ವೈಟ್ ಪಲಾವ್: ಹೆಚ್ಚಿಗೆ ಮಸಾಲೆ ಬೇಡ, ಆದ್ರೂ ರುಚಿ ಇರ್ಬೇಕು ಅಂತದ್ದೇನಾದ್ರೂ ಬೇಕು ಅನಿಸಿದ್ರೆ ಈ ರೀತಿ ಮಾಡಿ ತಿನ್ನಿ
ವೈಟ್ ಪಲಾವ್ ರೆಸಿಪಿ: ನೀವು ಪ್ರತಿದಿನ ತುಂಬಾ ಮಸಾಲೆ ಇರುವ ಪದಾರ್ಥಗಳನ್ನೇ ತಿಂದು ತಿಂದು ಬೋರಾಗಿದ್ರೆ ಈ ರಿತಿ ಪಲಾವ್ ಮಾಡಿಕೊಳ್ಳಿ. ವೈಟ್ ಪಲಾವ್ ಮಾಡುವುದು ತುಂಬಾ ಸುಲಭ. ಎಲ್ಲವನ್ನೂ ಒಂದೇಸಾರಿ ಕುಕ್ಕರ್‌ನಲ್ಲಿಟ್ಟು ಬೇಯಿಸಿಬಿಡಬಹುದು. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.
ವೈಟ್ ಪಲಾವ್ ಮಾಡುವುದು ತುಂಬಾ ಸುಲಭ. ದಿನಾ ಒಂದೇ ರೀತಿ ಮಸಾಲೆ ತಿಂದು ತಿಂದು ಬೋರಾಗಿದ್ಯಾ? ಹಾಗಾದ್ರೆ ನೀವು ಈ ರೈಸ್ ಟ್ರೈ ಮಾಡಿ ನೋಡಿ. ಇದರಲ್ಲಿ ಮಸಾಲೆ ಇರುತ್ತದೆ ಆದರೆ ತುಂಬಾ ಲೈಟಾದ ಮಸಾಲೆ ಉಪಯೋಗಿಸುತ್ತಾರೆ. ಅದರಿಂದ ರುಚಿಯಾದ ಪರಿಮಳ ಮಾತ್ರ ಬರುತ್ತದೆ. ತಿನ್ನಲು ರುಚಿಕರವಾಗಿರುತ್ತದೆ. ವೈಟ್ ಪಲಾವ್ ಜೊತೆ ಯಾವುದಾದರು ಗ್ರೇವಿಯನ್ನು ಬೇಕಾದರೂ ನೀವು ತಿನ್ನಬಹುದು. ಹಾಗಾದರೆ ಇದನ್ನು ಮಾಡುವ ವಿಧಾನ ಹಾಗೂ ಬೇಕಾಗುವ ಸಾಮಗ್ರಿಗಳು ಯಾವುದು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ವೈಟ್ ಪಲಾವ್ ಮಾಡಲು ಬೇಕಾದ ಸಾಮಗ್ರಿಗಳು
ಬಾಸ್ಮತಿ ರೈಸ್
ಪಲಾವ್ ಎಲೆ
ಲವಂಗ
ಚಕ್ಕೆ
ಈರುಳ್ಳಿ
ಉಪ್ಪು
ಚಕ್ರಮೊಗ್ಗು
ಗೋಡಂಬಿ
ಕ್ಯಾರೆಟ್
ಬೀನ್ಸ್
ಶುಂಠಿ
ಇದನ್ನೂ ಓದಿ: ತೂಕ ಇಳಿಕೆಯಿಂದ ಹೃದಯದ ಆರೋಗ್ಯದವರೆಗೆ, ಸೌತೆಕಾಯಿಯ ಪ್ರಯೋಜನ ಹಲವು: ಇಲ್ಲಿದೆ ಮೂರು ಬಗೆಯ ಸಲಾಡ್ ರೆಸಿಪಿ
ವೈಟ್ ಪಲಾವ್ ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಆ ನಂತರ ಅದನ್ನು ಬದಿಗಿಟ್ಟು ಕುಕ್ಕರ್‌ನಲ್ಲಿ ಎಣ್ಣೆಯನ್ನು ಹಾಕಿಕೊಳ್ಳಿ. ಎಣ್ಣೆ ಬಿಸಿ ಆದ ನಂತರ ಅದಕ್ಕೆ ಮೇಲೆ ಹೇಳಲಾದ ಎಲ್ಲಾ ಮಸಾಲೆಗಳನ್ನು ರುಬ್ಬಿಕೊಳ್ಳದೇ ಹಾಗಾಗೇ ಹಾಕಿ. ಅದರ ಪರಿಮಳ ಬಿಡವವರೆಗೂ ನೀವು ಅದನ್ನು ಆಡಿಸುತ್ತಲೇ ಇರಿ. ಇನ್ನು ಅದೆಲ್ಲದರಿಂದ ಘಮ ಹೊಮ್ಮಿದ ಮೇಲೆ ಹಸಿಮೆಣಸಿನಕಾಯಿಯನ್ನು ಅದರಲ್ಲಿ ಹಾಕಿ. ಮತ್ತೆ ಆಡಿಸಿ. ಈ ರೀತಿ ಮಾಡಿದಾಗ ಅದಕ್ಕೆ ಬೇಕಾದ ಸ್ವಲ್ಪ ಪ್ರಮಾಣದ ಖಾರ ದೊರೆಯುತ್ತದೆ. ಇದಾದ ನಂತರದಲ್ಲಿ ನೀವು ಡೈರೆಕ್ಟ್ ಅಕ್ಕಿಯನ್ನು ಹಾಕಿ.
ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ, ತರಕಾರಿ ಸೇರಿಸಿ ಬೇಯಿಸಿ. ಇದು ಸರಿಯಾಗಿ ಬೆಂದ ನಂತರ ತಿನ್ನಿ. ಅಕ್ಕಿಗೆ ಜಾಸ್ತಿ ನೀರು ಹಾಕಬೇಡಿ. ಜಾಸ್ತಿ ನೀರು ಹಾಕಿದರೆ ಪಲಾವ್ ಸ್ವಾದ ಕಡಿಮೆ ಆಗುತ್ತದೆ. ಅನ್ನ ಉದುರುದುರಾಗಿ ಇರುವಂತೆ ನೋಡಿಕೊಳ್ಳಿ. ಇದರ ಜೊತೆ ನೀವು ಕೂರ್ಮಾ ಅಥವಾ ರಾಯ್ತಾ ಕೂಡ ಮಾಡಿ ತಿನ್ನಬಹುದು. ಇದು ತುಂಬಾ ರುಚಿಯಾಗಿರುತ್ತದೆ.