ಮನೆಯಲ್ಲೇ ಪ್ರತಿನಿತ್ಯ ಯೋಗಾಸನ ಮಾಡಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ, ಇಲ್ಲಿದೆ ಕೆಲವು ಆಸನದ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲೇ ಪ್ರತಿನಿತ್ಯ ಯೋಗಾಸನ ಮಾಡಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ, ಇಲ್ಲಿದೆ ಕೆಲವು ಆಸನದ ಮಾಹಿತಿ

ಮನೆಯಲ್ಲೇ ಪ್ರತಿನಿತ್ಯ ಯೋಗಾಸನ ಮಾಡಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ, ಇಲ್ಲಿದೆ ಕೆಲವು ಆಸನದ ಮಾಹಿತಿ

ಫಿಟ್ ‌ ಆಗಿರಲು ಓಟ ಮತ್ತು ಕ್ರೀಡೆಗಳನ್ನುಆರಿಸಿಕೊಳ್ಳುತ್ತಾರೆ. ಯೋಗದ ಅನೇಕ ಆರೋಗ್ಯ ಪ್ರಯೋಜನಗಳನ್ನು ಕಡೆಗಣಿಸಿ ಬಿಡುತ್ತಾರೆ. ಆದರೆ ನೀವು ಈ ರೀತಿ ಮಾಡಬೇಡಿ. ಪ್ರತಿದಿನ ನಿಮ್ಮ ಮನೆಯಲ್ಲೇ ಕುಳಿತು ನಿಗದಿತ ಸಮಯ ಮೀಸಲಿಟ್ಟು ಯೋಗಾಸನ ಮಾಡಿ. ಆರೋಗ್ಯ ಕಾಪಾಡಿಕೊಳ್ಳಿ. ಹಾಗೆಂದು ವ್ಯಾಯಾಮ ಮಾಡುವುದು ತಪ್ಪೇನಲ್ಲ.

ಪ್ರತಿನಿತ್ಯ ಮನೆಯಲ್ಲೇ ಯೋಗಾಸನ ಮಾಡಿ, ಆರೋಗ್ಯ ಕಾಪಾಡಿಕೊಳ್ಳಿ
ಪ್ರತಿನಿತ್ಯ ಮನೆಯಲ್ಲೇ ಯೋಗಾಸನ ಮಾಡಿ, ಆರೋಗ್ಯ ಕಾಪಾಡಿಕೊಳ್ಳಿ (Freepik)

ಯೋಗದಿಂದಉತ್ತಮ ದೇಹ ಮತ್ತು ಆರೋಗ್ಯವನ್ನುಪಡೆಯಬಹುದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಅನೇಕರು ಜಿಮ್‌ ಸೇರುತ್ತಾರೆ. ತಾವು ಅಲ್ಲಿ ಹೋಗಿ ಮಾಡುವ ವ್ಯಾಯಾಮದಿಂದಲೇ ಉತ್ತಮ ಆರೋಗ್ಯ ಪಡೆಯಬಹುದು ಎಂದು ನಂಬಿ ಕೆಲವರು ಕಸರತ್ತು ಮಾಡುತ್ತಾರೆ. ಆದರೆ ಯಾವುದೇ ಭಾರ ಎತ್ತದೇ ನೀವು ಮನೆಯಲ್ಲೇ ನಿತ್ಯ ವ್ಯಾಯಾಮ ಮಾಡುವುದರಿಂದಲೂ ಮತ್ತು ಯೋಗ ಮಾಡುವುದರಿಂದಲೂ ಹಲವಾರು ಪ್ರಯೋಜ ಇದೆ.

ಜಿಮ್‌ಗೆ ಹೋಗುವ ಅನಿವಾರ್ಯತೆ ಇಲ್ಲ

ಫಿಟ್ ‌ ಆಗಿರಲು ಓಟ ಮತ್ತು ಕ್ರೀಡೆಗಳನ್ನುಆರಿಸಿಕೊಳ್ಳುತ್ತಾರೆ. ಯೋಗದ ಅನೇಕ ಆರೋಗ್ಯ ಪ್ರಯೋಜನಗಳನ್ನು ಕಡೆಗಣಿಸಿ ಬಿಡುತ್ತಾರೆ. ಯೋಗ ಮಾಡಲು ವಯಸ್ಸಿನ ಮಿತಿ ಇಲ್ಲ. ಯಾರು ಬೇಕಾದರೂ ಯೋಗ ಮಾಡಬಹುದು. ನೀವು ಯಾವಾಗಿನಿಂದ ಯೋಗ ಮಾಡುತ್ತಾ ಬಂದಿದ್ದೀರಿ ಎಂಬುದರ ಮೇಲೆ ನಿಮ್ಮ ಆರೋಗ್ಯದ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ನೀವು ನಿತ್ಯವೂ ಯೋಗ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡರೆ ಖಂಡಿತ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಈ ಯೋಗ ಮಾಡುವುದರಿಂದ ಏನೆಲ್ಲ ಲಾಭ ಇದೆ ಎಂಬುದನ್ನು ನೀಡಿದ್ದೇವೆ ಗಮನಿಸಿ.

