Cotton Wicks: ಮನೆಯಲ್ಲಿ ಸರಳವಾಗಿ ದೀಪದ ಬತ್ತಿ ಮಾಡಿಕೊಳ್ಳುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  Cotton Wicks: ಮನೆಯಲ್ಲಿ ಸರಳವಾಗಿ ದೀಪದ ಬತ್ತಿ ಮಾಡಿಕೊಳ್ಳುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್

Cotton Wicks: ಮನೆಯಲ್ಲಿ ಸರಳವಾಗಿ ದೀಪದ ಬತ್ತಿ ಮಾಡಿಕೊಳ್ಳುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್

ದೀಪಾವಳಿ ಹಬ್ಬದಲ್ಲಿ ದೀಪಗಳೇ ವಿಶೇಷ. ಈ ಹೊತ್ತಿನಲ್ಲಿ ದೀಪಗಳಲ್ಲಿ ಎಷ್ಟು ವಿಧಗಳಿವೆ, ಮನೆಯಲ್ಲೇ ಸುಲಭವಾಗಿ ಹಣತೆ ಬತ್ತಿಗಳನ್ನು ತಯಾರಿಸಿಕೊಳ್ಳುವುದು ಹೇಗೆ ಎಂಬ ವಿವರ ಇಲ್ಲಿದೆ. ಈ ಬೆಳಕಿನ ಹಬಕ್ಕೆ ಮನೆಯಲ್ಲೇ ಹೀಗೆ ಬತ್ತಿ ತಯಾರಿಸಿ.

ದೀಪದ ಬತ್ತಿಗಳಲ್ಲಿ ಎಷ್ಟು ವಿಧಗಳಿವೆ, ಮನೆಯಲ್ಲೇ ಸುಲಭವಾಗಿ ದೀಪದ ಬತ್ತಿಗಳನ್ನು ಮಾಡಿಕೊಳ್ಳುವುದು  ಹೇಗೆ ಎಂಬುದನ್ನು ತಿಳಿಯಿರಿ
ದೀಪದ ಬತ್ತಿಗಳಲ್ಲಿ ಎಷ್ಟು ವಿಧಗಳಿವೆ, ಮನೆಯಲ್ಲೇ ಸುಲಭವಾಗಿ ದೀಪದ ಬತ್ತಿಗಳನ್ನು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಿರಿ

ಬೆಳಕಿನ ಹಬ್ಬ ದೀಪಾವಳಿ ಬಂದೇ ಬಿಡ್ತು. ಮನೆಗಳಲ್ಲಿ ಸಿದ್ಧತೆಗಳನ್ನು ಜೋರಾಗಿ ನಡೆಯುತ್ತಿದ್ದು, ಹಬ್ಬಕ್ಕೆ ಬೇಕಾಗಿರುವ ವಸ್ತುಗಳನ್ನು ಖರೀದಿಸುವ ಕೆಲಸಗಳು ಸಾಗುತ್ತಿವೆ. ಸಾಮಾನ್ಯವಾಗಿ ಮಹಿಳೆಯರು ಹಬ್ಬದಲ್ಲಿ ಪೂಜೆಗೆ ಬಳಸುವ ವಸ್ತುಗಳನ್ನು ಖರೀದಿ ಮಾಡುವುದರಲ್ಲಿ ತುಂಬಾ ಬ್ಯುಸಿಯಾಗಿರುತ್ತಾರೆ. ಕೆಲವರು ಸಾಧ್ಯವಾದಷ್ಟು ಮಟ್ಟಿಗೆ ಪೂಜೆಯ ವಸ್ತುಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದರಲ್ಲಿ ದೀಪಕ್ಕೆ ಹಚ್ಚುವ ಬತ್ತಿಗಳು ಕೂಡ ಸೇರಿರುತ್ತವೆ. ದೇವರ ಪೂಜೆಯಲ್ಲಿ ದೀಪಕ್ಕೆ ಯಾವ ರೀತಿಯ ಬತ್ತಿಗಳನ್ನು ಉಪಯೋಗಿಸುತ್ತವೆ ಎಂಬುದರ ಮೇಲೆಯೂ ಶುಭ ಫಲಗಳ ನಿರ್ಧಾರವಾಗುತ್ತದೆ ಎಂದು ಹೇಳುತ್ತಾರೆ. ಹೊರಗಡೆ ಹೋಗಿ ಶಾಂಪಿಂಗ್ ಮಾಡುವ ಬದಲು ಮನೆಯಲ್ಲಿ ಸುಲಭವಾಗಿ ದೀಪದ ಬತ್ತಿಗಳನ್ನು ಮಾಡಿಕೊಳ್ಳಬಹುದು. ಬತ್ತಿಗಳನ್ನು ಮಾಡಿಕೊಳ್ಳುವ ಸರಳ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

ಮನೆಯಲ್ಲಿ ಸರಳವಾಗಿ ದೀಪದ ಬತ್ತಿಗಳನ್ನು ಮಾಡಿಕೊಳ್ಳುವ ವಿಧಾನ

  • ಮೊದಲು ಹತ್ತಿಯನ್ನು ತೆಗೆದುಕೊಳ್ಳಿ
  • ಹತ್ತಿಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಬಟ್ಟೆ ಮೇಲೆ ಹಾಕಿ
  • ಎರಡು ಇಂಚು ಉದ್ದದ ತುಂಡುಗಳಾಗಿ ಮಾಡಿಕೊಳ್ಳಿ

