Christmas 2024: ಕ್ರಿಸ್‌ಮಸ್‌ ದಿನ ಒಂಟಿಯಾಗಿದ್ದೀರಾ? ಇಂದಿನ ದಿನವನ್ನು ನೀವು ಹೇಗೆಲ್ಲಾ ಎಂಜಾಯ್ ಮಾಡಬಹುದು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Christmas 2024: ಕ್ರಿಸ್‌ಮಸ್‌ ದಿನ ಒಂಟಿಯಾಗಿದ್ದೀರಾ? ಇಂದಿನ ದಿನವನ್ನು ನೀವು ಹೇಗೆಲ್ಲಾ ಎಂಜಾಯ್ ಮಾಡಬಹುದು ನೋಡಿ

Christmas 2024: ಕ್ರಿಸ್‌ಮಸ್‌ ದಿನ ಒಂಟಿಯಾಗಿದ್ದೀರಾ? ಇಂದಿನ ದಿನವನ್ನು ನೀವು ಹೇಗೆಲ್ಲಾ ಎಂಜಾಯ್ ಮಾಡಬಹುದು ನೋಡಿ

ಪ್ರಪಂಚದೆಲ್ಲೆಡೆ ಇಂದು (ಡಿಸೆಂಬರ್ 25) ಕ್ರಿಸ್‌ಮಸ್ ಸಂಭ್ರಮ ಬಲು ಜೋರು. ಎಲ್ಲೆಲ್ಲೂ ಕ್ರಿಸ್‌ಮಸ್ ಹಬ್ಬದ ಸಡಗರ ಎದ್ದು ಕಾಣುತ್ತಿದೆ. ಕ್ರಿಸ್‌ಮಸ್ ಎಂದರೆ ರಜಾದಿನವೂ ಹೌದು. ನೀವು ಒಬ್ಬಂಟಿಯಾಗಿದ್ದು ಈ ದಿನವನ್ನು ಹೇಗಪ್ಪಾ ಎಂಜಾಯ್ ಮಾಡೋದು ಅಂತ ಯೋಚನೆ ಮಾಡ್ತಾ ಇದ್ರೆ ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ.

ಒಂಟಿಯಾಗಿದ್ದರೆ ಕ್ರಿಸ್‌ಮಸ್ ದಿನವನ್ನು ಹೇಗೆಲ್ಲಾ ಕಳೆಯಬಹುದು?
ಒಂಟಿಯಾಗಿದ್ದರೆ ಕ್ರಿಸ್‌ಮಸ್ ದಿನವನ್ನು ಹೇಗೆಲ್ಲಾ ಕಳೆಯಬಹುದು? (PC: Canva)

ಕ್ರಿಸ್‌ಮಸ್ ಸಡಗರ ಶುರುವಾಗಿದೆ. ಪ್ರಪಂಚದಾದ್ಯಂತ ಇರುವ ಚರ್ಚ್‌ಗಳಲ್ಲಿ ಇಂದು ಜನಸಾಗರವೇ ತುಂಬಿರುತ್ತದೆ. ಭಾರತದಲ್ಲೂ ಕ್ರಿಸ್‌ಮಸ್ ಸಂಭ್ರಮಕ್ಕೆ ಕೊರತೆ ಇಲ್ಲ. ಕ್ರಿಸ್‌ಮಸ್ ಎಂದರೆ ಎಲ್ಲರೂ ಒಂದಾಗುವ, ಖುಷಿ ಹಂಚಿಕೊಳ್ಳುವ ಹಬ್ಬವೂ ಹೌದು. ಈ ದಿನ ಮನೆಮಂದಿ ಸ್ನೇಹಿತರು ಒಂದೆಡೆ ಸೇರಿ ಕೇಕ್‌ ಮಾಡಿ, ತಿಂದು ಸಂಭ್ರಮಿಸುತ್ತಾರೆ.

ಕ್ರಿಸ್‌ಮಸ್ ಎಂದರೆ ರಜಾದಿನವೂ ಹೌದು. ಈ ಕ್ರಿಸ್‌ಮಸ್ ದಿನ ನೀವು ಒಂಟಿಯಾಗಿದ್ದು ಹೇಗಪ್ಪಾ ಇಂದಿನ ದಿನವನ್ನು ಎಂಜಾಯ್ ಮಾಡೋದು ಎನ್ನುವ ಫೀಲ್‌ನಲ್ಲಿದ್ದರೆ ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ. ಈ ರೀತಿ ನಿಮ್ಮ ದಿನವನ್ನು ಕಳೆಯುವ ಮೂಲಕ ನೀವು ಕ್ರಿಸ್‌ಮಸ್ ದಿನವನ್ನು ಎಂಜಾಯ್ ಮಾಡಬಹುದು.

