Cooking Tips: ಅಡುಗೆಗೆ ಡ್ರೈ ಫ್ರೂಟ್ಸ್ ಬಳಕೆ ಮಾಡುವ ಮುನ್ನ ನಿಮ್ಮ ಗಮನದಲ್ಲಿರಲಿ ಈ 5 ಪ್ರಮುಖ ವಿಚಾರಗಳು
Cooking Tips: ಡ್ರೈ ಫ್ರೂಟ್ಸ್ ಎಂದರೆ ಎಲ್ಲರಿಗೂ ಇಷ್ಟ. ಆದರೆ ಇವುಗಳನ್ನು ಅಡುಗೆಗೆ ಬಳಕೆ ಮಾಡುವಾಗ ನಾವು ನಮ್ಮ ಅರಿವಿಲ್ಲದೆಯೇ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಆ ತಪ್ಪುಗಳು ಯಾವುವು..? ನಿಮಗೂ ಇದೇ ರೀತಿ ಅನುಭವ ಆಗಿದ್ಯಾ? ನೋಡೋಣ ಬನ್ನಿ.

Cooking Tips: ನಮಗೆ ಡ್ರೈ ಫ್ರೂಟ್ಸ್ ಇಷ್ಟ ಇಲ್ಲ ಎಂದು ಹೇಳದವರೇ ಇಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಡ್ರೈ ಫ್ರೂಟ್ಸ್ ಇಷ್ಟವಾಗುತ್ತದೆ. ಏಕೆಂದರೆ ಆರೋಗ್ಯಕ್ಕೆ ಡ್ರೈ ಫ್ರೂಟ್ಸ್ ಎಷ್ಟು ಒಳ್ಳೆಯದು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾವುದೇ ಸಿಹಿ ತಿನಿಸನ್ನು ತಯಾರಿಸಿದಾಗ ಕೊನೆಯಲ್ಲಿ ಹುರಿದ ಡ್ರೈ ಫ್ರೂಟ್ಸ್ ಹಾಕಿ ಅಲಂಕಾರ ಮಾಡಿದರಂತೂ ಆ ಸಿಹಿ ತಿನಿಸಿನ ರುಚಿಯೇ ಬದಲಾಗುತ್ತದೆ.
ಆದರೆ ಈ ಡ್ರೈ ಫ್ರೂಟ್ಸನ್ನು ಅಡುಗೆಯಲ್ಲಿ ಬಳಸುವ ಮುನ್ನ ನೀವು ಕೆಲವೊಂದು ವಿಚಾರದ ಬಗ್ಗೆ ಗಮನ ನೀಡಬೇಕು. ಇಲ್ಲವಾದಲ್ಲಿ ಅಡುಗೆ ರುಚಿ ಹೆಚ್ಚಿಸಬೇಕಾದ ಡ್ರೈ ಫ್ರೂಟ್ಸ್ ಅಡುಗೆಯನ್ನು ಹಾಳುವ ಮಾಡುವ ಸಾಧ್ಯತೆ ಇರುತ್ತದೆ.
