Camels Eat Snakes: ಒಂಟೆಗಳಿಗೆ ತಿನ್ನಲು ಜೀವಂತ ವಿಷಕಾರಿ ಹಾವು ನೀಡುವುದ್ಯಾಕೆ? ಇದರ ಹಿಂದಿದೆ ಅಚ್ಚರಿಯ ಕಾರಣಗಳು-do you know why are camels given poisons snakes to eat here is shocking reason animal health arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Camels Eat Snakes: ಒಂಟೆಗಳಿಗೆ ತಿನ್ನಲು ಜೀವಂತ ವಿಷಕಾರಿ ಹಾವು ನೀಡುವುದ್ಯಾಕೆ? ಇದರ ಹಿಂದಿದೆ ಅಚ್ಚರಿಯ ಕಾರಣಗಳು

Camels Eat Snakes: ಒಂಟೆಗಳಿಗೆ ತಿನ್ನಲು ಜೀವಂತ ವಿಷಕಾರಿ ಹಾವು ನೀಡುವುದ್ಯಾಕೆ? ಇದರ ಹಿಂದಿದೆ ಅಚ್ಚರಿಯ ಕಾರಣಗಳು

ಮರಳುಗಾಡಿನಲ್ಲಿ ಸಂಚಾರಕ್ಕೆಂದು ಸಾಕುವ ಪ್ರಾಣಿ ಒಂಟೆ. ಅವುಗಳನ್ನು ಸಾಕುವ ಅಲ್ಲಿನ ಕೆಲವು ಜನರು ಒಂಟೆಗಳಿಗೆ ತಿನ್ನಲು ಜೀವಂತ ವಿಷಕಾರಿ ಹಾವು ನೀಡುತ್ತಾರೆ. ಹಾಗೆ ಅವರು ನೀಡಲು ಕಾರಣವೇನು? ಇಲ್ಲಿದೆ ಓದಿ.

Camels Eat Snakes: ಒಂಟೆಗಳಿಗೆ ತಿನ್ನಲು ಜೀವಂತ ವಿಷಕಾರಿ ಹಾವು ನೀಡುವುದರ ಹಿಂದಿದೆ ಅಚ್ಚರಿಯ ಕಾರಣಗಳು
Camels Eat Snakes: ಒಂಟೆಗಳಿಗೆ ತಿನ್ನಲು ಜೀವಂತ ವಿಷಕಾರಿ ಹಾವು ನೀಡುವುದರ ಹಿಂದಿದೆ ಅಚ್ಚರಿಯ ಕಾರಣಗಳು (pixabay)

ಒಂಟೆಗಳು ಎಂದಾಕ್ಷಣ ನಮ್ಮ ಕಣ್ಮುಂದೆ ಬರುವ ಚಿತ್ರವೆಂದರೆ ಬೆನ್ನಿನ ಮೇಲೆ ಉಬ್ಬಿರುವ, ಉದ್ದದ ಕಾಲು ಮತ್ತು ಕುತ್ತಿಗೆಯನ್ನು ಹೊಂದಿರುವ ಪ್ರಾಣಿ. ಮರಳುಗಾಡಿನ ಹಡಗು ಎಂದು ಕರೆಯಿಸಿಕೊಳ್ಳುವ ಈ ಒಂಟೆ ಅತ್ಯಂತ ಶಕ್ತಿಶಾಲಿ ಪ್ರಾಣಿ. ಎಂತಹ ಬಿಸಿಲಿಗೂ ಜಗ್ಗದ ಪ್ರಾಣಿ. ಮರಳು ಗಾಡಿನಲ್ಲಿ ಜೀವಿಸುವ ಈ ಪ್ರಾಣಿ ಅಲ್ಲಿನ ಆವಾಸಕ್ಕೆ ತಕ್ಕಂತೆ ಬದುಕುತ್ತದೆ. ಆದರೂ ಕೆಲವೊಮ್ಮೆ ಅವು ಅನೇಕ ರೋಗಗಳಿಗೆ ತುತ್ತಾಗುತ್ತವೆ. ಅಂತಹ ಸಂದರ್ಭಗಳಲ್ಲಿ ಅವುಗಳನ್ನು ಸಾಕುವವರು ವಿಷಕಾರಿ ಹಾವುಗಳನ್ನು ತಿನ್ನಿಸುತ್ತಾರೆ. ಇದನ್ನು ನೀವು ಕೆಲವು ಡಾಕ್ಯುಮೆಂಟೆರಿ ಅಥವಾ ಕೆಲವು ಸೋಷಿಯಲ್‌ ಮೀಡಿಯಾ ಚಾನೆಲ್‌ಗಳಲ್ಲಿ ನೋಡಿರಲೂಬಹುದು. ಅದು ಒಂಟೆಗಳಲ್ಲಿ ಕಂಡುಬರುವ ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಒಂಟೆಗಳು ಸುರಿಸುವ ಕಣ್ಣೀರು ಆ ವಿಷವನ್ನು ಹೊರಹಾಕುತ್ತವೆ ಎಂದು ಹೇಳಲಾಗುತ್ತದೆ. ಹಾಗಾದರೆ ನಿಜವಾಗಿಯೂ ವಿಷಕಾರಿ ಹಾವುಗಳಿಂದ ಒಂಟೆಗೆ ಪ್ರಯೋಜನವಿದೆಯೇ ಇಲ್ಲಿದೆ ಓದಿ.