ಪುಸಕ್ತದೊಳಗೆ ಕಳೆದು ಹೋಗಿ

ಒಂಟಿತನ ನಿವಾರಿಸಲು ಪುಸಕ್ತಕ್ಕಿಂತ ಉತ್ತಮ ಸಂಗಾತಿ ಇನ್ನೊಂದಿಲ್ಲ. ನಿಮ್ಮಿಷ್ಟದ ಲೇಖಕರ ಪುಸ್ತಕ ಅಥವಾ ನೀವು ಬಹಳ ದಿನಗಳಿಂದ ಓದಬೇಕು ಎಂದುಕೊಳ್ಳುತ್ತಿರುವ ಪುಸ್ತಕವನ್ನು ಓದಲು ಶುರು ಮಾಡಿ. ಪುಸ್ತಕ ಓದುವಾಗ ಕಾಫಿ, ಬಿಸ್ಕೇಟ್ ಜೊತೆ ಇರಲಿ. ಇದರಿಂದ ನಿಮ್ಮ ಬೇಸರ ಕಳೆದು ದಿನವನ್ನೂ ಎಂಜಾಯ್ ಮಾಡಬಹುದು.

ಸ್ವಯಂಸೇವಕರಾಗಿ

ಕ್ರಿಸ್‌ಮಸ್ ಎಂದರೆ ಖುಷಿ ಹಂಚುವುದು. ನೀವು ಒಬ್ಬರೇ ಇದ್ದೀರಿ ಎಂದು ಬೇಸರ ಮಾಡುವ ಬದಲು ಹೊರಗಡೆ ಹೋಗಿ ಜನರ ಜೊತೆ ಬೆರೆತು ಸ್ವಯಂ ಸೇವಕರಾಗಿ. ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಿ. ಕ್ರಿಸ್‌ಮಸ್ ಉಡುಗೊರೆ ಕೊಡುವ ಹಬ್ಬವೂ ಹೌದು, ನಿಮ್ಮ ಕೈಯಲ್ಲಿ ಸಾಧ್ಯವಾಗುವಂತಹ ಉಡುಗೊರೆ ಕೊಟ್ಟು ಇನ್ನೊಬ್ಬರ ಮೊಗದಲ್ಲಿ ನಗು ಹರಿಯುವಂತೆ ಮಾಡಿ. ಆಶ್ರಮಗಳಿಗೆ ಭೇಟಿ ನೀಡಿ ಅಲ್ಲಿ ಕೂಡ ನಿಮ್ಮ ಸಮಯವನ್ನು ಕಳೆಯಬಹುದು.

ಸ್ವಯಂ ಕಾಳಜಿಗೆ ಆದ್ಯತೆ ನೀಡಿ

ಇಂದಿನ ಬ್ಯುಸಿ ಲೈಫ್‌ನಲ್ಲಿ ನಮ್ಮ ಮೇಲೆ ನಮಗೆ ಗಮನ ಕೊಟ್ಟುಕೊಳ್ಳಲು ಕಷ್ಟವಾಗುತ್ತದೆ. ಅದಕ್ಕಾಗಿ ಈ ದಿನ ಸ್ವಯಂ ಕಾಳಜಿಗೆ ಆದ್ಯತೆ ನೀಡಿ. ನಿಮ್ಮನ್ನು ನೀವು ಆರೈಕೆ ಮಾಡಿಕೊಳ್ಳಿ. ಇದರಿಂದಲೂ ಮನಸ್ಸಿಗೆ ಖುಷಿ ಸಿಗುತ್ತದೆ.

ಸೋಲೊ ಟ್ರಿಪ್ ಪ್ಲಾನ್ ಮಾಡಿ

ಕ್ರಿಸ್‌ಮಸ್ ಸಂಭ್ರಮವನ್ನು ಸ್ನೇಹಿತರು, ಮನೆಯವರ ಜೊತೆಗೆ ಕಳೆಯಬೇಕು ಎಂದೇನಿಲ್ಲ. ಸೋಲೊ ಟ್ರಿಪ್ ಪ್ಲಾನ್ ಮಾಡಿ. ಈಗಲೂ ಕಾಲ ಮಿಂಚಿಲ್ಲ. ನೀವಿರುವ ಸ್ಥಳಕ್ಕೆ ಹತ್ತಿರವಿರುವ ಪ್ರಸಿದ್ಧ ಚರ್ಚ್‌ ಅಥವಾ ನಿಮ್ಮಿಷ್ಟದ ಸ್ಥಳಕ್ಕೆ ಭೇಟಿ ನೀಡಿ. ಅಲ್ಲಿ ನೀವು ಸಹಸ್ರಾರು ಜನರನ್ನು ಭೇಟಿ ಮಾಡಬಹುದು. ಇದರಿಂದ ಕೂಡ ನೀವು ಒಂಟಿತನ ಹೋಗಲಾಡಿಸಿಕೊಳ್ಳಬಹುದು.

