ಡಿಜಿಟಲ್‌ ಜಾಗೃತಿ: ಏನಣ್ಣ, ಏನ್ಸಮಾಚಾರ, ಅತ್ತಿಗೆ ಚೆನ್ನಾಗಿದಾರಾ? ಅಂದೆ! ಆನ್‌ಲೈನ್‌ ವಂಚಕರನ್ನು ಬೇಸ್ತು ಬೀಳಿಸಿದ ಮಮತಾ ಅರಸಿಕೆರೆ
ಕನ್ನಡ ಸುದ್ದಿ  /  ಜೀವನಶೈಲಿ  /  ಡಿಜಿಟಲ್‌ ಜಾಗೃತಿ: ಏನಣ್ಣ, ಏನ್ಸಮಾಚಾರ, ಅತ್ತಿಗೆ ಚೆನ್ನಾಗಿದಾರಾ? ಅಂದೆ! ಆನ್‌ಲೈನ್‌ ವಂಚಕರನ್ನು ಬೇಸ್ತು ಬೀಳಿಸಿದ ಮಮತಾ ಅರಸಿಕೆರೆ

ಡಿಜಿಟಲ್‌ ಜಾಗೃತಿ: ಏನಣ್ಣ, ಏನ್ಸಮಾಚಾರ, ಅತ್ತಿಗೆ ಚೆನ್ನಾಗಿದಾರಾ? ಅಂದೆ! ಆನ್‌ಲೈನ್‌ ವಂಚಕರನ್ನು ಬೇಸ್ತು ಬೀಳಿಸಿದ ಮಮತಾ ಅರಸಿಕೆರೆ

ಆನ್‌ಲೈನ್‌ ವಂಚಕರ ಕರೆ ಬಂದಾಗ ಯಾವ ರೀತಿ ಅವರನ್ನು ಯಾವ ರೀತಿ ನಿಭಾಯಿಸಬಹುದು ಎನ್ನುವ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಹಲವು ಜನರು ಐಡಿಯಾಗಳನ್ನು ಹಂಚಿಕೊಂಡಿದ್ದಾರೆ. ಇದೇ ರೀತಿ ವಂಚಕರ ಕರೆ ಬಂದಾಗ ಭಯಗೊಳ್ಳದೆ ಜಾಣ್ಮೆಯಿಂದ ನಿಭಾಯಸಿದರೆ ವಂಚಕರಿಂದ ಪಾರಾಗಬಹುದು.

ಡಿಜಿಟಲ್‌ ಜಾಗೃತಿ: ಏನಣ್ಣ, ಏನ್ಸಮಾಚಾರ, ಅತ್ತಿಗೆ ಚೆನ್ನಾಗಿದಾರಾ? ಅಂದೆ! ಆನ್‌ಲೈನ್‌ ವಂಚಕರನ್ನು ಬೇಸ್ತು ಬೀಳಿಸಿದ ಮಮತಾ ಅರಸಿಕೆರೆ
ಡಿಜಿಟಲ್‌ ಜಾಗೃತಿ: ಏನಣ್ಣ, ಏನ್ಸಮಾಚಾರ, ಅತ್ತಿಗೆ ಚೆನ್ನಾಗಿದಾರಾ? ಅಂದೆ! ಆನ್‌ಲೈನ್‌ ವಂಚಕರನ್ನು ಬೇಸ್ತು ಬೀಳಿಸಿದ ಮಮತಾ ಅರಸಿಕೆರೆ

ಆನ್‌ಲೈನ್‌ ವಂಚನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರೆಗಳ ಮೂಲಕ, ಎಸ್‌ಎಂಎಸ್‌ಗಳ ಮೂಲಕ, ಸ್ಪ್ಯಾಮ್‌ ಲಿಂಕ್‌ಗಳ ಮೂಲಕ ಅಮಾಯಕರನ್ನು ಬಲಿಪಡೆಯಲು ಆನ್‌ಲೈನ್‌ ವಂಚಕರು ಕಾಯುತ್ತ ಇರುತ್ತಾರೆ. ಇದೇ ಕಾರಣಕ್ಕೆ ವಂಚನೆಯ ಎಸ್‌ಎಂಎಸ್‌ಗಳು, ಇಮೇಲ್‌ಗಳು, ಲಿಂಕ್‌ಗಳು, ಕರೆಗಳು ಎಲ್ಲರಿಗೂ ನಿತ್ಯ ಬರುತ್ತಾ ಇರುತ್ತವೆ. ಸಾಕಷ್ಟು ಜನರು ಅಸಲಿ ನಕಲಿಗಳ ವ್ಯತ್ಯಾಸಗೊಳ್ಳದೆ ಭಯಗೊಳ್ಳುವುದುಂಟು. ತಾವು ಪೊಲೀಸರು, ಇನ್‌ಕಂ ಟ್ಯಾಕ್ಸ್‌ ಡಿಪಾರ್ಟ್‌ಮೆಂಟ್‌ನವರು, ಸಿಬಿಐನವರು, ಎಸ್‌ಬಿಐನವರು ಎಂದು ಹೇಳಿಕೊಂಡು ಕರೆ ಮಾಡುತ್ತಾರೆ. ಇಂತಹ ವಂಚಕರ ಕರೆಗೆ ಅಶಿಕ್ಷಿತರು ಮಾತ್ರವಲ್ಲದೆ ಉನ್ನತ ಹುದ್ದೆಯಲ್ಲಿದ್ದವರೂ ಬೀಳುತ್ತಾರೆ. ಇಂತಹ ವಂಚಕರ ಕರೆಗೆ ಭಯಪಟ್ಟರೆ ನಿಮ್ಮನ್ನು ಡಿಜಿಟಲ್‌ ಅರೆಸ್ಟ್‌ ಮಾಡಬಹುದು. ನಿಮ್ಮನ್ನು ಭಯಗೊಳಿಸಿ ನಿಮ್ಮ ಖಾತೆಯಲ್ಲಿರುವ ಹಣವನ್ನೆಲ್ಲ ಅವರು ದೋಚಿಕೊಳ್ಳಬಹುದು. ಮೊದಲಿಗೆ ಈ ರೀತಿಯ ಕರೆಗಳು ಬಂದಾಗ ಇವು ಫೇಕ್‌ ಕರೆಗಳು ಎಂದು ತಿಳಿಯಿರಿ. ಈ ರೀತಿ ಫೇಕ್‌ ಕರೆಗಳು ಬಂದಾಗ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು.

ಏನಣ್ಣ, ಏನ್ಸಮಾಚಾರ, ಅತ್ತಿಗೆ ಚೆನ್ನಾಗಿದಾರಾ?

ಇದೇ ಸಮಯದಲ್ಲಿ ಇಂತಹ ವಂಚಕರ ಕರೆ ಬಂದಾಗ ಅವರನ್ನು ಹೇಗೆ ನಿಭಾಯಿಸಬಹುದು ಎನ್ನುವುದಕ್ಕೆ ಫೇಸ್‌ಬುಕ್‌ನಲ್ಲಿ ಮಮತಾ ಅರಸಿಕೆರೆಯವರು ಬರೆದ ಪೋಸ್ಟ್‌ ಗಮನ ಸೆಳೆಯುತ್ತದೆ. "ಒಂದು ಅಪರಿಚಿತ ನಂಬರ್ ಇಂದ ಕರೆ ಬಂತು, ಸಹಜವಾಗಿ ಸ್ವೀಕರಿಸಿದೆ, ಹಿಂದಿಯಲ್ಲಿ ಲೇಡಿ ದನಿ ಕೆಲವೇ ಸೆಕೆಂಡ್ ಮಾತಾಡಿತು.." ಇನ್ನು ಅರ್ಧ ಗಂಟೆಯಲ್ಲಿ ನಿಮ್ಮ ಫೋನ್ ನಂಬರ್ ಡಿ ಆಕ್ಟಿವೇಟ್ ಆಗುತ್ತೆ" ಅಂತು, ಹಿಂದೆಯೇ "ಗಂಡಸಿನ ದನಿ, ಐ ಯಾಮ್ ರಾಕೇಶ್ ಕುಮಾರ್ ಸಿಂಗ್ ಫ್ರಂ ಟೆಲಿಕಾಂ ಡಿಪಾರ್ಟ್ ಮೆಂಟ್, ವಾಟ್ ಈಸ್ ಯುವರ್ ನೇಮ್ ' ಅಂತೇನೊ ಹೇಳಲಿತ್ತು, .. ನನಗೆ ತಕ್ಷಣ ಫೇಕ್ ಅಂತ ಗೊತ್ತಾಯಿತಲ್ಲ, ನಾನು , ಏನಣ್ಣ, ಏನ್ಸಮಾಚಾರ, ಅತ್ತಿಗೆ ಚೆನ್ನಾಗಿದಾರಾ? ಅಂದೆ! ಅವನು ಆ ..ಆ... ಅಂದವನು ತಕ್ಷಣ ಫೋನ್ ಕಟಾಯಿಸಿದ. ತಾತ್ಪರ್ಯ- ಹಿಂದಿ ಇಂಗ್ಲೀಷ್ ಇಂದ ಕರೆ ಬಂದರೆ ಕನ್ನಡದಲ್ಲಿ ಮಾತಾಡಿಬಿಟ್ಟರಾಯ್ತು. ಫುಲ್ ಗಲಿಬಿಲಿ ಮಾಡ್ಕಂಡ್ ತಂಟೆಗೇ ಬರಲ್ಲ. ಹೆಂಗೆ ನಮ್ ಕನ್ನಡ! ಏನಂತೀರಾ!" ಎಂದು ಮಮತಾ ಅರಸಿಕೆರೆ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸಾಕಷ್ಟು ಜನರು ಮಮತಾ ಅವರ ಐಡಿಯಾವನ್ನು ಒಪ್ಪಿದ್ದಾರೆ. ಇದು ಒಳ್ಳೆಯ ಐಡಿಯಾ ಎಂದಿದ್ದಾರೆ. "ಬ್ಯಾಂಕಿನಿಂದ ಬರುವ ಕರೆಗಳನ್ನು ಕನ್ನಡದಲ್ಲಿ‌ಮಾತನಾಡಿಸಿ. ನನಗೆ ಪೊಟೆನ್ಷಿಯಲಿ ಫ್ರಾಡ್ ಎಂದು ಗುರುತಿಸಿರುವ ಕರೆಗಳನ್ನು ಎತ್ತುವುದಿಲ್ಲ" ಎಂದು ಪಂಡಿತಾರಾಧ್ಯ ಮೈಸೂರು ಪ್ರತಿಕ್ರಿಯೆ ನೀಡಿದ್ದಾರೆ. "ನಾನೂ ಅಷ್ಟೇ ಮೇಡಂ... ಯಾವುದೇ ಸೇಲ್ಸ್ ಕಾಲ್ ಬಂದ್ರೆ ಕನ್ನಡದಲ್ಲಿ ಮಾತಾಡಲು ಪ್ರಾರಂಭಿಸುತ್ತೇನೆ" ಎಂದು ವೇಣು ಎಂವಿ ಕಾಮೆಂಟ್‌ ಮಾಡಿದ್ದಾರೆ. ಹೀಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಫೇಕ್‌ ಕರೆಗಳನ್ನು ಗುರುತಿಸುವುದು ಹೇಗೆ?

