10ನೇ ತರಗತಿ, ಪಿಯುಸಿ ನಂತರದ ವಿಷಯದ ಆಯ್ಕೆಯಲ್ಲಿ ದುಡುಕದಿರಿ- ಡಾ ರೂಪಾ ರಾವ್‌ ಕಾಳಜಿ ಅಂಕಣ
ಕನ್ನಡ ಸುದ್ದಿ  /  ಜೀವನಶೈಲಿ  /  10ನೇ ತರಗತಿ, ಪಿಯುಸಿ ನಂತರದ ವಿಷಯದ ಆಯ್ಕೆಯಲ್ಲಿ ದುಡುಕದಿರಿ- ಡಾ ರೂಪಾ ರಾವ್‌ ಕಾಳಜಿ ಅಂಕಣ

10ನೇ ತರಗತಿ, ಪಿಯುಸಿ ನಂತರದ ವಿಷಯದ ಆಯ್ಕೆಯಲ್ಲಿ ದುಡುಕದಿರಿ- ಡಾ ರೂಪಾ ರಾವ್‌ ಕಾಳಜಿ ಅಂಕಣ

ಡಾ ರೂಪಾ ರಾವ್‌ ಕಾಳಜಿ ಅಂಕಣ: ಎಸ್‌ಎಸ್‌ಎಲ್‌ಸಿ, ಪಿಯುಸಿ ಬಳಿಕ ಏನು ಕಲಿಯಬೇಕು? ತಮ್ಮ ಮುಂದಿನ ಕರಿಯರ್‌ ಏನಾಗಿರಬೇಕು? ಎಂದು ನಿರ್ಧರಿಸುವಲ್ಲಿ ಕರಿಯರ್ ಅನಾಲಿಸಿಸ್ಸ್ ಸೈಕೋಮೆಟ್ರಿಕ್ ಟೆಸ್ಟ್ ಮತ್ತು ಕೌನ್ಸಿಲಿಂಗ್ ಸಹಾಯಕ್ಕೆ ಬರುತ್ತದೆ ಎಂದು ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್‌ ಅಭಿಪ್ರಾಯಪಟ್ಟಿದ್ದಾರೆ.

10ನೇ ತರಗತಿ, ಪಿಯುಸಿಯ ನಂತರದ ವಿಷಯದ ಆಯ್ಕೆಯಲ್ಲಿ ದುಡುಕದಿರಿ- ಡಾ ರೂಪಾ ರಾವ್‌ ಕಾಳಜಿ ಅಂಕಣ
10ನೇ ತರಗತಿ, ಪಿಯುಸಿಯ ನಂತರದ ವಿಷಯದ ಆಯ್ಕೆಯಲ್ಲಿ ದುಡುಕದಿರಿ- ಡಾ ರೂಪಾ ರಾವ್‌ ಕಾಳಜಿ ಅಂಕಣ

ಡಾ ರೂಪಾ ರಾವ್‌ ಕಾಳಜಿ ಅಂಕಣ: ಪಿಯುಸಿ ಅಥವಾ ಎಸ್‌ಎಸ್‌ಎಲ್‌ಸಿ ಮುಗಿಯುತ್ತಿದ್ದ ಹಾಗೇ ಪೋಷಕರು ಮಾತುಗಳು ಹೀಗೆ ಶುರುವಾಗುತ್ತದೆ. "ನನ್ನ ಮಗಳು ಮ್ಯಾತ್ ಮೆಟಿಕ್ಸ್ ಚೆನ್ನಾಗಿ ಮಾಡುತ್ತಾಳೆ, ಅವರನ್ನ ಎಂಜಿನಿಯರಿಂಗ್ ಸೇರಿಸಬೇಕು. “ನನ್ನ ಮಗ ಸೈನ್ಸ್‌ನಲ್ಲಿ ಸೂಪರ್ ಅವನ್ನ ಡಾಕ್ಟರ್ ಮಾಡಬೇಕು.” "ನನ್ನ ಮಗಳನ್ನ ಐಎಎಸ್ ಮಾಡಬೇಕು, ಐಪಿಎಸ್ ಸೇರಿಸಬೇಕು". ಎಲ್ಲಾ ಪೋಷಕರದ್ದೂ ಹೀಗೊಂದಷ್ಟು ಕನಸು. ತಮ್ಮ ಮಗ ಮಗಳು ಹೀಗೆ ಬೆಳೆಯಬೇಕು ಹೀಗೇ ಆಗಬೇಕು. ಇಷ್ಟು ಸಂಪಾದಿಸಬೇಕು ಎಂದಿರುತ್ತದೆ.

ಕನಸು ಕಾಣುವುದರಲ್ಲಿ ಯಾವ ತಪ್ಪು ಇಲ್ಲ ನಿಜ. ಆದರೆ, ಒಂದು ವಿಷಯ ಎಲ್ಲರೂ ನೆನಪಿಟ್ಟುಕೊಳ್ಳಬೇಕಾದದ್ದು ಮಕ್ಕಳು ನಮ್ಮ ಕನಸನ್ನು ನನಸು ಮಾಡಲು ಹುಟ್ಟಿರುವುದಲ್ಲ. ಅವರದ್ದೇ ಆಸೆ, ಆಸಕ್ತಿ, ಗುರಿ , ಇವುಗಳನ್ನು ಅಂತರ್ಗತವಾಗಿಯೇ ಹೊಂದಿದವರು. ಈ ಮಕ್ಕಳು ಭವಿಷ್ಯದ ಹೆಮ್ಮರವಾಗಿ ಬೆಳೆಯುವ ಸಂಪೂರ್ಣ ಮಾನವರು ಅಷ್ಟೇ .

ನನ್ನ ಆಪ್ತ ಸಮಾಲೋಚನೆಯ ಅನುಭವದಲ್ಲಿ “ತಂದೆ ತಾಯಿ ಚಿಕ್ಕಪ್ಪ ಕಸಿನ್ ಫ್ರೆಂಡ್ ಹೇಳಿದ ಕೋರ್ಸ್ ಅನ್ನು ಆರಿಸಿಕೊಂಡು ನಂತರ ಆ ವಿಷಯಗಳಲ್ಲಿ ಆಸಕ್ತಿ ಇಲ್ಲದೇ ಕೋರ್ಸ್ ಮುಗಿಸಲೂ ಆಗದೇ ಇತ್ತ ಮುಗಿಸಿದರೂ ಮುಂದೆ ಅದರಲ್ಲಿ ಆಸಕ್ತಿ ಇಲ್ಲದೇ ನಡುದಾರಿಯಲ್ಲಿ ಕಣ್ಣುಕಟ್ಟಿದಂತೆ ನಿಂತ ಹಾಗಾಗಿದೆ”, ಎಂದು ಅಳಲು ತೋಡಿಕೊಳ್ಳುವ ಅನೇಕಾನೇಕ ವಿದ್ಯಾರ್ಥಿಗಳು ಮತ್ತು ನಿರುದ್ಯೋಗದಿಂದ ಒದ್ದಾಡುವ ಹಲವಾರು ಜನರನ್ನು ಭೇಟಿ ಆಗಿರುವೆ. ಅವರೆಲ್ಲರ ಒಂದೇ ಯೋಚನೆ “ನಮಗೇಕೇ ಈ ಕೋರ್ಸ್ ಇಷ್ಟವಿಲ್ಲ ಎಂದು ಜಾಯಿನ್ ಆಗುವಾಗ ಗೊತ್ತಾಗಲಿಲ್ಲ”

