ಕನ್ನಡ ಸುದ್ದಿ  /  Lifestyle  /  Dark Circles Around The Eyes Remain After Makeup? Follow These Tips For Elimination

ಮೇಕಪ್‌ ನಂತರವೂ ಕಣ್ಣಿನ ಸುತ್ತಲಿನ ಕಲೆ ಉಳಿಯುತ್ತಿದೆಯೇ? ನಿವಾರಣೆಗೆ ಈ ತಂತ್ರಗಳನ್ನು ಅನುಸರಿಸಿ

ಕಣ್ಣಿನ ಸುತ್ತಲೂ ಕಪ್ಪು ಕಲೆ ಇರುವವರು ಮೇಕಪ್‌ ಮೂಲಕ ಅದನ್ನು ಮರೆ ಮಾಚುವ ಪ್ರಯತ್ನ ಮಾಡುತ್ತಾರೆ, ಆದರೆ ಕೆಲವೊಮ್ಮೆ ಮೇಕಪ್‌ನಿಂದ ಕೂಡ ಕಲೆಯನ್ನು ಮರೆ ಮಾಡಲು ಸಾಧ್ಯವಾಗಿರುವುದಿಲ್ಲ. ಇದಕ್ಕೆ ಈ ಟಿಪ್ಸ್‌ ಸಹಾಯ ಮಾಡಬಹುದು.

ಕಣ್ಣಿನ ಸುತ್ತಲಿನ ಕಲೆ
ಕಣ್ಣಿನ ಸುತ್ತಲಿನ ಕಲೆ

ತಂತ್ರಜ್ಞಾನದ ಬಳಕೆಯ ಪ್ರಮಾಣ ಹೆಚ್ಚುತ್ತಿರುವ ಕಾಲದಲ್ಲಿ ಕೆಲವೊಂದು ಸಮಸ್ಯೆಗಳೂ ಜೊತೆಯಾಗಿಯೇ ಬರುತ್ತಿವೆ. ಅತಿಯಾಗಿ ಟಿವಿ, ಮೊಬೈಲ್‌, ಕಂಪ್ಯೂಟರ್‌ ಬಳಕೆಯಿಂದ ಕಣ್ಣಿನ ತೊಂದರೆಗಳು ಹೆಚ್ಚುತ್ತಿವೆ. ಅತಿಯಾದ ಗ್ಯಾಜೆಟ್‌ಗಳ ಬಳಕೆ, ನಿದ್ದೆಯ ಕೊರತೆಯ ಕಾರಣದಿಂದ ಹಲವರಿಗೆ ಕಣ್ಣಿನ ಸುತ್ತಲಿನ ಕಪ್ಪಾಗಿರುತ್ತದೆ. ಇದು ಹಲವರಲ್ಲಿ ಹತಾಶೆಯ ಭಾವ ಮೂಡಲು ಕಾರಣವಾಗಬಹುದು. ಅಲ್ಲದೆ ಇದರಿಂದ ಸದಾ ದಣಿದು, ಸುಸ್ತಾದವರಂತೆ ಕಾಣಬಹುದು. ಇದನ್ನು ಮರೆ ಮಾಚಲು ಮೇಕಪ್‌ ಮೊರೆ ಹೋಗುತ್ತಾರೆ. ಆದರೂ ಈ ಕಪ್ಪು ಕಲೆಗಳು ಮರೆಯಾಗುವುದಿಲ್ಲ. ಮೇಕಪ್‌ ನಂತರ ಕಪ್ಪು ಕಲೆ ಕಾಣದಂತೆ ನಿವಾರಿಸಿ, ಕಣ್ಣಿನ ಹೊಳಪು ಹೆಚ್ಚಿಸಲು ಕೆಲವೊಂದು ಸರಳ ಉಪಾಯಗಳಿವೆ.