ಡ್ರೈ ಫ್ರೂಟ್ಸ್ ಬಳಸಿ ಅಡುಗೆ ಮಾಡುವಾಗ ನಾವು ಮಾಡುವ ಸಾಮಾನ್ಯ ಐದು ತಪ್ಪುಗಳಿವು
1. ಅತಿಯಾಗಿ ಹುರಿಯುವುದು : ಡ್ರೈ ಫ್ರೂಟ್ಸ್ ಹಸಿಯಾಗಿ ಸೇವಿಸಿದರೂ ಸಹ ಒಳ್ಳೆಯ ರುಚಿಯನ್ನೇ ಹೊಂದಿರುತ್ತದೆ. ಆದರೆ ಇವುಗಳನ್ನು ಹುರಿದು ತಿಂದರೆ ಆ ರುಚಿ ದ್ವಿಗುಣಗೊಳ್ಳುತ್ತದೆ ಎಂಬ ಮಾತನ್ನು ತಳ್ಳಿ ಹಾಕುವಂತಿಲ್ಲ. ಅಲ್ಲದೇ ಡ್ರೈ ಫ್ರೂಟ್ಸ್ ಪರಿಮಳ ಕೂಡ ಹೆಚ್ಚುತ್ತದೆ. ಇದರಿಂದ ಒಂದು ಸಾಮಾನ್ಯ ತಿನಿಸು ಕೂಡ ಅಮೋಘವಾದ ರುಚಿಯನ್ನು ಪಡೆದುಕೊಳ್ಳುತ್ತದೆ. ಆದರೆ ಡ್ರೈ ಫ್ರೂಟ್‌ಗಳನ್ನು ಅತಿಯಾಗಿ ಹುರಿಯುವುದು ಕೂಡ ಒಳ್ಳೆಯದಲ್ಲ. ಇದರಿಂದ ಡ್ರೈ ಫ್ರೂಟ್ಸ್ ಕಹಿ ರುಚಿಯನ್ನು ಪಡೆದುಕೊಳ್ಳುತ್ತದೆ. ಹೊಂಬಣ್ಣ ಬರುತ್ತಿದ್ದಂತೆಯೇ ಡ್ರೈ ಫ್ರೂಟ್ಸ್ ಹುರಿಯುವುದನ್ನು ನಿಲ್ಲಿಸುವುದು ಒಳ್ಳೆಯದು.
2. ಹಳೆಯ ಡ್ರೈ ಫ್ರೂಟ್ಸ್ ಬಳಕೆ : ಎಲ್ಲರ ಅಡುಗೆ ಮನೆಗಳಲ್ಲಿ ಡ್ರೈ ಫ್ರೂಟ್ಸ್ ಇದ್ದರೂ ಸಹ ದಿನನಿತ್ಯ ಇವುಗಳ ಬಳಕೆ ಆಗುವುದಿಲ್ಲ ಎಂಬುದೂ ಕೂಡ ಅಷ್ಟೇ ಸತ್ಯ. ಹೀಗಾಗಿ ಅಂಗಡಿಯಿಂದ ಖರೀದಿಸಿ ತಂದ ಹಲವು ದಿನಗಳ ಕಾಲವೂ ಡ್ರೈ ಫ್ರೂಟ್ಸ್ ಹಾಗೆಯೇ ಅಡುಗೆ ಮನೆಯಲ್ಲಿ ಇರುತ್ತದೆ. ದೀರ್ಘ ಸಮಯದ ಬಳಿಕ ಯಾವುದೇ ಆಹಾರ ಪದಾರ್ಥವಾದರೂ ಕೆಟ್ಟು ಹೋಗುತ್ತದೆ. ಅದೇ ಡ್ರೈ ಫ್ರೂಟ್ಸ್ ಕೂಡ ನೈಸರ್ಗಿಕವಾದ ತೈಲವನ್ನು ಹೊಂದಿರುತ್ತದೆ. ಇವುಗಳನ್ನು ಹೆಚ್ಚು ಕಾಲ ಬಳಸದೇ ಹಾಗೆಯೇ ಇಟ್ಟರೆ ಅವುಗಳು ತಮ್ಮ ಸ್ವಾದವನ್ನು ಕಳೆದುಕೊಳ್ಳುತ್ತದೆ. ಅಲ್ಲದೇ ಆ ಪರಿಮಳ ಕೂಡ ಇರುವುದಿಲ್ಲ. ಇವುಗಳನ್ನು ಅಡುಗೆಗೆ ಬಳಕೆ ಮಾಡುವುದರಿಂದ ಅಡುಗೆ ಸ್ವಾದ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವ ಅಪಾಯವಿರುತ್ತದೆ. ಹೀಗಾಗಿ ಡ್ರೈ ಫ್ರೂಟ್ಸ್ ಅವಧಿ ಮೀರಿದೆಯೇ ಎಂಬುದನ್ನು ನೋಡಿಕೊಂಡು ಬಳಕೆ ಮಾಡಿ.
