Deepavali 2023: ಈ ಅಂಶಗಳನ್ನು ಪಾಲಿಸಿದರೆ ದೀಪಾವಳಿಯಂದು ನಿಮ್ಮ ಮನೆಗೆ ಬರುವ ಲಕ್ಷ್ಮೀ ನಿಮ್ಮೊಂದಿಗೆ ಶಾಶ್ವತವಾಗಿ ನೆಲೆಸುತ್ತಾಳೆ
Deepavali 2023: ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆ ಬಹಳ ಮುಖ್ಯ. ಇದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಹಾಕಿ. ಅಥವಾ ಹೊರಗಿನಿಂದ ತಂದ ಸ್ವಸ್ತಿಕ ಚಿಹ್ನೆಯ ಸ್ಟಿಕ್ಕರ್ ಅಂಟಿಸಿ. ಇದು ಆ ಮನೆಗೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.
Deepavali 2023: ದೀಪಾವಳಿ ಹಬ್ಬದಂದು ಇಡೀ ದೇಶವೇ ಹಣತೆಗಳ ಬೆಳಕಿನಿಂದ ಪ್ರಜ್ವಲಿಸುತ್ತದೆ. ಈ ದಿನ ಧನಲಕ್ಷ್ಮಿ ಪೂಜೆ ಮಾಡುವ ಜನರು ಲಕ್ಷ್ಮಿಯು ನಮ್ಮ ಮನೆಗಳಲ್ಲಿ ಶಾಶ್ವತವಾಗಿ ನೆಲೆಸಲಿ, ನಮ್ಮ ಎಲ್ಲಾ ಆಸೆಗಳೂ ಈಡೇರಲಿ, ನಮ್ಮ ಸಮಸ್ಯೆಗಳು ಪರಿಹಾರವಾಗಲಿ ಎಂದು ಪ್ರಾರ್ಥಿಸುತ್ತಾರೆ. ಆದರೆ ದೇವರ ಪೂಜೆ ಮಾಡುವ ಭರದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆ ಪರಿಹಾರವಾಗುವುದಕ್ಕಿಂತ ಹೆಚ್ಚಾಗುತ್ತದೆ.
ದೀಪಾವಳಿ ದಿನ ನೀವು ತಪ್ಪದೆ ಈ ಕೆಲಸಗಳನ್ನು ಮಾಡಿದರೆ ಲಕ್ಷ್ಮಿ ದೇವಿಯು ಖಂಡಿತ ನಿಮ್ಮ ಮನೆಯನ್ನು ಪ್ರವೇಶಿಸಿ ಶಾಶ್ವತವಾಗಿ ನಿಮ್ಮೊಂದಿಗೆ ನೆಲೆಸುತ್ತಾಳೆ.
1. ದೀಪಾವಳಿಗೆ ಒಂದೆರಡು ದಿನಗಳ ಮುನ್ನವೇ ನಿಮ್ಮ ಮನೆಯನ್ನು ಸ್ವಚ್ಛಗೊಳಿಸಿ. ಮನೆಯ ಯಾವುದೇ ಮೂಲೆಯಲ್ಲಿ ಕಸ, ಜೇಡಗಳು ಇಲ್ಲದಂತೆ ನೋಡಿಕೊಳ್ಳಿ. ಎಲ್ಲೆಂದರಲ್ಲಿ ಕಸ ಹಾಕಬೇಡಿ. ಮನೆಯಲ್ಲಿ ಮುರಿದ ವಸ್ತುಗಳು, ಹಾಳಾದ ಗಡಿಯಾರ, ಪೇಪರ್‌ಗಳ ಬಂಡಲ್‌ಗಳನ್ನು ವಿಲೇವಾರಿ ಮಾಡಿ. ಆಹಾರವನ್ನು ಉಳಿಸಬೇಡಿ ಹಾಗೂ ಕೆಡದಂತೆ ನೋಡಿಕೊಳ್ಳಿ. ದೇವರ ಮೂರ್ತಿ, ಫೋಟೋಗಳು, ದೇವರ ಕೋಣೆಯನ್ನೂ ಸ್ವಚ್ಛಗೊಳಿಸಿ. ಈಶಾನ್ಯ ಮೂಲೆಯಲ್ಲಿ ದೇವರನ್ನು ಇರಿಸಿ. ಎಲ್ಲಾ ಸ್ವಚ್ಛವಾದ ನಂತರ ಗೋಮೂತ್ರವನ್ನು ಮನೆಯ ಎಲ್ಲಾ ಕಡೆ ಪ್ರೋಕ್ಷಣೆ ಮಾಡಿ.
2. ದೀಪಾವಳಿಯಂದು ನಿಮ್ಮ ಮನೆಯ ಯಾವ ಮೂಲೆಯೂ ಕತ್ತಲಾಗದಂತೆ ನೋಡಿಕೊಳ್ಳಿ. ಒಂದು ವೇಳೆ ದೀಪಗಳನ್ನು ಹಚ್ಚಲಾಗದ ಕೋಣೆಗಳಲ್ಲಿ ವಿದ್ಯುತ್ ದೀಪಗಳನ್ನಾದರೂ ಬೆಳಗಿಸಿ.
3. ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆ ಬಹಳ ಮುಖ್ಯ. ಇದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಹಾಕಿ. ಅಥವಾ ಹೊರಗಿನಿಂದ ತಂದ ಸ್ವಸ್ತಿಕ ಚಿಹ್ನೆಯ ಸ್ಟಿಕ್ಕರ್ ಅಂಟಿಸಿ. ಇದು ಆ ಮನೆಗೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ದೀಪಾವಳಿಯಂದು ಮಾತ್ರವಲ್ಲದೆ ಸ್ವಸ್ತಿಕ್ ಚಿಹ್ನೆಯು ಯಾವಾಗಲೂ ನಿಮ್ಮ ಮನೆಯ ಬಾಗಿಲಿನ ಮೇಲೆ ಇರಲು ಬಿಡಿ.