ಕಣ್ಣಿನ ಕ್ರೀಮ್‌ ಬಳಸಿ

ಪ್ರತಿದಿನ ರಾತ್ರಿ ಮಲಗುವ ಮುನ್ನ ನೈಟ್‌ ಕ್ರೀಮ್‌ ಹಚ್ಚಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿ. ಅವು ಸೌಮ್ಯರೂಪದ ಕ್ರೀಮ್‌ಗಳಾಗಿದ್ದು, ಕಣ್ಣಿನ ಸುತ್ತಲಿನ ಭಾಗದಲ್ಲಿ ಕಪ್ಪು ಕಲೆ ಉಂಟಾಗದಂತೆ ತಡೆಯುತ್ತವೆ. ಈ ಕ್ರೀಮ್‌ನಲ್ಲಿ ಹೈಲುರೋನಿಕ್ ಆಮ್ಲ, ವಿಟಮಿನ್‌ ಇ, ಸಿ ಹಾಗೂ ರೆಟಿನಾಲ್‌ ಅಂಶಗಳಿದ್ದು, ಇದು ಚರ್ಮಕ್ಕೆ ಚೈತನ್ಯ ನೀಡುತ್ತದೆ. ರಾತ್ರಿ ಸೀರಮ್‌ ಬಳಕೆಯ ನಂತರ ತೆಳ್ಳಗೆ ಕಣ್ಣಿನ ಸುತ್ತಲೂ ಕಣ್ಣಿನ ಕ್ರೀಮ್‌ ಹಚ್ಚಿ.

ಲೋಳೆಸರದ ಮಾಸ್ಕ್‌

ಲೋಳೆಸರದಲ್ಲಿ ತೇವಾಂಶ ಅಧಿಕವಾಗಿದೆ, ಅಲ್ಲದೆ ಚರ್ಮದ ಹಲವು ರೀತಿಯ ಸಮಸ್ಯೆಗಳಿಗೆ ಇದು ಮನೆಮದ್ದು. ರಾತ್ರಿ ಮಲಗುವ ಮೊದಲು ಲೋಳೆಸರದ ತಿರುಳನ್ನು ಕಣ್ಣಿನ ಸುತ್ತಲೂ ಹಚ್ಚಿ. ಇದರೊಂದಿಗೆ ಕೊಂಚ ಕಾಫಿ ಪೌಡರ್‌ ಕೂಡ ಬಳಸಬಹುದು. ಇದನ್ನು ವಾರದಲ್ಲಿ ಎರಡು ಅಥವಾ ಮೂರು ಬಾರಿ ಮಾಡಿದರೆ ಉತ್ತಮ. ಇದರಿಂದ ಕಪ್ಪುಕಲೆಗಳನ್ನು ಶಾಶ್ವತವಾಗಿ ದೂರ ಮಾಡಬಹುದು.

ಕನ್ಸೀಲರ್‌ಗಳು

ಇದು ತಕ್ಷಣಕ್ಕೆ ಕಪ್ಪು ಕಲೆಗಳನ್ನು ಮಾಯ ಮಾಡುವ ಅಂಶ ಹೊಂದಿದೆ. ನಿಮ್ಮ ಕಣ್ಣಿನ ಸುತ್ತಲೂ ಗಾಢವಾಗಿ ಕಪ್ಪಾಗಿದ್ದರೆ ಫೌಂಡೇಶನ್‌ ಹಚ್ಚಿಕೊಂಡ ನಂತರ ಕಿತ್ತಳೆ ಸಣ್ಣ ಕ್ರೀಮ್‌ ಅನ್ನು ಬಳಸಬಹುದು. ಅದಾಗ ಬಳಿಕ ಚರ್ಮಕ್ಕೆ ಹೊಂದುವ ಕನ್ಸೀಲರ್‌ ಬಳಸಬೇಕು. ಇದರಿಂದ ಕಪ್ಪು ಕಲೆಯನ್ನು ತಕ್ಷಣಕ್ಕೆ ಹಾಗೂ ತಾತ್ಕಾಲಿಕವಾಗಿ ಮರೆ ಮಾಡಬಹುದು.

