ಕನ್ನಡ ಸುದ್ದಿ  /  Lifestyle  /  Diabetics Can Consume Dates For Health

Diabetics: ಸಿಹಿ ಎಂದು ಮಧುಮೇಹಿಗಳು ಖರ್ಜೂರದಿಂದ ದೂರ ಇದ್ದೀರಾ..ಇದನ್ನು ಓದಿದ್ರೆ ಇನ್ಮುಂದೆ ನೀವು ಕೂಡಾ ತಿನುತ್ತೀರ

ಮಧುಮೇಹದಿಂದ ಬಳಲುವ ಅನೇಕರು ಚಿಕಿತ್ಸೆಗಾಗಿ ಇನ್ಸುಲಿನ್ ಪೂರಕಗಳು ಮತ್ತು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ದಿನನಿತ್ಯದ ಆಹಾರದಲ್ಲಿ ಖರ್ಜೂರವನ್ನು ಸೇರಿಸುವುದರಿಂದ ನೈಸರ್ಗಿಕವಾಗಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದಾಗಿದೆ. ಖರ್ಜೂರಗಳು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತವೆ.

ಖರ್ಜೂರ
ಖರ್ಜೂರ (PC: Freepik)

ಖರ್ಜೂರ ಆರೋಗ್ಯಕರ ಎಂಬುದು ತಿಳಿದ ವಿಚಾರ. ಇದು ರುಚಿಯಾಗಿರುವುದರಿಂದ ಎಲ್ಲರೂ ತಿನ್ನಲು ಇಷ್ಟಪಡುತ್ತಾರೆ. ಖರ್ಜೂರದಲ್ಲಿ ಸೆಲೆನಿಯಮ್, ಮ್ಯಾಂಗನೀಸ್, ಮೆಗ್ನೀಶಿಯಮ್, ಕಬ್ಬಿಣ, ಪೊಟ್ಯಾಶಿಯಮ್ ಮತ್ತು ತಾಮ್ರದಂತಹ ಸೂಕ್ಷ್ಮ ಪೋಷಕಾಂಶಗಳು ಸಮೃದ್ಧವಾಗಿವೆ.

ಮೆದುಳಿನ ಆರೋಗ್ಯಕ್ಕೆ ಖರ್ಜೂರ ಒಳ್ಳೆಯದು

ಅಧ್ಯಯನಗಳ ಪ್ರಕಾರ ಖರ್ಜೂರಗಳು IL-6 ಮಟ್ಟವನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿ. ಖರ್ಜೂರದಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು, ಫ್ಲೇವನಾಯ್ಡ್‌ಗಳು ಸೇರಿದಂತೆ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇವು ನಿಮ್ಮ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತವೆ. ನಿಮ್ಮ ಜ್ಞಾಪಕ ಶಕ್ತಿ ಮತ್ತು ಕಲಿಕೆಯ ಶಕ್ತಿಯನ್ನು ಸುಧಾರಿಸಲು ಕೂಡಾ ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಖರ್ಜೂರದಲ್ಲಿ ಫೈಬರ್ ಸಮೃದ್ಧವಾಗಿದೆ. ಇವುಗಳನ್ನು ಪ್ರತಿದಿನ ಸೇವಿಸುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಫೈಬರ್ ಅಂಶವು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. 21 ದಿನಗಳ ಕಾಲ ಪ್ರತಿ ದಿನ ಖರ್ಜೂರವನ್ನು ಸೇವಿಸಿದ ಕೆಲವು ಜನರು ತಮ್ಮ ಜೀರ್ಣಕ್ರಿಯೆ ಸುಧಾರಿಸಿದೆ ಎಂದು ಹೇಳಿರುವುದು ಅಧ್ಯಯನದಲ್ಲಿ ತಿಳಿದುಬಂದಿದೆ. ಖರ್ಜೂರದಲ್ಲಿರುವ ನಾರಿನಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಮೂಳೆಯ ಆರೋಗ್ಯವನ್ನು ಬಲಪಡಿಸುತ್ತದೆ

ಖರ್ಜೂರವು ಸೆಲೆನಿಯಮ್, ಮೆಗ್ನೀಶಿಯಮ್, ಮ್ಯಾಂಗನೀಸ್, ತಾಮ್ರ ಮುಂತಾದ ಪ್ರಮುಖ ಸೂಕ್ಷ್ಮ ಪೋಷಕಾಂಶಗಳಿಂದ ತುಂಬಿದೆ. ಇದು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ. ಮೂಳೆಗೆ ಸಂಬಂಧಿತ ಅಸ್ವಸ್ಥತೆಯನ್ನೂ ದೂರವಿಡುತ್ತದೆ. ಇದರಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ. ಖರ್ಜೂರವು ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆಸ್ಟಿಯೊಪೊರೋಸಿಸ್‌ನಿಂದ ಬಳಲುತ್ತಿರುವವರು ಮೂಳೆ ಮುರಿತದಿಂದ ಬಳಲುವ ಅಪಾಯವಿದೆ. ಅಂತವರು ಪ್ರತಿದಿನ ಖರ್ಜೂರ ಸೇವಿಸುವುದರಿಂದ ಈ ಸಮಸ್ಯೆಯನ್ನು ಸುಧಾರಿಸಬಹುದು.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹದಿಂದ ಬಳಲುವ ಅನೇಕರು ಚಿಕಿತ್ಸೆಗಾಗಿ ಇನ್ಸುಲಿನ್ ಪೂರಕಗಳು ಮತ್ತು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ದಿನನಿತ್ಯದ ಆಹಾರದಲ್ಲಿ ಖರ್ಜೂರವನ್ನು ಸೇರಿಸುವುದರಿಂದ ನೈಸರ್ಗಿಕವಾಗಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದಾಗಿದೆ. ಖರ್ಜೂರಗಳು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತವೆ. ಇದು ರಕ್ತದಲ್ಲಿ ಸಕ್ಕರೆ ಮತ್ತು ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡುತ್ತದೆ. ಖರ್ಜೂರವು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಕರುಳಿನಿಂದ ಗ್ಲೂಕೋಸ್ ಹೀರಿಕೊಳ್ಳುವಿಕೆಯ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮಧುಮೇಹದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

ತೂಕ ನಷ್ಟಕ್ಕೆ ಸಹಾಯಕಾರಿ

ನಿಮ್ಮ ಶಕ್ತಿಯನ್ನು ಹೆಚ್ಚಿಸಲು ಮತ್ತು ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಲು ಖರ್ಜೂರ ಉಪಯುಕ್ತವಾಗಿದೆ. ವ್ಯಾಯಾಮ ಮಾಡುವ ಮೊದಲು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಬೆಳಗ್ಗೆ ನಾಲ್ಕೈದು ಖರ್ಜೂರವನ್ನು ಸೇವಿಸಿ. ಖರ್ಜೂರಗಳು ನಾರಿನಂಶದಿಂದ ತುಂಬಿರುವ ಕಾರಣ ನೀವು ಹೆಚ್ಚು ಕಾಲ ಹೊಟ್ಟೆ ತುಂಬಿರುವ ಭಾವನೆಯನ್ನು ನೀಡುತ್ತವೆ. ಅನಾರೋಗ್ಯಕರ ತಿಂಡಿಗಳನ್ನು ನೀವು ತಿನ್ನದಂತೆ ತಪ್ಪಿಸುತ್ತದೆ.

ಗಮನಿಸಿ: ಇಲ್ಲಿ ತಿಳಿಸಿರುವ ಅಂಶಗಳನ್ನು ಅಳವಡಿಸಿಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯಿರಿ.