ಕನ್ನಡ ಸುದ್ದಿ  /  Lifestyle  /  Dessert Recipe How To Prepare Banana Oats Halwa Recipe Sweet Recipe Ingredients To Make Halwa Recipe Rsa

Banana Halwa Recipe: ಮಾಗಿದ ಬಾಳೆಹಣ್ಣುಗಳನ್ನು ಎಸೆಯಬೇಡಿ; ಓಟ್ಸ್‌ ಜೊತೆಗೆ ಇನ್ನೊಂದಿಷ್ಟು ಸಾಮಗ್ರಿ ಸೇರಿಸಿ ಹಲ್ವಾ ತಯಾರಿಸಿ

Banana Halwa Recipe: ಬಾಳೆ ಹಣ್ಣು ಬಹಳ ಮಾಗಿದ್ದರೆ ತಿನ್ನಲು ಖುಷಿ ಎನಿಸುವುದಿಲ್ಲ. ಹಾಗಂತ ಅವುಗಳನ್ನು ಎಸೆಯಲು ಹೋಗಬೇಡಿ. ಇವುಗಳನ್ನು ಬಳಸಿ ಥಟ್ ಅಂತಾ ನೀವು ರುಚಿ ರುಚಿಯಾದ ಆರೋಗ್ಯಕರ ಬಾಳೆಹಣ್ಣಿನ ಹಲ್ವಾ ತಯಾರಿಸಬಹುದಾಗಿದೆ.

ಬಾಳೆಹಣ್ಣು, ಓಟ್ಸ್‌ ಹಲ್ವಾ ರೆಸಿಪಿ (ಸಾಂದರ್ಭಿಕ ಚಿತ್ರ)
ಬಾಳೆಹಣ್ಣು, ಓಟ್ಸ್‌ ಹಲ್ವಾ ರೆಸಿಪಿ (ಸಾಂದರ್ಭಿಕ ಚಿತ್ರ) (Freepik)

Dessert Recipe: ಭಾರತದ ಸಾಂಪ್ರದಾಯಿಕ ಸಿಹಿ ತಿನಿಸುಗಳ ಪೈಕಿ ಹಲ್ವಾ ಕೂಡ ಒಂದು. ನಾನಾ ಪದಾರ್ಥಗಳನ್ನು ಬಳಕೆ ಮಾಡಿ ಹಲ್ವಾ ತಯಾರಿಸಲಾಗುತ್ತದೆ. ಕ್ಯಾರೆಟ್ ಹಲ್ವಾ, ಕುಂಬಳಕಾಯಿ ಹಲ್ವಾ, ಸೋರೆಕಾಯಿ ಹಲ್ವಾ ಹೀಗೆ ಹಲ್ವಾದ ಬಗ್ಗೆ ಮಾತನಾಡುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅದೇ ರೀತಿ ಇಂದು ನಾವು ಓಟ್ಸ್ ಹಾಗೂ ಬಾಳೆಹಣ್ಣನ್ನು ಬಳಕೆ ಮಾಡಿ ಅತ್ಯಂತ ಸುಲಭವಾಗಿ ರುಚಿಕರವಾದ ಹಲ್ವಾ ತಯಾರಿಸುವುದು ಹೇಗೆ ಎಂಬುದನ್ನು ಕಲಿಯೋಣ.

ಈ ರುಚಿಕರವಾದ ಬಾಳೆ ಹಣ್ಣಿನ ಹಲ್ವಾ ತಯಾರಿಸಲು ನಿಮಗೆ ಹೆಚ್ಚೇನು ಪದಾರ್ಥಗಳ ಅವಶ್ಯಕತೆ ಇರೋದಿಲ್ಲ. ಬಾಳೆಹಣ್ಣಿನ ಜೊತೆಯಲ್ಲಿ ಓಟ್ಸ್, ಹಾಲು, ಸಕ್ಕರೆ ಹಾಗೂ ಖರ್ಜೂರವನ್ನು ಬಳಸಿ ರುಚಿ ರುಚಿಯಾದ ಬಾಳೆ ಹಣ್ಣಿನ ಹಲ್ವಾ ತಯಾರಿಸಬಹುದಾಗಿದೆ. ಕೇವಲ 30 ನಿಮಿಷಗಳಲ್ಲಿ ತಯಾರಿಸಬಹುದಾದ ಈ ಹಲ್ವಾವನ್ನು ರಾತ್ರಿ ಊಟದ ನಂತರ ಸವಿದರೆ ಅದರ ಮಜಾವೇ ಬೇರೆ. ಕೊನೆಯಲ್ಲಿ ನೀವು ಗೋಡಂಬಿ ಹಾಗೂ ದ್ರಾಕ್ಷಿಯ ಮೂಲಕ ಹಲ್ವಾವನ್ನು ಗಾರ್ನಿಶ್‌ ಮಾಡಬಹುದು.

ಹಾಗಾದರೆ ಇನ್ಯಾಕೆ ತಡ..? ಬಾಳೆ ಹಣ್ಣಿನ ಹಲ್ವಾ ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ

ಬೇಕಾಗುವ ಸಾಮಗ್ರಿಗಳು : ಬಾಳೆಹಣ್ಣು 6, ಖರ್ಜೂರ 15, ಓಟ್ಸ್ 1 ಕಪ್, ಸಕ್ಕರೆ 1 ಕಪ್, ಹಾಲು 1ಕಪ್, ಗೋಡಂಬಿ - ದ್ರಾಕ್ಷಿ ಸ್ವಲ್ಪ, ತುಪ್ಪ 1/4 ಕೆಜಿ

ತಯಾರಿಸುವ ವಿಧಾನ : ಮೊದಲನೆಯದಾಗಿ ನೀವು 4-5 ಮಾಗಿದ ಬಾಳೆಹಣ್ಣಿನ ಸಿಪ್ಪೆ ಸುಲಿದು ಅದನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಬೇಕು. ಇದಾದ ಬಳಿಕ ಬೀಜ ತೆಗೆದ 15 ಖರ್ಜೂರವನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ . ಪ್ಯಾನನ್ನು ಸ್ಟೌವ್‌ ಮೇಲಿಟ್ಟು ಮಧ್ಯಮ ಉರಿ ಇರಿಸಿ. ಮೊದಲು ಇದಕ್ಕೆ ತುಪ್ಪವನ್ನು ಹಾಕಿ. ತುಪ್ಪದ ಘಮ ಮೂಗಿಗೆ ಬಡಿಯಲು ಆರಂಭವಾಗುತ್ತಿದ್ದಂತೆಯೇ ಇದಕ್ಕೆ ಈಗ ಓಟ್ಸ್‌ ಹಾಕಿ ಚೆನ್ನಾಗಿ ಫ್ರೈ ಮಾಡಿ.

ಮಧ್ಯಮ ಉರಿಯನ್ನು ಈಗ ಇನ್ನಷ್ಟು ಕಡಿಮೆ ಮಾಡಿ , ಈಗ ಈ ಮಿಶ್ರಣಕ್ಕೆ 1 ಕಪ್ ಹಾಲನ್ನು ಸೇರಿಸಿ. ಜೊತೆಯಲ್ಲಿ ಖರ್ಜೂರ ಮತ್ತು ಸಕ್ಕರೆಯನ್ನೂ ಹಾಕಿ. ಸಕ್ಕರೆ ಸಂಪೂರ್ಣ ಕರುಗುವವರೆಗೂ ಇದನ್ನು ಬೇಯಿಸುತ್ತಲೇ ಇರಿ. ಈಗ ನೀವು ಸ್ಟೌವನ್ನು ಮತ್ತೊಮ್ಮೆ ಮಧ್ಯಮ ಉರಿಗೆ ತನ್ನಿ.

ಈಗ ಗ್ಯಾಸ್ ಆಫ್ ಮಾಡಿ. ಇನ್ನೊಂದು ಬಾಳೆ ಹಣ್ಣನ್ನು ತೆಗೆದುಕೊಂಡು ಸಣ್ಣದಾಗಿ ಕತ್ತರಿಸಿ ಹಲ್ವಾಗೆ ಸೇರಿಸಿ. ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಇದರದಲ್ಲಿ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಹುರಿದುಕೊಂಡು ಇದನ್ನೂ ಹಲ್ವಾಗೆ ಸೇರಿಸಿ ಚೆನ್ನಾಗಿ ಕಲಿಸಿ. ಈಗ ಬಿಸಿ ಬಿಸಿಯಾದ ಹಾಗೂ ಸವಿ ಸವಿಯಾದ ಬಾಳೆಹಣ್ಣಿನ ಹಲ್ವಾ ಸವಿಯಲು ಸಿದ್ಧ.

ವಿಭಾಗ