ತುಂಬಾ ಜನ ಒಟ್ಟಿಗಿದ್ರೂ ಹಾಸ್ಟೆಲ್‌ನಲ್ಲಿ, ಅಥವಾ ಪಿಜಿಯಲ್ಲಿ ಕಾಲ ಕಳೆಯಲು ಆಗ್ತಾ ಇಲ್ಲ ಅನ್ನೋರು ಇದನ್ನು ಮರೆಯದೆ ಓದಿ
Feeling Lonely: ಒಬ್ಬರೇ ಇದ್ದಾಗ ಬೋರಾಗೋದು ತುಂಬಾ ಸಾಮಾನ್ಯ ಆದ್ರೆ ತುಂಬಾ ಜನ ಒಟ್ಟಿಗಿದ್ದರೂ ನಿಮಗೆ ನಾನು ಒಂಟಿ ಎನ್ನುವ ಅನುಭವ ಕಾಡ್ತಾ ಇದೆ ಅಂದ್ರೆ ಅದಕ್ಕೇನಾದ್ರೂ ಪರಿಹಾರ ಹುಡುಕಲೇಬೇಕು. ನಿಮ್ಮ ಜೊತೆಗಿದ್ದವರಿಗೂ ಇದೇ ರೀತಿ ಆಗುತ್ತಾ? ಹಾಗಾದ್ರೆ ಇಲ್ಲಿದೆ ಪರಿಹಾರ.
ತುಂಬಾ ಜನ ತುಂಬಾ ದಿನ ಒಂದೇ ಕಡೆ ಇದ್ದು. ದಿನವೂ ಅದದೇ ರೀತಿಯಲ್ಲಿ ದಿನಚರಿಯನ್ನು ಹೊಂದಿದ್ದರೆ ಅದು ಕೂಡ ಒಂದು ರೀತಿಯ ಬೇಸರ ಮೂಡಿಸುತ್ತದೆ. ಅದರ ಬದಲಾಗಿ ಏನಾದರೂ ಒಂದು ಚಿಕ್ಕದಾದರೂ ಬದಲಾವಣೆ ಬೇಕು ಎಂದು ಅನಿಸಲು ಆರಂಭವಾಗುತ್ತದೆ. ಹೀಗಿರುವಾಗ ಏನು ಮಾಡಬೇಕು? ಯಾವ ರೀತಿ ಬದಲಾವಣೆ ಮಾಡಿಕೊಂಡರೆ ಜೀವನ ಸುಖದಿಂದ ಸಾಗುತ್ತದೆ ಎಂದು ನೀವೇ ಆಲೋಚನೆ ಮಾಡುತ್ತಾ ಇರಿತ್ತೀರಿ. ಆಗ ಊರಿನಲ್ಲಿರುವ ನಿಮ್ಮ ಮನೆ, ಅಪ್ಪ, ಅಮ್ಮ ನೆನಪಾಗುತ್ತಾರೆ. ಈ ರೀತಿ ಆದಾಗ ಏನು ಮಾಡಬೇಕು ಎಂದು ನಾವಿಲ್ಲಿ ತಿಳಿಸಿದ್ದೇವೆ ಗಮನಿಸಿ.
ನೀವು ಮಾಡಬಹುದಾದ ಚಟುವಟಿಕೆ
i) ಕೇರಮ್ ಆಡಿ: ಕೇರಮ್ ಒಂದೇ ಅಲ್ಲ ಇನ್ನೂ ಹಲವು ಆಟಗಳನ್ನು ನೀವು ಆಡಬಹುದು. ಇದರಲ್ಲಿ ಕೇವಲ ನಾಲ್ಕು ಜನ ಆಟವಾಡಲು ಸಾಧ್ಯವಾಗುತ್ತದೆ. ಆದರೆ ಬೇರೆ ಆಟಗಳಲ್ಲಿ ಇನ್ನೂ ಹೆಚ್ಚಿನ ಜನ ಆಡಬಹುದು. ಇನ್ನು ಕೇರಮ್ ಬೋರ್ಡ್ ಇಲ್ಲ ಎಂದಾದರೆ ನಿಮ್ಮ ಮೊಬೈಲ್ ತೆಗೆದುಕೊಳ್ಳಿ ಅದರಲ್ಲಿ ಲುಡೋ ಆಡಿ. ಇದು ನಿಮ್ಮ ನಗುವಿಗೆ ಮತ್ತು ಹೊಸತನಕ್ಕೆ ಕಾರಣವಾಗುತ್ತದೆ. ಇನ್ನು ಇದೇ ರೀತಿ ನಿಮಗೆ ತಿಳಿದಿರುವ ಬೇರೆ ಬೇರೆ ಆಟಗಳನ್ನು ಆಡಲು ಟ್ರೈ ಮಾಡಿ. ಯಾರಾದರೂ ಒಬ್ಬರು ಫೋನ್ ನೋಡಲು ಆರಂಭಿಸಿದರೆ, ಉಳಿದವರು ಅವರನ್ನೇ ಅನುಕರಣೆ ಮಾಡುತ್ತ ತಮ್ಮ ಸಮಯವನ್ನೂ ಹಾಳು ಮಾಡಿಕೊಳ್ಳುತ್ತಾರೆ. ಅದು ಆಗದ ರೀತಿಯಲ್ಲಿ ಕಾಲ ಕಳೆಯಿರಿ.
