, ಹಾಟ್ ಚಾಕೊಲೇಟ್ ಆರ್ಡರ್ ಮಾಡಿ ತಿನ್ನುತ್ತಾ ಸಿನಿಮಾವನ್ನ ಎಂಜಾಯ್ ಮಾಡಿ, ಕ್ರಿಸ್‌ಮಸ್ ಖುಷಿಯನ್ನು ಹೆಚ್ಚಿಸಿಕೊಳ್ಳಿ.

5. ಚರ್ಚ್‌ಗಳಿಗೆ ಭೇಟಿ ನೀಡಿ 

ಕ್ರಿಸ್‌ಮಸ್‌ ಸಮಯದಲ್ಲಿ ಚರ್ಚ್‌ಗಳ ಅಂದವನ್ನು ನೋಡುವುದೇ ಚೆಂದ. ನಿಮ್ಮ ಮನೆಯ ಸಮೀಪ ಅಥವಾ ನೀವಿರುವ ಜಾಗಕ್ಕೆ ಹತ್ತಿರವಿರುವ ಪ್ರಸಿದ್ಧ ಚರ್ಚ್‌ಗಳಿಗೆ ಸ್ನೇಹಿತರ ಜೊತೆ ಭೇಟಿ ಕೊಡಿ. ಏಸುಕ್ರಿಸ್ತವನ್ನು ಹುಟ್ಟುಹಬ್ಬವನ್ನು ಚರ್ಚ್‌ಗಳಲ್ಲಿ ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ. ಹಾಗಾಗಿ ಒಮ್ಮೆಯಾದ್ರೂ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಆಚರಣೆಯನ್ನು ನೋಡಬೇಕು.

Whats_app_banner