3. ಸಾಲ್ಟೆಡ್ ನಟ್ಸ್ : ಅಂಗಡಿಗಳಲ್ಲಿ ನಿಮಗೆ ಉಪ್ಪು ಹಾಕಿದ ಡ್ರೈ ಫ್ರೂಟ್ಸ್ ಸಿಗುತ್ತದೆ. ಹಾಗೆಯೇ ತಿನ್ನಲು ಇವುಗಳು ರುಚಿಕರ ಎನಿಸುತ್ತದೆ. ಆದರೆ ಇವುಗಳನ್ನು ನೀವು ಹುರಿದು ಅಡುಗೆಗೆ ಸೇರಿಸುವುದರಿಂದ ಅಡುಗೆಯಲ್ಲಿ ಉಪ್ಪು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಉಪ್ಪು ಹಾಕದ ಡ್ರೈ ಫ್ರೂಟ್ಸ್ ನ್ನೇ ಅಡುಗೆಗೆ ಬಳಸುವುದು ಉತ್ತಮ. ಒಂದು ವೇಳೆ ಬಳಸಬೇಕಾಗಿ ಬಂದರೂ ಅಡುಗೆಗೆ ಕಡಿಮೆ ಉಪ್ಪು ಬಳಸಿ.
4. ಬೇರೆ ಬೇರೆ ಡ್ರೈ ಫ್ರೂಟ್ಸ್ ನ್ನು ಒಟ್ಟಾಗಿ ಹುರಿಯುವುದು : ಸಿಹಿ ತಿನಿಸುಗಳಿಗೆ ಡ್ರೈ ಫ್ರೂಟ್ಸ್ ಸೇರಿಸುವಾಗ ನಾವು ಯಾವುದೋ ಒಂದೇ ಡ್ರೈ ಫ್ರೂಟ್ ಬಳಕೆ ಮಾಡುವುದಿಲ್ಲ. ತರಹೇವಾರಿ ರೀತಿಯ ಡ್ರೈ ಫ್ರೂಟ್ಸ್ ಬಳಕೆ ಮಾಡುತ್ತವೆ. ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಪಿಸ್ತಾ ಇವುಗಳು ಬೇರೆ ಬೇರೆ ಶಾಖದಲ್ಲಿ ಹೊಂಬಣಕ್ಕೆ ತಿರುತ್ತವೆ, ಇವುಗಳನ್ನು ಒಟ್ಟಾಗಿ ಹುರಿದಾಗ ಒಂದು ಹೊಂಬಣ್ಣಕ್ಕೆ ತಿರುಗುವಷ್ಟರಲ್ಲಿ ಇನ್ನೊಂದು ತಳ ಹಿಡಿದು ಕಪ್ಪಾಗಿ ಹೋಗಿ ಬಿಡಬಹುದು. ಹೀಗಾಗಿ ಪ್ರತ್ಯೇಕವಾಗಿಯೇ ಹುರಿದುಕೊಳ್ಳಿ.
5. ಡ್ರೈ ಫ್ರೂಟ್ಸ್ ನೆನೆಸದಿರುವುದು : ಡ್ರೈ ಫ್ರೂಟ್ಸ್ ನ್ನು ಹುರಿಯುವ ಮುನ್ನ ಅವುಗಳನ್ನು ನೆನೆಸಿದರೆ ಇವುಗಳು ಇನ್ನೂ ಹೆಚ್ಚಿನ ಸ್ವಾದ ಹಾಗೂ ಪರಿಮಳವನ್ನು ನೀರುತ್ತದೆ. ಹೀಗಾಗಿ ಯಾವುದೇ ಭಕ್ಷ್ಯಗಳಿಗೆ ಡ್ರೈ ಫ್ರೂಟ್ಸ್ ಹುರಿದು ಸೇರಿಸುವ ಮುನ್ನ ಕನಿಷ್ಟ 30 ನಿಮಿಗಳ ಕಾಲ ಅವುಗಳನ್ನು ನೀರಿನಲ್ಲಿ ನೆನೆಸಿಡಿ. ನಂತರ ಒಣಬಟ್ಟೆಯಲ್ಲಿ ಒರೆಸಿ ಹುರಿಯಬಹುದು. ಇದರಿಂದ ಅವುಗಳ ಸಿಪ್ಪೆಯಲ್ಲಿ ಅಂಟಿರುವ ಕಲ್ಮಶಗಳನ್ನೂ ತೆಗೆದಂತಾಗುತ್ತದೆ.

ವಿಭಾಗ