ಕಷ್ಟ ಆದರೂ ನಂಬಲೇಬೇಕು. ನೂರಕ್ಕೆ 90% ಜನ ತಮ್ಮ ಮಕ್ಕಳನ್ನು , ತಾವು ಆಯ್ದ ಕೋರ್ಸ್ ತೆಗೆದುಕೊಳ್ಳುವಂತೆ ನಿರ್ದೇಶಿಸುತ್ತಾರೆ. ದೇಶದ ವಿವಿಧ ವಿಶ್ವ ವಿದ್ಯಾಲಯಗಳ 70% ವಿದ್ಯಾರ್ಥಿಗಳಿಗೆ ತಾವು ಓದುತ್ತಿರುವ ಕೋರ್ಸ್ ಇಷ್ಟವಿರುವುದಿಲ್ಲ. 60% ಉದ್ಯೋಗಿಗಳಿಗೆ ತಾವು ಮಾಡುತ್ತಿರುವ ಉದ್ಯೋಗ ತೃಪ್ತಿ ಇಲ್ಲ. 80% ಜನರಿಗೆ ತಾವು ಓದಿದ್ದೇ ಬೇರೆ ತಮ್ಮ ಆಸಕ್ತಿಯೇ ಬೇರೆ ಎಂಬುದು ಕೆಲಸಕ್ಕೆ ಹೋದಾಗ ತಿಳಿಯುತ್ತದೆ.

ಈ ಮೇಲಿನವುಗಳು ಅಂಕಿ ಅಂಶಗಳು

ಇನ್ನೂ ಮಹತ್ವದ ಆದರೆ ವಿಪರ್ಯಾಸವೆಂದರೆ ನಿರ್ದೇಶಿಸುವವರಿಗೇ ಸರಿಯಾದ ಮಾಹಿತಿ ಇರುವುದಿಲ್ಲ. ತಮ್ಮ ಕಡೆಯವರೋ, ಇನ್ಯಾರೋ ಪಡೆದ ಶಿಕ್ಷಣ ಮತ್ತು ಅದರಿಂದ ಅವರಿಗಾದ ಪ್ರಯೋಜನ ಇವುಗಳನ್ನೆಲ್ಲಾ ನೋಡಿ ಪ್ರಭಾವಿತರಾಗಿ ಈ ನಿರ್ಧಾರಗಳನ್ನ ಕೈಗೊಳ್ಳುತ್ತಾರೆ.

ಆದರೆ, ಈ ಇತರರನ್ನು ನೋಡಿ ತೆಗೆದುಕೊಳ್ಳುವ ನಿರ್ಧಾರ ಹೇಗಿರುತ್ತದೆ ಎಂದರೆ, ಜಿಂಕೆಯ ಓಟ ನೋಡಿ ಮೀನಿಗೆ ಭೂಮಿಯಲ್ಲಿ ಓಟ ಕಲಿಸಿದಂತೆ. ಹಾರುವ ಹಕ್ಕಿಯ ನೋಡಿ, ಸಿಂಹಕೆ ಹಾರುವದನ್ನು ಕಲಿಸುವಂತೆ. ಹೌದು, ಮನುಷ್ಯರು ನೋಡುವುದಕ್ಕೆ ಮಾತ್ರ ಭಿನ್ನವಲ್ಲ . ಮನಸು, ಮನಸ್ಥಿತಿ, ವ್ಯಕ್ತಿತ್ವ ಎಲ್ಲವೂ ಒಬ್ಬರಿಗಿಂತ ಇನ್ನೊಬ್ಬರದು ಭಿನ್ನ ವಿಶಿಷ್ಟ. ಕಲಿಯುವ ಸಾಮರ್ಥ್ಯಶೈಲಿ , ವ್ಯಕ್ತಿತ್ವ ಆಸಕ್ತಿ , ಬುದ್ದಿ ಶಕ್ತಿ ಯ ಮಟ್ಟ ಯಾವುವೂ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ .

ಒಬ್ಬರು ಒಂದು ರಂಗದಲ್ಲಿ ಯಶಸ್ಸು ಪಡೆದಿದ್ದಾರೆಂದು ತಾವೂ ಅದೇ ಯಶಸ್ಸು ಪಡೆಯಬಹುದು. ಅಥವ ಒಬ್ಬರು ಯಾವುದೋ ಕ್ಷೇತ್ರದಲ್ಲಿ ವಿಫಲರಾದ ಮಾತ್ರಕ್ಕೆ ತಾವೂ ವಿಫಲರಾಗುತ್ತೇವೆ ಎಂದು ಯೋಚಿಸವುದೇ ತಪ್ಪು. ಹಾಗಾಗಿ ಅವೈಜ್ಞಾನಿಕ, ಅವಸರದ ನಿರ್ಧಾರ ಅದೂ ಮಕ್ಕಳ ಭವಿಷ್ಯದ ವಿಚಾರದಲ್ಲಿ ತಪ್ಪು ಕಾರ್ಯವೇ.

ನೀವು ಕ್ವೋರಾ ಅಥವಾ ಗೂಗಲ್ ಸುದ್ದಿ ಜಾಲತಾಣಗಳನ್ನು ಬ್ರೌಸ್ ಮಾಡಿದರೆ, ಅಸಹಾಯಕರಾಗಿದ್ದೇವೆ ಎಂದುಕೊಳ್ಳುವ ವಿದ್ಯಾರ್ಥಿಗಳ ಈ ರೀತಿಯ ಪೋಸ್ಟ್ ಓದಬಹುದು., "ನಾನು ಏನು ಮಾಡಲಿ, ನನಗೆ ಇಷ್ಟವಿರದ ಕೋರ್ಸ್ ಮಾಡುತ್ತಿರುವೆ ನನಗೆ ಎಲ್ಲಿ ಹೋಗುತ್ತಿರುವೆ ಎಂದೇ ಅರ್ಥ ಆಗ್ತಿಲ್ಲ " ಎಂದೆಲ್ಲ ಬರೆದಿರುತ್ತಾರೆ.

ಕೆಲವರು ಪೋಷಕರ ನಿರೀಕ್ಷೆಗಳನ್ನು ಡಿಸ್ ಅಪಾಯಿಂಟ್ ಮಾಡಲಾಗದ ಇತ್ತ ಆಸಕ್ ತಿಹಾಗು ಇಷ್ಟ ಎರಡೂ ಇರದ ಕೋರ್ಸುಗಳು ಇವೆರೆಡೂ ನಡುವೆ ಅಡಿಕೆ ಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡ ಅನುಭವ ಆಗ್ತಿದೆ ಎಂದು ಹೇಳುತ್ತಾರೆ. ಕೆಲವರು ಹತಾಶೆಯ ಭಾವನೆಗೆ ಸಿಲುಕಿ ಆತ್ಮಹತ್ಯೆಯಂತಹ ವಿಚಾರದ ಬಗ್ಗೆಯೂ ಮಾತಾಡುತ್ತಾರೆ. ಹಾಗಾಗಿಯೇ ಕರಿಯರ್ ಕೌನ್ಸೆಲಿಂಗ್ ಉಪಯೋಗಕ್ಕೆ ಬರುತ್ತದೆ. ಏನಿದು ಕರಿಯರ್ ಕೌನ್ಸೆಲಿಂಗ್ ಟೆಸ್ಟ್? ನಗರ ಪ್ರದೇಶದ ಎಂಎನ್‌ಸಿಯಲ್ಲಿ ಕೆಲಸ ಮಾಡುವ ಬಹುತೇಕ ಉದ್ಯೋಗಿಗಳಿಗೆ ಇದರ ವಿಷಯ ತಿಳಿದಿರುತ್ತದೆ.