ಇದನ್ನೂ ಓದಿ: ಮಕ್ಕಳಿಗೆ ದೀಪಾವಳಿ ಅಪಾಯವಾಗದಿರಲಿ; ಸುಟ್ಟಗಾಯ, ಅಲರ್ಜಿ ತಡೆಗಟ್ಟಲು ಪೋಷಕರಿಗೆ ಸುರಕ್ಷತಾ ಸಲಹೆಗಳು

  • ನಂತರ ಕಡ್ಡಿಯೊಂದನ್ನು ತೆಗೆದುಕೊಳ್ಳಿ. ಅದು ಅಗರಬತ್ತಿ ಕಡ್ಡಿಯಾದರೂ ಪರ್ವಾಗಿಲ್ಲ
  • ನಂತರ ಒಂದೊಂದಾಗಿ ಹತ್ತಿಯನ್ನು ಕಡ್ಡಿಯ ಮೇಲೆ ಹಾಕಿ ಕೈಯಿಂದ ಸುತ್ತಬೇಕು
  • ಹೀಗೆ ಮಾಡುವುದರಿಂದ ಬತ್ತಿಗಳು ಸಣ್ಣ ಮತ್ತು ಉದ್ದವಾಗಿ ಬರುತ್ತವೆ

ಬತ್ತಿ ಮಾಡಿಕೊಳ್ಳುವ ಮತ್ತೊಂದು ಸರಳ ವಿಧಾನ

  • ಹತ್ತಿಯನ್ನು ತೆಗೆದುಕೊಂಡು ಕೈಯಿಂದಲೇ ಸಣ್ಣದಾಗಿ ಎಳೆದುಕೊಳ್ಳಿ
  • ಅದು ದರದ ಮಾದರಿಯಲ್ಲಿ ಉದ್ದವಾಗಿ ಬರುತ್ತವೆ
  • ನಂತರ ನಿಮಗೆ ಎಷ್ಟು ಉದ್ದದ ಬತ್ತಿಗಳು ಬೇಕು ಎಂಬುದನ್ನು ನಿರ್ಧರಿಸಿ
  • ಆ ನಂತರ ಹತ್ತಿಯನ್ನು ತುಂಡುಗಳನ್ನಾಗಿ ಮಾಡಿಕೊಳ್ಳಿ
  • ದಾರದಂತೆ ಮಾಡಿಕೊಂಡಿರುವ ಹತ್ತಿಯನ್ನು ಒಂದು ಬಟ್ಟೆಯ ಮೇಲೆ ಹಾಕಿ
  • ನಂತರ ನಿಮ್ಮ ಅಂಗೈಯಿಂದ ಹತ್ತಿಯನ್ನು ಉಜ್ಜಿದರೆ ಸಣ್ಣ ಬತ್ತಿಯಾಗುತ್ತದೆ

ಇದನ್ನೂ ಓದಿ: ದೀಪಾವಳಿಯಲ್ಲಿ ಬಳಸಿದ ಹಣತೆಗಳು ಮುಂದಿನ ವರ್ಷಕ್ಕೂ ಬೇಕಾ? ಸುರಕ್ಷಿತವಾಗಿ ಎತ್ತಿಡಲು ಇಲ್ಲಿದೆ ಟಿಪ್ಸ್

ಅರಿಶಿನ ಬಟ್ಟೆಯ ಬತ್ತಿಗಳು

ಹೊಸ ಕಾಟನ್ ಬಟ್ಟೆಯನ್ನು ಒಂದು ಇಂಚು ಅಗಲ ಕತ್ತರಿಸಿಕೊಳ್ಳಿ

ಕತ್ತರಿಸಿ ಇಟ್ಟುಕೊಂಡಿರುವ ಬಟ್ಟೆಯನ್ನು ಅರಿಶಿನ ಮಿಶ್ರಿತ ನೀರನಲ್ಲಿ ನೆನೆಸಿಡಿ

ನಂತರ ಬಟ್ಟೆಯನ್ನು ಒಣಗಿಸಿ ಜೇನುತುಪ್ಪದಲ್ಲಿ ಅದ್ದಿ ಅದರಿಂದ ಬತ್ತಿಯನ್ನು ಮಾಡಿಕೊಳ್ಳಿ

ಬತ್ತಿಗಳಲ್ಲಿ ಎಷ್ಟು ವಿಧಗಳಿವೆ

ಶುದ್ಧವಾದ ಹತ್ತಿಯಿಂದ ಬತ್ತಿಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ದೀಪದ ಬತ್ತಿಗಳಲ್ಲಿ ಸಾಕಷ್ಟು ವಿಧಗಳಿವೆ. ನಾವು ದೇವರಿಗೆ ಯಾವ ರೀತಿಯ ಬತ್ತಿಯನ್ನು ಉಪಯೋಸುತ್ತವೆ ಎಂಬುದರ ಮೇಲೆ ಶುಭ ಫಲಗಳು ನಿರ್ಧಾರವಾಗುತ್ತವೆ. ಹತ್ತಿಯ ಬತ್ತಿಗಳು ಒಳ್ಳೆಯದು ಎಂದು ಹೇಳುತ್ತಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಜನರು ಹತ್ತಿಯ ಬತ್ತಿಗಳನ್ನೇ ಉಪಯೋಗಿಸುತ್ತಾರೆ. ಇದನ್ನು ಹೊರತುಪಡಿಸಿ ಅರಿಶಿನ ಬಟ್ಟೆಯ ಬತ್ತಿಗಳು, ಬಾಳೆ ದಿಂಡಿನ ಬತ್ತಿ, ತಾವರೆ ಕಾಂಡದ ಬತ್ತಿ ಹೀಗೆ ಹಲವಾರು ರೀತಿಯ ಬತ್ತಿಗಳು ಸಿಗುತ್ತವೆ.

Whats_app_banner