Cooking Tips: ತೆಳುವಾದ ದೋಸೆ, ರೊಟ್ಟಿ ಮಾಡಲು ಹೋಗಿ ಸೀದು ಹೋಗ್ತಿದ್ಯಾ? ಇದೊಂದು ಟಿಪ್ಸ್ ಫಾಲೊ ಮಾಡಿ, ನಿಮ್ಮ ಕೆಲಸ ತುಂಬಾ ಸುಲಭವಾಗುತ್ತೆ
ಅಡುಗೆಮನೆಯಲ್ಲಿ ಇರುವ ಅತಿ ಅವಶ್ಯಕ ವಸ್ತುಗಳಲ್ಲಿ ತವಾ ಕೂಡಾ ಒಂದು. ದೋಸೆ, ರೊಟ್ಟಿಗಳನ್ನು ತಯಾರಿಸಲು ಬಳಸುವ ತವಾ, ತೆಳುವಾದರೆ ಅದರಲ್ಲಿ ತಯಾರಿಸಿದ ಅಡುಗೆ ಸೀದು ಹೋಗುತ್ತದೆ. ತೆಳು ತವಾದಲ್ಲಿ ದೋಸೆ, ರೊಟ್ಟಿ ಸೀದು ಹೋಗದಂತೆ ತಯಾರಿಸಲು ಈ ಟಿಪ್ಸ್ ಪಾಲಿಸಿ.
ಭಾರತದಲ್ಲಿ ಬೆಳಗಿನ ತಿಂಡಿಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಸಾಮಾನ್ಯವಾಗಿ ಬೆಳಗಿನ ತಿಂಡಿಗೆ ದೋಸೆ, ರೊಟ್ಟಿ, ಇಡ್ಲಿ, ಉಪ್ಪಿಟ್ಟು, ಚಪಾತಿ, ಪರಾಠ ಮುಂತಾದವುಗಳನ್ನು ಮಾಡುತ್ತಾರೆ. ಭಾರತದ ಪ್ರತಿ ಅಡುಗೆಮನೆಯಲ್ಲೂ ಇರುವ ಅತ್ಯಂತ ಅವಶ್ಯಕ ವಸ್ತು ‘ತವಾ’. ಇದನ್ನು ದೋಸೆ, ರೊಟ್ಟಿ, ಚಪಾತಿ ಮತ್ತು ಪರಾಠಾಗಳನ್ನು ತಯಾರಿಸಲು ಬಳಸುತ್ತಾರೆ. ತವಾವನ್ನು ಎರಕಹೊಯ್ದ ಕಬ್ಬಿಣ, ಅಲ್ಯೂಮಿನಿಯಂ ಅಥವಾ ನಾನ್‌ಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಇದು ವಿವಿಧ ಗಾತ್ರ ಮತ್ತು ಆಕಾರಗಳಲ್ಲಿ ಲಭ್ಯವಿದೆ. ಹೆಚ್ಚಿನ ಜನರು ಕಬ್ಬಿಣದ ತವಾವನ್ನೇ ಬಳಸುತ್ತಾರೆ. ಅದು ಆರೋಗ್ಯಕ್ಕೆ ಉತ್ತಮವೂ ಹೌದು. ಗೋಲಾಕಾರದಲ್ಲಿ ಮಾಡಿದ ದೋಸೆ, ರೊಟ್ಟಿಗಳು ನೋಡಲು ಮತ್ತು ಸವಿಯಲು ಚೆಂದ. ಅದೇ ರೊಟ್ಟಿ, ದೋಸೆ ಸೀದು ಹೋದರೆ, ಸಮಯ ಮತ್ತು ಶ್ರಮ ಎರಡೂ ವ್ಯರ್ಥ. ಸಾಮಾನ್ಯವಾಗಿ ದೋಸೆ, ರೊಟ್ಟಿ ಸೀದು ಹೋಗಲು