Cooking Tips: ಅಡುಗೆಗೆ ಉಪ್ಪು ಜಾಸ್ತಿಯಾದರೆ ಏನು ಮಾಡಬೇಕು? ಇಲ್ಲಿದೆ ನೋಡಿ ಸದಾಕಾಲ ಪ್ರಯೋಜನಕ್ಕೆ ಬರುವ ಟಿಪ್ಸ್
Cooking Tips: ಕೆಲವೊಮ್ಮೆ ಗೊತ್ತಿಲ್ಲದೆ ತಪ್ಪಾಗುತ್ತದೆ. ಒಮ್ಮೆ ಉಪ್ಪು ಜಾಸ್ತಿ ಆಗಬಹುದು ಅಥವಾ ಇನ್ನೊಮ್ಮೆ ಕಡಿಮೆ ಆಗಬಹುದು. ಆದರೆ ಉಪ್ಪು ಜಾಸ್ತಿ ಆದಾಗ ಮಾತ್ರ ಮಾಡಿದ ಅಡುಗೆಯನ್ನು ಮತ್ತೆ ಸರಿ ಪಡಿಸೋಕೆ ಆಗೋದಿಲ್ಲ ಎಂಬಂತಾಗುತ್ತದೆ. ಆದರೆ ಅಡುಗೆ ಉಪ್ಪು ಕಡಿಮೆ ಮಾಡಲು ಇಲ್ಲಿದೆ ನೋಡಿ ಟಿಪ್ಸ್.
ಅಡುಗೆಗೆ ಕೆಲವೊಮ್ಮೆ ಉಪ್ಪು ಹೆಚ್ಚಾಗುವುದು ಸಹಜ. ಆದರೆ ಉಪ್ಪು ಹೆಚ್ಚಾದ ಮಾತ್ರಕ್ಕೆ ನೀವು ಅದನ್ನು ಬಿಸಾಡುವುದು ಬೇಡ. ಉಪ್ಪು ಹೆಚ್ಚಾದಾಗ ಏನು ಮಾಡಬೇಕೆಂದು ಕೆಲವರಿಗೆ ತೋಚುವುದಿಲ್ಲ. ಮಾಡಿದ ಅಡುಗೆ ಹಾಳಾಯಿತು ಎಂದು ಅದನ್ನು ಯಾರಿಗೂ ಬಡಿಸದೆ ಹೇಗೆ ಖಾಲಿ ಮಾಡುವುದು ಎಂದು ತಿಳಿಯದೆ ಹಲವರು ಇರುತ್ತಾರೆ. ಆದರೆ ಇಂದು ಆ ಸಮಸ್ಯೆಗೆ ಪರಿಹಾರವನ್ನು ನಾವು ನೀಡುತ್ತೇವೆ. ಸಾರಿನಲ್ಲಿ ಉಪ್ಪು ಜಾಸ್ತಿ ಆದರೆ ಅದಕ್ಕೆ ಒಂದಷ್ಟು ಆಲೂಗಡ್ಡೆಗಳನ್ನು ಸೇರಿಸಿ ಆಗ ಆಲೂಗಡ್ಡೆ ಉಪ್ಪನ್ನು ಹೇಳಿಕೊಳ್ಳುತ್ತದೆ. ಇದರಿಂದ ಸಾಂಬಾರಿನ ಉಪ್ಪು ಕಡಿಮೆಯಾಗುತ್ತದೆ. ಇನ್ನು ಮನೆಯಲ್ಲಿ ಆಲೂಗಡ್ಡೆ ಇಲ್ಲ ಎಂದಾದರೆ ನೀವು ಏನು ಮಾಡಬೇಕು ಎಂದು ನಾವಿಲ್ಲಿ ತಿಳಿಸಿದ್ದೇವೆ ಗಮನಿಸಿ.
ಬ್ರೆಡ್ ಪೀಸ್‌ಗಳನ್ನು ಹಾಕಿ
ಬ್ರೆಡ್‌ನ ಚೂರುಗಳನ್ನು ಹಾಕಿಯೂ ಉಪ್ಪು ಕಡಿಮೆ ಮಾಡಬಹುದು. ಬ್ರೆಡ್ ತುಣುಕುಗಳನ್ನು ಸಾರಿನಲ್ಲಿ ಹಾಕಬೇಕು. ಒಂದೆರಡು ನಿಮಿಷ ಅದನ್ನು ಹಾಗೇ ಬಿಡಿ. ನಂತರ ಅದು ಬಿಸಿ ಸಾರಾಗಿದ್ದರೆ ಪೂರ್ತಿ ಕರಗುತ್ತದೆ. ಇಲ್ಲವಾದರೆ ನೀವು ಆ ಪೀಸ್‌ಗಳನ್ನು ಎತ್ತಿ ಸಾರಿನಿಂದ ಹೊರಕ್ಕೆ ತೆಗೆಯಿರಿ. ಹೀಗೆ ಮಾಡಿದರೂ ಕೂಡ ಉಪ್ಪು ಕಡಿಮೆ ಆಗುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ.
