Dessert Recipe: ಹಾಲಿನಿಂದ ತಯಾರಿಸಬಹುದಾದ ಬೆಂಗಾಳಿ ಫೇಮಸ್‌ ಮಿಷ್ಟಿ ದೋಯಿ ರೆಸಿಪಿ; ಮಕ್ಕಳು ವೃದ್ಧರಿಗೂ ಈ ಡೆಸರ್ಟ್‌ ಬಲು ಇಷ್ಟ
ಕನ್ನಡ ಸುದ್ದಿ  /  ಜೀವನಶೈಲಿ  /  Dessert Recipe: ಹಾಲಿನಿಂದ ತಯಾರಿಸಬಹುದಾದ ಬೆಂಗಾಳಿ ಫೇಮಸ್‌ ಮಿಷ್ಟಿ ದೋಯಿ ರೆಸಿಪಿ; ಮಕ್ಕಳು ವೃದ್ಧರಿಗೂ ಈ ಡೆಸರ್ಟ್‌ ಬಲು ಇಷ್ಟ

Dessert Recipe: ಹಾಲಿನಿಂದ ತಯಾರಿಸಬಹುದಾದ ಬೆಂಗಾಳಿ ಫೇಮಸ್‌ ಮಿಷ್ಟಿ ದೋಯಿ ರೆಸಿಪಿ; ಮಕ್ಕಳು ವೃದ್ಧರಿಗೂ ಈ ಡೆಸರ್ಟ್‌ ಬಲು ಇಷ್ಟ

ಸಿಹಿಪ್ರಿಯರಿಗೆ ಇಂಥದ್ದೇ ಸ್ವೀಟ್‌ ಅಂತ ಅಲ್ಲ, ಬಹುತೇಕ ಎಲ್ಲಾ ಸಿಹಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಹಾಗೇ ನಮ್ಮಲ್ಲಿ ಕೆಲವರಿಗೆ ಊಟದ ನಂತರ ಏನಾದರೂ ಸಿಹಿ ತಿನ್ನದಿದ್ದರೆ ಸಮಾಧಾನ ಎನಿಸುವುದಿಲ್ಲ.

ಬೆಂಗಾಳಿ ಫೇಮಸ್‌ ಮಿಷ್ಟಿ ದೋಯಿ ರೆಸಿಪಿ
ಬೆಂಗಾಳಿ ಫೇಮಸ್‌ ಮಿಷ್ಟಿ ದೋಯಿ ರೆಸಿಪಿ (PC: Twitter)

ಖೀರು, ಕೇಸರಿಬಾತು, ಒಬ್ಬಟ್ಟು ಇದೆಲ್ಲಾ ನಾವು ರುಚಿ ಮಾಡಿದ್ದೇವೆ. ಆದರೆ ಒಮ್ಮೆ ಬೇರೆ ರಾಜ್ಯದ ಸಿಹಿ ಟ್ರೈ ಮಾಡಿದ್ರೆ ಹೇಗೆ. ಹಾಗಂತ ಇದಕ್ಕೆ ಹೆಚ್ಚಿನ ಸಾಮಗ್ರಿಗಳು ಬೇಡ, ಮನೆಯಲ್ಲೇ ಸುಲಭವಾಗಿ ದೊರೆಯುವ ಕೇವಲ 3 ಪದಾರ್ಥಗಳಿಂದ ತಯಾರಿಸಬಹುದಾದ ಒಂದು ಸಿಹಿ ಇದೆ. ಇದರ ಹೆಸರು ಮಿಷ್ಟಿ ದೋಯಿ. ಪಶ್ಚಿಮ ಬಂಗಾಳದ ಫೇಮಸ್‌ ಸ್ವೀಟ್‌ ರೆಸಿಪಿ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ಸಿಹಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಮಿಷ್ಟಿ ದೋಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ.

