Christmas Puzzle: ಕ್ರಿಸ್‌ಮಸ್ ಪಜಲ್; ಸ್ನೋ ಮ್ಯಾನ್‌ಗಳ ನಡುವೆ ಇರುವ ಕ್ಯಾಂಡಿಕೇನ್ಸ್, ಪಕ್ಷಿಯನ್ನು ಹುಡುಕಿ, ಬೇಗ
Christmas Puzzle: ಜಾರ್ಜ್ ಡುಡುಸ್ ಹಂಚಿಕೊಂಡಿರುವ ಬ್ರೈನ್ ಟೀಸರ್‌ನಲ್ಲಿ ಸ್ನೋಮ್ಯಾನ್‌ಗಳ ನಡುವೆ ಇರುವ ಕ್ಯಾಂಡಿಕೇನ್‌ಗಳು ಹಾಗೂ ಪಕ್ಷಿಯನ್ನು ಕಂಡುಹಿಡಿಯುವಂತೆ ಸೂಚಿಸಲಾಗಿದೆ.

Christmas Puzzle: ಕ್ರಿಸ್‌ಮಸ್ ಹತ್ತಿರ ಬರುತ್ತಿದ್ದಂತೆ ಕ್ರಿಸ್‌ಮಸ್ ಪಜಲ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜನರು ಸದಾ ಚಟುವಟಿಕೆಯಿಂದ ಕೂಡಿರಲು ಈ ಬ್ರೈನ್ ಟೀಸರ್ ಸಹಾಯ ಮಾಡುತ್ತದೆ. 2 ದಿನಗಳ ಹಿಂದಷ್ಟೇ ಜರ್ಮನಿ ಮೂಲದ ಜಾರ್ಜ್ ಡುಡುಸ್, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕ್ರಿಸ್‌ಮಸ್ ಪಜಲ್ ಹಂಚಿಕೊಂಡಿದ್ದರು. ಜನರು ಈ ಸಮಸ್ಯೆಯನ್ನು ಬಿಡಿಸಿದ್ದರೂ ಕೂಡಾ.
ಸ್ನೋಮ್ಯಾನ್‌ಗಳ ನಡುವೆ ಇರುವ ಕ್ಯಾಂಡಿಕೇನ್, ಪಕ್ಷಿ
ಸ್ನೋಮ್ಯಾನ್‌ಗಳ ನಡುವೆ ಇರುವ ಸಾಂತಾಕ್ಲಾಸ್ ತಾತನ ಹ್ಯಾಟ್ ಹುಡುಕಿಕೊಡುವಂತೆ ಜಾರ್ಜ್ ಡುಡುಸ್ ಹೇಳಿದ್ದರು. ಅದರಂತೆ ಜನರು ಮೆದುಳಿಗೆ ಕೆಲಸ ನೀಡಿ ಕೊನೆಗೂ ಸಾಂತಾನ ಟೋಪಿಯನ್ನು ಹುಡುಕಿಕೊಡುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಜಾರ್ಜ್ ಹಂಚಿಕೊಂಡಿರುವ ಮತ್ತೊಂದು ಪಜಲ್ ವೈರಲ್ ಆಗುತ್ತಿದೆ. ಈ ಬ್ರೈನ್ ಟೀಸರ್‌ನಲ್ಲಿ ನೀವು 3 ಕ್ಯಾಂಡಿಕೇನ್ಸ್, ಸ್ನೋಮ್ಯಾನ್ ನಡುವೆ ಅಡಗಿರುವ ಪಕ್ಷಿಯನ್ನು ಹುಡುಕಬೇಕು. ಕೆಂಪು ಅಂಗಿ ಕೆಂಪು ಟೋಪಿ ಧರಿಸಿರುವ ಅಷ್ಟೊಂದು ಸ್ನೋ ಮ್ಯಾನ್‌ಗಳ ನಡುವೆ ಕ್ಯಾಂಡಿ ಕೇನ್ ಹಾಗೂ ಪಕ್ಷಿಯನ್ನು ಹೇಗೆ ಹುಡುಕುವುದು ಅಂತ ಕನ್ಫ್ಯೂಸ್ ಆಗಬೇಡಿ. ನಿಮ್ಮ ಮೆದುಳಿಗೆ ಕೆಲಸ ಕೊಡಿ.
ನೆಟಿಜನ್ಸ್ ಕಾಮೆಂಟ್
3 ಕ್ಯಾಂಡಿಕೇನ್ಸ್ ಹಾಗೂ 1 ಪಕ್ಷಿ ಎಲ್ಲಿದೆ? ಎಂದು ಜಾರ್ಜ್ ಡುಡುಸ್ ಈ ಪೋಸ್ಟ್‌ಗೆ ಕ್ಯಾಪ್ಷನ್ ಹಂಚಿಕೊಂಡಿದ್ದಾರೆ. 4 ದಿನಗಳ ಹಿಂದೆ ಜಾರ್ಜ್ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ 300 ಲೈಕ್‌ಗಳು ಹಾಗೂ ಕೆಲವು ಕಾಮೆಂಟ್ಸ್ ಬಂದಿವೆ. ಬಹಳ ಜನರು ಅದನ್ನು ತಮ್ಮ ಆತ್ಮೀಯರೊಂದಿಗೆ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಕ್ಯಾಂಡಿಕೇನ್ಸ್ ಹಾಗೂ ಪಕ್ಷಿಯನ್ನು ಕಂಡುಹಿಡಿದು ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ. ಪಕ್ಷಿ ಅಂತೂ 1 ನಿಮಿಷಕ್ಕೆ ಸಿಕ್ಕಿಬಿಡ್ತು, ಬ್ರೈನ್ ಟೀಸರ್ ಚೆನ್ನಾಗಿದೆ ಎಂದು ಕಾಂಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಯೂಸರ್ ಕ್ಯಾಂಡಿಕೇನ್ಸ್ ಸುಲಭವಾಗಿ ಸಿಕ್ತು, ಆದರೆ ಪಕ್ಷಿ ಕಾಣಿಸ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ನಿಜಕ್ಕೂ ಈ ಬ್ರೈನ್ ಟೀಸರ್ ಬಹಳ ಫನ್ ಆಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅವರಿಗೆಲ್ಲಾ ಕ್ಯಾಂಡಿಕೇನ್ಸ್ ಹಾಗೂ ಪಕ್ಷಿ ಸಿಕ್ಕಿದೆ, ನೀವು ಇನ್ನೂ ಹುಡುಕ್ತಾ ಇದೀರಾ? ಹೌದು ಎಂದಾದಲ್ಲಿ ಈ ಫೋಟೋದಲ್ಲಿ ಉತ್ತರ ಇದೆ ನೋಡಿ. ಈ ಚಿತ್ರದಲ್ಲಿ ಕ್ಯಾಂಡಿಕೇನ್ಸ್ ಹಾಗೂ ಪಕ್ಷಿ ಇರುವ ಸ್ಥಳವನ್ನು ಗುರುತು ಮಾಡಲಾಗಿದೆ. ಈಗಲಾದರೂ ಗೊತ್ತಾಯ್ತಾ? ಹೇಗಿತ್ತು ಈ ಬ್ರೈನ್ ಟೀಸರ್, ಮುಂದಿನ ಪಜಲ್ ಬಿಡಲು ಸಿದ್ಧರಾಗಿ.
