Cooking Tips: ಮನೆಯಲ್ಲೇ ತಯಾರಿಸಿ ಪೋಡಿ ಇಡ್ಲಿ; ಅಡುಗೆ ರುಚಿ ದುಪ್ಪಟ್ಟಾಗಲು ಈ 5 ಟಿಪ್ಸ್‌ ಫಾಲೋ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Cooking Tips: ಮನೆಯಲ್ಲೇ ತಯಾರಿಸಿ ಪೋಡಿ ಇಡ್ಲಿ; ಅಡುಗೆ ರುಚಿ ದುಪ್ಪಟ್ಟಾಗಲು ಈ 5 ಟಿಪ್ಸ್‌ ಫಾಲೋ ಮಾಡಿ

Cooking Tips: ಮನೆಯಲ್ಲೇ ತಯಾರಿಸಿ ಪೋಡಿ ಇಡ್ಲಿ; ಅಡುಗೆ ರುಚಿ ದುಪ್ಪಟ್ಟಾಗಲು ಈ 5 ಟಿಪ್ಸ್‌ ಫಾಲೋ ಮಾಡಿ

Cooking Tips: ಪೋಡಿ ಇಡ್ಲಿ ಭೋಜಪ್ರಿಯರು ಇಷ್ಟಪಟ್ಟು ತಿನ್ನುವ ತಿಂಡಿಗಳಲ್ಲೊಂದು. ಇದನ್ನು ಬ್ರೇಕ್‌ಫಾಸ್ಟ್‌, ಸ್ನಾಕ್ಸ್‌ ಯಾವಾಗ ಬೇಕಿದ್ದರೂ ಸೇವಿಸಬಹುದು. ನೀವು ಮನೆಯಲ್ಲೇ ಪೋಡಿ ಇಡ್ಲಿ ಮಾಡುತ್ತಿದ್ದೀರಿ ಎಂದರೆ ಈ ಟಿಪ್ಸ್‌ ಫಾಲೋ ಮಾಡಿ. ನೀವು ಮಾಡುವ ಅಡುಗೆ ರುಚಿ ದುಪ್ಪಟ್ಟಾಗುವುದರಲ್ಲಿ ಸಂದೇಹವೇ ಇಲ್ಲ.

ಫರ್ಫೆಕ್ಟ್‌ ಪೋಡಿ ಇಡ್ಲಿ ತಯಾರಿಸಲು ಟಿಪ್ಸ್‌
ಫರ್ಫೆಕ್ಟ್‌ ಪೋಡಿ ಇಡ್ಲಿ ತಯಾರಿಸಲು ಟಿಪ್ಸ್‌ (PC: Tweeting from UG. @Nash5633)

ಇಡ್ಲಿ ದಕ್ಷಿಣ ಭಾರತದ ಫೇಮಸ್‌ ಬ್ರೇಕ್‌ಫಾಸ್ಟ್‌ ಹಾಗೂ ಸ್ನಾಕ್ಸ್‌ಗೆ ಬಳಸುವ ತಿಂಡಿ. ಇತ್ತೀಚೆಗೆ ಉತ್ತರ ಭಾರತದ ಜನರು ಕೂಡಾ ಇದನ್ನು ಬಹಳ ಇಷ್ಟ ಪಟ್ಟು ತಿನ್ನುತ್ತಿದ್ದಾರೆ. ಮೊದಲೆಲ್ಲಾ ಸಾದಾ ಇಡ್ಲಿಯನ್ನು ಜನರು ಹೆಚ್ಚು ಇಷ್ಟಪಟ್ಟು ತಿನ್ನುತ್ತಿದ್ದರು. ಆದರೆ ಈಗ ಬಗೆ ಬಗೆಯ ಇಡ್ಲಿ ಹೆಚ್ಚು ಫೇಮಸ್‌ ಆಗುತ್ತಿದೆ.

