No Bra Day 2024: ಇಂದು ಬ್ರಾ ಧರಿಸೋದು ಬೇಡ, ಆರಾಮವಾಗಿರಿ; ಸ್ತನಕ್ಯಾನ್ಸರ್‌ ಜಾಗೃತಿ, ಸ್ವಯಂ ತಪಾಸಣೆ, ಬಾಡಿ ಪಾಸಿಟಿವಿಟಿಗೆ ಪ್ರೋತ್ಸಾಹ
ಕನ್ನಡ ಸುದ್ದಿ  /  ಜೀವನಶೈಲಿ  /  No Bra Day 2024: ಇಂದು ಬ್ರಾ ಧರಿಸೋದು ಬೇಡ, ಆರಾಮವಾಗಿರಿ; ಸ್ತನಕ್ಯಾನ್ಸರ್‌ ಜಾಗೃತಿ, ಸ್ವಯಂ ತಪಾಸಣೆ, ಬಾಡಿ ಪಾಸಿಟಿವಿಟಿಗೆ ಪ್ರೋತ್ಸಾಹ

No Bra Day 2024: ಇಂದು ಬ್ರಾ ಧರಿಸೋದು ಬೇಡ, ಆರಾಮವಾಗಿರಿ; ಸ್ತನಕ್ಯಾನ್ಸರ್‌ ಜಾಗೃತಿ, ಸ್ವಯಂ ತಪಾಸಣೆ, ಬಾಡಿ ಪಾಸಿಟಿವಿಟಿಗೆ ಪ್ರೋತ್ಸಾಹ

No Bra Day 2024: ಪ್ರತಿವರ್ಷ ಅಕ್ಟೋಬರ್‌ 13ರಂದು ನ್ಯಾಷನಲ್‌ ನೋ ಬ್ರಾ ಡೇ ಆಚರಿಸಲಾಗುತ್ತದೆ. ಮನೆ ಇರಲಿ, ಆಫೀಸ್‌ ಆಗಿರಲಿ, ಇಂದು ಬ್ರಾ ಧರಿಸಬೇಡಿ, ಈ ದಿನ ಸ್ತನ ಕ್ಯಾನ್ಸರ್‌ ಜಾಗೃತಿ, ದೇಹದ ಕುರಿತು ಸಕಾರಾತ್ಮಕ ಚಿಂತನೆ, ಸ್ವಯಂ ತಪಾಸಣೆಗೆ ಪ್ರೋತ್ಸಾಹ ನೀಡಲಾಗುತ್ತದೆ.

ಪ್ರತಿವರ್ಷ ಅಕ್ಟೋಬರ್‌ 13ರಂದು ನ್ಯಾಷನಲ್‌ ನೋ ಬ್ರಾ ಡೇ ಆಚರಿಸಲಾಗುತ್ತದೆ.
ಪ್ರತಿವರ್ಷ ಅಕ್ಟೋಬರ್‌ 13ರಂದು ನ್ಯಾಷನಲ್‌ ನೋ ಬ್ರಾ ಡೇ ಆಚರಿಸಲಾಗುತ್ತದೆ.

October 13 National No Bra Day: ಮನೆ ಇರಲಿ, ಆಫೀಸ್‌ ಇರಲಿ, ಅಕ್ಟೋಬರ್‌ 13ರಂದು ಬ್ರಾ ಧರಿಸಬೇಡಿ. ಏಕೆಂದರೆ, ಪ್ರತಿವರ್ಷ ಈ ದಿನ ರಾಷ್ಟ್ರೀಯ ನೋ ಬ್ರಾ ಡೇ ಆಚರಿಸಲಾಗುತ್ತದೆ. ಬ್ರಾ ಎನ್ನುವುದು brassiere ಎಂಬ ಪದದ ಸಂಕ್ಷಿಪ್ತರೂಪ. ಕನ್ನಡದಲ್ಲಿ ಇದನ್ನು ಸ್ತನಬಂಧಿ, ಮೊಲೆಕಟ್ಟು ಕರೆಯಲಾಗುತ್ತಿದ್ದರೂ ಎಲ್ಲಾ ಭಾಷೆಗಳಲ್ಲೂ "ಬ್ರಾ" ಎಂದೇ ಕರೆಯುತ್ತಾರೆ. ಪ್ರತಿವರ್ಷ ಈ ದಿನವನ್ನು ರಾಷ್ಟ್ರೀಯ ಬ್ರಾ ಬೇಡ ದಿನ ಎಂದು ಆಚರಿಸುತ್ತಾರೆ ಎಂದು ಮೊದಲ ಬಾರಿಗೆ ನಿಮಗೆ ಕೇಳಿದಾಗ ಶೀ, ಛೀ ಥೂ ಎನ್ನಬೇಡಿ. ಈ ದಿನಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಕ್ಯಾನ್ಸರ್‌ ಜಾಗೃತಿ ತಿಂಗಳಾದ ಅಕ್ಟೋಬರ್‌ನಲ್ಲಿ ಈ ದಿನವನ್ನು ವಿಶೇಷವಾಗಿ ಸ್ತನ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸಲು ಮೀಸಲಿಡಲಾಗಿದೆ.

