ಅಂಗಡಿಗೆ ಹೋಗಿ ಬ್ರಾ ಖರೀದಿಸಲು ನಾಚಿಕೆಯೇ...ಹೌದು ಎಂದಾದಲ್ಲಿ ಒಮ್ಮೆ ಇದನ್ನು ಓದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಂಗಡಿಗೆ ಹೋಗಿ ಬ್ರಾ ಖರೀದಿಸಲು ನಾಚಿಕೆಯೇ...ಹೌದು ಎಂದಾದಲ್ಲಿ ಒಮ್ಮೆ ಇದನ್ನು ಓದಿ

ಅಂಗಡಿಗೆ ಹೋಗಿ ಬ್ರಾ ಖರೀದಿಸಲು ನಾಚಿಕೆಯೇ...ಹೌದು ಎಂದಾದಲ್ಲಿ ಒಮ್ಮೆ ಇದನ್ನು ಓದಿ

ಅಂಗಡಿಗೆ ಹೋಗಿ ಬ್ರಾ ಕೇಳುವುದು ಹಲವರಿಗೆ ಮುಜುಗರ ಉಂಟು ಮಾಡಬಹುದು. ಆದ್ದರಿಂದ ಮನೆಯ ಹಿರಿಯರ ಬಳಿಯೋ, ಸ್ನೇಹಿತರ ಬಳಿಯೋ ಬ್ರಾ ತಂದುಕೊಡುವಂತೆ ಕೇಳುವ ಅನೇಕ ಹೆಣ್ಣು ಮಕ್ಕಳಿದ್ದಾರೆ. ಆದರೆ ಇದು ಖಂಡಿತ ತಪ್ಪು.

<p>ಅಂಗಡಿಗೆ ಹೋಗಿ ಬ್ರಾ ಖರೀದಿಸುವ ವಿಚಾರದಲ್ಲಿ ಮುಜುಗರ ಬೇಡ</p>
ಅಂಗಡಿಗೆ ಹೋಗಿ ಬ್ರಾ ಖರೀದಿಸುವ ವಿಚಾರದಲ್ಲಿ ಮುಜುಗರ ಬೇಡ

ಹೆಣ್ಣು ಮಕ್ಕಳು ಋತುಮತಿಯಾಗುವ ಕಾಲ ಹತ್ತಿರ ಬರುತ್ತಿದ್ದಂತೆ ಆಕೆಯ ದೇಹದಲ್ಲಿ ನಾನಾ ಬದಲಾವಣೆಗಳಾಗುತ್ತವೆ. ಈ ಸಂದರ್ಭದಲ್ಲಿ ತಾಯಿ ಅಥವಾ ಸ್ನೇಹಿತೆಯರು ಆಕೆಗೆ ಒಳ ಉಡುಪುಗಳ ಬಗ್ಗೆ ಸೂಕ್ತ ಸಲಹೆ ನೀಡಿದರೆ ಉತ್ತಮ. ಅದರಲ್ಲೂ ಸೂಕ್ತ ಬ್ರಾ ಖರೀದಿಸುವ ಬಗ್ಗೆ ಹೆಚ್ಚಿನ ಅರಿವು ಅಗತ್ಯ.

ಅಂಗಡಿಗೆ ಹೋಗಿ ಬ್ರಾ ಕೇಳುವುದು ಹಲವರಿಗೆ ಮುಜುಗರ ಉಂಟು ಮಾಡಬಹುದು. ಆದ್ದರಿಂದ ಮನೆಯ ಹಿರಿಯರ ಬಳಿಯೋ, ಸ್ನೇಹಿತರ ಬಳಿಯೋ ಬ್ರಾ ತಂದುಕೊಡುವಂತೆ ಕೇಳುವ ಅನೇಕ ಹೆಣ್ಣು ಮಕ್ಕಳಿದ್ದಾರೆ. ಆದರೆ ಇದು ತಪ್ಪು, ಇಂತಹ ವಿಚಾರಗಳಲ್ಲಿ ನಿಮಗೆ ಏನು ಬೇಕೋ, ಅದನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಇತರರ ಬಳಿ ಹೇಳಿಕೊಳ್ಳುವ ಸಂದರ್ಭ ಬಂದಾಗ ನಾಚಿಕೆ ಪಡುವ ಅಗತ್ಯವಿಲ್ಲ. ಮಹಿಳೆಯರಲ್ಲಿ ಎದೆನೋವು, ಭುಜದ ನೋವು, ಬೆನ್ನು ನೋವು ಕಾಣಿಸಿಕೊಂಡರೆ ನೀವು ಸೂಕ್ತವಾದ ಬ್ರಾ ಧರಿಸದಿರುವುದೂ ಕಾರಣ ಇರಬಹುದು. ಆದರೆ ಎಷ್ಟೋ ಮಹಿಳೆಯರು ಇಂತಹ ಸಮಸ್ಯೆಗಳನ್ನು ಇತರರ ಬಳಿ ಹೇಳಿಕೊಳ್ಳಲು ಬಹಳ ಮುಜುಗರ ಪಡುತ್ತಾರೆ.

ತುಂಬಾ ದೊಡ್ಡದಾದ, ಬಿಗಿಯಾದ ಅಥವಾ ಚಿಕ್ಕದಾದ ಕಪ್​​​​​ ಅಥವಾ ಪಟ್ಟಿಗಳನ್ನು ಹೊಂದಿರುವ ಬ್ರಾ ಧರಿಸುವುದರಿಂದ ದೇಹದ ಕೆಲವೆಡೆ ನೋವು ಕಾಣಿಸಿಕೊಂಡು ಮುಂದೆ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು. ನಿಮ್ಮ ಆತ್ಮವಿಶ್ವಾಸವನ್ನೂ ಕುಗ್ಗಿಸಬಹುದು. ಆದ್ದರಿಂದ ಬ್ರಾ ಆಯ್ಕೆ ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿ ತಿಳಿಸಿದ ಸಲಹೆಗಳನ್ನು ಅನುಸರಿಸಿ.

ಹಣ ಉಳಿತಾಯ ಮಾಡುವ ಉದ್ದೇಶದಿಂದ ರಸ್ತೆಬದಿಯಲ್ಲಿ ದೊರೆಯುವ ಅತಿ ಕಡಿಮೆ ದರದ ಬ್ರಾ ಖರೀದಿಸುವ ತಪ್ಪನ್ನು ಮಾಡಬೇಡಿ. ಇದರಿಂದ ಸಮಸ್ಯೆ ಕಡಿಮೆಯಾಗುವುದಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ.

ಆಪ್ತರು ಎಂಬ ಕಾರಣಕ್ಕೆ ಮತ್ತೊಬ್ಬರ ಬ್ರಾವನ್ನು ಧರಿಸಬೇಡಿ. ಹೊರಗೆ ಹೋದಾಗ ನೀವು ಬ್ರಾವನ್ನು ಕೊಂಡೊಯ್ಯದಿದ್ದಲ್ಲಿ ಹತ್ತಿರದ ಶಾಪ್​​ನಲ್ಲಿ ಖರೀದಿಸಿ, ಪ್ರಯಾಣಿಸುವಾಗ ನಿಮ್ಮ ಬ್ರಾಗಳನ್ನು ಬ್ಯಾಗ್​​ನಲ್ಲಿ ಕೊಂಡೊಯ್ಯುವುದು ಇನ್ನೂ ಒಳ್ಳೆಯದು.ಯಾವ ಸೈಜ್ ಬ್ರಾ ಖರೀದಿಸಬೇಕು ಎಂದು ನೀವು ಕನ್ಫ್ಯೂಸ್ ಆದಲ್ಲಿ, ಒಂದು ಟೇಪ್​​​​​​​ನಿಂದ ಎದೆ ಸುತ್ತಳತೆ ಅಳೆದುಕೊಳ್ಳಿ. ಇದರಿಂದ ನಿಮ್ಮ ಸ್ತನಗಳಿಗೆ ಹೊಂದಿಕೊಳ್ಳುವಂತೆ ಸರಿಯಾದ ಅಳತೆಯ ಬ್ರಾ ಖರೀದಿಸಲು ಸಹಾಯಕವಾಗುತ್ತದೆ. ಎದೆಯ ಸುತ್ತಳತೆಯನ್ನು ಅಳೆಯುವಾಗ ಟೇಪನ್ನು ಅತಿ ಬಿಗಿಯಾಗಿ ಅಥವಾ ಅತಿ ಸಡಿಲವಾಗಿ ಹಿಡಿದುಕೊಳ್ಳಬೇಡಿ.