ಈಗಂತೂ ಪೋಡಿ ಇಡ್ಲಿ ಎಲ್ಲೆಡೆ ಫೇಮಸ್‌ ಆಗುತ್ತಿದೆ. ಸಾಮಾನ್ಯ ಇಡ್ಲಿ ಗಾತ್ರಕ್ಕೆ ಹೋಲಿಸಿದರೆ ಪೋಡಿ ಇಡ್ಲಿ, ಗಾತ್ರದಲ್ಲಿ ಚಿಕ್ಕದಾಗಿವೆ. ಪೋಡಿ ಮಸಾಲೆಯನ್ನ ಇಡ್ಲಿಗೆ ಲೇಪಿಸಿ ಅದರೊಂದಿಗೆ ಚೀಸ್‌, ಬೆಣ್ಣೆ ಅಥವಾ ತುಪ್ಪವನ್ನು ಲೇಪಿಸಿ ಇಡ್ಲಿ ತಯಾರಿಸಲಾಗುತ್ತದೆ. ಇದರ ಪರಿಮಳಕ್ಕೆ ಇನ್ನೆರಡು ಇಡ್ಲಿಯನ್ನು ಹೆಚ್ಚಿಗೆ ತಿನ್ನಬೇಕು ಎನಿಸುವುದರಲ್ಲಿ ಅನುಮಾನವೇ ಇಲ್ಲ. ಪೋಡಿ ಇಡ್ಲಿಯನ್ನು ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ರುಚಿಯಾದ ಪೋಡಿ ಇಡ್ಲಿ ತಯಾರಿಸಲು ಇಲ್ಲಿ ಕೆಲವು ಟಿಪ್ಸ್‌ ಇವೆ.

ಇಡ್ಲಿ ಹಿಟ್ಟನ್ನು ಹುದುಗಲು ಬಿಡಿ

ಗಟ್ಟಿಯಾದ, ರಬ್ಬರ್‌ನಂತೆ ಇರುವ ಇಡ್ಲಿಯನ್ನು ಯಾರು ತಾನೇ ತಿನ್ನಲು ಇಷ್ಟಪಡುತ್ತಾರೆ? ಇಡ್ಲಿ ಹಿಟ್ಟು ಚೆನ್ನಾಗಿ ಹುದುಗಿದರೆ ಪೋಡಿ ಇಡ್ಲಿ ಬಹಳ ರುಚಿಯಾಗಿರುತ್ತದೆ, ಮೃದುವಾಗಿರುತ್ತದೆ. ಮೃದುವಾಗಿದ್ದರೆ ಮಾತ್ರ ಪೋಡಿ ಇಡ್ಲಿ ರುಚಿಯಾಗಿರುತ್ತದೆ. ಆದ್ದರಿಂದ ಇಡ್ಲಿ ಹಿಟ್ಟನ್ನು ಚೆನ್ನಾಗಿ ಹುದುಗಲು ಬಿಡಿ. ನೀವು ರುಬ್ಬಿದ ಹಿಟ್ಟು ಹೆಚ್ಚಿನ ಪ್ರಮಾಣದಲ್ಲಿದ್ದರೆ ಎರಡು ಪಾತ್ರೆಗಳಿಗೆ ಹಿಟ್ಟನ್ನು ಸುರಿಯಿರಿ. ರಾತ್ರಿಯಿಡೀ ಹಿಟ್ಟನ್ನು ಚೆನ್ನಾಗಿ ಫರ್ಮೆಂಟ್‌ ಆಗಲು ಬಿಡಿ.

ಇಡ್ಲಿಗಳನ್ನು ಚೆನ್ನಾಗಿ ಸ್ಟೀಮ್ ಮಾಡಿ

ಇಡ್ಲಿಗಳನ್ನು ಬೇಯಿಸುವ ವಿಧಾನ ಕೂಡಾ ನೀವು ಮಾಡುವ ಇಡ್ಲಿ ರುಚಿಯನ್ನು ನಿರ್ಧರಿಸುತ್ತದೆ. ಇಡ್ಲಿ ಹಿಟ್ಟನ್ನು ಇಡ್ಲಿ ಪಾತ್ರೆಗೆ ಸುರಿಯುವ ಮುನ್ನ, ಒಮ್ಮೆ ಎಣ್ಣೆ ಹಚ್ಚಿ ಸುತ್ತಲೂ ಗ್ರೀಸ್‌ ಮಾಡಿ. ಮುಕ್ಕಾಲು ಭಾಗದಷ್ಟು ಮಾತ್ರ ಇಡ್ಲಿ ಹಿಟ್ಟನ್ನು ಹಾಕಿ. ಸ್ಟೀಮರ್‌ನಲ್ಲಿ ಕಾಲು ಭಾಗದಷ್ಟು ಮಾತ್ರ ನೀರು ಸೇರಿಸಿ. 10 ನಿಮಿಷಗಳವರೆಗೂ ಇಡ್ಲಿಯನ್ನು ಹಬೆಯಲ್ಲಿ ಬೇಯಿಸಿ.