ತೆಳು ತವಾವೇ ಕಾರಣ. ಕಬ್ಬಿಣದ ತವಾಗಳು ಕ್ರಮೇಣ ಸವೆದು ತೆಳುವಾಗುತ್ತವೆ. ಸ್ಟವ್‌ನ ಉರಿ ಸ್ವಲ್ಪ ಜಾಸ್ತಿಯಾದರೂ ಸಾಕು ಪ್ಯಾನ್ ಬೇಗ ಬಿಸಿಯಾಗುತ್ತದೆ. ಇದರಿಂದಾಗಿ ದೋಸೆ, ರೊಟ್ಟಿಗಳು ಕಡಿಮೆ ಸಮಯದಲ್ಲಿ ಬೆಂದು, ಸೀದು ಹೋಗಲು ಪ್ರಾರಂಭಿಸುತ್ತವೆ. ಹಾಗಾದರೆ ದೋಸೆ, ರೊಟ್ಟಿಗಳನ್ನು ಸೀದದಂತೆ ತಯಾರಿಸಲು ಏನು ಮಾಡಬೇಕು? ನಿಮ್ಮ ಸಮಯ ಮತ್ತು ಶ್ರಮ ಎರಡನ್ನೂ ಉಳಿಸಲು ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ. ಅವುಗಳನ್ನು ಪಾಲಿಸುವುದರ ಮೂಲಕ ಸೂಪರ್ ಎನ್ನುವಷ್ಟು ಚೆನ್ನಾಗಿ ದೋಸೆ, ರೊಟ್ಟಿ ಮಾಡಿ.
ಇದನ್ನೂ ಓದಿ: ಸಿಂಪಲ್ಲಾಗೊಂದು ಪುದೀನಾ ರಸಂ ರೆಸಿಪಿ; ಅನ್ನದೊಂದಿಗೂ ತಿನ್ನಬಹುದು, ಸೂಪ್‌ನಂತೆಯೂ ಕುಡಿಯಬಹುದು
ತೆಳು ತವಾದಲ್ಲಿ ದೋಸೆ, ರೊಟ್ಟಿ ಸೀದು ಹೋಗದಂತೆ ಮಾಡಲು ಈ ಟಿಪ್ಸ್ ಪಾಲಿಸಿ
ಕಬ್ಬಿಣದ ತವಾ ಸವೆದಿದ್ದರೆ ಅದರಲ್ಲಿ ಮಾಡುವ ದೋಸೆ, ರೊಟ್ಟಿಗಳು ಬೇಗನೆ ಸೀದು ಹೋಗುತ್ತವೆ. ಅದಕ್ಕಾಗಿ ತವಾವನ್ನು ಗ್ಯಾಸ್ ಸ್ಟೋವ್ ಮೇಲೆ ಇಟ್ಟ ನಂತರ ಒಂದು ಚಮಚ ಉಪ್ಪನ್ನು ಹಾಕಿ. ಬಣ್ಣ ಬದಲಾಗುವವರೆಗೆ ಉಪ್ಪನ್ನು ತವಾ ಮೇಲೆ ಇಡಿ. ಉಪ್ಪಿನ ಬಣ್ಣವು ಕಂದು ಬಣ್ಣಕ್ಕೆ ಬದಲಾದಾಗ, ಒಂದು ಬಟ್ಟೆಯ ಸಹಾಯದಿಂದ ತವಾ ಮೇಲಿರುವ ಉಪ್ಪನ್ನು ತೆಗೆದುಹಾಕಿ ನಂತರ ಸ್ವಚ್ಛಗೊಳಿಸಿ. ಈಗ ಆ ತವಾದಲ್ಲಿ ರೊಟ್ಟಿ ಅಥವಾ ದೋಸೆ ಮಾಡಿ. ಏಕೆಂದರೆ ಉಪ್ಪನ್ನು ಹುರಿದ ತವಾ ಬೇಗನೆ ಸೀದು ಹೋಗುವುದಿಲ್ಲ. ಇದರಲ್ಲಿ ದೋಸೆ, ರೊಟ್ಟಿ ಮೃದುವಾಗಿಯೂ ಬರುತ್ತದೆ.
ಇದನ್ನೂ ಓದಿ: ಮಖಾನಾ ಸೇವಿಸುವುದರಿಂದ ಸಿಗುತ್ತೆ ಹಲವು ಆರೋಗ್ಯ ಪ್ರಯೋಜನ: ತುಪ್ಪದಲ್ಲಿ ಹುರಿಯದೆ ತಿನ್ನುವುದು ಹೇಗೆ, ಇಲ್ಲಿದೆ ಸಲಹೆ
ತವಾ ಖರೀದಿಸುವ ಮೊದಲು ಗಮನಿಸಬೇಕಾದ ಅಂಶಗಳು
ಗಾತ್ರ: ದೋಸೆ ಅಥವಾ ರೊಟ್ಟಿ ಮಾಡಲು ಬೇಕಾಗುವ ತವಾ ವಿವಿಧ ಗಾತ್ರಗಳಲ್ಲಿ ದೊರೆಯುತ್ತದೆ. ಬಹಳ ಮುಖ್ಯವಾದ ವಿಷಯವೆಂದರೆ ನಿಮ್ಮ ಅಡುಗೆಮನೆಗೆ ಹೊಂದಿಕೆಯಾಗುವ ಅಂದರೆ ನೀವು ತಯಾರಿಸುವ ದೋಸೆ, ರೊಟ್ಟಿಗೆ ಅನುಗುಣವಾಗಿ ತವಾ ಖರೀದಿಸಿ. ಮಧ್ಯಮ ಗಾತ್ರದ ತವಾ ಬೆಸ್ಟ್.
ವಸ್ತು: ನಿಮ್ಮ ಬಜೆಟ್‌ಗೆ ಸೂಕ್ತವಾದ ತವಾ ಆಯ್ದುಕೊಳ್ಳಿ. ಆದರೆ ಯಾವ ವಸ್ತುವಿನಿಂದ ತಯಾರಿಸಲಾಗಿದೆ ಎಂಬುದನ್ನು ಮೊದಲು ತಿಳಿಯಿರಿ. ದೋಸೆ, ರೊಟ್ಟಿ ಮಾಡಲು ಕಬ್ಬಿಣದ ತವಾ ಬೆಸ್ಟ್. ನಾನ್ ಸ್ಟಿಕ್ ತವಾ ಆಯ್ಕೆ ಮಾಡಿಕೊಳ್ಳುತ್ತಿದ್ದರೆ ಗುಣಮಟ್ಟದ ತವಾ ಖರೀದಿಸಿ.
ಹಿಡಿಕೆ: ತವಾಗಳಿಗೆ ಬರುವ ಹಿಡಿಕೆಗಳು ಅನೇಕ ಆಕಾರದಲ್ಲಿರುತ್ತವೆ. ನಿಮಗೆ ಸರಿಹೊಂದುವ ಹಾಗೂ ಕಿರಿಕಿರಿಯಾಗದ ಹಿಡಿಕೆಗಳನ್ನು ಆಯ್ದುಕೊಳ್ಳಿ. ತೀರಾ ಚಿಕ್ಕ ಹಿಡಿಕೆಯಿದ್ದರೆ ಕೈಗೆ ಬೆಂಕಿಯ ಶಾಖ ತಗಲುತ್ತದೆ.
ಬಾಳಿಕೆ: ತವಾ ಖರೀದಿಸುವ ಮೊದಲು ಅದರ ಬಾಳಿಕೆಯ ಬಗ್ಗೆ ಕೇಳಿ ತಿಳಿದುಕೊಳ್ಳಿ. ಉತ್ತಮ ಕಬ್ಬಿಣದಿಂದ ತಯಾರಿಸಿದ ತವಾಗಳು ಬಹಳ ದಿನಗಳಕಾಲ ಬಾಳಿಕೆಗೆ ಬರುತ್ತವೆ. ಸ್ವಚ್ಛಗೊಳಿಸಲು ಸುಲಭವೆನಿಸುವ ತವಾ ಆಯ್ದುಕೊಳ್ಳಿ.
ವಿಭಾಗ