Diabetes: ಸಕ್ಕರೆ ಕಾಯಿಲೆ ಇರುವವರು ನಿಮ್ಮ ಆಹಾರ ಕ್ರಮವನ್ನು ಈ ರೀತಿ ಬದಲಾಯಿಸಿಕೊಳ್ಳಿ; ನಿಮ್ಮ ಸಮಸ್ಯೆಗೆ ಇದರಿಂದಲೇ ಪರಿಹಾರ ಸಿಗುತ್ತೆ
Diabetes: ನೀವು ನಿಮಗೆ ಸಕ್ಕರೆ ಕಾಯಿಲೆ ಇದೆ ಎಂದು ಯಾವ ಚಿಂತೆಯನ್ನೂ ಮಾಡಬೇಕಿಲ್ಲ. ಇದನ್ನು ನಿಯಂತ್ರಿಸಲು ಇಲ್ಲಿ ಕೆಲವು ಸುಲಭ ವಿಧಾನಗಳಿವೆ. ಈ ವಿಧಾನಗಳನ್ನು ನೀವೂ ಅನುಸರಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಮಧುಮೇಹವು ದೀರ್ಘಕಾಲದವರೆಗೆ ಇರುವ ಕಾಯಿಲೆಯಾಗಿದೆ. ಮೇದೋಜೀರಕ ಗ್ರಂಥಿಯು ದೇಹಕ್ಕೆ ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸಲು ಸಾಧ್ಯವಿಲ್ಲದಾಗ ಈ ಕಾಯಿಲೆ ಬರುತ್ತದೆ. ಅಥವಾ ಕೆಲವೊಮ್ಮೆ, ದೇಹವು ಉತ್ಪಾದಿಸುವ ಇನ್ಸುಲಿನ್ ಅನ್ನು ಬಳಸುವುದಿಲ್ಲ. ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಇನ್ಸುಲಿನ್ ಅತ್ಯಗತ್ಯ. ಮಧುಮೇಹದ ಸಾಮಾನ್ಯ ಲಕ್ಷಣಗಳೆಂದರೆ ಆಯಾಸ, ತೂಕ ಇಳಿಕೆ, ದೃಷ್ಟಿ ಮಂದವಾಗುವುದು, ಅತಿಯಾದ ಬಾಯಾರಿಕೆ, ಆಗಾಗ ಮೂತ್ರ ವಿಸರ್ಜನೆ. ಕೆಲವೊಮ್ಮೆ, ಯಾವುದೇ ರೋಗಲಕ್ಷಣಗಳಿಲ್ಲದಿರಬಹುದು. ಮಧುಮೇಹದಲ್ಲಿ ಎರಡು ವಿಧಗಳಿವೆ. ಟೈಪ್ 1 ಡಯಾಬಿಟಿಸ್, ಟೈಪ್ 2 ಡಯಾಬಿಟಿಸ್ . ಮಧುಮೇಹದ ಲಕ್ಷಣಗಳನ್ನು ಸರಿಯಾದ ಜೀವನಶೈಲಿ ಮತ್ತು ಆಹಾರದ ಬದಲಾವಣೆಗಳೊಂದಿಗೆ ನಿಯಂತ್ರಿಸಬಹುದು.
ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ಫ್ರೀಡಂ ಫ್ರಮ್ ಡಯಾಬಿಟಿಸ್ ಸಂಸ್ಥಾಪಕ ಡಾ. ಪ್ರಮೋದ್ ತ್ರಿಪಾಠಿ, ನಾವು ತಿನ್ನುವಾಗ ನಾವು ಅನುಸರಿಸುವ ಆಹಾರ ಕ್ರಮವನ್ನು ಹೇಗೆ ಬದಲಾಯಿಸುವುದು? ಮಧುಮೇಹದ ಲಕ್ಷಣಗಳನ್ನು ಎದುರಿಸಲು ಇದು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ ಗಮನಿಸಿ.