ನಿಮ್ಮಿಷ್ಟದ ತಿನಿಸು ರೆಡಿ ಮಾಡಿ

ಅಡುಗೆ ಮಾಡುವುದು ಕೂಡ ಪುಸ್ತಕದಂತೆ ಒಂದು ಒಳ್ಳೆಯ ಸಂಗಾತಿ. ಈ ದಿನ ಮನೆಯಲ್ಲೇ ಇದ್ದು ನಿಮ್ಮಿಷ್ಟದ ಖಾದ್ಯಗಳನ್ನ ತಯಾರಿಸುವ ಪ್ಲಾನ್ ಮಾಡಿ. ಯುಟ್ಯೂಬ್‌ನಲ್ಲಿ ರೆಸಿಪಿ ನೋಡಿಕೊಳ್ಳಿ. ಏನೆಲ್ಲಾ ಸಾಮಗ್ರಿಗಳು ಬೇಕು ಎಂಬುದನ್ನು ನೋಟ್ ಮಾಡಿಕೊಂಡು ಹೊರಗಡೆ ಹೋಗಿ ತನ್ನಿ. ನಂತರ ನಿಮ್ಮ ದಿನವನ್ನು ನಿಮ್ಮಿಷ್ಟದ ತಿನಿಸಿನೊಂದಿಗೆ ಕಳೆಯಿರಿ.

ಸ್ನೇಹಿತರು, ಕುಟುಂಬದವರಿಗೆ ವಿಡಿಯೊ ಕಾಲ್

ಈ ಕ್ರಿಸ್‌ಮಸ್ ದಿನ ನೀವು ನಿಮ್ಮ ಸ್ನೇಹಿತರು, ಕುಟುಂಬದವರೊಂದಿಗೆ ವಿಡಿಯೊ ಕಾಲ್ ಮಾಡಿ ಮಾತನಾಡುವ ಮೂಲಕ ಒಂಟಿತನವನ್ನು ಹೋಗಲಾಡಿಸಿಕೊಳ್ಳಬಹುದು. ಇದರಿಂದ ನಿಮಗೆ ಟೈಮ್‌ಪಾಸ್ ಆಗಿದ್ದು ತಿಳಿಯುವುದಿಲ್ಲ. ಈ ರೀತಿಯು ನಿಮ್ಮ ದಿನವನ್ನು ಎಂಜಾಯ್ ಮಾಡಬಹುದು.

ಸಿನಿಮಾ ನೋಡಿ 

ಬೇರೆ ದಿನಗಳಲ್ಲಿ ಸಿನಿಮಾ ನೋಡುವುದು ಸಾಧ್ಯವಾಗುವುದಿಲ್ಲ, ಇಂದು ನೀವು ಹೇಗೂ ಒಂಟಿಯಾಗಿದ್ದೀರಾ, ಈ ದಿನ ಮನೆಯಲ್ಲಿ ಕೂತು ನಿಮ್ಮಿಷ್ಟದ ಸಿನಿಮಾ ನೋಡಿ ಅಥವಾ ಹತ್ತಿರದ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿ. ಖಂಡಿತ ನಿಮ್ಮ ದಿನ ನಿಮಗೆ ಇಷ್ಟವಾಗುತ್ತದೆ. 

ನೋಡಿದ್ರಲ್ಲ ಕ್ರಿಸ್‌ಮಸ್ ರಜಾದಿನ ಒಬ್ಬರೇ ಇದ್ದೇವೆ ಎಂದು ಬೇಸರ ಮಾಡುವ ಬದಲು ಈ ಐಡಿಯಾಗಳಲ್ಲಿ ನಿಮ್ಮಿಷ್ಟವಾಗಿರುವುದನ್ನು ಮಾಡಿ. ನಿಮ್ಮ ದಿನವನ್ನು ಖುಷಿಯಿಂದ ಕಳೆಯಬಹುದು.

Whats_app_banner