ದೀಪಾವಳಿ ಪಟಾಕಿ ಹೊಗೆಗೆ ಕಣ್ಣುಗಳು ಜೋಪಾನ; ದೃಷ್ಟಿ ಸಮಸ್ಯೆ ಆಗದಂತೆ ಎಚ್ಚರವಿರಲಿ, ಈ ಮುಂಜಾಗ್ರತೆ ಮರೆಯದಿರಿ
Deepavali 2024: ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಸಿಡಿಸುವುದು ಸಾಮಾನ್ಯ. ಪಟಾಕಿಗಳಿಂದ ಹೊರಹೊಮ್ಮುವ ವಿಷಕಾರಿ ಹೊಗೆ ಮತ್ತು ಮಾಲಿನ್ಯದಿಂದ ಕಣ್ಣುಗಳಿಗೆ ಅಪಾಯ ಎದುರಾಗಬಹುದು. ಇಂಥಾ ಅಪಾಯಗಳನ್ನು ತಪ್ಪಿಸಲು ಅಗತ್ಯ ಎಚ್ಚರಿಕೆ ಕ್ರಮ ಅಗತ್ಯ.

ಅಕ್ಟೋಬರ್ 31ರಿಂದ ದೀಪಾವಳಿ ಸಂಭ್ರಮ. ಭಾರತ ಮಾತ್ರವಲ್ಲದೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಬೆಳಕಿನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ದೀಪಾವಳಿ ಎಂದರೆ ದೀಪಗಳ ಜೊತೆಗೆ ಸಿಹಿತಿಂಡಿ ಮತ್ತು ಪಟಾಕಿಗಳ ಸಂಭ್ರಮ ಇದ್ದೇ ಇರುತ್ತದೆ. ಮಕ್ಕಳಿಗೆ ದೀಪಾವಳಿಯೆಂದರೆ ಅದು ಪಟಾಕಿ ಸುಡುವ ಹಬ್ಬ. ಆದರೆ, ಪಟಾಕಿ ಹೊರಸೂಸುವ ಬೆಂಕಿ, ವಿಷಕಾರಿ ಹೊಗೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರ ಹೊಗೆ ಶ್ವಾಸಕೋಶಕ್ಕೆ ಮಾತ್ರವಲ್ಲದೆ ಕಣ್ಣುಗಳಿಗೂ ತುಂಬಾ ಅಪಾಯಕಾರಿ. ಹೀಗಾಗಿ ಈ ದೀಪಾವಳಿಯನ್ನು ಸುರಕ್ಷಿತ ಹಬ್ಬವಾಗಿ ಆಚರಿಸುವ ಸಲುವಾಗಿ ನೀವು ಕ್ರಮ ಕೈಗೊಳ್ಳಬೇಕು. ಪಟಾಕಿಗಳಿಂದ ಹೊರಹೊಮ್ಮುವ ಹೊಗೆ ಮತ್ತು ಮಾಲಿನ್ಯದಿಂದ ಕಣ್ಣುಗಳಿಗಾಗುವ ಅಪಾಯವೇನು ಮತ್ತು ಅದನ್ನು ತಡೆಗಟ್ಟಸಲು ಯಾವೆಲ್ಲಾ ಕ್ರಮಗಳನ್ನು ಪ್ರಯತ್ನಿಸಬಹುದು ಎಂಬುದನ್ನು ತಿಳಿಯೋಣ.
ಪಟಾಕಿಗಳು ಕಣ್ಣುಗಳಿಗೆ ಭಾರಿ ಪ್ರಮಾಣದ ಹಾನಿಯನ್ನುಂಟು ಮಾಡುತ್ತವೆ. ಇದರಿಂದಾಗಿ ಕಣ್ಣಿನ ಕಿರಿಕಿರಿ, ಸೋಂಕು, ನೋವು ಮುಂತಾದ ಸಮಸ್ಯೆಗಳು ಕಾಡಲು ಆರಂಭಿಸುತ್ತವೆ. ಪಟಾಕಿಗಳಿಂದ ಹೊರಹೊಮ್ಮುವ ಹೊಗೆಯು ದೀರ್ಘಾವಧಿಯಲ್ಲಿ ಕಣ್ಣುಗಳಿಗೆ ಹಾನಿ ಮಾಡುವ ಅನೇಕ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ.