ಕರಿಯರ್ ಅನಾಲಿಸಿಸ್ಸ್ ಸೈಕೋಮೆಟ್ರಿಕ್ ಟೆಸ್ಟ್ ಮತ್ತು ಕೌನ್ಸಿಲಿಂಗ್

ತಾವು ಯಾರು? ತಮ್ಮ ಪರ್ಸನಾಲಿಟಿ ( 16 types) ಯಾವುದು? ತಮ್ಮ ಆಸಕ್ತಿ ಯಾವದು. ತಮ್ಮ ವೃತ್ತಿಯಲ್ಲಿ ತಾವು ಏನನ್ನ ಬಯಸುತ್ತೇವೆ ಮುಂದೆ ಯಾವ ಕ್ಷೇತ್ರ ಆಯ್ದುಕೊಳ್ಳಬೇಕು. ಪಿಯುಸಿ ಅಥವಾ 10th ಆದ ನಂತರ ಯಾವ ಯಾವ ಆಯ್ಕೆಗಳಿವೆ , ಯಾವ ಆಯ್ಕೆ ತಮಗೆ ಖಂಡಿತಾ ಭವಿಷ್ಯದುದ್ದಕ್ಕೂ ಹೊಂದುತ್ತದೆ ಈ ಎಲ್ಲವುದರ ಸಂಪೂರ್ಣ ಮಾಹಿತಿಯನ್ನು ವೈಜ್ಞಾನಿಕ ವಿಧಾನದಲ್ಲಿ ವೃತ್ತಿ ಮಾರ್ಗದರ್ಶಕರೊಂದಿಗೆ ಸಮಾಲೋಚನೆ ನಡೆಸುವುದರ ಮೂಲಕ ತಿಳಿಯುವುದು.

ಏನಿರುತ್ತೆ ಈ ಸಮಾಲೋಚನೆಯಲ್ಲಿ?

  • ಪರ್ಸನಾಲಿಟಿ ಅನಾಲಿಸಿಸ್.
  • ವೃತ್ತಿಯ ಆಸಕ್ತಿ ಏನು?
  • ನೀವು ನಿಮ್ಮ ವೃತ್ತಿಯಿಂದ ಏನು ಬಯಸುತ್ತೀರ
  • ಕಲಿಯುವ ಸ್ಟೈಲ್ ಯಾವುದು.
  • ನಿಮಗಿರುವ ಸ್ಕಿಲ್ ಮತ್ತು ಸಾಮರ್ಥ್ಯ ಏನು?

ಈ ಮೇಲಿನ ಎಲ್ಲಾವುದರ ಆಧಾರದ ಮೇಲೆ ನಿಮಗೆ ಯಾವ ವಿದ್ಯಾ ಕ್ಷೇತ್ರ ಸ್ಯೂಟ್ ಆಗುತ್ತದೆ./ ಈಗ ನೀವಿರುವ ಉದ್ಯೋಗ ರಂಗ ನಿಮಗೆ ಸರಿಯಾದುದೇ?

ಬಹುತೇಕರಿಗೆ ಇಂಜಿನಿಯರಿಂಗ್ , ಮೆಡಿಕಲ್, ಪತ್ರಿಕಾರಂಗ ಅಥವ ಸರ್ಕಾರಿ ನೌಕರಿ ಇವಿಷ್ಟೇ ಗುರಿ ಮತ್ತು ತಿಳಿದಿರುವ ಕ್ಷೇತ್ರಗಳು. ಆದರೆ 300ಕ್ಕೂ ಹೆಚ್ಚಿನ ಉದ್ಯೋಗ ರಂಗಗಳೂ ಮತ್ತು 3000ಕ್ಕೂ ಹೆಚ್ಚಿನ ಉದ್ಯೋಗಾವಕಾಶಗಳು ಹೈ ಡಿಮ್ಯಾಂಡಿನಲ್ಲಿವೆ ಅಂತ ಎಷ್ಟೋ ಜನರಿಗೆ ಗೊತ್ತಿರುವುದೇ ಇಲ್ಲ.

