Parenting: ನಿಮ್ಮ ಮಗುವಿನ ಮೆದುಳಿನ ಬೆಳವಣಿಗೆಗಾಗಿ ನೀವು ಬೆಳಿಗ್ಗೆ ಎದ್ದ ತಕ್ಷಣ ಈ 3 ಕೆಲಸಗಳನ್ನು ಮಾಡಿ, ಅವರ ಜೀವನವೇ ಬದಲಾಗುತ್ತೆ
parenting: ಮಕ್ಕಳಲ್ಲಿ ಬುದ್ಧಿವಂತಿಕೆಯನ್ನು ಹೆಚ್ಚಿಸಲು ಬೆಳಗಿನ ಅಭ್ಯಾಸಗಳು ತುಂಬಾ ಮುಖ್ಯ. ನಿಮ್ಮ ಮಗುವಿನ ಬುದ್ಧಿ ಮಟ್ಟ ಹೆಚ್ಚಾಗಬೇಕು ಎಂದರೆ ನೀವು ಪ್ರತಿನಿತ್ಯ ಬೆಳಿಗ್ಗೆ 10 ನಿಮಿಷವನ್ನು ಅವರಿಗಾಗಿ ಮೀಸಲಿಡಲೇಬೇಕು.
ಎಲ್ಲಾ ಪೋಷಕರು ತಮ್ಮ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗಿರಬೇಕು ಎಂದು ಬಯಸುತ್ತಾರೆ. ಅವರ ಜೀವನವು ಯಾವಾಗಲೂ ಸಂತೋಷವಾಗಿರಬೇಕು ಎಂದು ಬಯಸುತ್ತಾರೆ. ಆದರೆ ಅನೇಕ ಬಾರಿ ತಿಳಿಯದೆ, ಪೋಷಕರು ಮಗುವಿನ ಮೆದುಳಿನ ಬೆಳವಣಿಗೆಗೆ ಅಡ್ಡಿಯಾಗುವ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಉದಾಹರಣೆಗೆ, ನಿಮ್ಮ ಮಗು ಬೆಳಿಗ್ಗೆ ಅಳುತ್ತಾ ಎದ್ದರೆ ಅವರನ್ನು ನೀವು ಸುಮ್ಮನಿರುವಂತೆ ಬೈಯುತ್ತೀರಿ ಆ ರೀತಿಯಲ್ಲಿ ಅವರನ್ನು ಮೌನವಾಗಿರುವಂತೆ ಮಾಡುತ್ತೀರಿ. ಹೀಗೆ ಮಾಡಿದಾಗ ಇಡೀ ದಿನವನ್ನು ಕಿರಿಕಿರಿ ಮತ್ತು ಹಠದಿಂದ ನಿಮ್ಮ ಮಗು ಕಳೆಯುತ್ತದೆ. ಆದರೆ ನೀವು ಅವರ ದಿನವನ್ನು ಪ್ರೀತಿಯಿಂದ ಪ್ರಾರಂಭಿಸಿದರೆ, ಅವರು ಇಡೀ ದಿನವು ಸಕಾರಾತ್ಮಕತೆಯಿಂದ ಅಂದರೆ ತುಂಬಾ ಪಾಸಿಟಿವ್ ಆಗಿ ಕಳೆಯುತ್ತಾರೆ.
ಆಶಿರ್ವಾಡ್ ಚೈಲ್ಡ್ ಅಂಡ್ ಫ್ಯಾಮಿಲಿ ಕ್ಲಿನಿಕ್ನ ಡಾ.ಸುರ್ಜಿತ್ ಗುಪ್ತಾ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮಗುವಿನ ಮೆದುಳಿನ ಬೆಳವಣಿಗೆಗೆ ಬೆಳಿಗ್ಗಿನ 10 ನಿಮಿಷಗಳು ಬಹಳ ಮುಖ್ಯ ಎಂದು ಹೇಳಿದ್ದಾರೆ. ಇದು ಪೋಷಕರ ಮೊದಲ ಜವಾಬ್ದಾರಿಯಾಗಿರಬೇಕು. ಹೇಗೆ ಎಂದುಹೇಳಿದ್ದಾರೆ. ಹಾಗಾದರೆ ಏನು ಆ ಜವಾಬ್ಧಾರಿ ಎಂಬುದನ್ನು ನಾವಿಲ್ಲಿ ವಿವರಿಸಿದ್ದೇವೆ ಗಮನಿಸಿ.