ನ್ಯಾಷನಲ್‌ನೋ ಬ್ರಾ ಡೇ 2024 ಎನ್ನುವುದು ಸ್ತನ ಆರೋಗ್ಯ, ಸ್ತನ ಕ್ಯಾನ್ಸರ್‌, ಬಾಡಿ ಪಾಸಿಟಿವಿಟಿ ಅಥವಾ ದೇಹದ ಕುರಿತು ಸಕಾರಾತ್ಮಕತೆ ಕುರಿತು ಜಾಗೃತಿ ಮೂಡಿಸುವ ದಿನವಾಗಿದೆ. ಪ್ರತಿವರ್ಷ ಈ ದಿನವನ್ನು ಜಗತ್ತಿನ ವಿವಿಧ ದೇಶಗಳಲ್ಲಿ ಆಚರಿಸಲಾಗುತ್ತದೆ. ಇದು ಕೇವಲ ಒಳ ಉಡುಪಿನಿಂದ ಸ್ವಾತಂತ್ರ್ಯ ಹೊಂದುವ ದಿನವಲ್ಲ, ಮಹಿಳೆಯರು, ಹೆಣ್ಣು ಮಕ್ಕಳು ತಮ್ಮ ಸ್ತನವನ್ನು ಸ್ವಯಂ ತಪಾಸಣೆ ಮಾಡುವ ಮೂಲಕ ಯಾವುದೇ ಸ್ತನ ಕ್ಯಾನ್ಸರ್‌ ಲಕ್ಷಣಗಳು ಇಲ್ಲವೆಂದು ಖಾತರಿಪಡಿಸಿಕೊಳ್ಳಲು ಮೀಸಲಿಟ್ಟ ದಿನವಾಗಿದೆ. ಈ ದಿನ ಸ್ತನ ಆರೋಗ್ಯ ಮತ್ತು ದೇಹದ ಕುರಿತು ಕಾನ್ಫಿಡೆನ್ಸ್‌ ಹೆಚ್ಚಿಸುವ ಕುರಿತು ಚರ್ಚಿಸುವ ಮತ್ತು ಅರಿವು ಮೂಡಿಸಿಕೊಳ್ಳುವ ದಿನವಾಗಿದೆ. ಜತೆಗೆ, ಸ್ತನ ಕ್ಯಾನ್ಸರ್‌ ಸಂತ್ರಸ್ತರಿಗೆ ಬೆಂಬಲ ನೀಡುವ ದಿನವೂ ಹೌದು. ಆರಂಭ ಹಂತದಲ್ಲಿಯೇ ಸ್ತನ ಕ್ಯಾನ್ಸರ್‌ ಗುರುತಿಸಿಕೊಳ್ಳುವುದು ಅವಶ್ಯವಾಗಿದೆ. ಈ ದಿನದ ಆರಂಭ, ಇತಿಹಾಸ, ಮಹತ್ವ ಸೇರಿದಂತೆ ಹೆಚ್ಚಿನ ಅಂಶಗಳನ್ನು ತಿಳಿದುಕೊಳ್ಳೋಣ.

ಏನಿದು ನ್ಯಾಷನಲ್ ನೋ ಬ್ರಾ ಡೇ 2024?

ಸ್ತನ ಆರೋಗ್ಯ ಜಾಗೃತಿ ಮತ್ತು ದೇಹದ ಕುರಿತು ಸಕಾರಾತ್ಮಕತೆಯ ಸಂಕೇತವಾಗಿ ಬ್ರಾ ಧರಿಸಬೇಡಿ ಎಂದು ಮಹಿಳೆಯರನ್ನು ಪ್ರೋತ್ಸಾಹಿಸುವ ದಿನ ಇದಾಗಿದೆ. ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್‌ ಪತ್ತೆ ಹಚ್ಚಲು ತಮ್ಮ ಸ್ತನವನ್ನು ತಾವೇ ಸ್ವತಃ ತಪಾಸಣೆ ಮಾಡುವುದು ಪ್ರಮುಖ ಹಂತವಾಗಿದೆ. ಇದೇ ದಿನ ಸ್ತನ ಕ್ಯಾನ್ಸರ್‌ ಹೊಂದಿರುವವರಿಗೆ ಮತ್ತು ಸ್ತನ ಕ್ಯಾನ್ಸರ್‌ ಪೀಡಿತ ಕುಟುಂಬಕ್ಕೆ ಬೆಂಬಲ ನೀಡಲು ಜನರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಜತೆಗೆ, ಸ್ತನ ಕ್ಯಾನ್ಸರ್‌ ಸಂಶೋಧನೆಗೆ ಮತ್ತು ರೋಗಿಗಳ ನೆರವಿಗೆ ಬೆಂಬಲ ಸಂಸ್ಥೆಗಳಿಗಾಗಿ ಫಂಡ್‌ ಸಂಗ್ರಹಿಸಲಾಗುತ್ತದೆ.

ಸ್ತನ ಕ್ಯಾನ್ಸರ್‌ ಜಾಗೃತಿ
ಸ್ತನ ಕ್ಯಾನ್ಸರ್‌ ಜಾಗೃತಿ

2024ರಲ್ಲಿ ರಾಷ್ಟ್ರೀಯ ಬ್ರಾ ದಿನ ಯಾವಾಗ?

ಈ ಬಾರಿ ಭಾನುವಾರ (ಅಕ್ಟೋಬರ್‌ 13) ನ್ಯಾಷನಲ್‌ ನೋ ಬ್ರಾ ಡೇ ಬಂದಿದೆ. ಮನೆಯಿರಲಿ, ಆಫೀಸ್‌ ಇರಲಿ, ಬಿಸ್ನೆಸ್‌ ಸ್ಥಳವಾಗಿರಲಿ, ಶಾಲೆಯಿರಲಿ, ಕಾಲೇಜಿರಲಿ ಇಂದು ಬ್ರಾ ಬೇಡ ಎಂದು ಮಹಿಳೆಯರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಈ ದಿನ ಆರಾಮವಾಗಿರಿ, ಸ್ವಯಂ ತಪಾಸಣೆ ಮಾಡಿಕೊಳ್ಳಿ, ಸ್ತನದ ಆರೋಗ್ಯದ ಕುರಿತು ಕಾಳಜಿ ವಹಿಸಿ, ಯಾವುದೇ ಮಡಿವಂತಿಕೆ, ಹಿಂಜರಿಕೆ ಬೇಡ. ನಿಮ್ಮ ದೇಹವಿದು, ಗೌರವಿಸಿಕೊಳ್ಳಿ, ಪ್ರೀತಿಯಿಂದ ನೋಡಿಕೊಳ್ಳಿ ಎಂದು ಈ ದಿನ ದೇಹದ ಕುರಿತು ಸಕಾರಾತ್ಮಕ ಅಭಿಪ್ರಾಯ ಮೂಡಿಸಲು ಪ್ರಯತ್ನಿಸಲಾಗುತ್ತದೆ.

ನೋ ಬ್ರಾ ದಿನದ ಇತಿಹಾಸ

ಮೊದಲ ಬಾರಿಗೆ ಈ ದಿನವನ್ನು 2021ರ ಅಕ್ಟೋಬರ್‌ 19ರಂದು ಆವರಿಸಲಾಯಿತು. ಟೊರೊಟೊಂದಲ್ಲಿ ಪ್ಲಾಸ್ಟಿಕ್‌ ಸರ್ಜನ್‌ ಡಾ. ಮೈಕೆಲ್‌ ಬ್ರೌನ್‌ ಈ ದಿನವನ್ನು ಸಂಘಟಿಸಿದರು. ಟೊರೊಂಟೊ ಜನರಲ್‌ ಹಾಸ್ಪಿಟಲ್‌ ಮತ್ತು ವುಮೆನ್ಸ್‌ ಕಾಲೇಜ್‌ ಹಾಸ್ಪಿಟಲ್‌ನಲ್ಲಿ ಮೊದಲ ಬಾರಿಗೆ ಈ ದಿನ ಆಚರಿಸಲಾಯಿತು. ಅಂದಹಾಗೆ, ಡಾಕ್ಟರ್‌ ಮೈಕೆಲ್‌ ಬ್ರೌನ್‌ ಅವರು ಬ್ರೀಸ್ಟ್‌ ರಿಕನ್‌ಸ್ಟ್ರಕ್ಷನ್‌ ಅವರ್ನೆಸ್‌ (ಸ್ತನ ಮರುನಿರ್ಮಾಣ ಜಾಗೃತಿ) ದಿನವಾಗಿ ಈ ದಿವನ್ನು ಆಚರಿಸಲಾಯಿತು. 2012ರಲ್ಲಿ ಈ ದಿನ ಅಮೆರಿಕದ್ಯಾಂತ ಹರಡಿತು. ಈಗ ಜಗತ್ತಿನ ಬಹುತೇಕ ದೇಶಗಳಲ್ಲಿ ಮಹಿಳೆಯರು ನೋ ಬ್ರಾ ಡೇ ಆಚರಿಸುತ್ತಾರೆ.

ಬ್ರಾರಹಿತ ದಿನ ಆಚರಣೆ ಹೇಗೆ?

  1. ಯಾವುದೇ ಹಿಂಜರಿಕೆ, ನಾಚಿಕೆ ಬೇಡ, ಬ್ರಾರಹಿತವಾಗಿ ಉಡುಪು ಧರಿಸಿ. ಆರಾಮವಾಗಿ ಹೋಗಿ, ಮುಜುಗರಬೇಡ. ಈ ಮೂಲಕ ಜಗತ್ತಿನಾದ್ಯಂತ ಸ್ತನ ಕ್ಯಾನ್ಸರ್‌ ಪೀಡತರಿಗೆ ಬೆಂಬಲ ನೀಡಿ.
  2. ಬ್ರಾ ಧರಿಸದೆ ಇರಲು ಆಗದು ಎಂದಾದರೆ ಪಿಂಕ್‌ರಿಬ್ಬನ್‌ ಧರಿಸಿ ಈ ದಿನಕ್ಕೆ ಬೆಂಬಲ ನೀಡಿ.
  3. ಸ್ತನ ಕ್ಯಾನ್ಸರ್‌ ಚಾರಿಟಿಗಳಿಗೆ ಹಣಕಾಸು ನೆರವು ನೀಡಿ.
  4. ನಿಮ್ಮ ಪರಿಚಯದ ಹೆಣ್ಣುಮಕ್ಕಳಿಗೆ, ಮಹಿಳೆಯರಿಗೆ ಸ್ತನ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸಿ. ಈ ಆರೋಗ್ಯ ವಿಚಾರದ ಕುರಿತು ಮಾತನಾಡಲು ಮುಜುಗರ ಬೇಡ.
  5. ಇಂದು ಸ್ತನ ಸ್ವಯಂ ತಪಾಸಣೆ ಮಾಡಿಕೊಳ್ಳಿ. ಇನ್ನು ಮುಂದೆ ಪ್ರತಿತಿಂಗಳು ಒಂದು ದಿನ ತಪ್ಪದೇ ಸ್ವಯಂ ಸ್ತನ ತಪಾಸಣೆ ಮಾಡಿಕೊಳ್ಳುವುದಾಗಿ ನಿರ್ಧಾರ ಕೈಗೊಳ್ಳಿ, ಅದಕ್ಕಾಗಿ ರಿಮೈಂಡರ್‌ ಇಟ್ಟುಕೊಳ್ಳಿ.
  6. ಹೊಸ ಬ್ರಾ ಖರೀದಿಸಿ, ಉತ್ತಮ ಗುಣಮಟ್ಟದ, ಸ್ತನಗಳಿಗೆ ಸರಿಯಾಗಿ ಹೊಂದುವ (ಅತಿ ಬಿಗಿಬೇಡ), ಸ್ಮೂತಾದ ಬ್ರಾ ಖರೀದಿಸಿ.
  7. ಸ್ತನ ಕ್ಯಾನ್ಸರ್‌ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳಿ. ವೈದ್ಯರಲ್ಲಿ ಸ್ತನ ಕ್ಯಾನ್ಸರ್‌ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳಿ.

ಇದನ್ನೂ ಓದಿ: Breast Cancer: ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್‌; ಮರುಕಳಿಸುವ ರೋಗಲಕ್ಷಣದ ಬಗ್ಗೆ ವೈದ್ಯರೊಂದಿಗೆ ಚರ್ಚಿಸಲು ಮರೆಯದಿರಿ

Whats_app_banner