ನಿಮ್ಮಿಷ್ಟಕ್ಕಾಗಿ ಸಂಪೂರ್ಣ ಒಂದು ದಿನ ಮೀಸಲಿಡಿ, ಬೇರೇನೂ ಮಾಡಬೇಡಿ - ರೆಕ್ಕೆ ಬಲಿತ ಹಕ್ಕಿಯಂತೆ ಹಾರಾಡಿ-dedicate a whole day to yourself do nothing else fly like a winged bird ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮಿಷ್ಟಕ್ಕಾಗಿ ಸಂಪೂರ್ಣ ಒಂದು ದಿನ ಮೀಸಲಿಡಿ, ಬೇರೇನೂ ಮಾಡಬೇಡಿ - ರೆಕ್ಕೆ ಬಲಿತ ಹಕ್ಕಿಯಂತೆ ಹಾರಾಡಿ

ನಿಮ್ಮಿಷ್ಟಕ್ಕಾಗಿ ಸಂಪೂರ್ಣ ಒಂದು ದಿನ ಮೀಸಲಿಡಿ, ಬೇರೇನೂ ಮಾಡಬೇಡಿ - ರೆಕ್ಕೆ ಬಲಿತ ಹಕ್ಕಿಯಂತೆ ಹಾರಾಡಿ

ಯಾರೇ ಆಗಿರಲಿ ಯಾವಾಗಲೂ ಕೆಲಸ ಕಾರ್ಯ ಎಂದು ಮೈಮರೆಯುವ ಬದಲು ತಮ್ಮ ಆರೈಕೆಯನ್ನು ತಾವು ಮಾಡಿಕೊಳ್ಳಬೇಕು. ಇಲ್ಲವಾದರೆ ನೀವು ನಿಮ್ಮ ಶರೀರ ಹಾಗೂ ಮನಸು ಎರಡಕ್ಕೂ ಮೋಸ ಮಾಡಿದಂತೆ ಆಗುತ್ತದೆ. ಇರುವ ಒಂದು ಜೀವನವನ್ನು ನಿಮ್ಮ ಕೈಯ್ಯಾರ ಹಾಳು ಮಾಡಿಕೊಂಡಂತೆ ಆಗುತ್ತದೆ.

ಸೆಲ್ಫಕೇರ್ ತುಂಬಾ ಮುಖ್ಯ
ಸೆಲ್ಫಕೇರ್ ತುಂಬಾ ಮುಖ್ಯ

ಒಮ್ಮೆ ನೀವೇ ನಿಮ್ಮನ್ನು ಪ್ರಶ್ನೆ ಮಾಡಿಕೊಳ್ಳಿ. ನೀವು ನಿಮ್ಮನ್ನು ಎಷ್ಟು ಕೇರ್ ಮಾಡಿದ್ದೀರಾ ಎಂದು. ಆಗ ನಿಮಗೇ ಉತ್ತರ ಸಿಗುತ್ತದೆ. ನಿಮಗಾಗಿ ನೀವು ಏನು ಮಾಡಿಕೊಳ್ಳುತ್ತಾ ಇದ್ದೀರಾ ಎಂದು. ಸೆಲ್ಪ್‌ಲವ್ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ತಮಗಾಗಿ ಸಮಯ ನೀಡಿಕೊಳ್ಳಲು ಈ ಒತ್ತಡದ ದಿನಗಳಲ್ಲಿ ಯಾರಿಗೂ ಸಾಧ್ಯವಿಲ್ಲ. ಆದರೆ ಅವಶ್ಯವಾಗಿ ಒತ್ತಡವನ್ನು ಕಡಿಮೆ ಮಾಡಿಕೊಂಡು ತಮ್ಮ ಆರೈಕೆಯನ್ನು ತಾವು ಮಾಡಿಕೊಳ್ಳಲೇಬೇಕು. ಜೀವನದಲ್ಲಿ ಪ್ರತಿದಿನ ಹಲವಾರು ರೀತಿಯ ಆಲೋಚನೆಗಳು ಮತ್ತು ಕಾರ್ಯಗಳು ಇರುತ್ತವೆ. ಇದೆಲ್ಲದರ ನಡುವೆಯೂ ನೀವು ನಿಮ್ಮನ್ನು ನೋಡಿಕೊಳ್ಳುತ್ತಿದ್ದೀರಾ? ಸ್ವಯಂ ಕಾಳಜಿ ಮಾಡಿಕೊಳ್ಳುತ್ತಿದ್ದೀರಾ ಎಂದು ಆಲೋಚನೆ ಮಾಡಿಕೊಳ್ಳಿ.