ಪೋಷಕರು ನಮಗೆಲ್ಲಾ ಗೊತ್ತು ಎಂಬ ಭ್ರಮಾವಲಯದಿಂದ ಹೊರಬರಬೇಕು. ಹಾಗೆಯೇ ವಿದ್ಯಾರ್ಥಿಗಳು ಇತರರಿಂದ ಪ್ರಭಾವಿತರಾಗುವುದನ್ನ ಬಿಡಬೇಕು. ಕೇವಲ ಒಂದು ಬಟ್ಟೆ ತೆಗೆದುಕೊಳ್ಳುವಾಗ ನಮಗೆ ಹೊಂದುತ್ತದೆಯೇ ಎಂದು ಪರಿಶೀಲಿಸಿಕೊಳ್ಳುವ ಪೋಷಕರು ಲಕ್ಷಾಂತರ ರೂಗಳನ್ನು ತೆತ್ತು ವರ್ಷಾನುವರ್ಷ ವ್ಯಯ ಮಾಡಬೇಕಾದ ಓದು ಅವರ ಮಕ್ಕಳ ಆಸಕ್ತಿಗೆ ಹೊಂದುತ್ತಾ ಎಂದು ತಿಳಿದುಕೊಳ್ಳಲು ಕರಿಯರ್ ಕೌನ್ಸೆಲಿಂಗ್ ಮಾಡಿಸಬಾರದೇಕೆ?

ಈ ಕೌನ್ಸೆಲಿಂಗ್ ಮೂಲಕ ಬಂದ ಫಲಿತಾಂಶ ತಮ್ಮ ನಿರೀಕ್ಷೆಗೆ ಅನುಗುಣವಾಗಿ ಇಲ್ಲದಾಗ ಪೋಷಕರು ಅಸಮಾಧಾನ ವ್ಯಕ್ತಪಡಿಸುವುದುಂಟು ಆದರೆ ಮಕ್ಕಳು ಆ ಫಲಿತಾಂಶವನ್ನು ಮನಸಾರೆ ಒಪ್ಪಿಕೊಂಡು ತಮ್ಮ ತಮ್ಮ ಆಸಕ್ತಿಗೆ ಅನುಗುಣವಾಗಿ ಆಯ್ಕೆ ಮಾಡಿ ತಮ್ಮ ಕ್ಷೇತ್ರದಲ್ಲಿ ನೆಮ್ಮದಿಯಿಂದ ಕೆಲಸಮಾಡುತ್ತಿದ್ದಾರೆ.

ಪ್ರತಿಯೊಬ್ಬ ಪೋಷಕರೂ ಈ ವಿಷಯವನ್ನು ಅರ್ಥ ಮಾಡಿಕೊಂಡು ತಮ್ಮ ತಮ್ಮ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಓದಿಸಿದರೆ ಎಲ್ಲೋ ಅತೃಪ್ತಿ, ನಿರಾಶೆ , ಸೋಲಿನಿಂದ ಅಥವಾ ಭಯದಿಂದ ಆರನೇ ಫ್ಲೋರಿನಿಂದ ಬೀಳುವ ವಿದ್ಯಾರ್ಥಿಯನ್ನು ತಪ್ಪಿಸಿದಂತಾಗುತ್ತದೆ. ಅಪ್ಪಾ ನನ್ನನ್ನು ಕ್ಷಮಿಸು ನಿನ್ನ ನಿರೀಕ್ಷೆಯನ್ನು ನಾನು ಮುಟ್ಟಲಾಗಲಿಲ್ಲ ಎಂದು ನೇಣು ಹಾಕಿಕೊಳ್ಳುವ ವಿದ್ಯಾರ್ಥಿನಿಯನ್ನು ಕಾಪಾಡಬಹುದು. ಅಪ್ಪ ಅಮ್ಮನ ನಿರೀಕ್ಷೆಯನ್ನೂ ತಲುಪಲಾಗದೇ ಇತ್ತ ಓದಲೂ ಆಗದೇ ಡ್ರಗ್ ಮುಂತಾದ ತಪ್ಪು ಹಾದಿಗಿಳಿಯುವ ವಿದ್ಯಾರ್ಥಿಗಳನ್ನು ಕಾಪಾಡಬಹುದು.

ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ

ಡಾ. ರೂಪಾ ರಾವ್‌
ಡಾ. ರೂಪಾ ರಾವ್‌

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner