ದೀಪಾವಳಿಗೆ ಟ್ರೆಡಿಷನಲ್ ಆಗಿ ರೆಡಿ ಆಗ್ಬೇಕು ಅಂತಿದ್ದೀರಾ; ಆಲಿಯಾ ಭಟ್ ಅವರ ಈ 7 ಸ್ಟೈಲ್ ನಿಮಗೆ ಇಷ್ಟವಾಗಬಹುದು
ದೀಪಾವಳಿ ಹಬ್ಬಕ್ಕೆ ಸಾಂಪ್ರದಾಯಿಕ ಲುಕ್‌ನಲ್ಲಿ ಡ್ರೆಸಿಂಗ್ ಪ್ಲಾನ್ ಮಾಡುತ್ತಿದ್ದರೆ, ಬಾಲಿವುಡ್ ನಟಿ ಆಲಿಯಾ ಭಟ್ ಅವರ ಉಡುಪುಗಳು ನಿಮಗೆ ಇಷ್ಟವಾಗಬಹುದು. ಕಳೆದ ಕೆಲವು ವರ್ಷಗಳಿಂದ ದೀಪಾವಳಿಗೆ ಆಲಿಯಾ ಧರಿಸಿದ್ದ ಬಟ್ಟೆಗಳಿವು.

ದೀಪಾವಳಿ ಹಬ್ಬಕ್ಕೆ ಯಾವ ರೀತಿಯ ಡ್ರೆಸ್ ಪ್ಲಾನ್ ಮಾಡಬೇಕು ಎಂಬ ಯೋಚನೆಯಲ್ಲಿದ್ದರೆ, ಬಾಲಿವುಡ್ ನಟಿ ಆಲಿಯಾ ಭಟ್ ಅವರ ಡ್ರೆಸ್ಸಿಂಗ್ ಸ್ಟೈಲ್ ನಿಮಗೆ ಇಷ್ಟವಾಗಬಹುದು. ದೀಪಾವಳಿ ಹಬ್ಬಕ್ಕಾಗಿ ಆಲಿಯಾ ಭಿನ್ನ ವಿಭಿನ್ನ ಉಡುಪುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಬ್ಬಕ್ಕೆ ಯಾವ ರೀತಿ ಭೀನ್ನವಾಗಿ ಉಡುಪು ಧರಿಸೋ ಪ್ಲಾನ್ ಮಾಡಬಹುದು ಎಂಬವರಿಗೆ ಆಲಿಯಾ ಉಡುಪುಗಳ ಸ್ಟೈಲ್ ನರವಾಗುತ್ತದೆ. ಪ್ರತಿ ವರ್ಷ, ಆಲಿಯಾ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇತ್ತೀಚೆಗಷ್ಟೇ ಡಿಸೈನರ್ ಮನೀಶ್ ಮಲ್ಹೋತ್ರಾ ಪಾರ್ಟಿಗಾಗಿ ಸುಂದರವಾದ ಲೆಹೆಂಗಾ ಧರಿಸಿದ್ದರು. ತಮ್ಮ ಮತ್ತು ರಣಬೀರ್ ಕಪೂರ್ ಅವರ ಮೆಹೆಂದಿ ಸಮಾರಂಭಕ್ಕೂ ಆಲಿಯಾ ಲೆಹೆಂಗಾ ಧರಿಸಿದ್ದರು. ಹೀಗಾಗಿ ಆಲಿಯಾ ಅವರ ಸ್ಟೈಲ್ ನೀವು ಕೂಡಾ ಅನುಕರಣೆ ಮಾಡಬಹುದು.
ಆಲಿಯಾ ಭಟ್ ಕಳೆದ ಕೆಲವು ವರ್ಷಗಳಿಂದ ದೀಪಾವಳಿ ಪಾರ್ಟಿಗಳಿಗೆ ಏನೇನು ಬಟ್ಟೆಗಳನ್ನು ಧರಿಸಿದ್ದರು ಎಂಬುವುದನ್ನು ನೋಡೋಣ. ಫೋಟೋ ಸಹಿತ ಮಾಹಿತಿ ಮುಂದಿದೆ ನೋಡಿ.
ಸಿಂಧೂರಿ ಕೆಂಪು ಲೆಹೆಂಗಾ
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ದೀಪಾವಳಿ ಪಾರ್ಟಿಗೆ ಆಲಿಯಾ ತನ್ನ ಪತಿ ರಣಬೀರ್ ಕಪೂರ್ ಅವರೊಂದಿಗೆ ಸಿಂಧೂರಿ ಕೆಂಪು ಮನೀಶ್ ಮಲ್ಹೋತ್ರಾ ಲೆಹೆಂಗಾ ಧರಿಸಿ ಭಾಗಿಯಾಗಿದ್ದರು. ಸಿಲ್ಕ್ ಲೆಹೆಂಗಾ ಸೆಟ್‌ನಲ್ಲಿ ಡೀಪ್ ಕುತ್ತಿಗೆಯ ಬ್ಲೌಸ್ ಆಕರ್ಷಕವಾಗಿ ಕಾಣುತ್ತಿತ್ತು. ಇದಕ್ಕೆ ಅದ್ಧೂರಿ ದುಪಟ್ಟಾ ಕೂಡಾ ಹಾಕಿದ್ದಾರೆ. ಯಾವುದೇ ಅದ್ಧೂರಿ ಆಭರಣ ಧರಿಸದೆ ಸರಳ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರೆಗ್ನೆನ್ಸಿ ನೋಟ
ಗರ್ಭಿಣಿಯಾಗಿದ್ದಾಗ ಆಲಿಯಾ ತನ್ನ ಕುಟುಂಬ ಸದಸ್ಯರೊಂದಿಗೆ ಸರಳವಾಗಿ ದೀಪಾವಳಿ ಆಚರಿಸಿದ್ದರು. ಈ ಸಮಯದಲ್ಲಿ ನಟಿ ಸಿಂಒಕ್ ಗುಲಾಬಿ ಶಿಫಾನ್ ಕುರ್ತಾ ಸೆಟ್ ಧರಿಸಿದ್ದರು. ಅನಾರ್ಕಲಿ ಕುರ್ತಾಗೆ ಸುಂದರವಾದ ಚಿನ್ನದ ಜರ್ದೋಸಿ ಡಿಸೈನ್ ಮಾಡಲಾಗಿದೆ. ಇದಕ್ಕೆ ಬೆಲ್ ಬಾಟಮ್ ತೋಳುಗಳು, ದುಂಡಗಿನ ನೆಕ್ಲೈನ್ ಇದೆ.
ಸಬ್ಯಸಾಚಿ ಲೆಹೆಂಗಾ
ರಣಬೀರ್ ಕಪೂರ್ ಅವರೊಂದಿಗೆ ದೀಪಾವಳಿ ಆಚರಣೆಯ ಸಮಯದಲ್ಲಿ ಲಕ್ಷ್ಮೀ ಪೂಜೆಯಲ್ಲಿ ಭಾಗವಹಿಸಲು ಆಲಿಯಾ ಈ ಸುಂದರವಾದ ಸಬ್ಯಸಾಚಿ ಲೆಹೆಂಗಾ ಧರಿಸಿದ್ದರು. ಅದ್ಭುತವಾದ ನೇರಳೆ ಬಣ್ಣದ ಬಂದಾನಿ ಲೆಹೆಂಗಾಗೆ ಡೀಪ್ ವಿ-ನೆಕ್ ಆಕರ್ಷಕ ಲುಕ್ ಕೊಡುತ್ತದೆ. ಮ್ಯಾಚಿಂಗ್ ದುಪಟ್ಟಾ ಮತ್ತು ಕಿತ್ತಳೆ ಬಣ್ಣದ ಸಬ್ಯಸಾಚಿ ಆಭರಣ ಧರಿಸಿದ್ದಾರೆ. ಕೂದಲನ್ನು ಸರಳವಾಗಿ ಬಿಟ್ಟು ಮೇಕಪ್ ಇಲ್ಲದೆ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
ಸರಳ ಸೂಟ್ ಲುಕ್
ದೀಪಾವಳಿ ಪೂಜೆಗೆ ಸರಳವಾಗಿ ಮತ್ತು ಸೊಗಸಾಗಿ ಕಾಣಿಸಿಕೊಳ್ಳಬೇಕೆಂದರೆ ಈ ಎಥ್ನಿಕ್ ಉಡುಗೆ ನಿಮಗೆ ಇಷ್ಟವಾಗಬಹುದು. ಇದಕ್ಕೆ ಆಲಿಯಾ ಅವರ ಈ ಸ್ಟೈಲ್ ನಿಮಗೆ ಸ್ಫೂರ್ತಿಯಾಗಬಹುದು. ರಣಬೀರ್ ಅವರೊಂದಿಗೆ ದೀಪಾವಳಿ ಆಚರಣೆಗಾಗಿ ಆಲಿಯಾ ಈ ಕುರ್ತಾ ಸೆಟ್ ಅನ್ನು ಧರಿಸಿದ್ದಾರೆ. ಇದಕ್ಕೆ ಶಿಫಾನ್ ದುಪಟ್ಟಾ, ಜುಮ್ಕಿಗಳು, ಸಿಂಪಲ್ ಮೇಕಪ್ ಹಾಗೂ ಬಿಂದಿ ಧರಿಸಿದ್ದಾರೆ.
ಸ್ಪ್ರಿಂಗ್-ರೆಡಿ ಲೆಹೆಂಗಾ
2020ರ ದೀಪಾವಳಿ ಆಚರಣೆಗೆ ಆಲಿಯಾ ಈ ಸುಂದರವಾದ ಗುಲಾಬಿ ಕಸೂತಿ ಲೆಹೆಂಗಾ ಧರಿಸಿದ್ದರು. ಕಸೂತಿ ಕೆಲಸ ಮಾಡಿದ ಸ್ಕರ್ಟ್ ಮತ್ತು ಅದಕ್ಕೆ ಹೊಂದಿಕೆಯಾಗುವ ದುಪಟ್ಟಾವನ್ನು ಧರಿಸಿದ್ದಾರೆ.
ಪುದೀನಾ ಗ್ರೀನ್ ಸೂಟ್
ಪುದೀನಾ ಹಸಿರು ಬಣ್ಣದ ಬಟ್ಟೆಯಲ್ಲಿ ಈ ಅನಾರ್ಕಲಿ ಕುರ್ತಾ ಆಲಿಯಾ ಕಾಣಿಸಿಕೊಂಡಿದ್ದಾರೆ. ಮನೆಯಲ್ಲಿ ದೀಪಾವಳಿ ಪೂಜೆಗೆ ಇದು ಸೂಕ್ತ. ದೀಪಾವಳಿ ಪಾರ್ಟಿ ಜೊತೆಗೆ ಸ್ನೇಹಿತರೊಂದಿಗಿನ ಕೂಟಗಳಿಗೆ ಸಹ ಧರಿಸಬಹುದು. ಆಲಿಯಾ ಈ ಉಡುಪಿನೊಂದಿಗೆ ಜುಮ್ಕಿಗಳು, ಬಿಂದಿ ಧರಿಸಿದ್ದಾರೆ.
ಕಪ್ಪು ಉಡುಗೆ
2018ರಲ್ಲಿ ಶಾರುಖ್ ಖಾನ್ ಅವರ ದೀಪಾವಳಿ ಪಾರ್ಟಿಗೆ, ಆಲಿಯಾ ಭಟ್ ಅವರು ಶ್ಯಾಮಲ್ ಮತ್ತು ಭೂಮಿಕಾ ಅವರು ವಿನ್ಯಾಸ ಮಾಡಿದ ಅದ್ಭುತ ಕಪ್ಪು ವಿನ್ಯಾಸಕ ಲೆಹೆಂಗಾವನ್ನು ಧರಿಸಿದ್ದರು. ಇದಕ್ಕೆ ಚಿನ್ನದ ಬಣ್ಣದ ಕಿವಿಯೋಲೆ ಧರಿಸಿದ್ದಾರೆ.