ಚಟುವಟಿಕೆ

ವಿವಿಧ ಚಟುವಟಿಕೆಗಳನ್ನು ಮಾಡುವ ಮೂಲಕ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ನೋಡಿಕೊಳ್ಳುವುದು ಸ್ವಯಂ-ಆರೈಕೆಯಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಅವಶ್ಯಕ. ಇದು ತೀವ್ರವಾದ ಒತ್ತಡ ಮತ್ತು ಇತರ ನಕಾರಾತ್ಮಕ ಪರಿಣಾಮಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಮಗಾಗಿ ಸಮಯ ಮಾಡಿಕೊಳ್ಳಿ: ನಿಮ್ಮ ಮತ್ತು ನಿಮ್ಮ ಅಗತ್ಯಗಳ ಮೇಲೆ ಕೇಂದ್ರೀಕರಿಸಲು ಪ್ರತಿದಿನ ಕೆಲವು ನಿಮಿಷಗಳನ್ನು ತೆಗೆದುಕೊಳ್ಳಿ. ಅದು ಬೆಳಗಿನ ಧ್ಯಾನದ ಅವಧಿಯಾಗಿರಲಿ ಅಥವಾ ಮಲಗುವ ಮುನ್ನ ಸ್ನಾನವಾಗಿರಲಿ, ಅದು ನಿಮಗಾಗಿ ನೀವು ಮಾಡುವ ಯಾವುದಾದರೂ ಒಂದು ಕೇರಿಂಗ್ ಆಗಿರಬೇಕು. ಮೈ ಕೈ ಗಳಿಗೆ ಎಣ್ಣೆ ಹಚ್ಚಿಕೊಳ್ಳುವುದೂ ಸಹ ಆಗಿರಬಹುದು.

ನಿದ್ರೆಗೆ ಆದ್ಯತೆ ನೀಡಿ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ಪ್ರತಿ ರಾತ್ರಿ 7-8 ಗಂಟೆಗಳ ನಿದ್ದೆ ಮಾಡಿ.

ನಿಯಮಿತವಾಗಿ ವ್ಯಾಯಾಮ ಮಾಡಿ: ನಿಯಮಿತ ವ್ಯಾಯಾಮವು ಒತ್ತಡವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಂದು ಸಣ್ಣ ನಡಿಗೆ ಅಥವಾ ಕೆಲವು ನಿಮಿಷಗಳ ಸ್ಟ್ರೆಚಿಂಗ್ ಕೂಡ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಹುದು. ದಿನವೂ ವ್ಯಾಯಾಮ ಮಾಡಿ ನಿಮ್ಮ ಶಕ್ತಿ, ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಫಿಟ್ ಆಗಿರಿ.

ನಿಮ್ಮಿಷ್ಟದ ಸಿನಿಮಾ ನೋಡಿ: ನಿಮಗೆ ಯಾವ ರೀತಿಯ ಸಿನಿಮಾ ಇಷ್ಟ ಎಂದು ಆ ರೀತಿಯ ಸಿನಿಮಾವನ್ನೇ ನೋಡಿ. ಫ್ರೆಂಡ್ಸ್‌ ಜೊತೆ ಸೇರಿ. ಪಾರ್ಟಿ ಮಾಡಿ, ಹಳೆ ಕಾಲದ ಮಾತುಗಳನ್ನು ನೆನಪುಗಳನ್ನು ಮರಳಿ ತನ್ನಿ. ಎಂದು ಭೇಟಿ ಆಗದೇ ಇರುವವರನ್ನೆಲ್ಲ ಕಾಲ್ ಮಾಡಿಯಾದರೂ ಮಾತಾಡಿಸಿ.

ಚೆನ್ನಾಗಿ ತಿನ್ನಿರಿ: ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಶಕ್ತಿಯ ಮಟ್ಟ ಮತ್ತು ಮನಸ್ಥಿತಿ ಸುಧಾರಿಸುತ್ತದೆ. ಪೌಷ್ಠಿಕಾಂಶದ ಆಹಾರಗಳ ಮೇಲೆ ಕೇಂದ್ರೀಕರಿಸಿ. ನಿಮಗಿಷ್ಟ ಬಂದ ತಿಂಡಿಯನ್ನೇ ಆಯ್ಕೆ ಮಾಡಿಕೊಂಡು ತಿನ್ನಿ. ನೀವೇ ನಿಮಗಾಗಿ ಹೇಗೆ ಬೇಕೋ ಹಾಗೆ ರುಚಿಯಾಗಿ ಅಡುಗೆ ಮಾಡಿಕೊಳ್ಳಿ.

mysore-dasara_Entry_Point