Disadvantages of Dry Shampoo: ನೀವೂ ಈ ರೀತಿಯ ಶ್ಯಾಂಪೂ ಬಳಸುತ್ತಿದ್ದೀರಾ...ಕ್ಯಾನ್ಸರ್‌ ಬರಬಹುದು ಎಚ್ಚರ..!
ಕನ್ನಡ ಸುದ್ದಿ  /  ಜೀವನಶೈಲಿ  /   Disadvantages Of Dry Shampoo: ನೀವೂ ಈ ರೀತಿಯ ಶ್ಯಾಂಪೂ ಬಳಸುತ್ತಿದ್ದೀರಾ...ಕ್ಯಾನ್ಸರ್‌ ಬರಬಹುದು ಎಚ್ಚರ..!

Disadvantages of Dry Shampoo: ನೀವೂ ಈ ರೀತಿಯ ಶ್ಯಾಂಪೂ ಬಳಸುತ್ತಿದ್ದೀರಾ...ಕ್ಯಾನ್ಸರ್‌ ಬರಬಹುದು ಎಚ್ಚರ..!

ಡ್ರೈ ಶ್ಯಾಂಪೂ ಬಳಸುವುದರಿಂದ ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗುತ್ತದೆ. ಇದನ್ನು ಬಳಸುವುದರಿಂದ ಬ್ಯಾಕ್ಟೀರಿಯಾದ ಫಂಗಲ್ ಸೋಂಕು ಮತ್ತು ಕ್ಯಾನ್ಸರ್ ಬೆಳವಣಿಗೆಯ ಅಪಾಯವೂ ಇದೆ ಎನ್ನಲಾಗಿದೆ. ಅಂಡಾಶಯದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಕೂಡಾ ಅಧ್ಯಯನದಿಂದ ತಿಳಿದುಬಂದಿದೆ.

ಡ್ರೈ ಶ್ಯಾಂಪೂ ಬಳಕೆಯ ದುಷ್ಪರಿಣಾಮಗಳು
ಡ್ರೈ ಶ್ಯಾಂಪೂ ಬಳಕೆಯ ದುಷ್ಪರಿಣಾಮಗಳು (PC: Freepik)

ಮೊದಲೆಲ್ಲಾ ಕೂದಲನ್ನು ತೊಳೆಯಲು ಸೀಗೆಪುಡಿ, ಅಂಟುವಾಳ ಸೇರಿದಂತೆ ನೈಸರ್ಗಿಕ ಪದಾರ್ಥಗಳನ್ನು ಬಳಸಲಾಗುತ್ತಿತ್ತು. ಆದರೆ ಈಗ ಆ ಜಾಗವನ್ನು ಶ್ಯಾಂಪೂಗಳು ಆವರಿಸಿವೆ. ಒಂದಲ್ಲಾ ಎರಡಲ್ಲಾ, ಮಾರುಕಟ್ಟೆಯಲ್ಲಿ ನಾನಾ ಕಂಪನಿಗಳ , ನಾನಾ ರೀತಿಯ ಶ್ಯಾಂಪೂಗಳು ದೊರೆಯುತ್ತವೆ. ಅದರಲ್ಲಿ ಡ್ರೈ ಶ್ಯಾಂಪೂ ಕೂಡಾ ಒಂದು.