ಪ್ರೋಟೀನ್ ಮತ್ತು ತರಕಾರಿಗಳು
ನಾವು ಸೇವಿಸುವ ಆಹಾರದ ಕ್ರಮವು ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಾಮಾನ್ಯವಾಗಿ ಭಾರತೀಯ ಆಹಾರದ ಪ್ರಕಾರ ಕಾರ್ಬೋಹೈಡ್ರೇಟ್ ಅಂಶ ಇರುವುದನ್ನು ಮೊದಲು ತಿನ್ನಲಾಗುತ್ತದೆ. ಅಂದರೆ ಅನ್ನ ಅಥವಾ ರೊಟ್ಟಿ ತಿನ್ನುತ್ತಾರೆ. ಮತ್ತು ನಂತರ ಸಲಾಡ್‌ಗಳು ಮತ್ತು ಪ್ರೋಟೀನ್‌ಗಳನ್ನು ಸೇವಿಸಲಾಗುತ್ತದೆ. ಆದರೆ ಮೊದಲೇ ನೀವು ತರಕಾರಿಗಳನ್ನು ತಿನ್ನುತ್ತಾ ಊಟ ಪ್ರಾರಂಭ ಮಾಡಿ. ಮೊದಲು ಪ್ರೋಟೀನ್ ಮತ್ತು ತರಕಾರಿಗಳನ್ನು ತಿನ್ನುವುದು ಪ್ರಯೋಜನಕಾರಿ ಎಂದು ಅಧ್ಯಯನಗಳು ತಿಳಿಸಿವೆ. ಪ್ರೋಟೀನ್ ಮತ್ತು ತರಕಾರಿಗಳು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ, ಅವು ರಕ್ತಪ್ರವಾಹಕ್ಕೆ ಗ್ಲೂಕೋಸ್ ಬಿಡುಗಡೆಯನ್ನು ನಿಧಾನಗೊಳಿಸುತ್ತವೆ ಎಂದು ಡಾ. ಪ್ರಮೋದ್ ತ್ರಿಪಾಠಿ ವಿವರಿಸಿದ್ದಾರೆ.
ಆಹಾರ ಸೇವನೆಯ ಕ್ರಮದ ಪರಿಣಾಮ
ನಿಮ್ಮ ಆಹಾರಕ್ರಮವನ್ನು ಬದಲಾಯಿಸುವ ಪ್ರಯೋಜನಗಳನ್ನು ತಿಳಿಯಿರಿ.
ಉತ್ತಮ ಗ್ಲೂಕೋಸ್ ನಿಯಂತ್ರಣ: ತರಕಾರಿಗಳು ಮತ್ತು ಪ್ರೋಟೀನ್ ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ನಿಧಾನವಾದ ಜೀರ್ಣಕ್ರಿಯೆ ಎಂದರೆ ರಕ್ತದಲ್ಲಿನ ಸಕ್ಕರೆಯ ಸ್ಪೈಕ್‌ಗಳ ಅಪಾಯ ಕಡಿಮೆ. ಇದು ಗ್ಲೂಕೋಸ್ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹಸಿವು ನಿಯಂತ್ರಣ: ಪ್ರೋಟೀನ್ ಮತ್ತು ಫೈಬರ್ ನಿಮಗೆ ಹೆಚ್ಚು ಕಾಲ ಪೂರ್ಣವಾಗಿರಲು ಸಹಾಯ ಮಾಡುತ್ತದೆ. ಇದು ಅತಿಯಾಗಿ ತಿನ್ನುವ ಅಥವಾ ಅನಾರೋಗ್ಯಕರ ಆಹಾರವನ್ನು ಸೇವಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಪೋಷಕಾಂಶಗಳ ಸಮತೋಲನ: ಪ್ರೋಟೀನ್ ಮತ್ತು ತರಕಾರಿಗಳ ಮೇಲೆ ಕೇಂದ್ರೀಕರಿಸುವುದರಿಂದ ಖನಿಜ ಅಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಸೇರಿದಂತೆ ಅಗತ್ಯವಾದ ಪೋಷಕಾಂಶಗಳ ಸಮತೋಲನವನ್ನು ದೇಹಕ್ಕೆ ಒದಗಿಸಬಹುದು. ಇದು ಮಧುಮೇಹದ ಜೊತೆಗೆ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.
ವಿಭಾಗ