Sutarfeni Recipe: ಮಾಡೋಕೆ ಕಷ್ಟ ಆದ್ರೂ ತಿನ್ನೋಕೆ ಎಲ್ರಿಗೂ ಇಷ್ಟ...ಸುತರ್‌ ಫೇಣಿ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  Sutarfeni Recipe: ಮಾಡೋಕೆ ಕಷ್ಟ ಆದ್ರೂ ತಿನ್ನೋಕೆ ಎಲ್ರಿಗೂ ಇಷ್ಟ...ಸುತರ್‌ ಫೇಣಿ ರೆಸಿಪಿ

Sutarfeni Recipe: ಮಾಡೋಕೆ ಕಷ್ಟ ಆದ್ರೂ ತಿನ್ನೋಕೆ ಎಲ್ರಿಗೂ ಇಷ್ಟ...ಸುತರ್‌ ಫೇಣಿ ರೆಸಿಪಿ

ಸುತರ್‌ ಫೇಣಿ ತಯಾರಿಸುವುದು ಸ್ವಲ್ಪ ನಿಧಾನ ಎನಿಸಿದರೂ ತಿನ್ನಲು ಬಹಳ ರುಚಿಯಾಗಿರುತ್ತದೆ. ನೋಡಲು ಚಿರೋಟಿಯಂತೆ ಕಂಡರೂ ಇದರ ರುಚಿ ವಿಭಿನ್ನವಾಗಿರುತ್ತದೆ.

<p>ಸುತರ್‌ ಫೇಣಿ ರೆಸಿಪಿ</p>
ಸುತರ್‌ ಫೇಣಿ ರೆಸಿಪಿ (PC: Twitter)

ಹೆಚ್ಚಾಗಿ ಸಿಹಿ ಇಷ್ಟಪಡದವರೂ ಕೂಡಾ ಕೆಲವೊಂದು ಸಿಹಿತಿಂಡಿಗಳನ್ನು ನೋಡಿದರೆ ತಿನ್ನಬೇಕು ಎನ್ನಿಸುತ್ತದೆ. ಅದರಲ್ಲಿ ಸುತರ್‌ ಫೇಣಿ ಕೂಡಾ ಒಂದು. ನೋಡಲು ದಾರದ ಎಳೆಯಂತೆ ಕಾಣುವ ಈ ಸುತರ್‌ ಫೇಣಿಯನ್ನು ತಿನ್ನುತ್ತಿದ್ದರೆ ಮತ್ತಷ್ಟು ತಿನ್ನಬೇಕೆನಿಸುವುದು ಖಂಡಿತ.

ಸುತರ್‌ ಫೇಣಿ ತಯಾರಿಸುವುದು ಸ್ವಲ್ಪ ನಿಧಾನ ಎನಿಸಿದರೂ ತಿನ್ನಲು ಬಹಳ ರುಚಿಯಾಗಿರುತ್ತದೆ. ನೋಡಲು ಚಿರೋಟಿಯಂತೆ ಕಂಡರೂ ಇದರ ರುಚಿ ವಿಭಿನ್ನವಾಗಿರುತ್ತದೆ. ಫೇಣಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ

ಸುತರ್‌ ಫೇಣಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಮೈದಾಹಿಟ್ಟು - 2 ಕಪ್‌

ತುಪ್ಪ - 1 ಕಪ್‌

ಎಣ್ಣೆ - 1 ಕಪ್

ಸಕ್ಕರೆ - 1 ಕಪ್‌

ಏಲಕ್ಕಿ ಪುಡಿ - 1/2 ಟೀ ಚಮಚ

ಎಣ್ಣೆ - ಕರಿಯಲು

ಪಿಸ್ತಾ ಚೂರುಗಳು - ಅಲಂಕರಿಸಲು

ಸುತರ್‌ ಫೇಣಿ ತಯಾರಿಸುವ ವಿಧಾನ

ಒಂದು ಅಗಲವಾದ ಬಟ್ಟಲಿಗೆ ಮೈದಾ ಹಿಟ್ಟು ಸೇರಿಸಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ

ಕ್ಲಿಂಕ್‌ ರಾಪ್‌ನಿಂದ ಬೌಲ್‌ ಕವರ್‌ ಮಾಡಿ ಇಡೀ ದಿನ ಹಿಟ್ಟನ್ನು ಬಿಡಿ, ಕ್ಲಿಂಗ್‌ ರಾಪ್‌ ಇಲ್ಲದಿದ್ದರೆ ಒಂದು ಬಟ್ಟೆ ಮುಚ್ಚಿ

ಮರುದಿನ ಹಿಟ್ಟನ್ನು ಕೈಯಿಂದ 15-20 ನಿಮಿಷಗಳ ಕಾಲ ನಾದಿಕೊಳ್ಳಿ ಅಥವಾ ಗ್ರೈಂಡರ್‌ನಲ್ಲಿ ಕೂಡಾ ನಾದಿಕೊಳ್ಳಬಹುದು

