ಅಜೀರ್ಣದ ಸಮಸ್ಯೆಗೆ ಮೊಸರು ದಿವ್ಯೌಷಧ: ಮೊಸರನ್ನು ಊಟಕ್ಕೆ ಹೇಗೆಲ್ಲಾ ಬಳಸಬಹುದು? ಇಲ್ಲಿದೆ ಬಗೆಬಗೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಜೀರ್ಣದ ಸಮಸ್ಯೆಗೆ ಮೊಸರು ದಿವ್ಯೌಷಧ: ಮೊಸರನ್ನು ಊಟಕ್ಕೆ ಹೇಗೆಲ್ಲಾ ಬಳಸಬಹುದು? ಇಲ್ಲಿದೆ ಬಗೆಬಗೆ ರೆಸಿಪಿ

ಅಜೀರ್ಣದ ಸಮಸ್ಯೆಗೆ ಮೊಸರು ದಿವ್ಯೌಷಧ: ಮೊಸರನ್ನು ಊಟಕ್ಕೆ ಹೇಗೆಲ್ಲಾ ಬಳಸಬಹುದು? ಇಲ್ಲಿದೆ ಬಗೆಬಗೆ ರೆಸಿಪಿ

ನಿಮಗೆ ಅಜೀರ್ಣ ಆದ ಸಂದರ್ಭದಲ್ಲಿ ಯಾವ ತಿಂಡಿಯನ್ನು ನೆನಸಿಕೊಂಡರೂ ಅದು ಬೇಡ ಎಂದೇ ಎನಿಸುತ್ತದೆ. ಇಂತಹ ಸಂದರ್ಭದಲ್ಲಿ ನೀವು ಮಾಡಬಹುದಾದ, ಮತ್ತು ನಿಮಗೆ ತುಂಬಾ ಇಷ್ಟವಾಗುವ ಕೆಲವು ರೆಸಿಪಿಗಳನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. ಮನೆಯಲ್ಲೇ ಟ್ರೈ ಮಾಡಿ.

ಮೊಸರಿನಿಂದ ಮಾಡಬಹುದಾದ ಹಲವು ರೆಸಿಪಿ ಇಲ್ಲಿದೆ
ಮೊಸರಿನಿಂದ ಮಾಡಬಹುದಾದ ಹಲವು ರೆಸಿಪಿ ಇಲ್ಲಿದೆ

ಕೆಲವೊಮ್ಮೆ ಮದುವೆ ಮನೆ ಅಥವಾ ವಿಶೇಷ ಕಾರ್ಯಕ್ರಮ ಇರುವಲ್ಲಿ ಊಟ ಮಾಡಿದರೆ ಸಾಕು ಮತ್ತೆ ರಾತ್ರಿ ಊಟ ಮಾಡುವುದಕ್ಕೆ ಮನಸೇ ಆಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನೀವು ಮಾಡಬಹುದಾದ ಕೆಲವು ರುಚಿಕರ ಮತ್ತು ಅಷ್ಟೇ ಆರೋಗ್ಯಕರವಾದ ಕೆಲವು ರೆಸಿಪಿಗಳನ್ನು ನಾವು ನಿಮಗಿಲ್ಲಿ ನೀಡಿದ್ದೇವೆ. ನೀವೂ ಸಹ ಇದನ್ನು ನಿಮ್ಮ ಮನೆಯಲ್ಲಿ ಟ್ರೈ ಮಾಡಿ. ಐದಕ್ಕೂ ಹೆಚ್ಚು ಬಗೆಯ ತಿಂಡಿ ಮಾಡಬಹುದು.