ಪಟಾಕಿಗಳಿಂದ ಹೊರಹೊಮ್ಮುವ ಹೊಗೆಯಲ್ಲಿ ಸೀಸದಂತಹ ಹಾನಿಕಾರಕ ಅಂಶಗಳು ಇರುತ್ತವೆ. ಇದು ಕಣ್ಣುಗಳಲ್ಲಿ ಅಲರ್ಜಿ ಉಂಟುಮಾಡುವ ಮೂಲಕ ಕಾರ್ನಿಯಾವನ್ನು ಹಾನಿಗೊಳಿಸುತ್ತದೆ. ಮಕ್ಕಳ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತದೆ. ಮಕ್ಕಳ ದೃಷ್ಟಿ ಸಾಮರ್ಥ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಪಟಾಕಿಗಳಿಂದಾಗುವ ಅಪಾಯಗಳು
- ದೀರ್ಘಕಾಲದವರೆಗೆ ಹೊಗೆಗೆ ಒಡ್ಡಿಕೊಳ್ಳುವುದಿಂದ ಮತ್ತು ಪಟಾಕಿಗಳಿಂದ ಉಂಟಾಗುವ ಮಾಲಿನ್ಯದಿಂದ ಕಣ್ಣುಗಳಲ್ಲಿ ಶುಷ್ಕತೆಗೆ ಕಾರಣವಾಗಬಹುದು. ಅಲ್ಲದೆ ಪಟಾಕಿ ಸಿಡಿಸುವಾಗ ಹಲವು ಬಾರಿ ಕಣ್ಣುಗಳಿಗೆ ಗಂಭೀರ ಗಾಯಗಳಾಗಬಹುದು. ಪಟಾಕಿಗಳನ್ನು ಹತ್ತಿರದಿಂದ ಸುಡುವಾಗ ಹೆಚ್ಚಾಗಿ ಇಂಥಾ ಅಪಾಯ ಸಂಭವಿಸುತ್ತದೆ. ಪಟಾಕಿಗಳಿಂದ ಬರುವ ಕಿಡಿ, ಬೆಂಕಿ ಮತ್ತು ಹೊಗೆಯಿಂದ ಕಣ್ಣುಗಳಿಗೆ ಕಿರಿಕಿರಿ ಅಥವಾ ಗಾಯ ಉಂಟಾಗಬಹುದು.
- ಪಟಾಕಿಗಳು ರೆಟಿನಾಗೆ ಗಂಭೀರ ಹಾನಿಯನ್ನುಂಟುಮಾಡುತ್ತವೆ. ರೆಟಿನಾದ ಗಾಯಗಳು ದೀರ್ಘಕಾಲೀನ ದೃಷ್ಟಿ ಸಮಸ್ಯೆಗಳಿಗೆ ಕಾರಣವಾಗಬಹುದು. ಪಟಾಕಿಗಳ ಹೊಗೆಗೆ ಒಡ್ಡಿಕೊಳ್ಳುವ ಮಕ್ಕಳು ತಾತ್ಕಾಲಿಕ ಕುರುಡುತನದ ಸಮಸ್ಯೆ ಎದುರಿಸಬಹುದು.
- ಕಲುಷಿತ ಗಾಳಿಯು ಕಣ್ಣಿನ ಸೋಂಕಿನ ಅಪಾಯ ಹೆಚ್ಚಿಸುತ್ತದೆ. ಇದರಿಂದಾಗಿ ಕಣ್ಣುಗಳಿಂದ ನಿರಂತರವಾಗಿ ನೀರು ಬರುವುದು, ಕೆಂಪಾಗುವುದು, ಕಿರಿಕಿರಿ ಮತ್ತು ಊತದಂತಹ ಸಮಸ್ಯೆಗಳು ಕಾಡಲು ಆರಂಭಿಸುತ್ತವೆ.
- ಪಟಾಕಿ ಹೊಗೆಗೆ ನಿಯಮಿತವಾಗಿ ಒಡ್ಡಿಕೊಳ್ಳುವುದರಿಂದ ಇರುಳು ಕುರುಡುತನ, ಕಣ್ಣಿನ ಪೊರೆಗಳಂತಹ ಗಂಭೀರ ದೀರ್ಘಕಾಲೀನ ಕಣ್ಣಿನ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದು ಕಾಲಾನಂತರದಲ್ಲಿ ದೃಷ್ಟಿಯ ಮೇಲೆ ಕೆಟ್ಟ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.
ಪಟಾಕಿ ಹೊಗೆಯಿಂದ ಕಣ್ಣುಗಳನ್ನು ರಕ್ಷಿಸಲು ಸಲಹೆಗಳು
- ಕಣ್ಣುಗಳ ಬಳಿ ಹೊಗೆ ಆವರಿಸಿದರೆ ಅದನ್ನು ಕೈಗಳಿಂದ ಉಜ್ಜುವ ತಪ್ಪು ಮಾಡಬೇಡಿ. ಹೊಗೆಯಲ್ಲಿರುವ ರಾಸಾಯನಿಕಗಳು ಕಣ್ಣುಗಳಿಗೆ ಕಿರಿಕಿರಿ ಮಾಡಿ ಕಣ್ಣುಗಳಲ್ಲಿ ನೀರು ತರಿಸಬಹುದು.
- ಕಣ್ಣಿನ ಸುತ್ತಮುತ್ತ ಹೊಗೆ ಆವರಿಸಿದರೆ ತಕ್ಷಣ ಶುದ್ಧ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ, ಕಣ್ಣುಗಳಲ್ಲಿನ ಧೂಳು ಮತ್ತು ಹೊಗೆ ಕಣಗಳು ಸ್ವಚ್ಛವಾಗುತ್ತದೆ. ಇದು ಕಿರಿಕಿರಿ ಅಥವಾ ತುರಿಕೆಯ ಅನುಭವವನ್ನು ನಿವಾರಿಸುತ್ತದೆ.
ಇದನ್ನೂ ಓದಿ | ದೀಪಾವಳಿಯಲ್ಲಿ ಪಟಾಕಿ ಹಚ್ಚುತ್ತೀರಾ: ಮಕ್ಕಳನ್ನು ಸುರಕ್ಷಿತವಾಗಿರಿಸಲು 5 ಅಗತ್ಯ ಸುರಕ್ಷತಾ ಸಲಹೆಗಳು ಇಲ್ಲಿವೆ
- ಪಟಾಕಿ ಸಿಡಿಸುವಾಗ ಸುರಕ್ಷತಾ ಕನ್ನಡಕಗಳನ್ನು ಧರಿಸಿದರೆ ಒಳ್ಳೆಯದು. ಕಣ್ಣುಗಳ ಮೇಲೆ ಧರಿಸುವ ಕನ್ನಡಕಗಳು ಹೊಗೆ, ಧೂಳಿನ ಕಣಗಳಿಂದ ಕಣ್ಣುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.
- ಕಣ್ಣುಗಳನ್ನು ಆರೋಗ್ಯಕರವಾಗಿಡಲು ಮತ್ತು ಪಟಾಕಿ ಹೊಗೆಯಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ದೇಹವನ್ನು ಹೈಡ್ರೀಕರಿಸಲು ಪ್ರಯತ್ನಿಸಿ. ದಿನವಿಡೀ ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
ಇದನ್ನೂ ಓದಿ | ದೀಪಾವಳಿ ಹಬ್ಬಕ್ಕೆ ನಿಮ್ಮ ಸ್ನೇಹಿತರು, ಆತ್ಮೀಯರಿಗೆ ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲಿ ಶುಭಾಶಯ ಕೋರಲು ಇಲ್ಲಿದೆ ಐಡಿಯಾಗಳು

ವಿಭಾಗ