ಮಾರುಕಟ್ಟೆಯಲ್ಲಿ ಈಗ ಪುಷ್​ ಅಪ್ ಬ್ರಾ, ಮಿನಿಮೈಜರ್ ಬ್ರಾ, ಸ್ಪೋರ್ಟ್ಸ್ ಬ್ರಾ, ಪ್ಯಾಡೆಡ್ ಬ್ರಾ, ವೈಯರ್ಡ್​ ಬ್ರಾ, ಟೀ ಶರ್ಟ್ ಬ್ರಾ ಎಂದೆಲ್ಲಾ ಬಹಳಷ್ಟು ವಿಧದ ಬ್ರಾಗಳು ದೊರೆಯುತ್ತವೆ. ಇದರಲ್ಲಿ ನಿಮಗೆ ಯಾವುದು ಹೊಂದಬಹುದು ಎಂಬುದನ್ನು ನೀವೇ ನಿರ್ಧರಿಸಿ ಖರೀದಿಸಿ. ನಿಮ್ಮ ಸ್ತನದ ಗಾತ್ರ ದೊಡ್ಡದಾಗಿದ್ದು ಒಂದು ವೇಳೆ ನೀವು ಪ್ಯಾಡೆಡ್ ಬ್ರಾ ಖರೀದಿಸಿ ಧರಿಸಿದರೆ ಅದು ಅಸಹ್ಯಕರವಾಗಿ ಕಾಣಬಹುದು. ಹಾಗೇ ಸ್ಯಾಗಿ ಬ್ರೆಸ್ಟ್ ಇದ್ದವರು ಪುಷ್ ಅಪ್ ಬ್ರಾ ಖರೀದಿಸಿ.

ನಿಮಗೆ ಯಾವ ಸೈಜ್ ಬ್ರಾ ಹೊಂದುತ್ತದೆ ಎಂದು ತಿಳಿದಿದ್ದರೂ ಬೌನ್ಸ್ ಆಗಬಹುದು ಎಂಬ ಭಯದಿಂದ ಸಣ್ಣ ಅಳತೆಯ ಬ್ರಾ ಖರೀದಿಸಿ ಧರಿಸಿದರೆ ಎದೆ ನೋವು ಬರುತ್ತದೆ. ಎದೆಯಲ್ಲಿರುವ ಪೆಕ್ಟೊರಾಲ್ ಸ್ನಾಯುವು ಒತ್ತಲ್ಪಟ್ಟು ರಕ್ತ ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಟೈಟ್ ಬ್ರಾ ಧರಿಸಬೇಡಿ. ಬ್ರಾ ಧರಿಸಿದ ನಂತರ ಸೊಂಟದ ಪಟ್ಟಿಯ ಒಳಗೆ ಎರಡು ಬೆರಳುಗಳು ಹೋಗುವಷ್ಟು ಸಡಿಲ ಇದ್ದರೆ ಒಳ್ಳೆಯದು.

ಒಂದು ವೇಳೆ ಅಂಗಡಿಯಲ್ಲಿ ಪುರುಷರು ಇದ್ದು, ನಿಮಗೆ ಮುಜುಗರ ಎನಿಸಿದಲ್ಲಿ, ಸೇಲ್ಸ್ ಗರ್ಲ್ ಇರುವ ಅಂಗಡಿಗೆ ಹೋಗಿ ಮುಜುಗರವಿಲ್ಲದೆ, ನಿಮಗೆ ಬೇಕಾದ ಬ್ರಾ ಕೊಂಡು ತನ್ನಿ.

Whats_app_banner