Lamprey Fish: ಜಗತ್ತಿನ ಅತಿ ಕ್ರೂರ ಮೀನು ಯಾವುದು ಗೊತ್ತಾ? ರಕ್ತ ಹೀರುವ ಪೆಸಿಫಿಕ್ ಲ್ಯಾಂಪ್ರಿಯ ಸ್ಟೋರಿ
Lamprey Fish: ಸಾಗರದಲ್ಲಿ ವಿವಿಧ ರೀತಿಯ ಜಲಚರಗಳಿವೆ. ಆ ಪೈಕಿ ಕೆಲವು ಮೀನುಗಳನ್ನು ಮನುಷ್ಯ ಹಿಡಿದು ತಿನ್ನುತ್ತಾನೆ. ಇನ್ನು ಕೆಲವು ಮೀನುಗಳು ಮನುಷ್ಯನನ್ನೇ ಭಕ್ಷಿಸುತ್ತವೆ. ಅಂತಹ ಮೀನುಗಳ ಪೈಕಿ ಅತಿ ಕ್ರೂರ ಮೀನಾದ ಪೆಸಿಫಿಕ್ ಲ್ಯಾಂಪ್ರಿಯ ಸ್ಟೋರಿ ಇಲ್ಲಿದೆ.

Violent Fish Lamprey: ಈ ಮೀನಿನ ಬಗ್ಗೆ ನೀವು ಕೇಳಿದರೆ ಅಚ್ಚರಿ ಪಡಬಹುದು. ಇದಕ್ಕೆ ರೆಕ್ಕೆಗಳೇ ಇಲ್ಲ, ಅಲ್ಲದೆ ಒಂದು ಗಟ್ಟಿಯಾದ ಮುಳ್ಳು ಕೂಡ ಇಲ್ಲ, ಆದರೆ ಈ ಮೀನು ಸಮುದ್ರದಲ್ಲಿ ಅಥವಾ ನದಿಯಲ್ಲಿ ಎಲ್ಲಾದರೂ ತನ್ನ ಬೇಟೆಯನ್ನು ನೋಡಿದರೆ ಮುಗಿಯಿತು. ಮತ್ತೆ ಅದರ ರುಚಿ ನೋಡದೇ ವಿರಮಿಸುವುದಿಲ್ಲ. ಜಗತ್ತಿನಲ್ಲಿ ಅತ್ಯಂತ ಕ್ರೂರ ಮತ್ತು ಭಯಾನಕ ಮೀನು ಎಂದೇ ಹೆಸರು ಗಳಿಸಿರುವ ಪೆಸಿಫಿಕ್ ಲ್ಯಾಂಪ್ರಿ ಎಂಬ ಮೀನಿನ ಕಥೆಯಿದು.
ಹಿಂದಿನ ಕಾಲದಲ್ಲಿ ಡೈನೋಸಾರ್‌ಗಳು ಭೂಮಿಯಲ್ಲಿ ಅಸ್ವಿತ್ವ ಹೊಂದಿದ್ದವು. ಅಂತಹ ದೈತ್ಯ ಡೈನೋಸಾರ್‌ಗಳನ್ನೇ ಈ ಲ್ಯಾಂಪ್ರಿ ಮೀನು ಭಕ್ಷಿಸಿತ್ತು. ಲೈವ್ ಸೈನ್ಸ್ ವರದಿಯ ಪ್ರಕಾರ ಉತ್ತರ ಫೆಸಿಫಿಕ್ ಸಾಗರದಲ್ಲಿ ಈ ಮೀನು ನೆಲೆಸಿತ್ತು. ಕ್ಯಾಲಿಫೋರ್ನಿಯಾದಿಂದ ಅಲಾಸ್ಕದವರೆಗೆ ಹಲವು ತಾಣಗಳಲ್ಲಿ ಈ ಮೀನು ಕಾಣಿಸಿಕೊಂಡಿತ್ತು. ಜತೆಗೆ ರಷ್ಯಾ ಮತ್ತು ಜಪಾನ್‌ನಲ್ಲಿ ಬೆರಿಂಗ್ ಸಮುದ್ರದಲ್ಲೂ ಕಾಣಿಸಿಕೊಂಡಿತ್ತು ಎಂದು ವರದಿ ಹೇಳಿದೆ.
ವಿಜ್ಞಾನಿಗಳ ಪ್ರಕಾರ ಲ್ಯಾಂಪ್ರಿ ಮೀನು, ದ್ರವಾಹಾರವನ್ನು ಹೆಚ್ಚು ಸೇವಿಸುತ್ತದೆ. ಅದಕ್ಕಾಗಿ ಅದು ಬೇಟೆಯ ರಕ್ತವನ್ನೇ ಹೀರುತ್ತದೆ. ಹಿಂದಿನ ಕಾಲದಲ್ಲಿ ಈ ತಳಿಯ ಮೀನುಗಳು ಡೈನೋಸಾರ್‌ಗಳ ರಕ್ತವನ್ನೇ ಹೀರಿದ್ದವು. ಈಗ ಉಳಿದಿರುವ ಲ್ಯಾಂಪ್ರಿ ಸಂತತಿಯ ಮೀನುಗಳು ಸಮುದ್ರ ಮತ್ತು ನದಿಯಲ್ಲಿ ಸಿಗುವ ಬೇರೆ ಮೀನುಗಳನ್ನು ಬೇಟೆಯಾಡುತ್ತವೆ. ಅವು ಮೀನಿನ ರಕ್ತವನ್ನು ಮಾತ್ರವಲ್ಲದೆ, ದೇಹದಲ್ಲಿನ ನೀರಿನ ಅಂಶವನ್ನು ಪೂರ್ತಿಯಾಗಿ ಹೀರಿಕೊಳ್ಳುತ್ತವೆ.
ಭೂಮಿಯ ಮೇಲೆ ಪೆಸಿಫಿಕ್ ಲ್ಯಾಂಪ್ರಿ ತಳಿಯ ಮೀನುಗಳು 450 ಮಿಲಿಯನ್ ವರ್ಷಗಳ ಹಿಂದೆಯೇ ಜೀವಿಸಿದ್ದವು. ಈ ಮೀನು ರೆಕ್ಕೆ ಮತ್ತು ಎಲುಬುಗಳು ಇಲ್ಲದೆ, ನೋಡಲು ಯೀಲ್‌ನಂತೆಯೇ ಕಾಣಿಸಿದರೂ, ಅತ್ಯಂತ ಅಪಾಯಕಾರಿಯಾಗಿವೆ. ಇದರ ಬಾಯಿಯಲ್ಲಿ ದವಡೆಯ ಬದಲು, ಪೂರ್ತಿಯಾಗಿ ದೊಡ್ಡ ದೊಡ್ಡ ಕೋರೆ ಹಲ್ಲುಗಳಿವೆ. ಇದನ್ನು ಬಳಸಿಕೊಂಡು ಅವುಗಳು ಬೇಟೆಯ ರಕ್ತವನ್ನು ಹೀರುತ್ತವೆ, ಆದರೆ ಮಾಂಸ ತಿನ್ನುವುದಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಇದನ್ನೂ ಓದಿ: ಏನಿದು ಎಂಪಾಕ್ಸ್ ವೈರಸ್? ಕಾರಣ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ಇಲ್ಲಿದೆ..
40 ವಿವಿಧ ತಳಿಯ ಲ್ಯಾಂಪ್ರಿಗಳಿವೆ..
ಪೆಸಿಫಿಕ್ ಲ್ಯಾಂಪ್ರಿಗಳ ಪೈಕಿ ಈಗ ಸುಮಾರು 40 ವಿವಿಧ ತಳಿಗಳು ಮಾತ್ರ ಉಳಿದುಕೊಂಡಿವೆ. ಭೂಮಿಯ ಮೇಲೆ ಗಿಡಮರಗಳು ಕಾಣಿಸಿಕೊಳ್ಳುವ ಮೊದಲೇ ಲ್ಯಾಂಪ್ರಿಗಳು ಇದ್ದ ಕುರುಹುಗಳಿವೆ ಎಂದು ತಜ್ಞರು ಹೇಳಿದ್ದಾರೆ. ಒಂದು ಹೆಣ್ಣು ಲ್ಯಾಂಪ್ರಿ ಮೀನು ಒಮ್ಮೆಗೆ 2 ಲಕ್ಷ ಮೊಟ್ಟೆಗಳನ್ನು ಇರಿಸುತ್ತದೆ. ಮೊಟ್ಟೆಯೊಡೆದು ಮರಿ ಹೊರಬರಲು ಸುಮಾರು 10 ವರ್ಷ ಬೇಕು. ಮರಿ ಲ್ಯಾಂಪ್ರಿ ಸ್ವಲ್ಪ ದೊಡ್ಡದಾಗುತ್ತಲೇ ಆಹಾರವನ್ನು ಹುಡುಕಿಕೊಂಡು ಹೋಗುತ್ತದೆ. 33 ಇಂಚುಗಳಷ್ಟು ಉದ್ದದ ಲ್ಯಾಂಪ್ರಿ, ಒಮ್ಮೆಗೆ 100ಕ್ಕೂ ಅಧಿಕ ಕಿಮೀ.ಗಳಷ್ಟು ಈಜಬಲ್ಲದು. ಹೀಗೆ ಹಲವು ಅಚ್ಚರಿಗಳನ್ನು ಹೊಂದಿರುವ ಲ್ಯಾಂಪ್ರಿ ಮೀನು, ಜಗತ್ತಿನಲ್ಲಿಯೇ ಅತಿ ಕ್ರೂರಿ ಮೀನುಗಳ ಪೈಕಿ ಒಂದು ಎಂದು ಕರೆಯಲ್ಪಟ್ಟಿದೆ.
ಇದನ್ನೂ ಓದಿ: ಮಂಗಳೂರು ಕೆಎಂಸಿ ವೈದ್ಯರ ಅಪರೂಪದ ಸಾಧನೆ; ಕಡಿಮೆ ತೂಕದ ಶಿಶುವಿನ ಉಸಿರಾಟದ ಸೋಂಕು ನಿವಾರಣೆ
ಲ್ಯಾಂಪ್ರಿ ಮೀನುಗಳು ಮನುಷ್ಯನ ಮೇಲೆ ದಾಳಿ ಮಾಡಿರುವ ಬಗ್ಗೆ ವರದಿಗಳಿಲ್ಲ. ಆದರೆ ಅವುಗಳು ಮನುಷ್ಯನಿಗೆ ಕಚ್ಚಿದರೆ, ರಕ್ತ ಹೀರದೆ ಬಿಡುವುದಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕೆಲವು ಕಡೆಗಳಲ್ಲಿ ಮೀನುಗಾರರಿಗೆ ಲ್ಯಾಂಪ್ರಿ ಮೀನು ಕಾಣಸಿಕ್ಕಿರುವ ಬಗ್ಗೆ ವರದಿಗಳಿವೆ. ಅಲ್ಲದೆ, ಇತರ ಮೀನುಗಳ ಮೇಲೆ ಅವು ದಾಳಿ ನಡೆಸಿ, ರಕ್ತ ಹೀರಿರುವ ಬಗ್ಗೆಯೂ ವರದಿಗಳಿವೆ.