ಡ್ರೈ ಶ್ಯಾಂಪೂ ನೀರು ಬಳಸದೆ ತಲೆಗೆ ಹಚ್ಚುವಂತಹ ಶ್ಯಾಂಪೂ. ನೀರು ದೊರೆಯದ ಸಮಯದಲ್ಲಿ ಈ ವಿಧದ ಶ್ಯಾಂಪೂಗಳನ್ನು ಬಳಸಿ ತಲೆಯನ್ನು ಸ್ವಚ್ಛಗೊಳಿಸಲಾಗುತ್ತದೆ. ಆದರೆ ಇದರಿಂದ ನಿಮ್ಮ ಕೂದಲಿಗೆ ಅನುಕೂಲವಾಗುವ ಬದಲು ಅನಾನೂಕೂಲವೇ ಹೆಚ್ಚು. ಅತಿಯಾಗಿ ಡ್ರೈ ಶ್ಯಾಂಪೂ ಬಳಸುವುದರಿಂದ ಕೂದಲು ಒಡೆಯುವುದು, ಕೂದಲು ಉದುರುವುದು ಇತ್ಯಾದಿ ಸಮಸ್ಯೆಗಳು ಉಂಟಾಗಬಹುದು. ಅಷ್ಟೇ ಅಲ್ಲ, ಇದರಿಂದ ಇನ್ನೂ ಅನೇಕ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಅದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಕೂದಲಿನಲ್ಲಿ ಸೇರಿರುವ ಕೊಳೆಯನ್ನು ತೊಳೆಯಲು ನಾವು ನೀರಿನ ಜೊತೆಗೆ ಶ್ಯಾಂಪೂ ಬಳಸುತ್ತೇವೆ. ಆದರೆ ಡ್ರೈ ಶಾಂಪೂವನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನಲ್ಲಿರುವ ಎಣ್ಣೆ ಅಂಶವನ್ನು ಹೀರಿಕೊಳ್ಳುತ್ತದೆ. ಆದರೆ ಇದು ಕೂದಲಿನ ಮೇಲೆ ಧೂಳಿನಂಥ ವಸ್ತುಗಳನ್ನು ಕಡಿಮೆ ಮಾಡುವುದಿಲ್ಲ. ಆದ್ದರಿಂದ ಡ್ರೈ ಶಾಂಪೂ ಬಳಸುವುದು ನಿಷ್ಪ್ರಯೋಜಕವಾಗಿದೆ. ಆದ್ದರಿಂದ ನಿಮ್ಮ ಕೂದಲಿಗೆ ನಿಮ್ಮ ಸಾಮಾನ್ಯ ಶಾಂಪೂವನ್ನು ಬಳಸುವುದು ಉತ್ತಮ.

ಬಹುತೇಕ ಎಲ್ಲಾ ಹೇರ್‌ಕೇರ್‌ ಉತ್ಪನ್ನಗಳಲ್ಲಿ ಅಲ್ಕೋಹಾಲ್‌ ಇದ್ದೇ ಇರುತ್ತದೆ. ಆದರೆ ಆಲ್ಕೋಹಾಲ್‌ ನಿಮ್ಮ ಕೂದಲನ್ನು ಡ್ರೈ ಮಾಡುತ್ತದೆ. ಇದರಿಂದ ಕೂದಲಲ್ಲಿ ಕವಲೊಡೆಯುತ್ತದೆ. ಇದರಿಂದ ಕೂದಲು ಉದುರುತ್ತದೆ. ಹಾಗೇ ಡ್ರೈ ಶ್ಯಾಂಪೂ ಬಳಸುವುದರಿಂದ ಸ್ಕಾಲ್ಪ್‌ನಲ್ಲಿ ತುರಿಕೆಗೆ ಕಾರಣವಾಗುತ್ತದೆ. ಫಂಗಸ್ ಬ್ಯಾಕ್ಟೀರಿಯಾ ಕೂಡಾ ಉಂಟಾಗಬಹುದು.

ಡ್ರೈ ಶ್ಯಾಂಪೂ ಬಳಸುವುದರಿಂದ ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗುತ್ತದೆ. ಇದನ್ನು ಬಳಸುವುದರಿಂದ ಬ್ಯಾಕ್ಟೀರಿಯಾದ ಫಂಗಲ್ ಸೋಂಕು ಮತ್ತು ಕ್ಯಾನ್ಸರ್ ಬೆಳವಣಿಗೆಯ ಅಪಾಯವೂ ಇದೆ ಎನ್ನಲಾಗಿದೆ. ಅಂಡಾಶಯದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಕೂಡಾ ಅಧ್ಯಯನದಿಂದ ತಿಳಿದುಬಂದಿದೆ. ಆದ್ದರಿಂದ ಒಂದು ವೇಳೆ ನೀವೂ ಕೂಡಾ ಡ್ರೈ ಶ್ಯಾಂಪೂ ಬಳಸುತ್ತಿದ್ದರೆ ಅದರಿಂದ ದೂರ ಇರುವುದು ಉತ್ತಮ.

Whats_app_banner