  • ಅಪರಿಚಿತ ಕರೆಗಳು, ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಬರುವ ಕರೆಗಳ ಕುರಿತು ಎಚ್ಚರಿಕೆ ಇರಲಿ.
  • ಆರ್‌ಬಿಐ, ಸಿಬಿಐ, ಟ್ಯಾಕ್ಸ್‌ ಡಿಪಾರ್ಟ್‌ಮೆಂಟ್‌ ಕರೆ ಎಂದೆಲ್ಲ ಹೇಳುವವರನ್ನು ನಂಬಬೇಡಿ.
  • ಒತ್ತಡದಲ್ಲಿ ಮಾತನಾಡುವ ಕರೆಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ. ಅಂದರೆ, ನಿಮ್ಮಿಂದ ಏನೋ ತಪ್ಪಾಗಿದೆ, ನೀವು ಅಪರಾಧಿ ಎಂದೆಲ್ಲ ಮಾತನಾಡುವವರನ್ನು ನಂಬಬೇಡಿ.
  • ಒಟಿಪಿ ಕೇಳುವವರನ್ನು ನಂಬಬೇಡಿ.
  • ಕರೆ ಮಾಡಿ ವೈಯಕ್ತಿಕ ಮಾಹಿತಿ ಕೇಳುವವರಿಗೆ ಮಾಹಿತಿ ನೀಡಬೇಡಿ.
  • ನಿಮ್ಮ ಕಂಪ್ಯೂಟರ್‌, ಮೊಬೈಲ್‌ ಇತ್ಯಾದಿಗಳನ್ನು ರಿಮೋಟ್‌ ಆಗಿ ಬಳಸಬೇಕೆಂದು ಹೇಳುವ ಅಪರಿಚಿತರನ್ನು ನಂಬಬೇಡಿ.
  • ಈ ರೀತಿ ಕರೆ ಮಾಡುವವರ ಮಾತಿನ ಶೈಲಿ, ವ್ಯಾಕರಣ ಸರಿಯಾಗಿಲ್ಲದೆ ಇದ್ದರೆ ಅವರು ವಂಚಕರು ಎಂದು ತಿಳಿಯಿರಿ.
  • ಟ್ರೂಕಾಲರ್‌ನಂತಹ ಅಪ್ಲಿಕೇಷನ್‌ ಹಾಕಿಕೊಳ್ಳಿ.

ಇದನ್ನೂ ಓದಿ: Digital arrest scam: ಡಿಜಿಟಲ್‌ ಬಂಧನ ವಂಚನೆಯಿಂದ 11.8 ಕೋಟಿ ರೂ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ, ಏನಿದು ಡಿಜಿಟಲ್‌ ಅರೆಸ್ಟ್‌ ಸ್ಕ್ಯಾಮ್‌?

Whats_app_banner