ಒಂಟೆಗಳಿಗೆ ಜೀವಂತ ವಿಷಕಾರಿ ಹಾವನ್ನು ಏಕೆ ನೀಡುತ್ತಾರೆ?

ಒಂಟೆಗಳು ತಾವಾಗಿಯೇ ಹಾವುಗಳನ್ನು ತಿನ್ನುವುದಿಲ್ಲ. ಅವುಗಳಿಗೆ ವಿಷಕಾರಿ ಹಾವುಗಳನ್ನು ನೀಡಲಾಗುತ್ತದೆ. ಏಕೆಂದರೆ ಸಮಾನ್ಯವಾಗಿ ಒಂಟೆಗಳು ಹಯಾಮ್‌ ಎಂಬ ರೋಗದಿಂದ ಬಳಲುತ್ತವೆ. ಆ ಸಂದರ್ಭದಲ್ಲಿ ಒಂಟೆಗಳು ಬಹಳ ನಿಶ್ಯಕ್ತಿ, ಆಲಸ್ಯ, ಊತ, ಜ್ವರ ಮತ್ತು ರಕ್ತಹೀನತೆಯಂತಹ ಸಮಸ್ಯೆಗಳು ಎದುರಾಗುತ್ತವೆ. ಈ ರೋಗಕ್ಕೆ ಯಾವುದೇ ರೀತಿಯ ನಿರ್ದಿಷ್ಟವಾದ ಔಷಧವಿಲ್ಲ. ಹಾಗಾಗಿ ಕೆಲವರು ಈ ಉಪಾಯವನ್ನು ಕಂಡುಕೊಂಡಿದ್ದಾರೆ. ಇಂತಹ ಸಮಯದಲ್ಲಿ ಒಂಟೆಗಳಿಗೆ ವಿಷಕಾರಿ ಹಾವುಗಳನ್ನು ನೀಡುತ್ತಾರೆ.

ವಾಸ್ತವವಾಗಿ ಹಯಾಮ್‌ ರೋಗಕ್ಕೆ ತುತ್ತಾಗುವ ಒಂಟೆಗಳು ಟ್ರಿಪನೋಸೋಮಿಯಾಸಿಸ್ ಎಂಬ ಪರಾವಲಂಬಿ ಸೋಂಕಿನಿಂದ ಬಳಲುತ್ತವೆ. ಇದರಿಂದ ಒಂಟೆಗಳಲ್ಲಿ ಗರ್ಭಪಾತ, ಹೆರಿಗೆಯಂತಹ ಸಂತಾನೋತ್ಪತ್ತಿ ಸಮಸ್ಯೆಗಳು ಎದುರಾಗುತ್ತವೆ. ಸೂಕ್ತ ವೈದ್ಯಕೀಯ ಚಿಕಿತ್ಸೆ ಇಲ್ಲದಿದ್ದರೆ ಒಂಟೆ ಸಾಯಲೂಬಹುದು. ಆದರೆ ಕೆಲವರು ಒಂಟೆ ರೋಗದಿಂದ ಬಳಲುತ್ತಿರುವಾಗ ಜೀವಂತ ವಿಷಕಾರಿ ಹಾವುಗಳನ್ನು ನೀಡುತ್ತಾರೆ. ಒಂಟೆ ಅದನ್ನು ನುಂಗಿದ ತಕ್ಷಣ ಕಣ್ಣೀರು ಹಾಕುತ್ತದೆ. ಆ ಕಣ್ಣೀರು ಸೋಂಕು ಗುಣಪಡಿಸುವ ಗುಣ ಹೊಂದಿದೆ ಎಂಬುದು ಅವರ ನಂಬಿಕೆ. ಆದರ ಇದಕ್ಕೆ ಯಾವುದೇ ಸಾಕ್ಷಿಗಳಿಲ್ಲಿ. ವಿಷಕಾರಿ ಹಾವುಗಳನ್ನು ನೀಡಿದ ಮೇಲೆ ಒಂಟೆ ಕಣ್ಣೀರು ಹಾಕುತ್ತದೆ ಎಂಬುದು ಕೂಡ ತಪ್ಪು ಕಲ್ಪನೆಯಾಗಿದೆ.

