ನೀವು ಮಸಾಲೆಗೆ ಬಳಸುವ ಈ ಜಾಯಿಕಾಯಿ ನಿಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ? ಇಲ್ಲಿದೆ ನೋಡಿ ಇದರ ಪ್ರಯೋಜನಗಳು-do you know how good this nutmeg is for your health here are its benefits smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಮಸಾಲೆಗೆ ಬಳಸುವ ಈ ಜಾಯಿಕಾಯಿ ನಿಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ? ಇಲ್ಲಿದೆ ನೋಡಿ ಇದರ ಪ್ರಯೋಜನಗಳು

ನೀವು ಮಸಾಲೆಗೆ ಬಳಸುವ ಈ ಜಾಯಿಕಾಯಿ ನಿಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ? ಇಲ್ಲಿದೆ ನೋಡಿ ಇದರ ಪ್ರಯೋಜನಗಳು

ಒಂದು ಚಿಟಿಕೆ ಜಾಯಿಕಾಯಿ ಪುಡಿ ಯಾವುದೇ ಖಾದ್ಯದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಇದನ್ನು ಭಾರತೀಯ ಆಹಾರದಲ್ಲಿ ಮಾತ್ರವಲ್ಲದೆ ವಿದೇಶಿ ಆಹಾರದಲ್ಲಿಯೂ ಬಳಸಲಾಗುತ್ತದೆ. ಇದನ್ನು ನಿಮ್ಮ ನಿಯಮಿತ ಆಹಾರದ ಭಾಗವಾಗಿ ಹೇಗೆ ಮಾಡುವುದು ಎಂದು ಅಡುಗೆ ತಜ್ಞ ನೀರಾ ಕುಮಾರ್ ಹೇಳಿದ್ದಾರೆ.

ಜಾಯಿಕಾಯಿ
ಜಾಯಿಕಾಯಿ

ಭಾರತೀಯ ಅಡುಗೆಮನೆಗಳಲ್ಲಿ ಅನೇಕ ರೀತಿಯ ಮಸಾಲೆಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿ ಒಂದು ಜಾಯಿಕಾಯಿ. ಭಾರತದಲ್ಲಿ ಮಾತ್ರವಲ್ಲ ಇನ್ನೂ ಹಲವು ದೇಶಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ. ಪಾಶ್ಚಿಮಾತ್ಯ ಆಹಾರದಲ್ಲಿ ಸುವಾಸನೆ ಮತ್ತು ಆಹಾರಕ್ಕೆ ವಿಭಿನ್ನ ರುಚಿಯನ್ನು ನೀಡಲು ಇದನ್ನು ಬಳಸಲಾಗುತ್ತದೆ. ಇಂಗ್ಲಿಷ್ ಭಾಷೆಯಲ್ಲಿ, ಜಾಯಿಕಾಯಿಯನ್ನು nutmeg ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ನಾವು ಈ ಮಸಾಲೆಯನ್ನು ಕಡಿಮೆ ಬಳಸುತ್ತೇವೆ. ಆದರೆ ಅದರ ಪ್ರಯೋಜನಗಳು ಅನೇಕ.

ಪರಿಮಳದ ಮಸಾಲೆ ಇದು

ಜಾಯಿಕಾಯಿಯ ಪರಿಮಳ ತುಂಬಾ ಜನರನ್ನು ಆಕರ್ಷಿಸುತ್ತದೆ. ಮಾಂಸಹಾರದಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಜಾಯಿಕಾಯಿ ಇಲ್ಲ ಎಂದರೆ ಅದು ಮಸಾಲೆಯೇ ಅಲ್ಲ ಎನ್ನವಷ್ಟು ಇದನ್ನು ಬಳಕೆ ಮಾಡುತ್ತಾರೆ. ಇದು ಮರದಲ್ಲಿ ಬೆಳೆಯುತ್ತದೆ. ಬಿಳಿ ಬಣ್ಣದ ಸಣ್ಣ ಗಂಟೆಯ ಆಕಾರದ ಹೂವುಗಳು ಮರದ ಮೇಲೆ ಅರಳುತ್ತವೆ ನಂತರ ಕಾಯಾಯಿ ಅದರೊಳಗೆ ಜಾಯಿಕಾಯಿ ಎಂದು ಕರೆಯಲ್ಪಡುವ ಬೀಜ ಕಂಡುಬರುತ್ತದೆ. ಈ ಬೀಜದ ತಿರುಳು ತುಂಬಾ ರುಚಿಯಾಗಿರುತ್ತದೆ. ಆಹಾರ ಪದಾರ್ಥಗಳಿಗೆ ರುಚಿ ನೀಡುತ್ತದೆ.

ಆಯ್ಕೆ ಮಾಡುವಾಗ ಈ ಅಂಶ ಗಮನಿಸಿ

ಮಾರುಕಟ್ಟೆಯಲ್ಲಿ ಅನೇಕ ರೀತಿಯ ಜಾಯಿಕಾಯಿ ಲಭ್ಯವಿದೆ. ಜಾಯಿಕಾಯಿಯನ್ನು ಖರೀದಿಸುವಾಗ, ಅವು ಹಗುರ ಮತ್ತು ಟೊಳ್ಳಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅವುಗಳನ್ನು ಕೈಯಲ್ಲಿ ತೆಗೆದುಕೊಳ್ಳಿ ನಂತರ ಅದರ ತೂಕವನ್ನು ಅಂದಾಜಿಸಿ. ದೊಡ್ಡದಾದ, ನಯವಾದ ಮತ್ತು ಭಾರವಾದ ಜಾಯಿಕಾಯಿಯನ್ನು ಮಾತ್ರ ಖರೀದಿಸಬೇಕು. ಜಾಯಿಕಾಯಿಯನ್ನು ಸಾಮಾನ್ಯವಾಗಿ ಸಿಹಿ ಮತ್ತು ಖಾರದ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಜಾಯಿಕಾಯಿ ಎಣ್ಣೆ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಸೌಂದರ್ಯವರ್ಧಕದಲ್ಲಿ ಬಳಕೆ