ಪೋಡಿಯನ್ನು ತಾಜಾವಾಗಿ ತಯಾರಿಸಿ

ಹೆಸರೇ ಸೂಚಿಸುವಂತೆ ನೀವು ಮಾಡುವ ಪೋಡಿ ಇಡ್ಲಿ ರುಚಿಯಾಗಿರಬೇಕು ಎಂದರೆ ಪೋಡಿ ಮಸಾಲೆಯನ್ನು ತಾಜಾವಾಗಿ ತಯಾರಿಸಿ. ಮುಂದಿನ ಬಾರಿಗೆ ಆಗುತ್ತದೆ ಎಂಬ ಕಾರಣಕ್ಕೆ ನೀವು ಹೆಚ್ಚಿಗೆ ಪೋಡಿ ಮಸಾಲೆ ತಯಾರಿಸಿ ಉಳಿಯುವಂತೆ ಮಾಡಬೇಕು. ಇದು ಪೋಡಿ ಮಸಾಲೆಯ ಸುವಾಸನೆಯನ್ನು ಹೋಗಲಾಡಿಸುತ್ತದೆ. ಆದರೆ ನೀವು ಇಡ್ಲಿ ಮಾಡುವ ಹಿಂದಿನ ದಿನ ಪೋಡಿ ಮಸಾಲೆ ತಯಾರಿಸಿದರೂ ಸಾಕು. ಬಹಳ ಹಿಂದಿನ ಪೋಡಿ ಮಸಾಲೆ, ಅಷ್ಟು ರುಚಿಯಾಗಿರುವುದಿಲ್ಲ.

ಇಡ್ಲಿ ಸುತ್ತಲೂ ಮಸಾಲೆಯನ್ನು ಕೋಟ್‌ ಮಾಡಿ

ಇಡ್ಲಿಗೆ ಪೋಡಿಯನ್ನು ಕೋಟ್‌ ಮಾಡುವಾಗ ಸುತ್ತಲೂ ಹೊಂದಿಕೊಳ್ಳುವಂತೆ ಕೋಟ್‌ ಮಾಡಿ. ಸ್ಪೂನ್‌ನಲ್ಲಿ ಕೋಟ್‌ ಮಾಡುವ ಬದಲಿಗೆ ಕೈಗಳನ್ನು ಸ್ವಚ್ಛವಾಗಿ ತೊಳೆದು ಪೋಡಿಯನ್ನು ಇಡ್ಲಿಗಳಿಗೆ ಚೆನ್ನಾಗಿ ಹೊಂದಿಕೊಳ್ಳುವಂತೆ ಕೋಟ್‌ ಮಾಡಿ.

ತುಪ್ಪ ಸೇರಿಸಿ

ಪೋಡಿ ಇಡ್ಲಿಗೆ ಸುವಾಸನೆ ನೀಡಲು ನೀವು ಮರೆಯದೆ ತುಪ್ಪ ಬಳಸಬೇಕು. ಚೀಸ್‌ ಅಥವಾ ಬೆಣ್ಣೆಯನ್ನು ಬಳಸುವ ಬದಲಿಗೆ ಪೋಡಿ ಇಡ್ಲಿಗೆ ಉತ್ತಮ ಸುವಾಸನೆ ನೀಡಲು ತುಪ್ಪ ಬಳಸಿದರೆ ಅದು ನಿಮ್ಮ ಅಡುಗೆಯ ರುಚಿಯನ್ನು ದುಪ್ಪಟ್ಟುಕೊಳಿಸುತ್ತದೆ. ಇದರಿಂದ ನೀವು ನಿಮ್ಮ ಮನೆಯವರನ್ನು ಇಂಪ್ರೆಸ್‌ ಮಾಡಬಹುದು.

ಇಲ್ಲಿ ತಿಳಿಸಿರುವ ಟಿಪ್ಸ್‌ ಅನುಸರಿಸಿ ರುಚಿ ರುಚಿಯಾದ ಪೋಡಿ ಇಡ್ಲಿ ತಯಾರಿಸಿ ನಿಮ್ಮ ಪ್ರೀತಿಪಾತ್ರರನ್ನು ಇಂಪ್ರೆಸ್‌ ಮಾಡಿ.

Whats_app_banner