ಯೋಗವು ದೈಹಿಕ ಭಂಗಿಗಳು, ಉಸಿರಾಟದ ವ್ಯಾಯಾಮಗಳು, ಸ್ಟ್ರೆಚಿಂಗ್, ಧ್ಯಾನ ಮತ್ತು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯಮಾಡುತ್ತದೆ. ಅದಕ್ಕಾಗಿಯೇ ಅನೇಕ ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳು ವಿವಿಧ ರೀತಿಯ ಆಸನಗಳನ್ನು ಮಾಡುತ್ತಾರೆ. ಪ್ರತಿದಿನವೂ ಅವರು ಒಂದು ನಿಗದಿತ ವೇಳಾಪಟ್ಟಿಯನ್ನು ನಿರ್ಮಾಣ ಮಾಡಿಕೊಂಡು ಆ ಸಮಯಕ್ಕೆ ಸರಿಯಾಗಿ ಯೋಗ ಮಾಡುತ್ತಾರೆ.

ಹೃದಯದ ಆರೋಗ್ಯ: ಯೋಗವು ಸಹಿಷ್ಣುತೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಕೆಲವು ಆಸನಗಳು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಯೋಗದ ಪಾತ್ರ ತುಂಬಾ ಮುಖ್ಯ ಯಾಕೆಂದರೆ ಯೋಗದಲ್ಲಿ ಉಸಿರಿನ ಏರಿಳಿತ ತುಂಬಾ ಮುಖ್ಯ. ಅದಕ್ಕಾಗಿಯೇ ನಿಯಮಿತ ಯೋಗವು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ವಜ್ರಾಸನ: ವಜ್ರಾಸನ ಮಾಡುವುದರಿಂದ ನಿಮ್ಮ ಸೊಂಟ ಹಾಗೂ ಬೆನ್ನು ನೋವು ಕಡಿಮೆ ಆಗುತ್ತದೆ. ಆದರೆ ಹಲವರಿಗೆ ಇದನ್ನು ಮಾಡಲು ಕಷ್ಟವಾಗುತ್ತದೆ. ಅಂತವರು ನಿತ್ಯ ಸ್ವಲ್ಪ ಸ್ವಲ್ಪವೇ ಪ್ರಯತ್ನ ಮಾಡಿ, ಹೆಚ್ಚಿನ ಸಮಯದ ವರೆಗೆ ಕುಳಿತುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಿ.

ಶವಾಸನ: ಶವಾಸನ ಮಾಡುವುದರಿಂದ ನಿಮ್ಮ ಮನಸ್ಸು ಹಾಗೂ ದೇಹ ಎರಡಕ್ಕೂ ಒಂದೇ ಬಾರಿ ವಿಶ್ರಾಂತಿ ಸಿಗುತ್ತದೆ. ಅಂಗಾತ ಮಲಗಿ ದೇಹದ ಒಂದೊಂದೇ ಭಾಗದ ಬಗ್ಗೆ ಗಮನಕೊಡುತ್ತಾ ಬೇರೆಲ್ಲಾ ಚಿಂತೆಗಳನ್ನು ಬಿಟ್ಟು ವಿಶ್ರಮಿಸುವುದೇ ಈ ಆಸನ. ನೀವು ನಿತ್ಯ ನಿದ್ರೆ ಮಾಡುವ ಸಂದರ್ಭದಲ್ಲೂ ಇದನ್ನು ಮಾಡಬಹುದು. ಯಾವ್ಯಾವುದೋ ಭಂಗಿಯಲ್ಲಿ ಮಲಗುವುದಕ್ಕಿಂತ ಈ ರೀತಿ ನೇರವಾಗಿ ಶವಾಸನದಲ್ಲಿ ಮಲಗಿ.

Whats_app_banner