ii) ಸುತ್ತಾಡಲು ಹೋಗಿ: ನೀವು ಈಗಾಗಲೇ ತುಂಬಾ ಜನ ಇರ್ತೀರಾ. ಆ ಕಾರಣಕ್ಕಾಗಿ ನಾನು ಯಾರ ಜೊತೆ ಟ್ರಿಪ್ ಹೋಗಲಿ ಎಂದು ಅನುಮಾನ ಪಡುತ್ತಾ ಕಾಲ ಕಳೆಯಬೇಕಿಲ್ಲ. ದೂರವೇ ಹೋಗಬೇಕು ಎಂದೇನೂ ಇಲ್ಲ. ನಿಮ್ಮ ಹತ್ತಿರದಲ್ಲೇ ಇರುವ ಯಾವುದಾದರೂ ಒಂದು ಜಾಗಕ್ಕೆ ಹೋಗಿ ಬನ್ನಿ. ನೀವು ಈಗಾಗಲೇ ಹತ್ತು ಬಾರಿ ಆ ಜಾಗಕ್ಕೆ ಹೋಗಿ ಬಂದಿದ್ದರೂ ತೊಂದರೆ ಇಲ್ಲ.
iii) ಹೊರಗಡೆ ಊಟಕ್ಕೆ ಹೋಗಿ ಬನ್ನಿ: ರಾತ್ರಿ ಇಲ್ಲವೇ, ಮಧ್ಯಾಹ್ನದ ಹೊತ್ತು ಹೊರಗಡೆ ಊಟಕ್ಕೆ ಹೋಗಿ. ಆಗ ನಿಮಗೊಂದಿಷ್ಟು ಬೇರೆ ರೀತಿಯ ಚೇಂಜ್ ಸಿಗುತ್ತದೆ. ಒಂದೇ ರೀತಿ ಊಟ ತಿಂದು ತಿಂದು ಬೋರಾಗಿದೆ ಎಂದು ನೀವು ಹೇಳ್ತಾ ಇದ್ರೆ ಅದಕ್ಕೊಂದು ಪರಿಹಾರವೂ ಆದ ಹಾಗೆ ಆಯಿತು.
iv) ಒಂದು ವಿಷಯದ ಕುರಿತು ಚರ್ಚೆ ಮಾಡಿ: ಯಾವುದಾದರೂ ಒಂದು ಉತ್ತಮವಾದ ವಿಚಾರವನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಿ. ಅಥವಾ ಇನ್ನೊಬ್ಬರ ನೋವನ್ನು ಆಲಿಸಲು ಕಲಿಯಿರಿ. ಏನಾದರೊಂದನ್ನು ಮಾಡಿ. ಗ್ರೂಪ್ ಸ್ಟಡಿ ಮಾಡಿ. ಆಗ ಓದಿದ್ದು ನಿಮಗೂ ಮತ್ತು ಹೇಳಿಕೊಟ್ಟವರೆಲ್ಲರಿಗೂ ನೆನಪಿರುತ್ತದೆ. ಇದು ಪರೀಕ್ಷೆಯ ದಿನಗಳಲ್ಲಿ ನಿಮಗೆ ತುಂಬಾ ಅನುಕೂಲ ಆಗುತ್ತದೆ.
v) ನಿಮ್ಮನಿಮ್ಮ ಊರಿನ ಆಚಾರ, ವಿಚಾರ ಹಂಚಿಕೊಳ್ಳಿ: ನಿಮ್ಮ ಊರಿಗೆ ನಿಮ್ಮ ಸ್ನೇಹಿತರನ್ನು ಕರೆದುಕೊಂಡು ಹೋಗಿ ಬನ್ನಿ. ನಿಮ್ಮ ಮನೆಯ ಆಚಾರ, ವಿಚಾರ ಹಾಗೂ ಪದ್ದತಿಯನ್ನು ಅವರೂ ಕಲಿತುಕೊಳ್ಳಲಿ. ಅವರ ಊರಿಗೆ ನೀವು ಹೋಗಿ ಬನ್ನಿ. ಒಟ್ಟಿನಲ್ಲಿ ಈ ರೀತಿ ಮಾಡಿ ಖುಷಿಯಿಂದ ನಿಮ್ಮ ದಿನ ಕಳೆಯಿರಿ. ಹಾಸ್ಟೇಲ್ ಅಥವಾ ಪಿಜಿ ಲೈಫ್ ಜೀವನದುದ್ದಕ್ಕೂ ಸಿಗೋದಿಲ್ಲ.