ಸ್ವಲ್ಪ ಬೆಲ್ಲ ಅಥವಾ ಸಕ್ಕರೆ ಸೇರಿಸಿ
ಉಪ್ಪಿನ ಪದಾರ್ಥಗಳಿಗೆ ಸಿಹಿ ಬಿದ್ದರೆ ಅದರ ಉಪ್ಪು ಸ್ವಲ್ಪ ಕಡಿಮೆ ಆಗುತ್ತದೆ. ಸಿಹಿ ಜಾಸ್ತಿ ಆದ ಹಾಗೇ ಉಪ್ಪಿನ ಪ್ರಮಾಣ ಕಡಿಮೆ ಆಗುತ್ತದೆ. ಹೀಗಿರುವಾಗ ನೀವು ಸಿಹಿಯನ್ನು ಹಾಕಿ ಉಪ್ಪನ್ನು ಕಡಿಮೆ ಮಾಡಬಹುದು. ಸ್ವಲ್ಪ ಪ್ರಮಾಣದ ಸಕ್ಕರೆ, ಜೇನುತುಪ್ಪ ಅಥವಾ ಇನ್ನೊಂದು ಯಾವುದೇ ಸಿಹಿಕಾರಕ ವಸ್ತುವನ್ನು ಬಳಸಿದರೂ ತೊಂದರೆ ಇಲ್ಲ
ಡೈರಿ ಪದಾರ್ಥಗಳು: ಹಾಲು ಹಾಲಿನ ಕೆನೆ, ಮೊಸರು ಹೀಗೆ ನೀವು ಡೈರಿ ಪದಾರ್ಥಗಳನ್ನು ಹಾಕಿ ಸ್ವಲ್ಪ ಸಮಯ ಕುದಿಸಿ. ಅದು ಚೆನ್ನಾಗಿ ಸಾರಿನಲ್ಲಿ ಬೆರೆತು ಹೋದಾಗ ಉಪ್ಪಿನ ಪ್ರಮಾಣ ಕಡಿಮೆ ಆಗುತ್ತದೆ.
ಹುಳಿ ಪದಾರ್ಥ: ನಿಂಬೆ ಹಣ್ಣಿನ ರಸವನ್ನು ನೀವು ಬಳಕೆ ಮಾಡಬಹುದು. ಸಾರು, ಕರಿ, ಕೂರ್ಮಾ ಅದೇನೇ ಇರಲಿ. ನೀವು ಒಮ್ಮೆ ಅದಕ್ಕೆ ನಿಂಬು ರಸ ಹಾಕಿ ನೋಡಿ. ಆ ನಂತರ ಅದರ ರುಚಿಯನ್ನು ಒಮ್ಮೆ ಟೇಸ್ಟ್ ಮಾಡಿ. ಒಂದು ಬೇರೆ ರೀತಿಯ ರುಚಿಯನ್ನು ನೀಡಿ ಸ್ವಾಧ ಹೆಚ್ಚಿಸುವುದರ ಜೊತೆಗೆ ಉಪ್ಪನ್ನೂ ಸಹ ಕಡಿಮೆ ಮಾಡುತ್ತದೆ.
ಅವಲಕ್ಕಿ
ಅಕ್ಕಿ, ಬಾರ್ಲಿ ಅಥವಾ ಓಟ್ಸ್‌ನಂತಹ ಕೆಲವು ಪದಾರ್ಥಗಳು ಹೆಚ್ಚುವರಿ ಉಪ್ಪನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದೆ. ಹಾಗಾಗಿ ಈ ಹಿಟ್ಟುಗಳನ್ನು ಹಾಕಿರೂ ಉಪ್ಪಿನ ಪ್ರಮಾಣ ಕಡಿಮೆ ಆಗುತ್ತದೆ. ಅವಲಕ್ಕಿಯನ್ನೂ ಸಹ ಸೇರಿಸಬಹುದು. ಇದೂ ಉಪ್ಪನ್ನು ಕಡಿಮೆ ಮಾಡುತ್ತದೆ. ಆದರೆ ಒಂದು ಸಾರು ಅಥವಾ ಇನ್ಯಾವುದೇ ಪದಾರ್ಥವಾಗಿದ್ದರೆ ಅದು ದಪ್ಪಗಾಗುತ್ತದೆ.
ನೀವು ಸೂಪ್ ಮಾಡಿದ್ದು ಅದಕ್ಕೆ ಈ ಮೇಲಿನ ಪದಾರ್ಥಗಳನ್ನು ಸೇರಿಸಲು ಸಾಧ್ಯವಿಲ್ಲ ಎಂದರೆ ಹೆಚ್ಚು ತರಕಾರಿಗಳು, ಮಾಂಸ ಅಥವಾ ಇತರ ಪದಾರ್ಥಗಳನ್ನು ಸೇರಿಸಿ. ಆಗ ಅದರ ರುಚಿಯಲ್ಲಿ ಇನ್ನಷ್ಟು ಬದಲಾವಣೆ ಆಗುತ್ತದೆ.