ಮಗುವನ್ನು ಚುಂಬಿಸಿ ಮತ್ತು ತಬ್ಬಿಕೊಳ್ಳಿ
ಬೆಳಿಗ್ಗೆ 10 ನಿಮಿಷಗಳು ಮಗುವಿಗೆ ಬಹಳ ಮುಖ್ಯ. ಅವರ ಬೆಳಿಗ್ಗೆಯನ್ನು ಕೆಲವು ಪದಗಳೊಂದಿಗೆ ಪ್ರಾರಂಭಿಸಿ - ಶುಭೋದಯ, ಇಂದು ಒಳ್ಳೆ ದಿನ ನಿನ್ನದಾಗಲಿ. ಐ ಲವ್ ಯು ಎಂಬ ಈ ರೀತಿಯ ಪ್ರೀತಿಯ ಮಾತುಗಳನ್ನು ಆಡಿ ಅವರಿಗೆ ಇಡೀ ದಿನ ಒಳ್ಳೆಯದಾಗಲಿ ಎಂದು ಬಯಸಿ. ನಿಮ್ಮ ಮಕ್ಕಳನ್ನು ಮುದ್ದಿಸಿ. ಅಥವಾ ಅವರನ್ನು ತಬ್ಬಿಕೊಳ್ಳಿ. ಈ ರೀತಿ ಮಾಡುವುದರಿಂದ ಅವರು ತಮ್ಮ ಬೆಳಗನ್ನು ಸಂತೋಷದಿಂದ ಆರಂಭ ಮಾಡುತ್ತಾರೆ.
ಇಂದಿನ ದಿನದ ಬಗ್ಗೆ ಹೇಳಿ
ಮಗು ಬೆಳಿಗ್ಗೆ ಎದ್ದ ತಕ್ಷಣ, ಈ ಜಗತ್ತು ಅನೇಕ ಸುಂದರವಾದ ಸಾಹಸಗಳು ಮತ್ತು ಉತ್ಸಾಹದಿಂದ ತುಂಬಿದೆ ಎಂದು ತಿಳಿಸಿ. ನಿಮ್ಮ ಮಗುವಿನ ಹತ್ತಿರ ನೀನು ಇಂದಿನ ದಿನವನ್ನು ಯಾವ ರೀತಿ ಕಳೆಯಲು ಬಯಸಿದ್ದೀಯಾ ಎಂದು ವಿಚಾರಿಸಿ. ಉದಾಹರಣೆಗೆ, ನಿಮ್ಮ ಸ್ನೇಹಿತರೊಂದಿಗೆ ಶಾಲೆಯಲ್ಲಿ ಉತ್ತಮವಾದದ್ದನ್ನು ಓದುವ ಮೂಲಕ ಅಥವಾ ಆಡುವ ಮೂಲಕ ಅಥವಾ ಉತ್ತಮ ಆರೋಗ್ಯಕರ ಊಟವನ್ನು ಆನಂದಿಸುವ ಮೂಲಕ ಏನು ಮಾಡಿಕೊಡಬೇಕು ಎಂದು ಕೇಳಿ. ನಿಮ್ಮ ಪ್ರಶ್ನೆಯು ಮಗುವಿಗೆ ತನ್ನ ದಿನವನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಬಗ್ಗೆ ಯೋಚಿಸಲು ಅವಕಾಶವನ್ನು ನೀಡುತ್ತದೆ. ಇದನ್ನು ಮಾಡುವ ಮೂಲಕ ಮಗುವು ಈ ದಿನವನ್ನು ತಾನು ಹೇಗೆ ರೂಪಿಸಿಕೊಳ್ಳಬೇಕು ಮತ್ತು ಯಾವ ತಿಂಡಿ ತಿನ್ನಬೇಕು ಎಂದು ಆಲೋಚಿಸುತ್ತದೆ.
ಅವರ ಒಳ್ಳೆತನವನ್ನು ಹೊಗಳಿ
ಬೆಳಿಗ್ಗೆ ಎದ್ದ ತಕ್ಷಣ ಅವನು ಎಷ್ಟು ವಿಶೇಷವಾದವನು ಅಥವಾ ಅವಳು ಎಷ್ಟು ವಿಶೇಷವಾದವಳು ಎಂಬುದನ್ನು ತಿಳಿಸಿಕೊಡಿ. ನೀನು ತುಂಬಾ ಒಳ್ಳೆ ಮಗು ಎಂದು ಹೇಳಿ. ನಿಮ್ಮ ಮಗುವಿಗೆ ಇದನ್ನು ಹೇಳುವುದು ಅವರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಸವಾಲುಗಳನ್ನು ಎದುರಿಸುವ ಧೈರ್ಯವನ್ನು ಇದು ನೀಡುತ್ತದೆ.
ಇದರಲ್ಲಿ ಆಶಿರ್ವಾಡ್ ಚೈಲ್ಡ್ ಅಂಡ್ ಫ್ಯಾಮಿಲಿ ಕ್ಲಿನಿಕ್ನ ಡಾ.ಸುರ್ಜಿತ್ ಗುಪ್ತಾ ಈ ಮೇಲಿನ ಎಲ್ಲಾ ವಿವರಗಳನ್ನು ವಿವರಿಸಿ ಹೇಳಿದ್ದಾರೆ. ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಎಂದು ಪೋಷಕರು ಈ ಮೂಲಕ ತಿಳಿದುಕೊಳ್ಳಬಹುದು. ಅವರನ್ನು ಬೆಳ್ಳಂಬೆಳಿಗ್ಗೆ ಬೈಯ್ಯುವುದು ಯಾವುದೇ ಕಾರಣಕ್ಕೂ ಉತ್ತಮವಲ್ಲ. ನಿಮ್ಮ ಮಕ್ಕಳ ದಿನವನ್ನು ನೀವೇ ಹಾಳು ಮಾಡಬೇಡಿ.