ಮೇಕಪ್‌ಗೂ ಮುನ್ನ ತೇವಾಂಶ ಕಾಪಾಡಿಕೊಳ್ಳಿ

ಕಪ್ಪು ವರ್ತುಲಗಳನ್ನು ಮರೆಮಾಚಲು ನೀವು ಮೇಕ್ಅಪ್ ಮಾಡಿಕೊಳ್ಳುವ ಮೊದಲು ಕೆಲವು ಮನೆಮದ್ದುಗಳನ್ನು ಅನುಸರಿಸಬಹುದು. ಕಣ್ಣಿನ ಕೆಳ ಭಾಗ ಒಣಗಿದಂತಿದ್ದರೆ ಕೇವಲ ಮಾಡಿಕೊಂಡ ಮೇಲೆ ಮಬ್ಬಾಗಿ ಕಾಣಿಸಬಹುದು. ಇದನ್ನು ನಿವಾರಿಸಲು ಗ್ರೀನ್‌ ಟೀ ಬ್ಯಾಗ್‌ ಅನ್ನು ನೀರಿನಲ್ಲಿ ನೆನೆಸಿ ಕಣ್ಣಿಗೆ ಕೆಳಗೆ ಒಂದಿಷ್ಟು ಹೊತ್ತು ಇರಿಸಿಕೊಳ್ಳಬೇಕು. ಇದರಿಂದ ಕಣ್ಣಿನ ಸುತ್ತಲಿನ ಭಾಗ ಕಪ್ಪಾಗುವುದನ್ನೂ ತಡೆಯಬಹುದು ಜೊತೆಗೆ ಚರ್ಮದ ತೇವಾಂಶವನ್ನೂ ಹೆಚ್ಚಿಸಿಕೊಳ್ಳಬಹುದು. ಥಂಡಿ ಹಾಲನ್ನೂ ಕೂಡ ಬಳಸಬಹುದು.

ಸೌಂದರ್ಯಕ್ಕೆ ಸಂಬಂಧಿಸಿದ ಈ ಸ್ಟೋರಿಗಳನ್ನೂ ಓದಿ

ಒದ್ದೆ ಕೂದಲಿನೊಂದಿಗೆ ಮಲಗುವ ಅಭ್ಯಾಸವಿದ್ದರೆ ಇಂದೇ ತಪ್ಪಿಸಿ, ಇಲ್ಲವಾದರೆ ಈ ಸಮಸ್ಯೆಗಳು ಖಚಿತ!

ಉತ್ತಮ ಆರೋಗ್ಯಕ್ಕೆ ಅಷ್ಟೇ ಉತ್ತಮ ನಿದ್ರೆ ಕೂಡಾ ಅವಶ್ಯಕ. ಕೆಲಸದ ಒತ್ತಡ, ಸುಸ್ತು ಕಾಡುವಾಗ ಒಮ್ಮೆ ಸ್ನಾನ ಮಾಡಿ ಮಲಗಿದರೆ ಒಳ್ಳೆ ನಿದ್ರೆ ಬರುತ್ತದೆ. ಆದರೆ ಕೆಲವರು ತಲೆಗೆ ಸ್ನಾನ ಮಾಡಿದ ನಂತರ ಕೂದಲನ್ನು ಒಣಗಿಸದೆ ಹಾಗೇ ಮಲಗುತ್ತಾರೆ. ನೀವು ಈ ರೀತಿಯ ತಪ್ಪುಗಳನ್ನು ಮಾಡಿದರೆ ಶೀತದ ಜೊತೆಗೆ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಅಡುಗೆಮನೆಯಲ್ಲಿದೆ ಚರ್ಮ, ಕೂದಲಿನ ಅಂದ; ಬೇಸಿಗೆಯಲ್ಲಿ ಅಂದ ಹೆಚ್ಚಿಸುವ ಮನೆಮದ್ದುಗಳಿವು

ಬೇಸಿಗೆಯಲ್ಲಿ ಚರ್ಮ, ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲು. ಆದರೆ ಅಡುಗೆಮನೆಯಲ್ಲೇ ಇರುವ ಕೆಲವು ವಸ್ತುಗಳು ಇವುಗಳ ಅಂದ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಇದನ್ನು ನೀವೂ ಪ್ರಯತ್ನಿಸಿ ನೋಡಿ.

ವಿಭಾಗ