ಮೊಸರನ್ನ: ಇದೊಂದು ಸುಲಭವಾಗಿ ಮತ್ತು ಬೇಗ ಮಾಡಬಹುದಾದ ತಿಂಡಿ. ರಾತ್ರಿ ಮಾಡಿದ ಅನ್ನ ಇದ್ದರೆ ಅದಕ್ಕೆ ಮೊಸರನ್ನು ಹಾಕಿ ಒಂದಷ್ಟು ಸಾಸಿವೆ, ಜೀರಿಗೆ, ಇಂಗು ಮತ್ತು ಕರಿಬೇವು, ಹಸಿಮೆಣಸುಗಳನ್ನು ತೆಗೆದುಕೊಂಡು ಒಗ್ಗರಣೆ ಹಾಕಿ. ಅದಕ್ಕೆ ಉಪ್ಪು ಹಾಕಿ ತಿಂದರೆ ಆಯ್ತು.

ಸೌತೆ, ಪುದಿನಾ ರಾಯ್ತ: ಇನ್ನು ಮೊಸರಿಗೆ ಮಿಂಟ್‌ ಪ್ಲೇವರ್ ಬೇಕು ಎಂದೆನಿಸಿದರೆ, ನೀವು ಪುದಿನಾ ಎಲೆಗಳನ್ನು ಮಿಕ್ಸ್‌ ಮಾಡಿಕೊಂಡು ಮಜ್ಜಿಗೆ ಮಾಡಿಕೊಂಡು ಕುಡಿಯಬಹುದು. ಇಲ್ಲವಾದರೆ ದಪ್ಪನೆಯ ಮೊಸರಿಗೆ ಒಂದಷ್ಟು ಪುದಿನಾ ಎಲೆಗಳನ್ನು ಬಿಸಿ ಮಾಡಿ. ನಂತರ ಅದರ ಹಸಿವಾಸನೆ ಸ್ವಲ್ಪ ಪ್ರಮಾಣದಲ್ಲಿ ಬಿಟ್ಟ ನಂತರದಲ್ಲಿ ಮೊಸರಿಗೆ ಹಾಕಿ ಅಥವಾ ಮಿಕ್ಸಿಯಲ್ಲಿ ರುಬ್ಬಿದ ಮಿಶ್ರಣವನ್ನು ಹಾಕಿ, ಸೌತೆಕಾಯಿ ತುಂಡುಗಳಿಗೆ ಈ ಮೊಸರು ಮತ್ತು ಪುದೀನಾ ಮಿಕ್ಸ್‌ ಮಾಡಿದ ರಾಯ್ತವನ್ನು ಹಾಕಿಕೊಂಡು ತಿಂದರೆ ಬಹಳ ರುಚಿ.

ಕರ್ಡ್‌ ಸ್ಮೂಥಿ: ನೀವು ಸಕ್ಕರೆ ಮತ್ತು ಮೊಸರನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ ಯಾವುದಾದರೂ ಒಂದು ಹಣ್ಣಿನ ರಸವನ್ನು ಅಥವಾ ಹಣ್ಣಿನ ಚೂರುಗಳನ್ನು ಮಿಕ್ಸ್‌ ಮಾಡಿ ಸ್ವಲ್ಪ ಸಮಯದವರೆಗೆ ಫ್ರಿಡ್ಜ್‌ನಲ್ಲಿ ಇಟ್ಟು ನಂತರ ಅದಕ್ಕೆ ಚಿಯಾ ಸೀಡ್ಸ್‌ ಹಾಕಿಕೊಂಡು ಮೊಸರಿನ ಸ್ಮೂಥಿ ಮಾಡಿಕೊಂಡು ತಿನ್ನಬಹುದು.