4. ಪೂಜೆಯನ್ನು ಕಟ್ಟುನಿಟ್ಟಾಗಿ ಆಚರಿಸಿ. ಹಾಗೇ ಉತ್ತರ ದಿಕ್ಕಿನ ಕಡೆಗೆ ಪೂಜೆ ಮಾಡಬೇಕೆಂಬುದನ್ನು ಮರೆಯಬೇಡಿ. ಹಾಗೆಯೇ ಲಕ್ಷ್ಮಿ ವಿಗ್ರಹದ ಎಡಭಾಗದಲ್ಲಿ ಗಣೇಶನ ವಿಗ್ರಹವನ್ನು ಇರಿಸಿ. ಅನೇಕರು ಲಕ್ಷ್ಮಿ ದೇವಿಯ ವಿಗ್ರಹವನ್ನು ಮಾತ್ರ ಪೂಜಿಸುತ್ತಾರೆ. ಆದರೆ ಯಾವುದೇ ಹಬ್ಬವಾಗಲೀ, ಯಾವ ದೇವರ ಹೋಮ ಹವನ ಆಗಲೀ ಅಲ್ಲಿ ಗಣೇಶನಿಗೆ ಮೊದಲ ಪೂಜೆ ಮಾಡಲೇಬೇಕು. ಆದ್ದರಿಂದ ಲಕ್ಷ್ಮಿಯನ್ನು ಪೂಜಿಸುವ ಮುನ್ನ ಗಣೇಶನ ವಿಗ್ರಹವನ್ನು ಪೂಜಿಸುವುದನ್ನು ಮರೆಯಬೇಡಿ. ಹೀಗೆ ಮಾಡಿದರೆ ನಿಮ್ಮ ಮನೆ ಸಂಪತ್ತಿನಿಂದ ತುಂಬುತ್ತದೆ.
5. ಪ್ರತಿದಿನ ನಾವು ಮನೆ ಮುಂದೆ ರಂಗೋಲಿ ಬಿಡುತ್ತೇವೆ. ಹಾಗೇ ದೀಪಾವಳಿಯಂದೂ ಕೂಡಾ ನಿಮ್ಮ ಮನೆ ಮುಂದೆ ರಂಗೋಲಿ ಬಿಡಿಸುವುದನ್ನು ಮರೆಯದಿರಿ. ಹಿಂದೂ ಸಂಪ್ರದಾಯದಲ್ಲಿ ರಂಗೋಲಿಗೂ ಬಹಳ ಪ್ರಾಮುಖ್ಯತೆ ಇದೆ.
6. ಹಬ್ದದಂದು ಮನೆಯಲ್ಲಿ ಧೂಪ ದ್ರವ್ಯದ ವಾಸನೆ ಇರಬೇಕು. ಇದು ಧನಾತ್ಮಕ ಶಕ್ತಿಯನ್ನು ಮನೆಯೊಳಗೆ ಸೆಳೆಯುತ್ತದೆ. ದೀಪಾವಳಿಯಂದು ಅಗರಬತ್ತಿ, ಧೂಪ ಹಚ್ಚಿದರೆ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
7. ದೀಪಾವಳಿಯಂದು ರಾತ್ರಿ ಮಲಗುವವರೆಗೂ ಮನೆ ಮುಖ್ಯ ದ್ವಾರವನ್ನು ಮುಚ್ಚಬೇಡಿ. ಹಬ್ಬದಂದು ಲಕ್ಷ್ಮಿ ದೇವಿಯು ಯಾವುದೇ ಕ್ಷಣದಲ್ಲಿ ಮನೆಗೆ ಪ್ರವೇಶಿಸುತ್ತಾಳೆ ಎಂದು ನಂಬಲಾಗುತ್ತದೆ. ರಾತ್ರಿ ಮಲಗುವಾಗ ಕಿಟಕಿಗಳು ತೆರೆದಿರಲಿ.
8. ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸಲು ನೀರಿನಲ್ಲಿ ಉಪ್ಪು ಬೆರೆಸಿ ಮನೆಯ ಸುತ್ತಲೂ ಸಿಂಪಡಿಸಿ. ದೀಪಾವಳಿಗೆ ಮುನ್ನ ಮನೆಯನ್ನು ಸ್ವಚ್ಛಗೊಳಿಸುವಾಗ ಈ ರೀತಿ ಉಪ್ಪು ನೀರನ್ನು ಚಿಮುಕಿಸುವುದನ್ನು ಮರೆಯಬೇಡಿ.
9. ಪೂಜೆ ಮಾಡುವಾಗ ಓಂ ನಮೋ ಭಗವತೇ ವಾಸು ದೇವಾಯ ಎಂಬ ಮಂತ್ರವನ್ನು ಸ್ಪಷ್ಟವಾಗಿ ಪಠಿಸಿ. ಈ ಮಂತ್ರ ಪಠಣೆ ಮಾಡುವುದರಿಂದ ಮನೆಯಲ್ಲಿ ದುಷ್ಟಶಕ್ತಿಯು ದೂರವಾಗುತ್ತದೆ.
ಈ ಅಂಶಗಳನ್ನು ಪರಿಗಣಿಸಿ, ಈ ಸುಲಭ ಹಾಗೂ ಪ್ರಮುಖ ವಿಚಾರಗಳನ್ನು ಫಾಲೋ ಮಾಡಿ ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಿ.
ಇದನ್ನೂ ಓದಿ: