ತಲೆಗೂದಲಿಗೆ ಬಣ್ಣ, ಸ್ಟ್ರೈಟ್‌ನರ್‌ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತೀರಾ: ಹೆಣ್ಮಕ್ಕಳೇ, ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಬಹುದು ಎಚ್ಚರ
ತಲೆಗೂದಲಿನ ಸೌಂದರ್ಯಕ್ಕೂ ಹೆಣ್ಮಕ್ಕಳು ಬಹಳ ಕಾಳಜಿ ತೋರಿಸುತ್ತಾರೆ. ಅದರಲ್ಲೂ ತಲೆಗೂದಲಿಗೆ ಬಣ್ಣ ಹಚ್ಚುವುದು ಹಾಗೂ ಸ್ಟ್ರೈಟ್‍ನರ್‌ಗಳನ್ನು ಬಳಸಿ ಕೂದಲನ್ನು ನಯವಾಗಿಸುತ್ತಾರೆ. ಆದರೆ, ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಈ ರೀತಿ ಮಾಡುವುದು ತುಂಬಾ ಅಪಾಯಕಾರಿ ಎಂದು ತಿಳಿದು ಬಂದಿದೆ. ಇದು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಿಸಬಹುದು ಎಂದು ಹೇಳಿದೆ.
ಇತ್ತೀಚೆಗೆ ಬಹಳಷ್ಟು ಮಂದಿ ಹೈರ್ ಡೈ ಮತ್ತು ಸ್ಟ್ರೈಟ್‍ನರ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಕೂದಲಿಗೆ ಬೇರೆ ಬೇರೆ ರೀತಿ ಬಣ್ಣ ಹಚ್ಚುವುದು ಅಂದ್ರೆ ಹೆಣ್ಮಕ್ಕಳಿಗೆ ಬಲು ಇಷ್ಟ. ಅಲ್ಲದೆ, ಗುಂಗುರು ಕೂದಲು ಇರುವವರು ಸ್ಟೈಟ್‍ನರ್ ಬಳಸಿ ತಲೆಗೂದಲನ್ನು ಸಿಲ್ಕಿ (ರೇಶ್ಮೆ ಕೂದಲು) ಮಾಡಲು ಇಷ್ಟಪಡುತ್ತಾರೆ. ಅದೆ, ಸಿಲ್ಕಿ ಕೂದಲುಳ್ಳವರು ಗುಂಗುರು ಕೂದಲನ್ನು ಇಷ್ಟಪಡುತ್ತಾರೆ. ಇದಕ್ಕಾಗಿ ಪದೇ ಪದೇ ಸ್ಟ್ರೈಟ್‌ನರ್‌ಗಳ ಮೊರೆ ಹೋಗುತ್ತಾರೆ. ಆದರೆ, ಕೂದಲ ಸೌಂದರ್ಯಕ್ಕಾಗಿ ಈ ರೀತಿ ಮಾಡುವುದು ಎಷ್ಟು ಅಪಾಯ ಎಂಬುದು ನಿಮಗೆ ಗೊತ್ತಿದೆಯೇ? ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಹೇರ್ ಡೈ ಮತ್ತು ಸ್ಟ್ರೈಟ್‌ನರ್‌ಗಳನ್ನು ಬಳಸುವುದರಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಬಹಿರಂಗಪಡಿಸಿದೆ.
ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಬಹುದು
ಹೇರ್ ಡೈಗಳು ಮತ್ತು ಸ್ಟ್ರೈಟ್‌ನರ್‌ಗಳು ಸಾಮಾನ್ಯವಾಗಿ ಎಂಡೋಕ್ರೈನ್ ಅಡ್ಡಿಪಡಿಸುವ ರಾಸಾಯನಿಕಗಳನ್ನು ಹೊಂದಿರುತ್ತವೆ. ಇದು ದೇಹದಲ್ಲಿ ಹಾರ್ಮೋನ್ ಕಾರ್ಯವನ್ನು ಅಡ್ಡಿಪಡಿಸುತ್ತದೆ. ಆರೊಮ್ಯಾಟಿಕ್ ಅಮೈನ್‌ಗಳು, ಪ್ಯಾರಾಬೆನ್‌ಗಳು ಮತ್ತು ಥಾಲೇಟ್‌ಗಳಂತಹ ಪದಾರ್ಥಗಳನ್ನು ಸಾಮಾನ್ಯವಾಗಿ ಕೂದಲು ಬಣ್ಣಗಳಲ್ಲಿ ಬಳಸಲಾಗುತ್ತದೆ. ರಾಸಾಯನಿಕ ಸ್ಟ್ರೈಟ್‌ನರ್‌ಗಳು ಫಾರ್ಮಾಲ್ಡಿಹೈಡ್ ಮತ್ತು ಇತರ ಸಂಬಂಧಿತ ಸಂಯುಕ್ತಗಳನ್ನು ಹೊಂದಿರುತ್ತವೆ. ಈ ರಾಸಾಯನಿಕಗಳು ಡಿಎನ್ಎಗೆ ಹಾನಿಯನ್ನುಂಟುಮಾಡುತ್ತವೆ ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಫಾರ್ಮಾಲ್ಡಿಹೈಡ್ ಅನ್ನು ಕೂದಲು ನೇರಗೊಳಿಸುವ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಈ ರಾಸಾಯನಿಕಗಳು ಬಳಕೆಯ ಸಮಯದಲ್ಲಿ ಚರ್ಮದ ಮೂಲಕ ಹೀರಲ್ಪಡುತ್ತವೆ ಮತ್ತು ಕಾಲಾನಂತರದಲ್ಲಿ ದೇಹದಲ್ಲಿ ನಿರ್ಮಾಣವಾಗಬಹುದು. ಇದು ಸ್ತನ ಅಂಗಾಂಶದ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದು ಈಸ್ಟ್ರೊಜೆನ್ ಮಟ್ಟದಲ್ಲಿ ಅಡಚಣೆಗಳನ್ನು ಉಂಟುಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೇರ್ ಡೈ, ಸ್ಟ್ರೈಟ್‍ನರ್‌ಗಳ ಬಳಕೆ ಕಡಿಮೆ ಮಾಡಿ
ಈ ಉತ್ಪನ್ನಗಳನ್ನು ಅಪರೂಪಕ್ಕೊಮ್ಮೆ ಬಳಸುವುದರಿಂದ ಯಾವುದೇ ಅಪಾಯವನ್ನು ಉಂಟುಮಾಡುವುದಿಲ್ಲ. ದೀರ್ಘಕಾಲೀನ ಬಳಕೆಯು ಸ್ತನ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಪ್ರತಿ 5 ರಿಂದ 8 ವಾರಗಳಿಗೊಮ್ಮೆ ರಾಸಾಯನಿಕ ಹೇರ್ ಸ್ಟ್ರೈಟ್‌ನರ್‌ಗಳನ್ನು ಬಳಸುವ ಮಹಿಳೆಯರು ಸ್ತನ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಶೇ. 30 ರಷ್ಟು ಹೆಚ್ಚು ಎಂದು ಹೇಳಲಾಗಿದೆ. ಕೂದಲಿನ ಬಣ್ಣಗಳ ಗಾಢ ಛಾಯೆಗಳು ಹೆಚ್ಚಿನ ಮಟ್ಟದ ರಾಸಾಯನಿಕಗಳನ್ನು ಹೊಂದಿರುತ್ತವೆ. ನಿಯತ ಅಥವಾ ಹೆಚ್ಚು ಬಳಕೆಯಿಂದ ಅಪಾಯವೂ ಉಂಟಾಗುತ್ತದೆ.
ಈ ಅಪಾಯವನ್ನು ತಡೆಗಟ್ಟಲು, ಉತ್ಪನ್ನದ ಬಳಕೆಯನ್ನು ಕಡಿಮೆ ಮಾಡುವುದು ಅಥವಾ ನೈಸರ್ಗಿಕ ಕೂದಲು ಬಣ್ಣಗಳಂತಹ ಕಡಿಮೆ ವಿಷಕಾರಿಯಿರುವ ಪರ್ಯಾಯಗಳಿಗೆ ಬದಲಾಯಿಸಬಹುದು. ಶಾಖವು ರಾಸಾಯನಿಕ ಹೀರಿಕೊಳ್ಳುವಿಕೆಯನ್ನು ವೇಗಗೊಳಿಸುತ್ತದೆಯಾದ್ದರಿಂದ ರಾಸಾಯನಿಕ ಸ್ಟ್ರೈಟ್ನರ್‌ಗಳೊಂದಿಗೆ ಸಂಯೋಜಿಸಲ್ಪಟ್ಟ ಶಾಖ ಚಿಕಿತ್ಸೆಗಳನ್ನು ಕಡಿಮೆ ಮಾಡುವಂತೆ ತಜ್ಞರ ಸಲಹೆಯಾಗಿದೆ.
ಇನ್ನು ಕುಟುಂಬದಲ್ಲಿ ಯಾರಿಗಾದರೂ ಸ್ತನ ಕ್ಯಾನ್ಸರ್ ಇದ್ದ ಉದಾಹರಣೆಗಳಿದ್ದರೆ ಆ ಕುಟುಂಬದ ಮಹಿಳೆಯರು ಈ ಅಪಾಯಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ. ಹೀಗಾಗಿ ಇಂತಹ ಉತ್ಪನ್ನಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವ ಮೂಲಕ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾದುದು ಅವಶ್ಯಕ. ಹೀಗಾಗಿ ಸಂಭಾವ್ಯ ಆರೋಗ್ಯದ ಅಪಾಯಗಳ ವಿರುದ್ಧ ಕೂದಲಿಗೆ ಬಣ್ಣ ಹಾಕುವುದು ಮತ್ತು ಸ್ಟ್ರೈಟ್ನರ್‌ಗಳ ಬಳಕೆಯನ್ನು ಕಡಿಮೆ ಮಾಡುವುದು ಒಳಿತು.