ಇದನ್ನೂ ಓದಿ: ಈ ತರಕಾರಿ ಹಾಗೂ ಸೊಪ್ಪುಗಳನ್ನು ಎಂದಿಗೂ ಬೇಯಿಸದೆ ತಿನ್ನಬೇಡಿ; ಬರ್ಗರ್‌ ಇಷ್ಟಪಡುವವರಿಗಂತು ಇದರ ಬಗ್ಗೆ ತಿಳಿದಿರಲೇಬೇಕು

ಮೊಸರು ಮತ್ತು ಕಡಲೆ ಸಲಾಡ್: ಉಪ್ಪು , ನಿಂಬು, ಕಡಲೆ ಮತ್ತು ಮೊಸರು ಇವಿಷ್ಟನ್ನೂ ಸಹ ಮಿಕ್ಸ್‌ ಮಾಡಿಕೊಂಡರೆ ಕಡಲೆ ಸಲಾಡ್ ರೆಡಿ. ನೀವಿದನ್ನು ಮೊದಲೇ ಮಾಡಲು ಬಯಸಿದರೆ ಕಡಲೆ ಕಾಳುಗಳನ್ನು ನೆನೆಸಿಟ್ಟುಕೊಳ್ಳಬೇಕಾಗುತ್ತದೆ.

ಮೊಸರು ಮತ್ತು ಪಾಲಕ ತಂಬುಳಿ: ಮೊಸರಿಗೆ ಸ್ವಲ್ಪ ಪಾಲಕ್ ಕಟ್ ಮಾಡಿ ಅದನ್ನು ಒಂದು ಒಗ್ಗರಣೆ ಮಾಡಿ ಹಾಕಬೇಕು. ಒಗ್ಗರಣೆ ಮಾಡಲು, ನೀವು ಮೊದಲಿಗೆ ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಎಣ್ಣೆ, ಸಾಸಿವೆ, ಜೀರಿಗೆ, ಹಸಿಮೆಣಸು ಮತ್ತು ಕತ್ತರಿಸಿದ ಪಾಲಕ್ ಎಲೆಗಳನ್ನು ಹಾಕಿ ಹುರಿದು ಅವುಗಳನ್ನು ಮೊಸರಿಗೆ ಹಾಕಿದರೆ ಮೊಸರು ಮತ್ತು ಪಾಲಕ ತಂಬುಳಿ ರೆಡಿ.

ಮೊಸರು ಮತ್ತು ಹಣ್ಣಿನ ಮಿಶ್ರಣ: ಇದನ್ನೂ ತಿನ್ನಲು ಬಹಳ ಜನ ಇಷ್ಟಪಡುತ್ತಾರೆ. ಮೊಸರಿಗೆ ಕೆಲವು ಹಣ್ಣಿನ ತುಂಡುಗಳನ್ನು ಹಾಕಿಕೊಂಡು ಅದನ್ನು ಫ್ರಿಡ್ಜ್‌ನಲ್ಲಿ ಇಟ್ಟುಕೊಂಡು ತಿಂದರೆ ಚೆನ್ನ. ಬೇಕಿದ್ದರೆ ಸಕ್ಕರೆಯನ್ನೂ ಸೇರಿಸಬಹುದು.

ಬಿಟ್ರೂಟ್ ಮತ್ತು ಮೊಸರಿನ ಸಲಾಡ್: ಬ್ರಿಟ್ರೂಟ್‌ಗಳನ್ನು ಚೆನ್ನಾಗಿ ಚಿಕ್ಕದಾಗಿ ತುರಿಯಬೇಕು. ತುರಿದ ಚೂರುಗಳಿಗೆ ಮೊಸರು ಹಾಗೂ ಬ್ಲಾಕ್‌ಪೆಪ್ಪರ್ ಮತ್ತು ಉಪ್ಪು ಹಾಗೂ ಮೊಸರು ಸೇರಿಸಿಕೊಂಡು ತಿನ್ನಬಹುದು.

ಇದನ್ನೂ ಓದಿ: ಆಯುರ್ವೇದದ ಪ್ರಕಾರ ಈ ಆಹಾರಗಳನ್ನು ತಿಂದ ನಂತರ ತಪ್ಪಿಯೂ ನೀರು ಕುಡಿಯಬಾರದು, ಕರುಳಿನ ಸಮಸ್ಯೆಗಳು ಕಾಡಬಹುದು

Whats_app_banner