ಹಿಟ್ಟಿನಿಂದ 10 ಭಾಗ ಮಾಡಿಕೊಂಡು ಒಂದೊಂದು ಉಂಡೆಯನ್ನು ಮತ್ತೊಮ್ಮೆ ನಾದಿಕೊಂಡು ಹಗ್ಗದ ರೀತಿಯಲ್ಲಿ ಒಸೆದುಕೊಳ್ಳಿ

ಒಂದು ಅಗಲವಾದ ತಟ್ಟೆಗೆ ಒಂದು ಕಪ್‌ ಎಣ್ಣೆ ಹಾಕಿ ಅದರಲ್ಲಿ ಹಗ್ಗದಂತೆ ಮಾಡಿಕೊಂಡ ಮೈದಾಹಿಟ್ಟನ್ನು 20-30 ನಿಮಿಷಗಳ ಕಾಲ ಬಿಡಿ

ನಂತರ ಹೆಚ್ಚುವರಿ ಎಣ್ಣೆಯನ್ನು ತೆಗೆದು ಎಲ್ಲವನ್ನೂ ಒಂದರ ಪಕ್ಕ ಒಂದರಂತೆ ಜೋಡಿಸಿಕೊಳ್ಳಿ

ಮೈದಾ ಹಿಟ್ಟಿನ ಮೇಲೆ ತುಪ್ಪ ಹಚ್ಚಿ ಎಲ್ಲವನ್ನೂ ಒಟ್ಟಿಗೆ ಮಡಚಿ ಮತ್ತೆ 20-30 ನಿಮಿಷ ಬಿಡಿ

ಮೊದಲ ತುದಿಯಿಂದ ಕೊನೆಯ ತುದಿವರೆಗೂ ಹೊಸೆಯುತ್ತಾ ಮತ್ತೆ ಇದನ್ನು ಎಷ್ಟು ಉದ್ದ ಸಾಧ್ಯವೋ ಅಷ್ಟು ಉದ್ದದ ಹಗ್ಗದಂತೆ ಮಾಡಿಕೊಳ್ಳಿ

ನಂತರ ಈ ಹಗ್ಗದಿಂದ ಸಣ್ಣ ಸಣ್ಣ ಭಾಗಗಳನ್ನಾಗಿ ಮಾಡಿಕೊಂಡು ಪೂರಿಯಾಕಾರಕ್ಕೆ ಮಡಚಿ ಎಣ್ಣೆ ಅಥವಾ ತುಪ್ಪ ಸೇರಿಸಿ 20 ನಿಮಿಷ ನೆನೆಯಲು ಬಿಡಿ

ನಂತರ ನಿಮ್ಮ ಎರಡೂ ಕೈಗಳಿಗೆ ಫೇಣಿಯ ಎರಡೂ ಅಂಚುಗಳನ್ನು ಹಿಡಿದು ಎಕ್ಸ್‌ಪೆಂಡ್‌ ಮಾಡುತ್ತಾ ಹೆಚ್ಚುವರಿ ಎಣ್ಣೆ ತೆಗೆದು ಕೂಡಲೇ ಬಿಸಿ ಎಣ್ಣೆಯಲ್ಲಿ ಕರಿಯಿರಿ, ಆದರೆ ಕಂದು ಬಣ್ಣ ಬರುವರೆಗೂ ಕರಿಯಬೇಡಿ.

ಪಾಕ ತಯಾರಿಸಲು ಒಂದು ಪಾತ್ರೆಗೆ ಸಕ್ಕರೆ , ಸ್ವಲ್ಪ ನೀರು ಸೇರಿಸಿ ಕುದಿಯಲು ಬಿಡಿ

ಒಂದೆಡೆ ಪಾಕ ಬರುತ್ತಿದ್ದಂತೆ ಸ್ಟೋವ್‌ ಆಫ್‌ ಮಾಡಿ ತಣ್ಣಗಾಗಲು ಬಿಡಿ

ಒಂದು ಜರಡಿಯಂತ ಪಾತ್ರೆಯಲ್ಲಿ ಫೇಣಿಗಳನ್ನು ಜೋಡಿಸಿಕೊಂಡು ಅದರ ಮೇಲೆ ಸಕ್ಕರೆ ಪಾಕವನ್ನು ಸುರಿಯಿರಿ

ನಂತರ ಪಿಸ್ತಾ ಅಥವಾ ನಿಮಗಿಷ್ಟವಾದ ಡ್ರೈ ಫ್ರೂಟ್ಸ್‌ ಚೂರುಗಳಿಂದ ಅಲಂಕರಿಸಿದರೆ ಸುತರ್‌ ಫೇಣಿ ತಿನ್ನಲು ರುಚಿ

Whats_app_banner