ಇದು ಸುವಾಸನೆಯುಕ್ತ ಮತ್ತು ರುಚಿಕರವಾದ ಮಸಾಲೆಯಾಗಿದ್ದು, ಇದನ್ನು ಆಹಾರದಲ್ಲಿ ಮಾತ್ರವಲ್ಲದೆ ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿಯೂ ಬಳಸಲಾಗುತ್ತದೆ. ಇದು ಕೀಲು ನೋವು ಇತ್ಯಾದಿಗಳಿಗೆ ಒಳ್ಳೆಯದು.

ಬಳಕೆ ವಿಧಾನ

ಜಾಯಿಕಾಯಿಯನ್ನು ಮೂರು ವಿಧಗಳಲ್ಲಿ ಬಳಸಲಾಗುತ್ತದೆ. ಮಿಕ್ಸರ್ ನಲ್ಲಿ ರುಬ್ಬುವ ಮೂಲಕ ಮತ್ತು ಪುಡಿ ಮಾಡಿ ಆ ಪುಡಿಯನ್ನು ಬಳಸಲಾಗುತ್ತದೆ. ಇನ್ನು ಎರಡನೇ ರೀತಿ ಎಂದರೆ ಅದನ್ನು ತುರಿದು ಬಳಸಲಾಗುತ್ತದೆ. ಮೂರನೆಯದು ಅದನ್ನು ಉಜ್ಜುವ ಮೂಲಕ ಅಥವಾ ತಳೆಯುವ ಮೂಲಕ ಬಳಸಲಾಗುತ್ತದೆ.

ಕಾಲು ನೋವು ಕಡಿಮೆ ಆಗುತ್ತದೆ

ಸೂಪ್ ಮಾಡಿದಾಗಲೆಲ್ಲಾ, ವಿಶೇಷವಾಗಿ ಕುಂಬಳಕಾಯಿ ಸೂಪಿಗೆ ನೀವು ಇದನ್ನು ತುರಿದು ಬಳಕೆ ಮಾಡಬಹುದು. ನಿಮಗೆ ಮಂಡಿ ನೋವಿದ್ದರೆ ಇದು ಕಡಿಮೆ ಮಾಡುತ್ತದೆ.

ಒತ್ತಡ ಕಡಿಮೆ ಮಾಡುತ್ತದೆ

ಇನ್ನು ಇದನ್ನು ಚಹಾದಲ್ಲೂ ಸೇರಿಸಿ ಕುಡಿಯಬಹುದು. ಇದು ಮೆದುಳಿಗೆ ಪ್ರಚೋದಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ.

ಜೀರ್ಣಾಂಗ ಸಮಸ್ಯೆಗೆ ಪರಿಹಾರ

ಜಾಯಿಕಾಯಿಯಲ್ಲಿ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿವೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಗ್ಯಾಸ್, ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ನಿದ್ರೆಯನ್ನು ಸುಧಾರಿಸುತ್ತದೆ

ಇದು ನಿದ್ರೆಯನ್ನು ಸುಧಾರಿಸುತ್ತದೆ. ಜಾಯಿಕಾಯಿ ಎಣ್ಣೆಯನ್ನು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಇದರ ಎಣ್ಣೆಯನ್ನು ಹಚ್ಚುವುದರಿಂದ ಸ್ನಾಯು ನೋವಿಗೆ ಪರಿಹಾರ ಸಿಗುತ್ತದೆ.

ಬಿಕ್ಕಳಿಕೆ ನಿಲ್ಲುತ್ತದೆ

ಅಕ್ಕಿ ಹಿಟ್ಟಿನಲ್ಲಿ ಜಾಯಿಕಾಯಿಯನ್ನು ಬೆರೆಸಿ ಕುಡಿಯುವುದರಿಂದ ಬಿಕ್ಕಳಿಕೆ ಮತ್ತು ವಾಂತಿ ನಿವಾರಣೆಯಾಗುತ್ತದೆ. ಮಕ್ಕಳಿಗೆ ಶೀತವಾದಾಗ, ಸ್ವಲ್ಪ ಜಾಯಿಕಾಯಿಯನ್ನು ಉಜ್ಜಿ ಹಾಲಿನೊಂದಿಗೆ ನೆಕ್ಕಿಸಿ ಶೀತಕ್ಕೆ ಪರಿಹಾರವನ್ನು ನೀಡುತ್ತದೆ. ಅತಿಸಾರ ಬಂದರೂ ಜಾಯಿಕಾಯಿ ಪ್ರಯೋಜನಕಾರಿ. ಹಾಲಿನಲ್ಲಿ ಒಂದು ಚಿಟಿಕೆ ಜಾಯಿಕಾಯಿಯನ್ನು ಕುಡಿಯುವುದರಿಂದ ದಣಿವು, ನಿದ್ರಾಹೀನತೆಯಿಂದ ಪರಿಹಾರ ಸಿಗುತ್ತದೆ.