ಒಂಟೆ ವಿಷಕಾರಿ ಹಾವನ್ನು ತಿಂದರೆ ಏನಾಗುತ್ತದೆ?

ಒಂಟೆಗೆ ವಿಷಕಾರಿ ಹಾವುಗಳು ಕಚ್ಚಿದಾಗ ಅವುಗಳೂ ಕೂಡಾ ಹಾವಿನ ವಿಷದಿಂದ ಅಡ್ಡಪರಿಣಾಮಗಳನ್ನು ಎದುರಿಸುತ್ತವೆ. ಆದರೆ ಅದು ಜೀವಹಾನಿ ಮಾಡುವುದಿಲ್ಲ. ಕಾರಣವೇನೆಂದರೆ ಹಾವಿನ ವಿಷದಲ್ಲಿರುವ ದುರ್ಬಲವಾದ ಪ್ರೊಟೀನ್‌ ರಚನೆಗಳು. ಒಂಟೆಗಳ ಜೀರ್ಣಾಂಗ ವ್ಯವಸ್ಥೆಯು ಸಾಕಷ್ಟು ಉತ್ತಮವಾಗಿರುತ್ತದೆ. ಅದು ದೇಹದೊಳಗೆ ಸೇರುವ ಹಾವಿನ ವಿಷವನ್ನು ನಿಯಮಿತ ಕ್ರಿಯೆಯ ಮೂಲಕ ಸುಲಭವಾಗಿ ಹೊರಹಾಕುತ್ತದೆ. ಮರಭೂಮಿಯಲ್ಲಿ ವಾಸಿಸುವ ಒಂಟೆಗಳು ಭೌಗೋಳಿಕವಾಗಿ ಅಲ್ಲಿ ಬದುಕಲು ಕೆಲವು ಆಹಾರಾಭ್ಯಾಸಗಳನ್ನು ಮಾಡಿಕೊಂಡಿರುತ್ತವೆ. ಹಾಗಾಗಿ ಹಾವಿನ ವಿಷ ಅವುಗಳಿಗೆ ಸೌಮ್ಯವಾಗಿರುತ್ತದೆ.

ಒಂಟೆ ಸಾಕುವವರು ಮೂಢನಂಬಿಕೆಗಳಿಗೆ ಒಳಪಟ್ಟು ಒಂಟೆಗೆ ಹಾವನ್ನು ನೀಡುತ್ತಾರೆ. ಕೆಲವೊಮ್ಮೆ ಆ ರೀತಿ ಮಾಡುವುದರಿಂದ ಒಂಟೆಗೆ ತೊಂದರೆ ಹೆಚ್ಚಾಗುತ್ತದೆ. ಆದ್ದರಿಂದ ಒಂಟೆಗಳು ರೋಗದಿಂದ ಬಳಲುತ್ತಿರುವಾಗ ಅವುಗಳಿಗೆ ವೈದ್ಯರ ಹತ್ತಿರ ಸೂಕ್ತ ಚಿಕಿತ್ಸೆಯನ್ನು ಕೊಡಿಸುವುದೇ ಸರಿಯಾದ ಮಾರ್ಗವಾಗಿದೆ.