ಮೊಸರು - 1 ಕಪ್‌

ಸಕ್ಕರೆ - 2 ಕಪ್‌

ತಯಾರಿಸುವ ವಿಧಾನ

  • ಮಿಷ್ಟಿ ದೋಯಿ ತಯಾರಿಸಲು ಹಂಗ್‌ ಕರ್ಡ್‌ ಅವಶ್ಯಕತೆ ಇದೆ. ಇದನ್ನು ನೇರವಾಗಿ ಅಂಗಡಿಯಲ್ಲೇ ಖರೀದಿಸಬಹುದು ಅಥವಾ ನೀವೇ ಮನೆಯಲ್ಲಿ ಮಾಡಬಹುದು.
  • ಹಂಗ್‌ ಕರ್ಡ್‌ ತಯಾರಿಸುವುದು ಬಹಳ ಸುಲಭ. ಕಾಟನ್‌ ಬಟ್ಟೆಯೊಳಗೆ ಮೊಸರು ಸೇರಿಸಿ ಅದನ್ನು 15 ನಿಮಿಷಗಳ ಕಾಲ ಒಂದು ಸ್ಥಳದಲ್ಲಿ ನೇತು ಹಾಕಿ. ಮೊಸರಿನಲ್ಲಿ ನೀರು ಸೋರಿದ ನಂತರ ನಿಮಗೆ ಸಿಗುವುದೇ ಹಂಗ್‌ ಕರ್ಡ್‌.
  • ಒಂದು ಅಗಲವಾದ ಪಾತ್ರೆಗೆ ಸಕ್ಕರೆ ಸೇರಿಸಿ ಫ್ಲೇಮ್‌ ಕಡಿಮೆ ಇರಿಸಿಕೊಂಡು ಸಕ್ಕರೆ ಕರಗಲು ಬಿಡಿ. ( ನೀರು ಹಾಕಬೇಡಿ)
  • ಸಕ್ಕರೆ ಕರಗಿ ಕಂದು ಬಣ್ಣಕ್ಕೆ ಬರುತ್ತದೆ, ಕೈ ಬಿಡದೆ ಅದನ್ನು 5 ನಿಮಿಷದವರೆಗೆ ತಿರುವುತ್ತಿರಿ.
  • ಕ್ಯಾರಮಲೈಸ್‌ ಆದ ಸಕ್ಕರೆಗೆ ಹಾಲು ಸೇರಿಸಿ ತಿರುವಿ, ಸಕ್ಕರೆ ಮಿಶ್ರಣ ಹಾಲಿನೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವರೆಗೆ ಮಿಕ್ಸ್‌ ಮಾಡಿ.
  • ಇನ್ನಷ್ಟು ಸಕ್ಕರೆ ಸೇರಿಸಿ ಅದು ಕರಗುವರೆಗೆ ತಿರುವುತ್ತಿರಿ, ಹಾಲಿನ ಬಣ್ಣ ಸಂಪೂರ್ಣ ಬದಲಾದಾಗ ಫ್ಲೇಮ್‌ ಆಫ್‌ ಮಾಡಿ.
  • ಒಂದು ಬೌಲ್‌ನಲ್ಲಿ ಹಂಗ್‌ ಕರ್ಡ್‌ ಸೇರಿಸಿ ಚೆನ್ನಾಗಿ ವಿಸ್ಕ್‌ ಮಾಡಿ.
  • ಹಾಲು ಸಕ್ಕರೆ ಮಿಶ್ರಣ ಸ್ವಲ್ಪ ಬೆಚ್ಚಗಿರುವಾಗಲೇ ಸ್ವಲ್ಪ ಸ್ವಲ್ಪವೇ ಹಂಗ್‌ ಕರ್ಡ್‌ ಜೊತೆ ಸೇರಿಸಿ ತಿರುವಿ.
  • ಈ ಮಿಶ್ರಣವನ್ನು ಗ್ಲಾಸ್‌ ಅಥವಾ ಮಣ್ಣಿನ ಪುಟ್ಟ ಪುಟ್ಟ ಪಾಟ್‌ಗಳಿಗೆ ಸೇರಿಸಿ ಬಿಗಿಯಾಗಿ ಪ್ಲೇಟ್‌ ಮುಚ್ಚಿ
  • ಎಲ್ಲಾ ಗ್ಲಾಸ್‌ಗಳನ್ನು ಒಂದೆಡೆ ಇಟ್ಟು ಮೇಲೆ ದಪ್ಪನಾದ ಟವೆಲ್‌ ಅಥವಾ ಬಟ್ಟೆ ಮುಚ್ಚಿ ರಾತ್ರಿಯಿಡೀ ಬಿಡಿ.
  • ಮರುದಿನ ಮಿಶ್ರಣ ಗಿಣ್ಣಿನಂತೆ ತಯಾರಾಗಿರುತ್ತದೆ, ಇದನ್ನು ಒಂದು ಪಾತ್ರೆಯೊಳಗೆ ಇಟ್ಟು (ಕೇಕ್‌ನಂತೆ ) 10 ನಿಮಿಷ ಕಡಿಮೆ ಉರಿಯಲ್ಲಿ ಬೇಕ್‌ ಮಾಡಿ. ( ಈ ಸ್ಟೆಪ್‌ ಸ್ಕಿಪ್‌ ಮಾಡಬಹುದು)
  • ನಂತರ ಮತ್ತೆ 1 ಗಂಟೆ ರೆಫ್ರಿಜರೇಟರ್‌ನಲ್ಲಿ ಇಟ್ಟು ಮಿಷ್ಟಿ ದೋಯಿಯನ್ನು ಎಂಜಾಯ್‌ ಮಾಡಿ.

ಮನೆಯಲ್ಲೇ ಕ್ರಿಸ್ಪಿ ಚಿಕನ್‌ ತಯಾರಿಸಿ ರೆಸ್ಟೋರೆಂಟ್‌ ದಾರಿ ಮರೆಯಿರಿ; ಸಂಪೂರ್ಣ ಸರಳ ರೆಸಿಪಿ ಇಲ್ಲಿದೆ, ಟ್ರೈ ಮಾಡಿ

Whats_app_banner