30ರ ನಂತರ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು 30 ಮೆಟ್ಟಿಲು ಹತ್ತಿ ಇಳಿಯಿರಿ, ತಜ್ಞರು ನೀಡಿದ ಸಲಹೆಯಿದು-climb 30 steps every day to maintain your heart health after age 30 this is the advice given by doctor smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  30ರ ನಂತರ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು 30 ಮೆಟ್ಟಿಲು ಹತ್ತಿ ಇಳಿಯಿರಿ, ತಜ್ಞರು ನೀಡಿದ ಸಲಹೆಯಿದು

30ರ ನಂತರ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು 30 ಮೆಟ್ಟಿಲು ಹತ್ತಿ ಇಳಿಯಿರಿ, ತಜ್ಞರು ನೀಡಿದ ಸಲಹೆಯಿದು

ಮೂವತ್ತರ ಹರೆಯದಲ್ಲಿ ನಿಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನೀವು ಮುಖ್ಯವಾಗಿ ವ್ಯಾಯಾಮ ಮಾಡಬೇಕು. ವ್ಯಾಯಾಮ ಮಾಡಲು ಸಮಯ ಇಲ್ಲವಾದರೆ ಪ್ರತಿದಿನ ಮೆಟ್ಟಿಲುಗಳನ್ನಾದರೂ ಹತ್ತಿ ಇಳಿಯಬೇಕು. ಬದುಕಿನಲ್ಲಿ ಒತ್ತಡ ಹೆಚ್ಚಾದಂತೆ ಆರೋಗ್ಯದ ಬಗ್ಗೂ ಗಮನಹರಿಸಬೇಕು.

ಹೃದಯದ ಆರೋಗ್ಯಕ್ಕಾಗಿ ಮೆಟ್ಟಿಲು ಹತ್ತಿ
ಹೃದಯದ ಆರೋಗ್ಯಕ್ಕಾಗಿ ಮೆಟ್ಟಿಲು ಹತ್ತಿ

ನಿಮ್ಮ ಆರೋಗ್ಯದ ಕಾಳಜಿ ನೀವೇ ಮಾಡಿಕೊಳ್ಳಬೇಕು ಅದರಲ್ಲೂ ಮೂವತ್ತರ ಗಡಿ ಬಂತು ಎಂದರೆ ಮುಂದೆ ವಯಸ್ಸು ಎಷ್ಟು ಬೇಗ ಆಗುತ್ತದೆ ಎಂಬುದೇ ತಿಳಿಯುವುದಿಲ್ಲ. ಜೀವನವು ವೇಗವಾಗಿ ಓಡಲು ಆರಂಭವಾಗುತ್ತದೆ. ಬದುಕಿನಲ್ಲಿ ಒತ್ತಡ ಹೆಚ್ಚಾಗುತ್ತದೆ. ಹೀಗಿರುವಾಗ ನಿಮ್ಮ ಆರೋಗ್ಯದ ಬಗ್ಗೆ ನೀವು ಅದೇ ಸಮಯದಲ್ಲಿ ಹೆಚ್ಚಿನ ಕಾಳಜಿ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿದಿನವೂ 30 ಮೆಟ್ಟಿಲುಗಳನ್ನು ಹತ್ತಿ ಇಳಿಯುವುದರಿಂದ ನೀವು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವೃತ್ತಿಜೀವನದ ಪ್ರಮುಖ ಗುರಿಗಳ ಹೊರತಾಗಿ ನೀವು ನಿಮ್ಮ ದೈನಂದಿನ ಬದುಕಿಗೂ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಹೀಗಾದಾಗ ಮಾತ್ರ ಆರೋಗ್ಯ ಸುಧಾರಣೆ ಸಾಧ್ಯ.

ಕೆಲಸದ ಒತ್ತಡ ನಿಯಂತ್ರಣ ಮಾಡಿ 

ಕೆಲಸದಿಂದ ಉಂಟಾಗುವ ಒತ್ತಡವು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಚಿಕ್ಕ ವಯಸ್ಸಿನಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು. ಹಿಂದೆ ವಯಸ್ಕರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಸಮಸ್ಯೆ ಇದೀಗ ಯುವಕರ ಜೀವನದಲ್ಲೂ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಫಾಸ್ಟ್ ಮತ್ತು ಜಂಕ್ ಫುಡ್‌ನ ಮೇಲಿನ ಅವಲಂಬನೆ ಕೂಡ ಆಗಿರಬಹುದು. 

ಡಾ. ಮಿಶ್ರಾ ಹೇಳುವಂತೆ 30 ಮೆಟ್ಟಿಲುಗಳನ್ನು ಹತ್ತುವುದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗ. ಈ ಸರಳ ಚಟುವಟಿಕೆಯನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ವ್ಯಾಯಾಮಕ್ಕಾಗಿ ಹೆಚ್ಚುವರಿ ಸಮಯವನ್ನು ಮೀಸಲಿಡುವ ಅಗತ್ಯವಿಲ್ಲ. ಎಲಿವೇಟರ್ ಬಳಸುವ ಬದಲು, ನಿಮ್ಮ ಕಚೇರಿ ಅಥವಾ ಮನೆ ಎತ್ತರದ ಮಹಡಿಯಲ್ಲಿದ್ದರೆ ಮೆಟ್ಟಿಲುಗಳನ್ನು ಬಳಸುವ ಮೂಲಕ ತಲುಪಿ. 

ಮೆಟ್ಟಿಲುಗಳನ್ನು ಹತ್ತುವುದು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ದೇಹದ ಎಲ್ಲಾ ಭಾಗಕ್ಕೆ ರಕ್ತ ಪ್ರಸರಣ ಆಗುವಂತೆ ಮಾಡುತ್ತದೆ ಎಂದು ಅವರು 'ಟೈಮ್ಸ್‌ ನೌ'ಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ ಆಮ್ಲಜನಕದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. ಹೆಚ್ಚುವರಿ ತೂಕವನ್ನು ಹೊತ್ತುಕೊಳ್ಳುವುದು ನಿಮ್ಮ ಹೃದಯದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಹಾಗಾಗಿ ನೀವು ತುಂಬಾ ದಪ್ಪವಾಗಿದ್ದರೆ ತೂಕ ಇಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. 

ಧೂಮಪಾನ ತ್ಯಜಿಸಿ

ಮೆಟ್ಟಿಲುಗಳನ್ನು ಹತ್ತುವುದು ಕ್ಯಾಲೊರಿಗಳನ್ನು ಬರ್ನ್‌ ಮಾಡಲು ಸಹಾಯ ಮಾಡುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಪ್ರಯತ್ನ ಪಡಬೇಕು. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಂಡಾಗ ಮಾತ್ರ ತೂಕವನ್ನು ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಆದ್ದರಿಂದ ನೀವು ಮೆಟ್ಟಿಲು ಹತ್ತಿ ಇಳಿದರೆ ಸಹಾಯವಾಗುತ್ತದೆ ಎಂದು ಹೇಳಿದ್ಧಾರೆ. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು ಕೂಡ ತುಂಬಾ ಮುಖ್ಯ

mysore-dasara_Entry_Point